Health & Lifestyle

ಬೆಟ್ಟದಷ್ಟಿದೆ ನೆಲ್ಲಿಕಾಯಿ ಮಹಿಮೆ..ಇದರ ಪ್ರಯೋಜನೆಗಳೇನು..?

26 April, 2022 5:26 PM IST By: Maltesh
ಸಾಂದರ್ಭಿಕ ಚಿತ್ರ

ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ಬಾಯಲ್ಲಿ ನೀರೂರುತ್ತೆ. ನಿಮ್ಮ ಬಾಯಲ್ಲಿ ನೀರು ಬರಲಿಲ್ಲ ಅಂದ್ರೆ ನಿಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ. ಉಪ್ಪು ಖಾರ ಮಿಶ್ರಣವನ್ನು ಹಚ್ಚಿ ಚುರಕ್ ಅಂತ ಕಚ್ಚಿದಾಗ ಲಾವಾರಸದ ಬುಗ್ಗೆಯುಕ್ಕಿಸಿ, ಹಲ್ಲನ್ನು ಚುಳ್ ಎನ್ನಿಸುತ್ತೆ. ಅದೇ ಈ ಬೆಟ್ಟದ ನೆಲ್ಲಿಕಾಯಿಯ ಮಹಿಮೆ.

ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನುವುದರಿಂದಾಗುವ ಲಾಭಗಳು!

ಸಣ್ಣದಾಗಿ ಹೆಚ್ಚಿ ಉಪ್ಪು, ಮೊಸರು, ಇಂಗು ಹಾಕಿದ ಮಿಶ್ರಣದಲ್ಲಿ ನೆನೆಸಿ ಬಿಸಿಲಲ್ಲಿ ಒಣಗಿಸಲು ಇಟ್ಟ ಹಸಿ ನೆಲ್ಲಿಕಾಯಿ ತುಂಬಾ ರುಚಿಯಾಗಿರುತ್ತದೆ. ಉಪ್ಪು, ಹುಳಿಯ ನೆಲ್ಲಿಕಾಯಿಯನ್ನು ಚಪ್ಪರಿಸಿ ಇನ್ನುವ ಮಜವೇ ಬೇರೆ. ಮತ್ತಷ್ಟು ತಿನ್ನಬೇಕೆಂಬ ಬಯಕೆ ಹೆಚ್ಚಾಗುತ್ತೆ. ಇಷ್ಟೆಲ್ಲ ಖ್ಯಾತಿ ಇರೋ ಬೆಟ್ಟದ ನೆಲ್ಲಿಕಾಯಿಯಲ್ಲಿ ಅಸ್ತಮಾ, ಮಲಬದ್ಧತೆ, ಜೀರ್ಣಶಕ್ತಿ ಸೇರಿದಂತೆ ಹಲವು ರೋಗಗಳಿಗೆ ಈ ಬೆಟ್ಟದ ನೆಲ್ಲಿಕಾಯಿ ರಾಮಬಾಣ.

Chicken And Fish: ಚಿಕನ್‌ & ಮೀನು ಯಾವುದು ಬೆಸ್ಟ್‌..!

ಈ ನೆಲ್ಲಿಕಾಯಿಯ ಗುಣವೇ ಅಂತಹದ್ದು. ನೆಲ್ಲಿಯಲ್ಲಿ ಎರಡು ಬಗೆ ಇದೆ. ಒಂದು ನಾಡಿನ ನೆಲ್ಲಿಕಾಯಿಯಾದ್ರೆ, ಮತ್ತೊಂದು ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಒಗರು ಒಗರು ಬೆಟ್ಟದ ನೆಲ್ಲಿಕಾಯಿ. ಈದರಲ್ಲಿ ಸಾಕಷ್ಟು ಆರೋಗ್ಯವರ್ಧಕ ಗುಣಗಳಿವೆ. ಶೀತ ಹಾಗೂ ಕೆಮ್ಮನ್ನು ದೂರ ಮಾಡಲು ನೆಲ್ಲಿಕಾಯಿ ಸೇವನೆ ಉತ್ತಮ ಎನ್ನಲಾಗುತ್ತದೆ.

ನೆಲ್ಲಿಕಾಯಿ ಜಾಮ್: ಫ್ರೂಟ್ಸ್ ಜಾಮ್ ಮಾತ್ರವಲ್ಲ ನೆಲ್ಲಿಕಾಯಿಯಲ್ಲೂ ಸಹ ಜಾಮ್ ಮಾಡಬಹುದು ಗೊತ್ತೇ? ಈ ಜಾಮ್ ಚಪಾತಿ ಜೊತೆ ಬೆಸ್ಟ್‌ ಕಾಂಬಿನೇಷನ್‌. ಅಷ್ಟೇ ಅಲ್ಲದೆ ನೆಲ್ಲಿಕಾಯಿಯಲ್ಲಿ ಹೋಳಿಗೆಯನ್ನು ಸಹ ಮಾಡಬಹುದು. ಸಣ್ಣದಾಗಿ ಹೆಚ್ಚಿದ ಉಪ್ಪು ಇಂಗು ಮಿಶ್ರಿತ ಮೊಸರಿನಲ್ಲಿ ಅದ್ದಿ, ಮಳಿಗೆಯಲ್ಲಿ ಒಣಗಲು ಇಟ್ಟ ನೆಲ್ಲಿಕಾಯಿ ಒಣಗಿಸಿ ಬರುವುದರ ಒಳಗೆ ಅರ್ಧಕ್ಕರ್ಧ ಖಾಲಿಯಾಗಿರುತ್ತವೆ. ಕಚೇರಿಗೆ ಹೋಗುವಾಗ ಜೊತೆಗೆ ಹಸಿಹಸಿ ಮೊಸರು ನೆಲ್ಲಿಕಾಯಿ ತುಂಡುಗಳನ್ನು ತೆಗೆದುಕೊಂಡು ಹೋಗಿ, ಊಟವಾದ ನಂತರ ಕದ್ದುಮುಚ್ಚಿ ಬಾಯಲ್ಲಿ ಹಾಕಿಕೊಳ್ಳಿ. ಅದ್ರಲ್ಲಿ ಸಿಗುವ ರುಚಿಯೇ ಬೇರೆ.

ಹೆಚ್ಚು ಉಪ್ಪು ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಕಲ್ಲಂಗಡಿ ಅತಿಯಾದ ಸೇವನೆಯಿಂದ ಏನೆಲ್ಲ ಅಡ್ಡ ಪರಿಣಾಮಗಳಿವೆ ಗೊತ್ತಾ..?

ಅಸ್ತಮಾ ನಿಯಂತ್ರಣ: ನೆಲ್ಲಿಕಾಯಿಯನ್ನು ಕಚ್ಚಿ ತಿನ್ನುವುದರಿಂದ ಗ್ಯಾಸ್, ಜೊತೆಗೆ ಹೊಟ್ಟೆಯಲ್ಲಿನ ಹುಳ ಬಾಧೆ ಪರಿಹಾರವಾಗುತ್ತೆ. ಇಂದಿನ ವಾಯುಮಾಲಿನ್ಯ ಪರಿಸರದಲ್ಲಿ ಸಾಕಷ್ಟು ಮಂದಿ ಅಸ್ತಮಾಕ್ಕೆ ಬಲಿಯಾಗ್ತಿದ್ದಾರೆ. ಆದ್ರೆ ಅಸ್ತಮಾದಿಂದ ಬಳಲುತ್ತಿರುವವರು, ನೆಲ್ಲಿಕಾಯಿಯ ಜ್ಯೂಸ್ ಮಾಡಿ ಕುಡಿದರೆ ಅಸ್ತಮಾ ಕಡಿಮೆಯಾಗುತ್ತೆ. ಜೊತೆಗೆ ಮಲಬದ್ಧತೆಯೂ ನಿವಾರಣೆಯಾಗಿ, ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಇದು ವಾತ, ಪಿತ್ತ, ಕಫ ಮೂರು ದೋಷಗಳನ್ನು ನಿವಾರಿಸಿ ದೇಹವನ್ನು ರೋಗಮುಕ್ತವನ್ನಾಗಿ ಮಾಡುತ್ತದೆ.