1. ಆರೋಗ್ಯ ಜೀವನ

ಕೂದಲು ಉದುರುತ್ತಿದೆಯೇ..? ಹಾಗಾದ್ರೆ ಈ ಪದಾರ್ಥಗಳ ಜೊತೆ ಇಂದೇ ಟೂ ಬಿಟ್ಟು ಬಿಡಿ

KJ Staff
KJ Staff
After all, why does hair fall, here's the reason,

ಪ್ರತಿಯೊಬ್ಬರು ತಾವು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಗಂಡೇ ಇರಲಿ ಹೆಣ್ಣೆ ಇರಲಿ ಈ ಬಯಕೆ ಎಲ್ಲರಲ್ಲೂ ಇರುತ್ತೆ. ಜೊತೆಗೆ ನಾವು ಅಂದವಾಗಿ ಕಾಣಬೇಕಾದರೆ ನಮ್ಮ ಕೂದಲುಗಳು ಈ ನಿಟ್ಟಿನಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತವೆ.. ಯಾಕಂದ್ರೆ ಕೂದಲು ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ನಿಮ್ಮನ್ನು ಆಕರ್ಷಕವಾಗಿಯೂ ಮಾಡುತ್ತದೆ. ಕೂದಲಿನ ಆರೈಕೆ ಜನರಿಗೆ ಬಹಳ ಮುಖ್ಯ ಏಕೆಂದರೆ ಅದು ಇಲ್ಲದಿದ್ದರೆ ದೇಹದ ಸೌಂದರ್ಯವು ಕಡಿಮೆಯಾಗಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ;ಪದ್ಮಶ್ರೀ ಪ್ರಶಸ್ತಿ ಸ್ವೀಕಾರಕ್ಕೂ ಮೊದಲು ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿದ 125 ವಯಸ್ಸಿನ ಯೋಗ ಗುರು

ಕೂದಲು ಉದುರುವುದು ಇಂದಿನ ಕಾಲಮಾನದಲ್ಲಿನ ಸರ್ವೇ ಸಾಮಾನ್ಯ ಸಮಸ್ಯೆಯಗಿದೆ. ಪುರುಷನ ವರದಿಗಳ ಪ್ರಕಾರ ಪ್ರಪಂಚದ ಪ್ರತಿ ಎರಡನೇ ವ್ಯಕ್ತಿಯೂ ತಮ್ಮ ಉದುರುವ ಕೂದಲಿನಿಂದ ತೊಂದರೆಗೊಳಗಾಗುತ್ತಾರೆ. ಕೂದಲು ವೇಗವಾಗಿ ಉದುರುತ್ತಿರುವ ಈ ಪಟ್ಟಿಯಲ್ಲಿ ನೀವೆಲ್ಲರೂ ಕೂಡ ಸೇರಿರಬಹುದು. ಕೂದಲು ಉದುರುವಿಕೆಯಿಂದಾಗಿ, ಜನರು ವಿವಿಧ ರೀತಿಯ ಚಿಕಿತ್ಸೆಗಳನ್ನು ಪಡೆಯುತ್ತಾರೆ, ಇದರಲ್ಲಿ ಕೆಲವರು ಯಶಸ್ವಿಯಾದೆ ಕೆಲವರಿಗೆ ಯಾವ ಪ್ರಯೋಜನವೂ ಆಗದೇ ನಿರಾಸೆಗೆ ಒಳಗಾಗುತ್ತಾರೆ..

ತಲೆ ಬೋಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಂತೆ ಜನರು ಸಾಕಷ್ಟು ಥೆರಪಿಗಳ ಮೊರೆ ಹೋಗುತ್ತಾರೆ. ಕೂದಲು ಕಸಿ ಮಾಡುತ್ತಾರೆ, ಆದರೂ ಇದು ದೇಹಕ್ಕೆ ಅನೇಕ ದೊಡ್ಡ ಹಾನಿಗಳನ್ನು ಎದುರಿಸಬೇಕಾಗುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಾವು ನಿಮಗಾಗಿ ಒಂದು ಮಾಹಿತಿಯುಕ್ತ ಲೇಖನ ತಂದಿದ್ದೇವೆ..ಕೂದಲು ಉದುರುವಿಕೆಗೆ ಕಾರಣಗಳು, ಏನು ತಿನ್ನಬಾರದು ಹಾಗೂ ಆಹಾರ ಸೇವನೆಯಲ್ಲಿನ ಕೆಲ ಅಂಶಗಳ ಕುರಿತು ಇಲ್ಲಿ ನೀಡಲಾಗಿದೆ.

ಕೂದಲು ಉದುರುವಿಕೆಗೆ ಕಾರಣಗಳು-

• ಹಲವಾರು ತರದ ಕೇಶವಿನ್ಯಾಸ ಹಾಗೂ ಪದೇ ಪದೇ ಈ ವಿನ್ಯಾಸವನ್ನು ಬದಲಾಯಿಸುವದರಿಂದ, ಜನರು ತಮ್ಮ ಕೂದಲನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ.

• ಇನ್ನು ಮಹಿಳೆಯರ ವಿಚಾರದಲ್ಲಿ ಅವರು ಯಾವಾಗಲೂ ತಮ್ಮ ಕೂದಲುಗಳನ್ನು ಬಿಗಿಯಾದ ರಬ್ಬರ್ ಆಗಲಿ ಅಥವಾ ಇನ್ನಿತರ ವಸ್ತುಗಳಿಂದ ಕಟ್ಟಿರುತ್ತಾರೆ. ಇದು ಕೂದಲುಗಳ ಗಟ್ಟಿತನವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ;ಶೇ.86 ರಷ್ಟು ರೈತರು ಕೃಷಿ ಕಾಯ್ದೆಗಳನ್ನ ಬೆಂಬಲಿಸಿದ್ದರು..ಸುಪ್ರೀಂ ವರದಿ

• ಗರ್ಭನಿರೋಧಕ ಮಾತ್ರೆಗಳಿಂದ ಹಾರ್ಮೋನುಗಳ ಬದಲಾವಣೆ, ಗರ್ಭಧಾರಣೆ, ಹೆರಿಗೆ, ಋತುಬಂಧ ಮತ್ತು ಥೈರಾಯ್ಡ್ ಅಸ್ವಸ್ಥತೆ, ಸಿಫಿಲಿಸ್, ಕಬ್ಬಿಣದ ಕೊರತೆ ಅಥವಾ ಸೋಂಕಿನಿಂದ ಮಹಿಳೆಯರಲ್ಲಿ ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ.

• ಹಲವು ಬಾರಿ ಕೆಲವು ಔಷಧಿಗಳ ಅಡ್ಡ ಪರಿಣಾಮಗಳಿಂದ ಕೂದಲು ಉದುರುವುದು ಶುರುವಾಗುತ್ತದೆ. ವಾಸ್ತವವಾಗಿ, ವಿಟಮಿನ್ ಎ ಅಧಿಕವಾಗಿರುವ ಕಾರಣ, ಕೂದಲು ವೇಗವಾಗಿ ಒಡೆಯಲು ಪ್ರಾರಂಭಿಸುತ್ತದೆ.

• ಅತಿಯಾದ ಡಯಟ್ ಅಥವಾ ಆಹಾರ ಸೇವನೆಯಲ್ಲಿ ಪೋಷಕಾಂಶಗಳ ಕೊರತೆಯಿದ್ದರೂ ಕೂದಲು ಉದುರುವುದು ಶುರುವಾಗುತ್ತದೆ.

• ಧೂಮಪಾನವು ಕೂದಲು ವೇಗವಾಗಿ ಉದುರಲು ಕಾರಣವಾಗುತ್ತದೆ.

ಇದನ್ನೂ ಓದಿ;ಪೋಸ್ಟ್‌ ಆಫೀಸ್‌ನಲ್ಲಿ 10000 Invest ಮಾಡಿದ್ರೆ ಬರೋಬ್ಬರಿ 16 ಲಕ್ಷ ಗಳಿಕೆ..!

• ಹೆಚ್ಚಿನ ಹೆಲ್ಮೆಟ್ ಬಳಸುವುದರಿಂದ ಕೂದಲು ಉದುರುತ್ತದೆ.

• ದೇಹದಲ್ಲಿ ರಕ್ತದ ಕೊರತೆಯಿದ್ದರೂ ಕೂದಲು ವೇಗವಾಗಿ ಉದುರಲು ಪ್ರಾರಂಭಿಸುತ್ತದೆ ಎಂದು ಕೆಲವೇ ಜನರಿಗೆ ತಿಳಿದಿದೆ.

• ಹಲವು ಬಾರಿ ನೆತ್ತಿಯಲ್ಲಿ ಇನ್ ಫೆಕ್ಷನ್ ಆಗಿದ್ದರೆ ಆಗ ಕೂದಲು ಉದುರಲಾರಂಭಿಸುತ್ತದೆ. ತಲೆಯಲ್ಲಿ ಮೊಡವೆಗಳು ಮತ್ತು ಹುಣ್ಣುಗಳು ಕೂಡ ಕೂದಲು ಉದುರುವಿಕೆಗೆ ಕಾರಣವಾಗುತ್ತವೆ.

• ಮಾನಸಿಕ ಒತ್ತಡದಿಂದ ತೊಂದರೆಗೀಡಾಗಿದ್ದರೆ ಅಥವಾ ದೈಹಿಕ ಒತ್ತಡವೂ ಇದ್ದರೆ ನಿಮ್ಮ ಕೂದಲು ಉದುರಲು ಪ್ರಾರಂಭಿಸಬಹುದು.

ಇದನ್ನೂ ಓದಿ;Pension Scheme :ವಿವಾಹಿತರಿಗೆ ಸರ್ಕಾರದಿಂದ ಪ್ರತಿ ತಿಂಗಳು ಪಿಂಚಣಿ..ಇಲ್ಲಿದೆ ಪೂರ್ಣ ಮಾಹಿತಿ

ಈ ಆಹಾರಗಳನ್ನು ತಿನ್ನುವುದನ್ನು ನಿಲ್ಲಿಸಬೇಕೆ..?

• ಡೈರಿ.
• ಸಕ್ಕರೆ.
• ಸಂಸ್ಕರಿಸಿದ ಕಾರ್ಬ್ಸ್.
• ಬೀಜಗಳು.
• ಕತ್ತಿಮೀನು.
• ಜಿಡ್ಡಿನ ಆಹಾರ.
• ಕಾರ್ಬೊನೇಟೆಡ್ ಪಾನೀಯಗಳು.
• ಮದ್ಯ.

ಈ ಕೆಲ ಆಹಾರಗಳನ್ನು ನಮ್ಮ ಊಟದ ಪದ್ಧತಿಯಿಂದ ದೂರವಿಟ್ಟರೆ, ಅಥವಾ ಅವುಗಳನ್ನು ತಿನ್ನುವುದನ್ನು ನಿಲ್ಲಿಸದರೆ ಕೂದಲುಗಳ ಬೆಳವಣಿಗೆ ನಿಯಮಿತವಾಗಿ ನಡೆಯುತ್ತದೆ. ಜೊತೆ ಕೂದಲು ಉದುರುವಿಕೆಯು ಕಡಿಮೆಯಾಗುತ್ತದೆ ತಜ್ಞರ ಅಭಿಪ್ರಾಯವಾಗಿದೆ.

Published On: 22 March 2022, 12:00 PM English Summary: After all, why does hair fall, here's the reason,

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.