1. ಆರೋಗ್ಯ ಜೀವನ

ಬೇಲದ ಹಣ್ಣಿನಲ್ಲಿದೆ ಬಹಳಷ್ಟು ಆರೋಗ್ಯದ ಗುಟ್ಟು

wood apple

ಇತ್ತೀಚಿನ ಜೀವನಶೈಲಿಯ ಪರಿಣಾಮದಿಂದಾಗಿ ಮನುಷ್ಯರನ್ನು ಹಲವಾರು ರೋಗ ರುಜಿನಗಳು ಕಾಡುತ್ತಿವೆ.  ಅವುಗಳಲ್ಲಿ ಪ್ರಮುಖವೆಂದರೆ ರಕ್ತದೊತ್ತಡ ಹಾಗೂ ಸಕ್ಕರೆಖಾಯಿಲೆ/ಡಯಾಬಿಟೀಸ್ ಈ ಕಾಯಿಲೆಗಳು ವಯಸ್ಕರಿಂದ ಹಿಡಿದು ವೃದ್ಧರವರೆಗೂ ಕಾಡುತ್ತಿವೆ. ಇವೆಲ್ಲವನ್ನೂ ನಿಯಂತ್ರಿಸಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು. ಹಾಗೂ ಇವುಗಳಲ್ಲಿ ಒಂದು ಬೇಲದ ಹಣ್ಣು.

ಬೇಲದ ಹಣ್ಣು :

ಲೈಮೋನಿಯ ಅಸಿಡಿಸ್ಸಿಮಾ ಎಂಬುದುಈ ಹಣ್ಣಿನ ವೈಜ್ಞಾನಿಕ ಹೆಸರು ಹಾಗೂ ಇದು ರೋಟೇಸಿಯೆಎಂಬ ಕುಟುಂಬಕ್ಕೆ ಸೇರಿದೆಇದನ್ನು ಕನ್ನಡದಲ್ಲಿ ಬೇಲದ ಹಣ್ಣು, ಹಿಂದಿಯಲ್ಲಿ ಬೇಲ್ ಎಂದು , ತಮಿಳಿನಲ್ಲಿವೇಲುಝಾಂ, ತೆಲುಗಿನಲ್ಲಿ ವೆಲ್ಲಗ ಪಂ ಡುಎಂದು ಕರೆಯುತ್ತಾರೆ.

ಈ ಹಣ್ಣು ಭಾರತಕ್ಕೆ ಸ್ಥಳೀಯವಾಗಿದ್ದು, ಬಾಂಗ್ಲಾದೇಶ, ಶ್ರೀಲಂಕಾ,ಹಾಗೂ ಮಲೇಷಿಯಾಮುಂತಾದ ದೇಶಗಳಲ್ಲಿಕಾಣಸಿಗುತ್ತದೆಹಳ್ಳಿಗಳಲ್ಲಿ ಈ ಗಿಡವನ್ನುಹೊಲದ ಬದುಗಳ ಮೇಲೆ ಕೆರೆಗಳ ಹತ್ತಿರ ಹಾಗೂ ರಸ್ತೆಗಳ ಪಕ್ಕದಲ್ಲಿ ಕಾಣಸಿಗುತ್ತವೆ ಹಾಗೂ ಈ ಗಿಡದ ಎಲೆಗಳನ್ನು ಉಜ್ಜಿದರೆ ನಿಂಬೆ ಹಣ್ಣಿನ ವಾಸನೆ ಬರುತ್ತದೆ. ಈ ಹಣ್ಣು ಗಟ್ಟಿಯಾದ ಹೊರಕವಚ ಹೊಂದಿದ್ದು, ಅದರ ಒಳಗೆ ಕಂದು ಬಣ್ಣದ ತಿರುಳನ್ನು ಹೊಂದಿದ್ದು, ಅದರಲ್ಲಿ ಬಿಳಿ ಬಣ್ಣದ ಬೀಜ ಹೊಂದಿರುತ್ತದೆ.ಹಾಗೂ ತಿರುಳು ಹುಳಿಮಿಶ್ರಿತಸಿಹಿಯ ರುಚಿ ಹೊಂದಿದೆಈ ಹಣ್ಣಿನ 100 ಗ್ರಾಂನಲ್ಲಿ 18 ಗ್ರಾಂ ಶರ್ಕರಪಿಷ್ಟ, 3.7 ಗ್ರಾಂ ನಷ್ಟು ಕೊಬ್ಬು, 7.1 ಗ್ರಾಂನಷ್ಟು ಪ್ರೋಟೀನ್, 28 ಗ್ರಾಂ ನಷ್ಟು ವಿಟಮಿನ್ ( ವಿಟಮಿನ್ ಸಿ, ವಿಟಮಿನ್ಬಿ) ಹಾಗೂ 130 ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂಮತ್ತು ಮುಂತಾದ ಖನಿಜಗಳನ್ನು ಹೊಂದಿದೆ.

ಹಣ್ಣಿನ ಉಪಯೋಗಗಳು:

ಈ ಹಣ್ಣನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದರಿಂದ ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ,ಹಾಗೂ ಮಲಬದ್ಧತೆಗಳಂತ ಸಮಸ್ಯೆಗಳನ್ನು ನಿವಾರಿಸುತ್ತದೆಹೊಟ್ಟೆಯಲ್ಲಾಗುವ ಅಲ್ಸರ್ಗಳಿಗೆ ಇದು ರಾಮ ಬಾಣವಾಗಿ ಕೆಲಸ ಮಾಡುತ್ತದೆಇದರಲ್ಲಿನ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನುಹೆಚ್ಚಿಸುತ್ತದೆ.

;

ಈ ಹಣ್ಣು ಮಕ್ಕಳಲ್ಲಿ ಅವರ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಾತ್ರವಹಿಸುತ್ತದೆಹಾಗೂ ಬೇಸಿಗೆಯಲ್ಲಿ ಈ ಹಣ್ಣಿನ ಪಾನಕ ಅಥವಾ ಹಣ್ಣಿನಜೊತೆ ಬೆಲ್ಲ ಸೇರಿಸಿ ತಿನ್ನುವುದರಿಂದ ದೇಹವನ್ನು ತಂಪಾಗಿರಿಸುತ್ತದೆ.

ಲೇಖಕರು: ಆತ್ಮಾನಂದ ಹೈಗರ್

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.