ಡಬಲ್‌ ಆದಾಯ : ರೈತರಿಗೆ ಕೇಂದ್ರ ಸರ್ಕಾರದಿಂದ 15 ಲಕ್ಷ ರೂಪಾಯಿ..ಪಡೆಯುವುದು ಹೇಗೆ..?

Maltesh
Maltesh
pm kisan fpo scheme how to register

ಈಗ ಕೃಷಿಯಿಂದ ಹಲವಾರು ದಾರಿಯಲ್ಲಿ ಪ್ರಾಫಿಟ್‌ ಮಾಡಿಕೊಳ್ಳಬಹುದಾಗಿದ್ದು, ರೈತರ ಆದಾಯಾವನ್ನು ಡಬಲ್‌ಗೊಳಿಸಲು ಸರ್ಕಾರವೂ ರೈತರಿಗೆ ಹಲವು ಯೋಜನೆಗಳ ಮೂಲಕ ಅವಕಾಶವನ್ನು ಕಲ್ಪಿಸಿದೆ. ಇನ್ನು ಕೃಷಿ ಹಾಗೂ ಅನ್ನದಾತರ ಅಭಿವೃದ್ಧಿಗೆ ಸರ್ಕಾರ ದಿನದಿಂದ ದಿನಕ್ಕೆ ಹೊಚ್ಚ ಹೊಸ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಲೇ ಇದೆ.

ನೀವು ರೈತರಾಗಿದ್ದರೆ ನಿಮಗಾಗಿ ಇಲ್ಲೊಂದು ಸರ್ಕಾರದಿಂದ ಬಹು ಉಪಯುಕ್ತವಾದ ಯೋಜನೆ ಇದೆ. ನೀವು ಇದರ ಲಾಭವನ್ನು ಸುಲಭವಾಗಿ ಪಡೆಯಬಹುದು. ಇದೀಗ ರೈತರಿಗೆ ಕೃಷಿಗೆ ಸಂಬಂಧಿಸಿದ ಉದ್ಯಮ ಆರಂಭಿಸಲು ಸರ್ಕಾರ 15 ಲಕ್ಷ ರೂ.ಗಳ ಲಾಭವನ್ನು ನೀಡುತ್ತಿದೆ. ಹೌದು ಈ ಕುರಿತು ನಾವು ಈ ಲೇಖನದಲ್ಲಿ ಮಾಹಿತಿ ನೀಡಿದೆ.

ಪ್ರಧಾನ ಮಂತ್ರಿ ಕಿಸಾನ್ FPO ಯೋಜನೆ

ರೈತರಿಗೆ ಆರ್ಥಿಕ ಸಹಕಾರವನ್ನು ಬಲವಾಗಿ ಒದಗಿಸಲು, ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಎಫ್‌ಪಿಒ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗೆ 15 ಲಕ್ಷ ರೂಗಳನ್ನು ಆರ್ಥಿಕ ಸಹಾಯದ ರೂಪದಲ್ಲಿ ನೀಡಲಾಗುತ್ತದೆ. ಇನ್ನು ಈ ಪಿಎಂ ಕಿಸಾನ್‌ ಎಫಪಿಒ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು 11 ರೈತರು ಒಟ್ಟಾಗಿ ಸೇರಿ ಒಂದು ಸಂಘಟನೆಯನ್ನು ರಚಿಸಬೇಕು.

ಇದರ ಲಾಭ ಪಡೆದುಕೊಳ್ಳುವುದು ಹೇಗೆ..?

ಈ ಯೋಜನೆಯ ಲಾಭ ಪಡೆಯಲು, ರೈತರು ಒಟ್ಟಾಗಿ FPO ಸ್ಥಾಪಿಸ ಬೇಕಾಗುತ್ತದೆ. FPO ಮೂಲಕ ರೈತರು ತಮ್ಮ ಕೆಲಸಗಳನ್ನು ಸುಲಭ ಹಾಗೂ ಸರಳಗೊಳಿಸಬಹುದು. FPO ಎಂಬುದು ರೈತರು ಮತ್ತು ಉತ್ಪಾದಕರ ಒಂದು ರೀತಿಯ ಸಂಯೋಜಿತ ಸಂಘಟನೆಯಾಗಿದೆ. ಸದ್ಯ ಈ ಯೋಜನೆಯಡಿಯಲ್ಲಿ ದೇಶದಲ್ಲಿ 10 ಸಾವಿರ FPO ಗಳನ್ನು ಸ್ಥಾಪಿಸಲು ಸರ್ಕಾರ ಅನುಮೋದನರ ನೀಡಿದೆ. ಹಾಗೂ ಈ FPO ಗಳಿಗೆ ಸರ್ಕಾರ 15 ಲಕ್ಷ ರೂಪಾಯಿಗಳನ್ನು 3 ವರ್ಷದ ಅವಧಿಗೆ ನೀಡಲಾಗುತ್ತದೆ.

FPO ಯ ಪ್ರಯೋಜನವೇನು?
ಅನ್ನದಾತರ ಕೆಲಸಗಳು ಸುಲಭ ಹಾಗೂ ಸರಳೀಕರಣದ ಜೊತೆ ಆದಾಯ ಡಬಲ್‌ ರೈತರು ಬೆಳೆದ ಬೆಳೆಯನ್ನು ಸ್ಪರ್ಧಾತ್ಮಕವಾಗಿ ಮಾರಾಟ ಮಾಡಬಹುದು..ಸದ್ಯ ಈ ಯೋಜನೆಗಾಗಿ ಆತ್ಮನಿರ್ಭರ್ ಭಾರತ್ ಅಭಿಯಾನದ ಅಡಿಯಲ್ಲಿ ಸರ್ಕಾರವು ರೂ 500 ಕೋಟಿ ಗುರಿಯನ್ನು ನಿಗದಿಪಡಿಸಿದೆ.

ಅರ್ಜಿ ಸಲ್ಲಿಕೆ ಹೇಗೆ..?
FPO ಗಾಗಿ ಅರ್ಜಿ ಸಲ್ಲಿಸಲು, ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು
ವೆಬ್‌ಸೈಟ್‌ನಲ್ಲಿ ಕಾಣುವ HOME ಪುಟದ ಮೇಲೆ, FPO ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಅದರ ನಂತರ ನೋಂದಣಿಯ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಮುಂದೆ ತೆರೆದ ನೋಂದಣಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ.
ಇದರ ನಂತರ, ಪಾಸ್‌ಬುಕ್, ರದ್ದಾದ ಚೆಕ್ ಅಥವಾ ಐಡಿ ಪ್ರೂಫ್ ಅನ್ನು ಸ್ಕ್ಯಾನ್ ಮಾಡುವ ಮತ್ತು ಅಪ್‌ಲೋಡ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

Published On: 04 May 2023, 04:51 PM English Summary: pm kisan fpo scheme how to register

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.