1. ಆರೋಗ್ಯ ಜೀವನ

ಚಳಿಗಾಲದಲ್ಲಿ ಕಾಡುವ 5 ಆರೋಗ್ಯ ಸಮಸ್ಯೆಗಳ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿ

Kalmesh T
Kalmesh T
5 health problems you should know about in winter

ಈಗಾಗಲೇ ಹವಾಮಾನ ಬದಲಾವಣೆಯಿಂದ ಎಲ್ಲೆಡೆ ಅಲ್ಲಲ್ಲಿ ನೆಗಡಿ-ಕೆಮ್ಮು ಆರಂಭವಾಗಿದೆ. ಜೊತೆಗೆ ಚಳಿಗಾಲ ಕೂಡ ಆರಂಭವಾಗಿದೆ. ಈ ಚಳಿಗಾಲದಲ್ಲಿ ಅತಿ ಹೆಚ್ಚು ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತವೆ. ಇದರ ಬಗ್ಗೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಇಲ್ಲಿವೆ ಒಂದಷ್ಟು ಟಿಪ್ಸ್‌

ಇದನ್ನೂ ಓದಿರಿ: ಚಳಿಗಾಲದಲ್ಲಿ ತ್ವಚೆಯ ಆರೈಕೆ ಮಾಡಿಕೊಳ್ಳಲು ಇಲ್ಲಿವೆ ಅದ್ಬುತ ಟಿಪ್ಸ್‌ಗಳು 

ಚಳಿಗಾಲದಲ್ಲಿ ಸಹಜವಾಗಿಯೇ ರೋಗಗಳ ಅಪಾಯವು ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಹೆಚ್ಚು ಜನ ಯಾವ ದೈಹಿಕ ಸಮಸ್ಯೆಗಳಿಗೆ ಹೆಚ್ಚು ಒಳಗಾಗಬಹುದು ಮತ್ತು ಅವುಗಳನ್ನು ತಪ್ಪಿಸಲು ಮಾಡಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಇಲ್ಲಿದೆ ವಿವರ

ಹೃದಯಾಘಾತ (Heart attack):

ಹೌದು, ಚಳಿಗಾಲದಲ್ಲಿ ಸಾಮಾನ್ಯವಾಗಿ ಹಾರ್ಟ್‌ ಅಟ್ಯಾಕ್‌ ಆಗುವ ಸಂಭವಗಳು ಹೆಚ್ಚಿರುತ್ತವೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಗೋಚರಿಸುತ್ತವೆ. ಹೀಗಾಗಿ ಹೃದಯದ ಆರೋಗ್ಯ ಕುರಿತು ಹೆಚ್ಚು ಜಾಗ್ರತೆಯನ್ನು ವಹಿಸಬೇಕು.

ಹೃದಯದ ಸಮಸ್ಯೆ ಇರುವವರು ಬೆಳಗಿನ ಜಾವ ವಾಕಿಂಗ್​ಗೆ ಹೋಗುವುದನ್ನು ನಿಯಂತ್ರಣದಲ್ಲಿ ಇರಿಸಿ. ಒಂದು ವೇಳೆ ಹೋಗುವುದೆ ಆದರೆ ಬೆಚ್ಚಗಿನ ಉಡುಪುಗಳನ್ನು ಧರಿಸಿ ಹೋಗುವುದು ಉತ್ತಮ.

ಕೀವಿಗಳು ಮುಚ್ಚುವಂತೆ ಟೋಪಿ ಅಥವಾ ಬಟ್ಟೆಗಳನ್ನು ಸುತ್ತಿಕೊಳ್ಳಿ. ಅತಿ ಹೆಚ್ಚು ಚಳಿ ಇದ್ದ ದಿನ ಅನವಶ್ಯಕವಾಗಿ ಹೊರಗಡೆ ಹೋಗಬೇಡಿ.

ಸಖತ್‌ ಗ್ಲೋಯಿಂಗ್‌ ಸ್ಕಿನ್‌ಗಾಗಿ ಜೇನುತುಪ್ಪದ ಫೇಸ್‌ ಪ್ಯಾಕ್‌!

ಗಂಟಲಿನ ಸಮಸ್ಯೆ (Throat ache)

ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೆಗಡಿ, ಕೆಮ್ಮು ಉಂಟಾಗುವುದರಿಂದ ಇದು ಗಂಟಲು ಸಮಸ್ಯೆಯನ್ನು ಸಹ ಮಾಡುತ್ತದೆ. ಗಂಟಲು ಕಿರಿ ಕಿರಿ, ನೋವು ಉಂಟಾಗುವ ಸಾಧ್ಯತೆ ಹೆಚ್ಚು.

ವೈರಲ್ ಸೋಂಕಿನಿಂದಾಗಿ ಗಂಟಲಿನ ಬಾವು ಕೂಡ ಆಗಬಹುದು. ಇದು ಗಂಟಲಿನಲ್ಲಿ ನೋವನ್ನು ಉಂಟುಮಾಡುತ್ತದೆ.  ವೈರಲ್ ಸೋಂಕು ಗಂಟಲು, ಶೀತ ಮತ್ತು ಜ್ವರಕ್ಕೆ ಕಾರಣವಾಗುತ್ತದೆ.

ಈ ತರ ಗಂಟಲು ಸಮಸ್ಯೆ ಬಾರದೆ ಇರುವಂತೆ ತಡೆಯಲು ಆರೋಗ್ಯಕರ ಆಹಾರದ ಸೇವನೆ ಮುಖ್ಯವಾಗಿದೆ. ಆದಷ್ಟು ಬಿಸಿ ಆಹಾರ ಪದಾರ್ಥ ಸೇವನೆ ರೂಢಿಸಿಕೊಳ್ಳಿ.

ಸಾಧ್ಯವಾದರೆ ಬೆಚ್ಚಗಿನ ನೀರು ಕುಡಿಯಿರಿ. ಇನ್ನೂ ಒಂದು ವೇಳೆ ಗಂಟಲು ಕಿರಿ ಕಿರಿ, ನೋವು ಇದ್ದರೇ ಬೆಚ್ಚಗಿನ ನೀರಿನಲ್ಲಿ ಉಪ್ಪು ಬೆರೆಸಿ ಆ ನೀರಿನಿಂದ ಗಂಟಲು ಮುಕ್ಕಳಿಸಿ (ಗಾರ್ಗಲ್‌).

ದೇಹಕ್ಕೆ ಯಾವ ಹಣ್ಣು ಹೆಚ್ಚು ಆರೋಗ್ಯಕರ - ಸೇಬು ಅಥವಾ ಬಾಳೆಹಣ್ಣು?

ಉಸಿರಾಟದ ತೊಂದರೆ (Difficulty breathing)

ಚಳಿಗಾಲದಲ್ಲಿ ಹೆಚ್ಚು ಉಸಿರಾಟದ ಸಮಸ್ಯೆ ಕೂಡ ಆಗುತ್ತದೆ. ಇದಕ್ಕೆ ಸಾಮಾನ್ಯ ಕಾರಣಗಳು ನೆಗಡಿಯಿಂದ ಕಟ್ಟಿದ ಮೂಗು, ಕೆಮ್ಮು ಕೂಡ.

ಆದರೆ ಚಳಿಗಾಲದಲ್ಲಿ ಶೀತ ಗಾಳಿಯು ನೇರವಾಗಿ ಉಸಿರಾಟದ ಪ್ರದೇಶವನ್ನು ಆಕ್ರಮಿಸುತ್ತದೆ. ಇದರಿಂದಾಗಿ ಮೂಗು ಕಟ್ಟುವಿಕೆ, ಸ್ರವಿಸುವ ಮೂಗು, ಕೆಮ್ಮು ಮುಂತಾದ ಸಮಸ್ಯೆಗಳು ಬರಬಹುದು.

ಉಸಿರಾಟದ ಪ್ರದೇಶದ ಸೋಂಕು ಉಸಿರಾಟದ ತೊಂದರೆಯೊಂದಿಗೆ ಜ್ವರವನ್ನು ಉಂಟುಮಾಡಬಹುದು. ಅದರ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಬೇಕು.

ನೇರಳೆ ಹಣ್ಣಿನಲ್ಲಿವೆ ನೂರೆಂಟು ಔಷಧೀಯ ಗುಣ..! ಇದು ನಿಮಗೆ ತಿಳಿದಿದ್ದರೆ ಬೆಸ್ಟ್‌..

ಚರ್ಮದ ಸಮಸ್ಯೆಗಳು (Skin Disease)

ಚಳಿಗಾಲದಲ್ಲಿ ಇತರೆ ಸಮಸ್ಯೆಗಳ ಜೊತೆಗೆ ಚರ್ಮದ ಸಮಸ್ಯೆಯೂ ಕೂಡ ಕಾಡುತ್ತದೆ. ಶೀತದಿಂದ ಚರ್ಮವು ಒಣಗುತ್ತದೆ. ಚರ್ಮದಲ್ಲಿ ಶುಷ್ಕತೆಯಿಂದಾಗಿ ಚರ್ಮ ಬಿಗಿಯಾಗುವುದು, ಎಳೆಯುವುದು, ದದ್ದುಗಳು, ಕೆಂಪಾಗುವುದು ಇತ್ಯಾದಿ ಆರಂಭವಾಗುತ್ತವೆ.

ಈ ಚಳಿಗಾಲದಲ್ಲಿ ನಾವು ಕಡಿಮೆ ನೀರು ಕುಡಿಯುವುದರಿಂದ ಚರ್ಮ ಒಣಗುತ್ತದೆ. ಆದ್ದರಿಂದ ಇಂತಹ ಚರ್ಮದ ಸಮಸ್ಯೆ ಆರಂಭವಾಗುತ್ತವೆ.

ದಾಸವಾಳದ ಹೂವಿನಲ್ಲಿದೆ ಅದ್ಬುತ ರಹಸ್ಯ! ನೀವು ಇದನ್ನೂ ತಿಳಿಯಲೆಬೇಕು!

ಕೀಲು ನೋವು (Joint pain)

ಚಳಿಗಾಲದಲ್ಲಿ ಕೀಲು ನೋವುಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ತಣ್ಣಗಿನ ಗಾಳಿಯ ಪರಿಣಾಮದಿಂದಾಗಿ ಸ್ನಾಯುಗಳಲ್ಲಿ ದೌರ್ಬಲ್ಯವು ಕಂಡುಬರುತ್ತದೆ ಮತ್ತು ಅವುಗಳ ನೋವು ಹೆಚ್ಚಾಗುತ್ತದೆ.

ಸಂಧಿವಾತದಂತ ಸಮಸ್ಯೆಗಳನ್ನು ಹೊಂದಿರುವ ಜನರು ಇಂತ ಸಮಯಗಳಲ್ಲಿ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು.

ದೇಹವನ್ನು ಬೆಚ್ಚಗಿನ ಬಟ್ಟೆಯಿಂದ ಮುಚ್ಚಿ ಮತ್ತು ವ್ಯಾಯಾಮ ಮಾಡಲು ಮರೆಯಬೇಡಿ.

Published On: 03 November 2022, 12:07 PM English Summary: 5 health problems you should know about in winter

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.