1. ಆರೋಗ್ಯ ಜೀವನ

ಆರೋಗ್ಯದ ಖನಿ ಡ್ರ್ಯಾಗನ್ ಹಣ್ಣು

ಆಡು ಭಾಷೆಯಲ್ಲಿ ಪಾಪಸ್‌ಕಳ್ಳಿ ಹಣ್ಣು ಎಂದು ಕರೆಯುವ ಡ್ರ್ಯಾಗನ್ ಹಣ್ಣು ಕ್ಯಾಕ್ಟಸ್ ಜಾತಿಗೆ ಸೇರಿರುವ ಸುಧಾರಿತ ತಳಿಯಾಗಿದೆ. ಕೆಂಪು ಬಣ್ಣದಲ್ಲಿರುವ ಈ ಹಣ್ಣು ನೋಡಲು ಡ್ರ್ಯಾಗನ್ ಆಕೃತಿಯನ್ನು ಹೋಲುವುದರಿಂದ ಡ್ರ್ಯಾಗನ್ ಹಣ್ಣು”ಎಂದು ಸಹ ಕರೆಯುತ್ತಾರೆ. ಈ ಹಣ್ಣಿನ ಮೂಲ ಮಧ್ಯ ಅಮೇರಿಕಾವಾಗಿದ್ದು, ಪ್ರಸ್ತುತ ವಿವಿಧ ದೇಶಗಳಲ್ಲಿ ಮುಖ್ಯವಾಗಿ ಉಷ್ಣವಲಯದ ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಈ ಹಣ್ಣನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಮುಖ್ಯವಾಗಿ ಪಂಜಾಬ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಕಾಣಬಹುದು. ಕರ್ನಾಟಕದಲ್ಲಿ ಉತ್ತರ ಕರ್ನಾಟಕದ ಕೊಪ್ಪಳ, ಬಳ್ಳಾರಿ ಭಾಗದಲ್ಲಿ ಸಹ ಈ ಬೆಳೆ ಹರಡಿದೆ.

ಸಾಧರಾಣವಾಗಿ ಕಡುಗೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುವ ಈ ಹಣ್ಣು ಕೆಲವೊಂದು ಗುಲಾಬಿ ಅಥವಾ ಹಳದಿಯ ಬಣ್ಣಗಳಲ್ಲೂ ಸಿಗುವುದು. ಹಣ್ಣಿನ ಒಳಭಾಗ ಬರಿ ತಿರುಳು ಒಳಗೊಂಡಿದ್ದುಸಣ್ಣ ಸಣ್ಣ ಬೀಜಗಳು ಇರುತ್ತವೆ. ಕಿವಿ ಹಣ್ಣುತರಹದ ವಿನ್ಯಾಸ ಇರುವ ಈ ಹಣ್ಣುರುಚಿಯಲ್ಲಿ ಹಾಗೆಯೇಇದೆ.

ಡ್ರ್ಯಾಗನ್ ಹಣ್ಣು ಆರೋಗ್ಯದ ಖನಿಯಾಗಿದ್ದು. ಕಡಿಮೆ ಪ್ರಮಾಣದ ಸಕ್ಕರೆ ಮತ್ತು ಕೊಬ್ಬಿನ ಅಂಶವನ್ನು ಹಾಗೂ ಹೆಚ್ಚಿನ ಪ್ರಮಾಣದ ನಾರಿನಾಂಶ, ಜೀವಸತ್ವ-ಸಿ, ಕಬ್ಬಿಣಾಂಶ, ಸಸಾರಜನಕ, ಕ್ಯಾಲ್ಸಿಯಂ, ರಂಜಕ, ಓಮೇಗಾ-3 ಮತ್ತು ಓಮೇಗಾ-6 ಕೊಬ್ಬಿನಾಮ್ಲ ಇತ್ಯಾದಿ ಅಂಶಗಳನ್ನು ಹೊಂದಿರುವ ಈ ಹಣ್ಣು ಹಲವಾರು ರೋಗಗಳಿಗೆ ರಾಮಬಾಣವಾಗಿದೆ.

ಡ್ರ್ಯಾಗನ್ ಹಣ್ಣಿನ ಪೌಷ್ಠಿಕ ಮೌಲ್ಯ (100 ಗ್ರಾಂ)

ಪೋಷಕಾಂಶಗಳು

ಪ್ರಮಾಣ

ಕಾರ್ಬೋಹೈಡ್ರೇಟ್

11ಗ್ರಾಂ

ಪ್ರೋಟಿನ್

1.1 ಗ್ರಾಂ

ಕೊಬ್ಬು

0.4 ಗ್ರಾಂ

ನಾರು

3.0 ಗ್ರಾಂ

ಕಬ್ಬಿಣಾಂಶ

1.9 ಗ್ರಾಂ

ವಿಟಮಿನ್ ಸಿ

9 ಮಿ.ಗ್ರಾಂ

ವಿಟಮಿನ್ ಬಿ

0.04 ಗ್ರಾಂ

ಕ್ಯಾಲ್ಸಿಯಂ

107 ಮಿ.ಗ್ರಾಂ

  • ಈ ಹಣ್ಣು ಕಡಿಮೆ ಪ್ರಮಾಣದ ಕೊಬ್ಬಿನ ಅಂಶವನ್ನು ಹೊಂದಿದ್ದು ದೇಹದ ತೂಕವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.
  • ಡ್ರಾಗ್ಯನ್ ಹಣ್ಣು ಓಮೇಗಾ-3 ಕೊಬ್ಬಿನಾಂಶವನ್ನು ಹೊಂದಿರುವುದರಿಂದ ಹೃದಯ ಆರೋಗ್ಯಕ್ಕೆ ಸಹಕರಿಸುತ್ತದೆ. ದೇಹದಲ್ಲಿರುವ ಕೆಟ್ಟ ಕೊಬ್ಬಿನಾಂಶವನ್ನು ಕರಗಿಸಿ, ಹೃದಯಕ್ಕೆ ಹರಿಯುವ ರಕ್ತವನ್ನು ಶುದ್ಧೀಕರಿಸುತ್ತದೆ.
  • ಈ ಹಣ್ಣು ಹೆಚ್ಚಿನ ನಾರಿನಾಂಶವನ್ನು ಹೊಂದಿದ್ದು ಇದು ದೇಹದ ಕೆಟ್ಟ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನು ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಿಸುತ್ತದೆ.
  • ಇದರಲ್ಲಿರುವ ಜೀವಸತ್ವ-ಸಿ ಅಂಶವು ಚರ್ಮದ ಕಳೆಗುಂದುವಿಕೆ ವಿರುದ್ಧ ಸೆಣಸುತ್ತದೆ. ದಂತ ಮತ್ತು ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ.
  • ಈ ಹಣ್ಣು ಅತ್ಯಧಿಕ ಖನಿಜಾಂಶಗಳನ್ನು ಹಾಗೂ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ದೇಹದರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಮತ್ತು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅಲ್ಲದೇ ಕ್ಯಾನ್ಸರ್ ಕಣಗಳನ್ನು ನಾಶ ಮಾಡುವುದರಿಂದ ಈ ಹಣ್ಣು ಕ್ಯಾನ್ಸರ್ ರೋಗಕ್ಕೆ ರಾಮ ಬಾಣವಾಗಿದೆ.
  • ಡ್ರ್ಯಾಗನ್ ಹಣ್ಣಿನಲ್ಲಿ ಜೀವಸತ್ವ-ಸಿ ಮತ್ತುಜೀವಸತ್ವ-ಎ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ಮೆದುಳನ್ನು ಚುರುಕುಗೊಳಿಸುತ್ತದೆ.
  • ಈ ಹಣ್ಣಿನ ಸೇವನೆಯಿಂದ ಶ್ವಾಸಕೋಶ ಸಮಸ್ಯೆ ಹಾಗೂ ರಕ್ತಹೀನತೆ ಉಪಶಮನವಾಗುತ್ತದೆ. ಅಲ್ಲದೇ ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಈ ಹಣ್ಣು ಉಪಯುಕ್ತವಾಗಿದೆ.
  • ಇದು ಗರ್ಭೀಣಿಯರಿಗೆ ಹೆಚ್ಚಿನ ಪೌಷ್ಠಿಕಾಂಶವನ್ನು ಒದಗಿಸುತ್ತದೆ.
  • ಇದು ಬಿಳಿಯ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಈ ಡೆಂಗ್ಯೂ ಜ್ವರದಂತಹ ರೋಗಗಳಿಗೆ ಈ ಹಣ್ಣು ಸಿದ್ಧ ಔಷಧಿಯಾಗಿದೆ ಎಂದು ಹೇಳಲಾಗುತ್ತದೆ.

ಡ್ರ್ಯಾಗನ್ ಹಣ್ಣನ್ನು ಕೇವಲ ತಾಜಾ ಹಣ್ಣಲ್ಲದೆ. ಅನೇಕ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಿ ಉಪಯೋಗಿಸಬಹುದು. ಅವುಗಳಲ್ಲಿ ಈ ಕೆಳಗೆ ವಿವರಿಸಿದೆ.

ಡ್ರ್ಯಾಗನ್ ಹಣ್ಣಿನ ಜ್ಯೂಸ್

ಬೇಕಾಗುವ ಸಾಮಾಗ್ರಿಗಳು : ಡ್ರ್ಯಾಗನ್ ಹಣ್ಣು -1,  ಸಕ್ಕರೆ- 2 ಚಮಚ, ನಿಂಬೆರಸ– 2 ಚಮಚ

ವಿಧಾನ: ಡ್ರ್ಯಾಗನ್ ಹಣ್ಣಿನ ತಿರಳು ತೆಗೆದು ಇದರಲ್ಲಿ ಸಕ್ಕರೆ, ನಿಂಬೆರಸ ಸೇರಿಸಿ ಮಿಕ್ಸ್ ಮಾಡಬೆಕು. ಈ ಜ್ಯೂಸನ್ನು ಪ್ರೀಜ್‌ನಲ್ಲಿಟ್ಟು. ತಂಪಾಗಿಸಿ ಸೇವಿಸಬಹುದು.

ಡ್ರ್ಯಾಗನ್ ಹಣ್ಣಿನ ಮಿಲ್ಕ್ ಶೇಕ್

ಬೇಕಾಗುವ ಸಾಮಾಗ್ರಿಗಳು : ಡ್ರ್ಯಾಗನ್ ಹಣ್ಣು  -1

 : ಸಕ್ಕರೆ -2 ಚಮಚ

 : ಹಾಲು – 1 ಕಪ್ (100ಎಮ್.ಎಲ್)

: ವೆನೆಲ್ಲಾ ಐಸ್‌ಕ್ರಿಮ್– 50 ಗ್ರಾಂ

ವಿಧಾನ :ಡ್ರ್ಯಾಗನ್ ಹಣ್ಣಿನ ತಿರುಳುನ್ನು ತೆಗೆಯಬೇಕು .ತಿರುಳಿಗೆ ಸಕ್ಕರೆ ಗಟ್ಟಿ ಹಾಲು, ವೆನಿಲ್ಲಾ ಐಸ್‌ಕ್ರಿಮ್ ಸೇರಿಸಿ ಮಿಕ್ಸಿ ಮಾಡಬೇಕು.  ಪ್ರಿಜ್‌ನಲ್ಲಿ ಅರ್ಧಗಂಟೆ ಇಟ್ಟು ನಂತರ ಸೇವಿಸಬಹುದು.

ಡ್ರ್ಯಾಗನ್ ಹಣ್ಣಿನ ಐಸ್‌ಕ್ರೀಮ್

ಬೇಕಾಗುವ ಸಾಮಾಗ್ರಿಗಳು : ಡ್ರ್ಯಾಗನ್ ಹಣ್ಣು-1 ವೆನಿಲ್ಲ ಎಸನ್ಸ್ - 2ಹನಿ

: ಸಕ್ಕರೆ -2 ಚಮಚ

: ಹಾಲಿನ ಕ್ರಿಮ್– 1 ಬಟ್ಟಲು

: ಕಂಡೆನ್ಸಡ್ ಮಿಲ್ಕ್–1 ಬಟ್ಟಲು

ಲೇಖನ: ಡಾ.ಕವಿತಾ ಯು. ಉಳ್ಳಿಕಾಶಿ, ವಿಜ್ಞಾನಿ (ಗೃಹ ವಿಜ್ಞಾನ ,ಡಾ. ಜ್ಯೋತಿಆರ್. ವಿಜ್ಞಾನಿ (ತೋಟಗಾರಿಕೆ) ಶ್ರೀ ರಾಘವೇಂದ್ರ ಎಲಿಗಾರ್, ವಿಜ್ಞಾನಿ (ಕೃಷಿ ಕೀಟಶಾಸ್ತ್ರ), ಐ.ಸಿ.ಎ.ಆರ್-ಕೃಷಿ ವಿಜ್ಞಾನಕೇಂದ್ರ, ಗಂಗಾವತಿ

Published On: 22 September 2021, 08:42 PM English Summary: Dragon fruits health benefit

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.