1. ಆರೋಗ್ಯ ಜೀವನ

ನೀವು ತಿಳಿಯದೆ ಇರುವ ನಿಮ್ಮ ಅಡುಗೆ ಮನೆಯಲ್ಲಿನ ಜೀರಿಗೆಯ ಮಹತ್ವ..!

Jeera health benefits

ಹೌದು ಜೀರಿಗೆ ಅನ್ನೋದು ಬರಿ ಅಡುಗೆಗೆ ಮಾತ್ರ ಸೀಮಿತವಾಗಿಲ್ಲ ಮನುಷ್ಯನ ಆರೋಗ್ಯವನ್ನು ವೃದ್ಧಿಸುವಲ್ಲಿ ತುಂಬಾನೇ ಸಹಕಾರಿಯಾಗಿದೆಜೀರಿಗೆಯಿಂದ ಸಿಗುವಂತ ಆರೋಗ್ಯಕಾರಿ ಲಾಭಗಳನ್ನು ನಾವು ನಿಮಗೆ ತಿಳಿಸುತ್ತ ಹೋಗುತ್ತೇವೆ ನೋಡಿ.

ಇಲ್ಲಿದೆ ನೋಡಿ ಜೀರಿಗೆ ನೀರಿನ ಅದ್ಭುತ ಆರೋಗ್ಯ ಲಾಭಗಳು:

ಉದರಕ್ಕೆ ಉತ್ತಮ:

ಜೀರಿಗೆ ನೀರು ಹೊಟ್ಟೆ ಉಬ್ಬರ ಮತ್ತು ಎದೆಯುರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಜೀರ್ಣದಿಂದ ಮುಕ್ತಿ ನೀಡುತ್ತದೆ.ಇದು ಒಂದು ನೋವು ನಿರೋಧಕವಾಗಿ ಕೆಲಸ ಮಾಡುತ್ತದೆ, ವಿಶೇಷವಾಗಿ ಹೊಟ್ಟೆನೋವಿಗೆ ರಾಮಬಾಣ.

ಗರ್ಭಿಣಿಯರಲ್ಲಿ ಜೀರ್ಣಕ್ರೀಯೆಗೆ ಸಹಕಾರಿ:

 ಜೀರಿಗೆ ನೀರು ಗರ್ಭಿಣಿಯರಲ್ಲಿ ಜೀರ್ಣಕ್ರೀಯೆಯನ್ನು ಉತ್ತಮಗೊಳಿಸುತ್ತದೆ.ಇದು ಕಾರಬೋಹೈಡ್ರೇಟ್ಸ್ ಮತ್ತು ಕೊಬ್ಬನ್ನು ಜೀರ್ಣಗೊಳಿಸುವ ಕಿಣ್ವಗಳನ್ನು ಉತ್ತೇಜನಗೊಳಿಸುತ್ತದೆ.

ಹಾಲುಣಿಸುವ ತಾಯಂದಿರಲ್ಲಿ ಎದೆಹಾಲನ್ನು ಹೆಚ್ಚಿಸುತ್ತದೆ.

ಜೀರಿಗೆ ನೀರು ಹಾಲುಣಿಸುವ ತಾಯಂದಿರಲ್ಲಿ ಸ್ತನಗಳ ಗ್ರಂಥಿಯಿಂದ ಹಾಲು ಸ್ರವಿಕೆಯಾಗುವುದನ್ನು ಉದ್ದೀಪನಗೊಳಿಸುತ್ತದೆ.ಇದರಿಂದ ತಾಯಂದಿರಲ್ಲಿ ಎದೆಹಾಲು ಹೆಚ್ಚಾಗುತ್ತದೆ.

ಇಮ್ಮ್ಯುನಿಟಿ ಹೆಚ್ಚಿಸುತ್ತದೆ.

ಜೀರಿಗೆ ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿದೆ.ನಿಮ್ಮ ಇಮ್ಮ್ಯುನಿಟ್ ಸಿಸ್ಟೆಮ್  ಸರಿಯಾದ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಾದರೆ ಜೀರಿಗೆ ನೀರನ್ನು ಕುಡಿಯುವುದು ಅತೀ ಅಗತ್ಯ.ಇದು ರೋಗಾಣುಗಳ ವಿರುದ್ಧ ಹೋರಾಡಿ ಅನಾರೋಗ್ಯವನ್ನು ತಪ್ಪಿಸುತ್ತದೆ.

ಮಧುಮೇಹದ ವಿರುದ್ಧ ಹೋರಾಡುತ್ತದೆ.

ಜೀರಿಗೆ ನೀರು ಮಧುಮೇಹಿಗಳಿಗೆ ಬಹಳ ಒಳ್ಳೆಯದು.ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.

ಉಸಿರಾಟ ವ್ಯವಸ್ಥೆಯನ್ನು ಸಮತೋಲನದಲ್ಲಿ ಇಡುತ್ತದೆ.

ಜೀರಿಗೆ ನೀರು ನಿಮ್ಮ ಉಸಿರಾಟದ ಕ್ರೀಯೆಯನ್ನು ವ್ಯವಸ್ಥಿತವಾಗಿಡಲು ಸಹಾಯಕಾರಿ. ಇದರಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಲಕ್ಷಣಗಳಿದ್ದು, ಎದೆಯಲ್ಲಿ ಹೆಪ್ಪುಗಟ್ಟುವ ಕಫವನ್ನು ಕೂಡ ತಡೆಗಟ್ಟುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಜೀರಿಗೆ ನೀರಿನಲ್ಲಿ ಪೊಟಾಶಿಯಮ್ ಪ್ರಮಾಣ ಹೆಚ್ಚಾಗಿದೆ.ಪೊಟಾಶಿಯಮ್ ದೇಹದ ಕಾರ್ಯನಿರ್ವಹಣೆಗೆ ಅತ್ಯಂತ ಅಗತ್ಯವಾದ ಖನಿಜಾಂಶವಾಗಿದೆ.ಇದು ನಮ್ಮ ದೇಹಕ್ಕೆ ಸೇರುವ ಉಪ್ಪಿನ ಋಣಾತ್ಮಕ ಕ್ರೀಯೆಯನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.

Published On: 30 September 2018, 10:56 AM English Summary: Jeera - The importance of cumin in your kitchen home you do not know

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.