1. ಆರೋಗ್ಯ ಜೀವನ

ಪಾಲಕ್ ಸೊಪ್ಪಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಇಲ್ಲಿದೆ

ಉತ್ತಮ ಆರೋಗ್ಯಕ್ಕಾಗಿ ತರಕಾರಿ ತಿನ್ನಬೇಕೆಂದು ವೈದ್ಯರು ಆಗಾಗ ಸಲಹೆ ನೀಡುತ್ತಿರುತ್ತಾರೆ. ಏಕೆಂದರೆ ತರಕಾರಿ, ಹಸಿರು ಸೊಪ್ಪು ಸೇವಿಸುವುದರಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳಿವೆ. ಪ್ರತಿನಿತ್ಯ ಅಡುಗೆ ಮನೆಯಲ್ಲಿ ಬಳಸಲಾಗುವ ಪಾಲಾಕ್ ಸೊಪ್ಪು ಅನೇಕ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸಬಲ್ಲ ಗುಣಗಳನ್ನೂ ಹೊಂದಿದೆ. ಇದರ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಅನೇಕ ಗುಟ್ಟುಗಳು ಇಲ್ಲಿವೆ ನೋಡಿ....

ರಕ್ತದೊತ್ತಡ ಕಡಿಮೆ ಮಾಡುವುದು:

ಪಾಲಕ್ ಸೊಪ್ಪನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಂಡು ಸೇವಿಸುತ್ತಾ ಬಂದರೆ ಅಧಿಕ ರಕ್ತದೊತ್ತಡ ಸಮಸ್ಯೆಯಿಂದಲೂ ದೂರವಾಗಬಹುದು. ಇದನ್ನು ಸೇವಿಸುವ ಮೂಲಕ ನೈಸರ್ಗಿಕವಾಗಿ ರಕ್ತದೊತ್ತಡ ಸಮಸ್ಯೆಯಿಂದ ದೂರವಾಗಬಹುದು.

ಮಧುಮೇಹ ನಿರ್ವಹಣೆ:

ಪಾಲಕದಲ್ಲಿ ಆಲ್ಪಾ ಲಿಪೊಯಿಕ್ ಎಂಬ ಆಮ್ಲವು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಮಧುಮೇಹ ರೋಗಿಗಳಲ್ಲಿ ಆಕ್ಸಿಡೇಟಿವ್, ಒತ್ತಡ ಪ್ರೇರಿತ ಬದಲಾವಣೆಗಳನ್ನು ತಡೆಯುತ್ತದೆ.

ಕ್ಯಾನ್ಸರ್ ತಡೆಗಟ್ಟುವಿಕೆ:

ಪಾಲಕ್ ಸೊಪ್ಪು ಕ್ಯಾನ್ಸರ್ ರೋಗವನ್ನೂ ಕೂಡ ತಡೆಗಟ್ಟಬಲ್ಲದು. ಪಾಲಕದಲ್ಲಿ ಕ್ಲೋರೊಫಿಲ್ ಇರುತ್ತದೆ.ಇದು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಅಸ್ತಮಾ ತಡೆಗಟ್ಟುವಿಕೆ:

ಪಾಲಕನಲ್ಲಿ ಬೀಟಾ ಕ್ಯಾರೋಟಿನ್ ಇರುವದರಿಂದ ಇದು ಅಸ್ತಮಾ ತಡೆಯುವಲ್ಲಿ ಸಹಕಾರಿಯಾಗಿದೆ.

ಮೂಳೆ ಆರೋಗ್ಯ:

 ಪಾಲಕ್ ದಿಂದ ಮೂಳೆ ಮ್ಯಾಟ್ರಿಕ್ಸ್ ಪ್ರೋಟೀನ್ ಗಳ ಮಾರ್ಪಡಕವಾಗಿ ಕಾರ್ಯನಿರ್ವಹಿಸುವದರಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ಮೂತ್ರದಲ್ಲಿ ಬಿಡುವ ಕ್ಯಾಲ್ಸಿಯಂ ಪ್ರಮಾಣವನ್ನು ಕಡಿಮೆಗೊಳಿಸುವದರಿಂದ ಸಾಕಷ್ಟು ವಿಟಮಿನ್ ಕೆ ಸೇವನೆಯು ಆರೋಗ್ಯಕ್ಕೆ ಮುಖ್ಯವಾಗಿದೆ.

ಜೀರ್ಣಕ್ರಿಯೆಗೆ ಸಹಕಾರಿ:

ಪಾಲಕದಲ್ಲಿ ಫೈಬರ್ ಮತ್ತು ನೀರಿನಲ್ಲಿ ಅಧಿಕವಿದೆ. ಇವೆರಡು ಮಲಬದ್ಧತೆಯನ್ನು  ತಡೆಗಟ್ಟಲು ಮತ್ತು ಆರೋಗ್ಯಕರ ಜೀರ್ಣಾಂಗವ್ಯೂಹವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಕೂದಲಿನ ಬೆಳವಣಿಗೆಗೆ ಸಹಕಾರಿ:

ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಕೂದಲಿನ ಸಮಸ್ಯೆ ದೂರವಾಗುತ್ತದೆ. ಇದರಲ್ಲಿರುವ ಕಬ್ಬಿಣ, ವಿಟಮಿನ್-ಎ, ವಿಟಮಿನ್-ಸಿ ಹಾಗೂ ಪ್ರೋಟಿನ್ ಅಂಶಗಳು ಅಧಿಕ ಪ್ರಮಾಣದಲ್ಲಿ ಇರುವುದರಿಂದ ಕೂದಲಿನ ಎಲ್ಲ ಸಮಸ್ಯೆಗಳನ್ನು ನಿವಾರಿಸುತ್ತದೆ. ಪಾಲಕ ಕಬ್ಬಿಣಾಂಶವನ್ನು ಹೊಂದಿರುವದರಿಂದ ಕೂದಲು ಉದುರುವಿಕೆಯನ್ನು ತಡೆಯುವದು ಮತ್ತು ವಿಟಮಿನ್ ಎ ಅಧಿಕ ಹೊಂದಿರುವದರಿಂದ ಚರ್ಮ ಕಾಂತಿಯುತವಾಗಿರುತ್ತದೆ.

ಲೇಖಕರು: ಶಗುಪ್ತಾ ಅ ಶೇಖ

Published On: 21 October 2020, 07:41 AM English Summary: health benefits of spinach

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.