ಅರಿಶಿಣ ಬಹಳ ಹಿಂದಿನಿಂದಲೂ ಮಹಿಳೆಯರು ಬಳಸುವ ಸೌಂದರ್ಯವರ್ಧಕಗಳ ಪಟ್ಟಿಯಲ್ಲಿ ಪ್ರಥಮಸ್ಥಾನ ಪಡೆದಿದೆ. ಸುಂದರ ತ್ವಚೆಗೆ ಪ್ರತಿನಿತ್ಯ ಅರಿಶಿಣದ ಬಳಕೆ ನೈಸರ್ಗಿಕವಾದ ಪರಿಹಾರ.
ಆರೋಗ್ಯದ ಜೊತೆಗೆ ಅಂದವನ್ನು ಹೆಚ್ಚಿಸುವ ಅಲೋವೆರಾ!
ಅರಿಶಿಣದ ಪುಡಿ ಹಾಗು ಅರಿಶಿಣದ ಕೊಂಬು ಎಲ್ಲಾ ಸಂದರ್ಭಗಳಲ್ಲೂ ಎಲ್ಲಾ ವಯಸ್ಸಿನ ಮಹಿಳೆಯರ ಸೌಂದರ್ಯ ರಕ್ಷಕ ಸಾಮಗ್ರಿಯಾಗಿ ಬಳಕೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕಸ್ತೂರಿ ಅರಿಶಿಣಕ್ಕೆ ವಿಶೇಷವಾದ ಸ್ಥಾನವೇ ಇದೆ. ಇದರ ಬಳಕೆಯಿಂದ ಮುಖದ ಅಂದವನ್ನು ಹೆಚ್ಚಿಸಿಕೊಳ್ಳ ಬಹುದು.
ಕಸ್ತೂರಿ ಅರಿಶಿಣವು ಪುಡಿ ಹಾಗು ಚಕ್ಕೆಯ ರೂಪದಲ್ಲಿಯೂ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಒಂದು ಚಮಚ ಕಸ್ತೂರಿ ಅರಿಶಿಣವನ್ನು ಸ್ವಲ್ಪ ಹಸಿ ಹಾಲಿನೊಂದಿಗೆ ಬೆರೆಸಿ. ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತಣ್ಣಿರಿನಲ್ಲಿ ಮುಖ ತೊಳೆಯುವುದರಿಂದ ಕಪ್ಪು ಕಲೆಗಳು ಕ್ರಮೇಣ ಮಾಯವಾಗುತ್ತವೆ ತ್ವಚೆ ಕಾಂತಿಯುತವಾಗುತ್ತದೆ.
ಶ್ರೀಗಂಧದೊಂದಿಗೆ ಸ್ವಲ್ಪ ಕಸ್ತೂರಿ ಅರಿಶಿನಪುಡಿ, ಜೇನು ತುಪ್ಪ ಸೇರಿಸಿ. ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ನಂತರ ನಿಧಾನವಾಗಿ ಬೆರಳುಗಳೀಂದ ಮಸಾಜ್ ಮಾಡಿದರೆ ಬೇಡದ ರೋಮಗಳು ಕ್ರಮೇಣ ಉದುರುತ್ತವೆ. ಮುಖದ ತ್ವಚೆ ಮ್ಯದುವಾಗುತ್ತದೆ.
ಆರೋಗ್ಯಕ್ಕೂ ಸೈ…ಅಂದಕ್ಕೂ ಸೈ… ಬಹುಪಯೋಗಿ ಪಪ್ಪಾಯ ಹಣ್ಣು!
ಕಸ್ತೂರಿ ಅರಿಶಿಣದ ಚಕ್ಕೆಯನ್ನು ಕಲ್ಲಿನ ಮೇಲೆ ತೇಯ್ದು ಅದರೊಂದಿಗೆ ಶ್ರೀಗಂಧವನ್ನು ಸೇರಿಸಿ 2 ಬೇವಿನ ಎಲೆಯನ್ನು ಸೇರಿಸಿ. ಚೆನ್ನಾಗಿ ತೇಯ್ದು ಪೇಸ್ಟ್ ತಯಾರಿಸಿ ಸ್ವಲ್ಪ ಜೇನು ತುಪ್ಪದೊಂದಿಗೆ ಮುಖಕ್ಕೆ ಹಚ್ಚಿ ನಂತರ ಬೆರಳಿನಿಂದ ಮಸಾಜ್ ಮಾಡುವುದರಿಂದ ಮುಖದ ಮೇಲಿನ ಮೊಡವೆಗಳು ಮಾಯವಾಗುತ್ತವೆ, ಮತ್ತೆ ಕಾಣಿಸಿಕೊಳ್ಳುವುದಿಲ್ಲ.
ಎರಡು ಚಮಚ ಗೋಧಿ ಹಿಟ್ಟಿಗೆ ಸ್ವಲ್ಪ ಕಸ್ತೂರಿ ಅರಿಶಿಣ ಮಿಶ್ರ ಮಾಡಿ, ಮುಖಕ್ಕೆ ಹಚ್ಚಿ . ಸ್ವಲ್ಪ ಸಮಯದ ನಂತರ ಹಸಿ ಹಾಲಿನೊಂದಿಗೆ ಬೆರಳುಗಳಿಂದ ವರ್ತುಲಾಕಾರವಾಗಿ ತೀಡಿದರೆ ಡೆಡ್ ಸ್ಕಿನ್ ಹೊರಬರುತ್ತವೆ, ಹಾಗು ಕಲೆಗಳು ಕಡಿಮೆಯಾಗುತ್ತದೆ.
ಸ್ನಾನ ಮಾಡಿದ ನಂತರ ಪ್ರತಿ ದಿನ ಕಸ್ತೂರಿ ಅರಿಶಿಣವನ್ನು ಕೆನ್ನೆಯ ಅಕ್ಕಪಕ್ಕಗಳಲ್ಲಿ ಗಲ್ಲದ ಮೇಲೆ ಹಚ್ಚುವ ಅಭ್ಯಾಸ ಮಾಡಿಕೊಂಡರೆ ಕ್ರಮೇಣ ಬೇಡದ ರೋಮಗಳು ಉದುರಿಹೋಗುತ್ತವೆ.
ಈ ಬೇಸಿಗೆಯಲ್ಲಿ ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಈಗಲೇ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
ಕಸ್ತೂರಿ ಅರಿಶಿಣವನ್ನು ಸ್ವಲ್ಪ ನಿಂಬೆ ರಸ, ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ವಾರಕ್ಕೊಮ್ಮೆ ಬಿಡುವಿದ್ದಾಗ ಮುಖಕ್ಕೆ ಪ್ಯಾಕ್ ಹಾಕುವದರಿಂದ ಸ್ಕಿನ್ ಟೈಟಾಗುತ್ತದೆ ಹಾಗೂ ಕಾಂತಿಯುತವಾಗುತ್ತದೆ.
ರಾತ್ರಿ ಮಲಗುವ ಮುನ್ನ ಸ್ವಲ್ಪ ಹಾಲನ್ನು ಹತ್ತಿಯಲ್ಲಿ ಅದ್ದಿ ಮುಖಕ್ಕೆ ಹಚ್ಚಿ ಒರೆಸಿ. ನಂತರ ಹಾಲಿನ ಕೆನೆಯೊಂದಿಗೆ ಕಸ್ತೂರಿ ಅರಿಶಿಣಪುಡಿಯನ್ನು ಮಿಶ್ರಮಾಡಿ ಮುಖಕ್ಕೆ ಹಚ್ಚಿ 5 ನಿಮಿಷದ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದರೆ, ತ್ವಚೆಯ ಬಣ್ಣವು ತಿಳಿಯಾಗುತ್ತದೆ.
ಮುಖದಲ್ಲಿ ಅಗಾಗ ಕಾಣಿಸಿಕೊಳ್ಳುವ ಸಣ್ಣ ಸಣ್ಣ ಗುಳ್ಳೆಗಳು ಮೊಡವೆಗಳನ್ನು ಹೊಗಲಾಡಿಸಲು, ಕಸ್ತೂರಿ ಅರಿಶಿಣವನ್ನು ಕಲ್ಲಿನ ಮೇಲೆ ತೇಯ್ದು ಪೇಸ್ಟ್ ತಯಾರಿಸಿ. ಅದಕ್ಕೆ ಸ್ವಲ್ಪ ನಿಂಬೆರಸ ಬೇವಿನ ರಸ ಮಿಶ್ರ ಮಾಡಿ ಅವುಗಳ ಮೇಲೆ ಹಚ್ಚುವುದರಿಂದ ಕ್ರಮೇಣ ಮೊಡವೆ ಗುಳ್ಳೆಗಳು ಕಡಿಮೆಯಾಗುತ್ತದೆ.
ತುಟಿಯ ಮೇಲ್ಭಗಕ್ಕೆ ಹಾಗು ಗಲ್ಲದ ಮೇಲೆ ಆಗಾಗ್ಗೆ ಕಸ್ತೂರಿ ಅರಿಶಿಣವನ್ನು ನಿಂಬೆ ರಸದೊಂದಿಗೆ ಮಿಶ್ರ ಮಾಡಿ ಹಚ್ಚಿ . 10 ನಿಮಿಷದ ನಂತರ ತೀಡಿ ಮಸಾಜ್ ಮಾಡುವುದರಿಂದ ಬೇಡವಾದ ರೋಮಗಳು ಕ್ರಮೇಣ ಇಲ್ಲವಾಗುತ್ತವೆ.
Share your comments