ಸಬ್ಸಿಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ

Maltesh
Maltesh
Applications starts for krishi honda subsidy

ಬಳ್ಳಾರಿ ; ಸಿರುಗುಪ್ಪ ತೋಟಗಾರಿಕೆ ಇಲಾಖೆಯ 2023-24 ನೇ ಸಾಲಿಗೆ ಅನುಷ್ಠಾನಗೊಳ್ಳುತ್ತಿರುವ ಫಲಾನುಭವಿ ಆಧಾರಿತ ನರೇಗಾ ಯೋಜನೆಯಡಿ ವಿವಿಧ ಸೌಲಭ್ಯಗಳಿಗೆ ಸಹಾಯಧನ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಸಣ್ಣ, ಅತಿ ಸಣ್ಣ ರೈತರಿಗೆ ತೋಟಗಾರಿಕೆ ಇಲಾಖೆಯ ಸೌಲಭ್ಯಗಳಾದ ಕಂದಕ ಬದು ನಿರ್ಮಾಣ, ಕೃಷಿಹೊಂಡ ನಿರ್ಮಾಣ, ಮಾವು ಪುನಃಶ್ಚೇತನ, ತೆಂಗು ಪುನಃಶ್ಚೇತನ, ತಾಳೆ ಬೆಳೆ ಪುನಃಶ್ಚೇತನ, ಬಾಳೆ, ಅಂಜೂರ, ತಾಳೆಬೆಳೆ, ದಾಳಿಂಬೆ, ಸಪೋಟ, ಮಾವು, ನುಗ್ಗೆ, ತೆಂಗು, ಪಪ್ಪಾಯ, ಕರಿಬೇವು, ಪೇರಲ, ಗುಲಾಭಿ ಹೂ ಮತ್ತು ಮಲ್ಲಿಗೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಹಾಗೂ ಕೊಳವೆ ಬಾಯಿ ಮರುಪೂರ್ಣ ಘಟಕ ನಿರ್ಮಾಣಕ್ಕಾಗಿ ಸಹಾಯಧನ ನೀಡಲಾಗುವುದು.

ಪಿಎಂ ಕಿಸಾನ್‌ 14ನೇ ಕಂತಿನಲ್ಲಿ ರೈತರಿಗೆ ಈ ಬಾರಿ 4 ಸಾವಿರ ರೂ.! ಏನಿದು ಲೆಕ್ಕಾಚಾರ?

ನೀರಾವರಿ ಸೌಕರ್ಯವುಳ್ಳ ರೈತರು ತಮ್ಮ ಜಮೀನುಗಳಲ್ಲಿ ಕಾಮಗಾರಿಗಳನ್ನು ಕೈಗೊಂಡಲ್ಲಿ ನರೇಗಾ ಯೋಜನೆಯ ಅನುದಾನ ಬಳಸಿ ಕೂಲಿ ಮೊತ್ತವನ್ನು ಆನ್‍ಲೈನ್ ಮೂಲಕ ಪಾವತಿ ಮಾಡಲಾಗುವ ವ್ಯವಸ್ಥೆ ಇದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯನ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಹನಿ ನೀರಾವರಿ ಸೌಲಭ್ಯವನ್ನು ಅಳವಡಿಸಲು ಇತರೆ ವರ್ಗದ ರೈತರಿಗೆ ಶೇ.75 ರಷ್ಟು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹೋಬಳಿವಾರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಹಾಗೂ ಸಿರುಗುಪ್ಪ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂ.08396-222066 ಗೆ ಸಂಪರ್ಕಿಸಬಹುದು ಎಂದು ಸಿರುಗುಪ್ಪದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಹೇಶ್ ಅವರು ತಿಳಿಸಿದ್ದಾರೆ.

ಸ್ಮಾರ್ಟ್‌ ಫೋನ್‌  ಕಳೆದುಹೋದ್ರೆ ತಕ್ಷಣ ಈ ಕೆಲಸ ಮಾಡಿ ಸಾಕು!

Published On: 27 April 2023, 03:35 PM English Summary: Applications starts for krishi honda subsidy

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.