1. ಆರೋಗ್ಯ ಜೀವನ

ಸೋಯಾ ಅವರೆ-ಸಸ್ಯಜನ್ಯ ಶಾಖಾಹಾರಿ

ಪ್ರಭು ಇಳಿಗೇರ, ಮಂಜುನಾಥ ಎಸ್.ಬಿ.
ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿ-581 115

ಸೋಯಾ ಅವರೆಯು ಮನುಷ್ಯನ ಬೆಳವಣಿಗೆಗೆ ಅತೀ ಅವಶ್ಯಕ ಮುಖ್ಯ ಪೋಷಕಾಂಶಗಳಾದ, ಕಾರ್ಬೊಹೈಡ್ರೆಟ್, ಕೊಬ್ಬು, ವಿಟಾಮಿನ್ ಮತ್ತು ಖನಿಜಾಂಶಗಳಾದ ಕ್ಯಾಲ್ಸಿಯಂ, ಫೋಲಿಕ್ ಆಸಿಡ್ ಮತ್ತು ಕಬ್ಬಿಣ ಅಂಶಗಳನ್ನು ಒಳಗೊಂಡಿದೆ. ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳು ಬೆಳೆಗಳಲ್ಲಿ ಸೋಯಾ ಅವರೆ ಒಂದೇ ಬೆಳೆಯು ಎಲ್ಲಾ ಪ್ರೋಟಿನ್‍ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿದೆ. ಇದರ ಜೊತೆಗೆ ಮಾನವ ಶರೀರ ಕ್ರಿಯಾ ರಚನೆಗೆ ಬೇಕಾಗುವಂತಹ ಎಲ್ಲಾ ಅಮೈನೋ ಆಸಿಡ್‍ಗಳನ್ನು ಕೂಡ ಹೊಂದಿದೆ. ಈ ಅಮೈನೋ ಅಸಿಡ್ ಪ್ರಮಾಣ ಇನ್ನೀತರ ಆಹಾರಗಳಾದ ಮಾಂಸ ಮತ್ತು ಹಾಲು ಹಾಗೂ ಮೊಟ್ಟೆಯಲ್ಲಿರುವ ಪ್ರೋಟಿನ್ ಗುಣಮಟ್ಟಕ್ಕೆ ಸರಿಸಮನಾಗಿರುತ್ತದೆ.

ಸೋಯಾ ಅವರೆಯ ಉತ್ಪನ್ನಗಳು ಹಾಗೂ ಪೋಷಕಾಂಶಗಳ ಉಪಯೋಗ:

ಸೋಯಾ ಪ್ರೋಟಿನ್ (ಸೋಯಾ ಸಸಾರಜನಕ ಆಹಾರ ಪದಾರ್ಥ): ಪ್ರತಿಶತ 40 ರಷ್ಟು ಕ್ಯಾಲರಿಯು ಸೋಯಾ ಅವರೆಯ ಉತ್ಪನ್ನದ ಪ್ರೋಟಿನ್‍ಗಳಿಂದ ಪಡೆಯಬಹುದು, ಇದರ ಪ್ರಮಾಣವು ಇನ್ನೀತರೆ ದ್ವಿದಳ ಧಾನ್ಯಗಳಿಂದ ಹಾಗೂ ಖಾದ್ಯ ಮಾಂಸಗಳ ಉತ್ಪನ್ನಗಳಿಂದ ದೊರೆಯುವ ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದಲ್ಲದೆ ಗುಣಮಟ್ಟವು ಮೇಲಿನ ಉತ್ಪನ್ನಗಳ ಸಸಾರಜನಕ ಸಮಾನಾಗಿರುತ್ತಿದ್ದು, ಕಡಿಮೆ ಪ್ರಮಾಣದ ಸಂತೃಪ್ತ ಕೊಬ್ಬಿನಾಂಶ ಹಾಗೂ ಕೊಲೆಸ್ಟ್ರಾಲ್‍ಗಳನ್ನು ಒಳಗೊಂಡಿರುವುದಿಲ್ಲ.

ಸೋಯಾ ಪ್ರೋಟಿನ್ ಉತ್ಪನ್ನಗಳು:

ಸೋಯಾ ಅವರೆಯ ಎಣ್ಣೆನಾಂಶದ ಸಾರವನ್ನು ತೆಗೆದಾಗ ಉಳಿಯುವ ಇನ್ನೀತರೆ ಪದಾರ್ಥಗಳ ಜೊತೆ ಸೋಯಾ ಕೊಬ್ಬುರಹಿತ ತೆಳುಪದರು, ಸೋಯಾಹಿಟ್ಟು, ಸೋಯಾ ತೀಕ್ಷ್ಣಾಹಾರ/ಪೌಷ್ಠಿಕ ಆಹಾರವನ್ನು ಪಡೆಯಬಹುದು.

• ಸೋಯಾ ಕೊಬ್ಬುರಹಿತ ತೆಳುಪದರು ಪದಾರ್ಥವು ಶೇಕಡಾ 86 ರಷ್ಟು ಪ್ರೋಟಿನ್ ಮತ್ತು ಅತ್ಯಲ್ಪ ಪ್ರಮಾಣದಲ್ಲಿ ತೇವಾಂಶ ಹೊಂದಿರುತ್ತದೆ. ಇವುಗಳಲ್ಲಿ ಕೊಬ್ಬಿನಾಂಶ, ನಾರು ಹಾಗೂ ಕಾರ್ಬೊಹೈಡ್ರೆಟ್‍ಗಳು ಇರುವುದಿಲ್ಲ. ಗೋಧಿ ಹಿಟ್ಟಿಗಿಂತ ಭಿನ್ನವಾಗಿರುವ ಸೋಯಾ ಹಿಟ್ಟನ್ನು ಗೋಧಿ ಹಿಟ್ಟಿನ ಬದಲಾಗಿ ಉಪಯೋಗಿಸಲು ಬರುವುದಿಲ್ಲ ಆದರೆ ಶೇಕಡಾ 15 ರಷ್ಟು ಗೋಧಿಹಿಟ್ಟಿನ ಬದಲಾಗಿ ಸೋಯಾ ಹಿಟ್ಟನ್ನು ಬಳಸಿದರೆ ಉತ್ತಮ ಮತ್ತು ಖಾದ್ಯದಲ್ಲಿ ಸೊಗಸಾದ ಸುವಾಸನೆಯ ಜೊತೆಗೆ ಒಳ್ಳೆಯ ರುಚಿಯನ್ನು ಪಡೆಯಬಹುದು.

• ಸೋಯಾ ಪೌಷ್ಠಿಕ ಆಹಾರವು ಪ್ರೋಟಿನ್‍ನ ಜೊತೆಗೆ ಸೋಯಾ ಅವರೆಯ ನಾರಿನಾಂಶವನ್ನು ಹೊಂದಿದ್ದು, ಈ ತೀಕ್ಷ್ಣಾಹಾರವು ಉದುರುಉದುರಾಗಿದ್ದು ಅಲ್ಪ ಪ್ರಮಾಣದ ತೇವಾಂಶವನ್ನು ಹೊಂದಿದೆ.

ಸೋಯಾ ಐಸೋಲೆಟ್‍ಗಳು:

ಇದರಲ್ಲಿ ಶೇಕಡಾ 90 ರಷ್ಟು ಪ್ರೋಟಿನ್ ಇದ್ದು ಇದು ಸೋಯಾ ಅವರೆಯ ಇನ್ನೀತರೆ ಉತ್ಪನ್ನಗಳಿಗಿಂತ ಭಿನ್ನವಾಗಿರುತ್ತದೆ ಇವುಗಳನ್ನು ಕೋಳಿಮಾಂಸದಲ್ಲಿ ಹಾಗೂ ಜಲಚರ ಜನ್ಯ ಖಾದ್ಯಗಳಲ್ಲಿ ಉಪಯೋಗಿಸಲಾಗುತ್ತಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಬೆಣ್ಣೆ ಮತ್ತು ಚಿಕ್ಕ ಮಕ್ಕಳ ಪೌಷ್ಠಿಕ ಆಹಾರದಲ್ಲಿ ಕೂಡಾ ಬಳಸಲಾಗುತ್ತದೆ. ಈ ಸೋಯಾ ಐಸೋಲೆಟ್‍ಗಳು ತಮ್ಮ ತೂಕದ ಐದರಷ್ಟು ಪ್ರಮಾಣದ ತೇವಾಂಶವನ್ನು ಹಿರಿಕೊಳ್ಳುತ್ತದೆ.

ಇಡೀಯಾದ ಸೋಯಾ ಆಹಾರ:

ಪೂರ್ಣ ಪ್ರಮಾಣದ ಕೊಬ್ಬಿನ ಸೋಯಾ ಹಿಟ್ಟು: ಇದನ್ನು ಪೂರ್ಣ ಪ್ರಮಾಣದ ಸೋಯಾ ಅವರೆಯಿಂದಲೇ ಮಾಡಲ್ಪಟ್ಟಿರುವುದರಿಂದ ಇದರಲ್ಲಿ ಸೋಯಾ ಅವರೆಯಲ್ಲಿರುವಂತಹ ಪೂರ್ಣ ಪ್ರಮಾಣದ ಕೊಬ್ಬು ಪ್ರೋಟಿನ್ ಹಾಗೂ ಇನ್ನೀತರೆ ಖನಿಜಾಂಶಗಳು ಇರುತ್ತವೆ ಇದನ್ನು ಬೇಯಿಸಿದ ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ.

ಸೋಯಾ ಹಾಲು: ಸೋಯಾ ಅವರೆಯ ಕಾಳುಗಳನ್ನು ನೀರಿನೊಂದಿಗೆ ಬೆರಸಿ ಚನ್ನಾಗಿ ಅರೆದು ಹಾಲಿನಂತಹ ದ್ರಾವಣವನ್ನು ತಯಾರಿಸುತ್ತಾರೆ ಇದನ್ನು ಮಾಂಸವರ್ಜಿತ ಜನರು ಉಪಯೋಗಿಸಬಹುದು. ಸಮತೋಲನÀ ಆಹಾರ ಕಾಪಾಡಿಕೊಳ್ಳ ಬಯಸುವವರು ಕೂಡಾ ಇದನ್ನು ಉಪಯೋಗಿಸಬಹುದು. ಇದರಲ್ಲಿ ಖನಿಜಾಂಶಗಳು, ವಿಟಾಮಿನ್ ‘ಬಿ’, ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿದ್ದು ಕಡಿಮೆ ಪ್ರಮಾಣದ ಸಂತೃಪ್ತ ಕೊಬ್ಬು ಹಾಗೂ ಕೊಲೆಸ್ಟ್ರಾಲ್ ರಹಿತವಾಗಿರುತ್ತದೆ. ಸೋಯಾ ಅವರೆಯ ಉತ್ಪನ್ನಗಳು ರೋಗ ಪ್ರತಿರೋಧಕ ಗುಣಗಳು ಹಾಗೂ ಇದರಲ್ಲಿನ ಕೆಲವು ರಾಸಯನಿಕ ಗುಣಗಳು ಪ್ರಾಣಿಗಳ ಹಾಗೂ ಮನುಷ್ಯನ ಶರೀರ ಕ್ರಿಯಾ ರಚನೆಗೆ ಉಪಯೋಗ ಗುಣವನ್ನು ಹೊಂದಿದೆ.

ಕೆಲವು ಸಾಂಪ್ರದಾಯಿಕ ಏಷ್ಯಾದ ಸೋಯಾ ಅವರೆಯ ಆಹಾರ ದಿನಿಸುಗಳು:

ಟೋಫು (ಸೋಯಾ ಮೊಸರು): ಇದು ಗಿಣ್ಣಿನಂತಹ ತುಸುಗಟ್ಟಿಯಾದ ಸೋಯಾ ಹಾಲಿನ ಪದಾರ್ಥ ಮೊಸರಿನಂತಾಗಿ ಕೇಕಿನ ಆಕಾರದಲ್ಲಿರುತ್ತದೆ. ಸೋಯಾ ಹಾಲಿಗೆ ಹೆಪ್ಪುಗಟ್ಟಿಸುವ ಗುಣ ಹೊಂದಿರುವ ವಸ್ತುಗಳನ್ನು ಸೇರಿಸುವುದರಿಂದ (ಉದಾ: ಕ್ಯಾಲ್ಸಿಯಂ ಸಲ್ಫೇಟ್) ಈ ಆಕಾರವನ್ನು ಪಡೆಯುತ್ತದೆ. ಟೋಫು ಆಹಾರವು ಖನಿಜ ಭರಿತವಾಗಿದ್ದು, ಉತ್ತಮ ಗುಣಮಟ್ಟದ ಪ್ರೋಟಿನ್‍ಗಳನ್ನು ಒಳಗೊಂಡಿರುತ್ತದೆ. ಇದನ್ನು ಸಾಸ್, ಸಲಾಡ್ ಹಾಗೂ ಸ್ಯಾಂಡವ್ಹಿಚ್‍ಗಳಲ್ಲಿ ಬಳಸಬಹುದು ಹಾಗೂ ಗಿಣ್ಣಿನ ಬದಲಾಗಿ ಈ ಪದಾರ್ಥವನ್ನು ಉಪಯೋಗಿಸಬಹುದು.

ಮಿಸೋ: ಗಟ್ಟಿಯಾದ ಪ್ರೋಟಿನ್ ಇದಕ್ಕೆ ಅಲ್ಪ ಪ್ರಮಾಣದ ಉಪ್ಪು ಹಾಗೂ ಹುಳಿಯುವಿಕೆ ಕಾರ್ಯದ ಗುಣಗಳಿರುವ (ಅಸ್ಪರ್‍ಝೀಲಸ್ ಓರೈಝಾ) ನ್ನು ಸೇರಿಸಿ ಮಾಡಬಹುದಾಗಿದೆ. ಇದರ ರುಚಿಯು ಸಾಮಾನ್ಯವಾಗಿ ಸೋಯಾ ಸಾಸ್ ತರಹವೇ ಇರುತ್ತದೆ. ಇದಕ್ಕೆ ಸೊಗಸಾದ ಇನ್ನಷ್ಟು ರುಚಿಬರಲು ಕೆಲವೊಮ್ಮೆ ಇನ್ನೀತರೆ ದ್ವಿದಳ ಬೆಳೆಕಾಳುಗಳು ಅಕ್ಕಿ ಮತ್ತು ಬಾರ್ಲಿಗಳನ್ನು ಹಾಕುತ್ತಾರೆ. ಈ ಪಾನೀಯವು ಜಪಾನ್ ದೇಶದಲ್ಲಿ ಜನಪ್ರಿಯವಾಗಿದೆ.

ನ್ಯಾಟೋ: ಬೇಯಿಸಿ, ಕಳಿತಗೊಂಡಿರುವ ಸೋಯಾ ಅವರೆಯಿಂದ ಮಾಡಲ್ಪಟ್ಟಿದೆ. ಇದರ ಪೋಷಕಾಂಶಗಳ ಗುಣವು ಮೇಲ್ಕಾಣಿಸಿದ ಖಾದ್ಯಗಳಲ್ಲಿರುಂತಹದೇ ಆಗಿರುತ್ತದೆ. ಇದು ಸ್ವಲ್ಪ ಮೇಣದಂತಿದ್ದು ಸುವಾಸನೆ ಭರಿತವಾಗಿರುತ್ತದೆ. ಇದನ್ನು ಸೂಪ್‍ಗಳಲ್ಲಿ ಬಳಸುತ್ತಾರೆ.

ಟೆಮೆಫೆ: ಬೇಯಿಸಿದ ಸೋಯಾ ಅವರೆಯಿಂದ ಮಾಡಲ್ಪಟ್ಟಿರುತ್ತದೆ ಇದರಲ್ಲಿ ಸೋಯಾ ನಾರಿನಂಶ ಹಾಗೂ ಇತರೆ ಖನಿಜಾಂಶಗಳಾದ ಕ್ಯಾಲ್ಸಿಯಂ, ಮೆಗ್ನಿಷಿಯಂ, ಪೊಟ್ಯಾಷಿಯಂನ್ನು ಹೊಂದಿರುತ್ತದೆ. ಹಾಗೂ ಇದರಲ್ಲಿ ವಿಟಾಮಿನ್ ‘ಬಿ’ ಸಮೃದ್ಧವಾಗಿರುತ್ತದೆ.
ಸೋಯಾ ಮೆಳಕೆಕಾಳು: ಇದರಲ್ಲಿ ವಿಟಾಮಿನ್ ಎ,ಬಿ,ಸಿ ಯಥೇಚ್ಛವಾಗಿರುತ್ತದೆ. ಹಾಗೂ ಇದನ್ನು ನೇರವಾಗಿ ಬಳಸಬಹುದಾಗಿದೆ.

ಸೋಯಾಸಸ್: ಸೋಯಾ ಉತ್ಪನ್ನಗಳಲ್ಲಿ ಅತೀಯಾಗಿ ಬಳಕೆಯಾಗುವ ಪದಾರ್ಥ ಇದಾಗಿರುತ್ತದೆ. ಸೋಯಾಸಾಸ್‍ನ್ನು 18 ತಿಂಗಳುಗಳ ಕಾಲ ಹುಳಿಯುವಿಕೆ ಕಾರ್ಯವನ್ನು ಪೂರ್ಣಗೊಳಿಸಿದ ನಂತರ ಉಪಯೋಗಿಸಬಹುದು. ಹುಳಿಯುವಿಕೆಗೆ ಸಹಕಾರಿಯಾಗುವ ಯೀಸ್ಟನೊಂದಿಗೆ ಬೆರಸಿ ಸಾರವನ್ನು ತೆಗೆದು ಉಪಯೋಗಿಸಬಹುದು.

ಇದರಲ್ಲಿ ಸೋಡಿಯಂ ಪ್ರಮಾಣ ಇರುವುದರಿಂದ ಸಾಸ್‍ಗೆ ಉತ್ತಮ ಸುವಾಸನೆ ಹಾಗೂ ಆರೋಗ್ಯಭರಿತವಾಗಿರುತ್ತದೆ.
Published On: 20 February 2019, 11:46 AM English Summary: ಸೋಯಾ ಅವರೆ-ಸಸ್ಯಜನ್ಯ ಶಾಖಾಹಾರಿ

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.