1. ಆರೋಗ್ಯ ಜೀವನ

ಜೀರಿಗೆ ಮಹಿಮೆ ಬಲ್ಲಿರಾ? ಇಲ್ಲಿದೆ ಮಾಹಿತಿ

ಜೀರಿಗೆ ಕೇವಲ ಒಂದು ಸಾಂಬಾರ ಪದಾರ್ಥವಾಗಿರಬದೆ ಹಲವು ಚಿಕ್ಕಪುಟ್ಟ ಬೇನೆಗಳಿಗೆ ಮದ್ದಾಗಿ ಸಹ ಉಪಯೋಗಿಸಲಾಗುವುದು. ಜೀರಿಗೆಯಲ್ಲಿ ಬಿಳಿಜೀರಿಗೆ, ಕರಿಜೀರಿಗೆ, ಕಹಿಜೀರಿಗೆ ಎಂಬ ವಿಧಗಳಿವೆ.  ಭಾರತೀಯ ಅಡುಗೆ ಪದ್ಧತಿಯಲ್ಲಿ ಜೀರಿಗೆಗೆ ಮಹತ್ವದ ಸ್ಥಾನವಿದೆ. ಹಲವಾರು ಆರೋಗ್ಯಕಾರಿ ಗುಣಗಳಿಂದ ಇದು ಮಹತ್ವದ ಔಷಧಿ ಪದಾರ್ಥವಾಗಿಯೂ ಬಳಸಲ್ಪಡುತ್ತದೆ.

ಜೀರಿಗೆ ಕಾಳುಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ಕಂದು ಬಣ್ಣದ್ದಾಗಿರುತ್ತವೆ. ಇದನ್ನು ನೇರವಾಗಿ ಅಥವಾ ಪುಡಿ ರೂಪದಲ್ಲಿ ಬಳಸಲಾಗುತ್ತದೆ. ಸಾಂಬಾರು, ಬೇಳೆ ಸಾರು, ಉಪ್ಪಿಟ್ಟು, ಔಲಕ್ಕಿ, ಸುಸಲಾ, ಚಟ್ನಿಗಳಲ್ಲಿ ಒಗ್ಗರಣೆಗೆಗಾಗಿ ಬಳಸಲಾಗುತ್ತದೆ.

ರೋಗ ನೀರೋಧಕ ಶಕ್ತಿಯನ್ನು ವೃದ್ಧಿಸುತ್ತದೆ:

ಜೀರಿಗೆಯಲ್ಲಿ ಆಂಟಿ ಆಕ್ಸಿಡಂಟಗಳಿರವದರಿಂದ ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆಯ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಳಗೊಂಡು ಜೀರ್ಣ ಕ್ರಿಯೆ ಕ್ರಿಯೆ ಸುಧಾರಿಸುತ್ತದೆ.

ಮಧುಮೇಹಿಗಳಿಗೆ ಮಹತ್ವ ಪಡೆದಿದೆ:

ಮಧುಮೇಹಿಗಳು ಆಹಾರ ಕ್ರಮದಲ್ಲಿ ಜೀರಿಗೆಗಳನ್ನು ಬಳಸಿಕೊಳ್ಳುವದರ ಮೂಲಕ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು.

ಆಸ್ತಮಾ ಮತ್ತು ಶೀತವನ್ನು ನಿವಾರಿಸುತ್ತದೆ:

ಜೀರಿಗೆಯ ಆಂಟಿಬ್ಯಾಕ್ಟೀರಿಯಾ ಮತ್ತು ಆಂಟಿಇಂಫ್ಲಾಮೇಟರಿ ಗುಣಲಕ್ಷಣಗಳ ಕಾರಣ, ಜೀರಿಗೆ ಬೀಜಗಳು ಶೀತ ಮತ್ತು ಕೆಮ್ಮಿನ ಸಮಸ್ಯೆಗೆ ಅದ್ಭುತ ಮನೆಮದ್ದಾಗಿದೆ. ಇದು ಕೆಮ್ಮು, ಜ್ವರ, ಶೀತವನ್ನು ಬೇಗನೇ ಕಡಿಮೆ ಮಾಡುತ್ತದೆ. ಜೀರಿಗೆಯು ಉಬ್ಬಸ ರೋಗದವರಿಗೆ ದಿವ್ಯ ಔಷಧಿಯಾಗಿದೆ.

ಅನೀಮಿಯಾ ಅಥವಾ ರಕ್ತಹೀನತೆಯ ಸಮಸ್ಯೆಗಾಗಿ:

ಈ ಕಾಳುಗಳು ಕಬ್ಬಿಣಾಂಶದ ಆಗರವಾಗಿವೆ.ಆದ್ದರಿಂದ ಇದರ ಸೇವನೆಯಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ರಕ್ತಹೀನತೆಗೆ ಕೂಡ ಇದರ ಸೇವನೆ ಒಳ್ಳೆಯದು.

ಜೀರ್ಣಕ್ರಿಯನ್ನು ಸುಗಮಗೊಳಿಸುತ್ತದೆ:

ಜೀರಿಗೆ ಕಾಳುಗಳು ಪಚನ ಕ್ರಿಯೆಗೆ ಸಹಕಾರಿಯಾಗಿವೆ. ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರವವರಿಗೆ ಇದು ನಿಜಕ್ಕು ಚೇತೋಹಾರಿಯಾಗಿದೆ. ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿರುವ ಜೀರಿಗೆ ನಿಮ್ಮ ಇಮ್ಮ್ಯುನಿಟ್ ಸಿಸ್ಟೆಮ್ ಸರಿಯಾದ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಅಜೀರ್ಣದಿಂದಾಗುವ ಹೊಟ್ಟೆ ನೋವನ್ನು ಸಹ ಇದು ಕಡಿಮೆ ಮಾಡುತ್ತದೆ

ರಕ್ತವನ್ನು ಶುದ್ದೀಕರಣಗೊಳಿಸುತ್ತದೆ:

ಆಹಾರ ಕ್ರಮದಲ್ಲಿ ಜೀರಿಗೆಯನ್ನು ಪುಡಿ ರೂಪದಲ್ಲಿ ಸೇವಿಸುವದರಿಂದ ರಕ್ತದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ದಿನಕ್ಕೆ ಎರಡು ಲೋಟ ಜೀರಿಗೆ ನೀರು ಕುಡಿದರೆ ತೂಕವನ್ನು ಇಳಿಸಬಹುದಾಗಿದೆ.

ಲೇಖಕರು:  ಶಗುಪ್ತಾ ಅ.ಶೇಖ

Published On: 17 October 2020, 09:22 PM English Summary: Health Benefits of Cumin

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.