1. ಆರೋಗ್ಯ ಜೀವನ

ಹೂಕೋಸುವಿನಲ್ಲಿ ಅಡಗಿರುವ ಹಲವಾರು ಆರೋಗ್ಯ ಪ್ರಯೋಜನಗಳು

 ಆಹಾರದ ರುಚಿಯನ್ನು ಹೆಚ್ಚಿಸುವ ಹೂಕೋಸು, ಹಲವು ವಿಶೇಷ ಗುಣಗಳನ್ನು ಹೊಂದಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದದ್ದು, ರುಚಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೂಕೋಸುಗಳ ಪ್ರಯೋಜನಗಳು ತುಂಬಾ ವಿಶೇಷತೆ ಪಡೆದುಕೊಂಡಿದೆ. ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಎಲ್ಲಾ ರೀತಿಯ ಜೀವಸತ್ವಗಳು , ಮೆಗ್ನೇಶಿಯಂ, ಹಾಗೂ ಪೊಟ್ಯಾಶಿಯಂ ಇದೆ. ಹೂಕೋಸುವಿಲ್ಲಿ ಅಡಗಿರುವ ಆರೋಗ್ಯದ ಮಹತ್ವದ ಮಾಹಿತಿ ಇಲ್ಲಿದೆ....

ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ: ಹೃದಯದ ಹಾಗೂ ಮನಸ್ಸನ್ನು ಆರೋಗ್ಯವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಅಲದ್ದೇ, ಕೂದಲಿನ ಆರೋಗ್ಯಕ್ಕೂ ಹೆಚ್ಚು ಉಪಯುಕ್ತ ಎನ್ನಬಹುದು. ಹೂಕೋಸು ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ

ಫೈಬರ್ ಹೆಚ್ಚು: ಹೂಕೋಸು ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ. ದೀರ್ಘಕಾಲದ ಕಾಯಿಲೆ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಾಯ: ಹೂಕೋಸು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಸಂಶೋಧನೆಯೊಂದರ ಪ್ರಕಾರ ,ಮಲಬದ್ಧತೆ , ಮೂಲವ್ಯಾಧಿ , ಕರುಳಿನ ಕ್ಯಾನ್ಸರ್ , ಗ್ಯಾಸ್ಟ್ರಿಕ್ ಹುಣ್ಣು , ಬೊಜ್ಜು ಮುಂತಾದ ಅನೇಕ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. 

 ತೂಕ ಇಳಿಸಲು ಸಹಾಯ: ಹೂಕೋಸುವಿನಲ್ಲಿ ಫೈಬರ್ ಮತ್ತು ನೀರಿನ ಅಂಶ ಅಧಿಕವಾಗಿದೆ. ಹೀಗಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೊಜ್ಜು ತಡೆಯುತ್ತದೆ.ಇದರ ಜೊತೆಯಲ್ಲಿ ಹೂಕೋಸು ದೇಹದ ಚಯಾಪಚಯ ಕ್ರಿಯೆಗೆ ಅಗತ್ಯವಾದ ಅನೇಕ ಜೀವಸತ್ವಗಳನ್ನು ಹೊಂದಿರುತ್ತದೆ.

ಮೆದುಳಿಗೆ ಸಹಕಾರಿ: ಮೆದುಳಿನ ಆರೋಗ್ಯಕ್ಕೆ ಹೂಕೋಸು ತುಂಬಾ ಪ್ರಯೋಜನಕಾರಿ. ಮೆದುಳಿನ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ನೀಡುತ್ತದೆ. ಬುದ್ಧಿವಂತಿಕೆಯ ಬೆಳವಣಿಗೆಗೂ ಸಹಕಾರಿಯಾಗಿದೆ.

ಕ್ಯಾನ್ಸರ್ ತಡೆಯಲು ಸಹಾಯ: ಹೂಕೋಸುವಿನಲ್ಲಿ ಸಲ್ಫೋರಾಫೇನ್ ಸಮೃದ್ಧವಾಗಿರುವದರಿಂದ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಲೇಖಕರು: ಶಗುಪ್ತಾ ಅ ಶೇಖ

Published On: 23 October 2020, 08:58 PM English Summary: health benefits of cauliflower

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.