ನರೇಗಾ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕದ ಸಾಧನೆ!- ಸಚಿವ ಕೆ.ಎಸ್.ಈಶ್ವರಪ್ಪ

Kalmesh T
Kalmesh T
Karnataka achievement in MNREGA job creation - Minister KS Eshwarappa

ಕರ್ನಾಟಕ ರಾಜ್ಯವು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (Mahatma Gandhi National Rural Employment Guarantee Act) ಯಡಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ(Job) ಸೃಷ್ಟಿಸುವಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (Rural Development and Panchayat Raj) ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಹೇಳಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ’ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಇದನ್ನು ಓದಿರಿ:

“ಸಾವಯವ ಆಹಾರ ರಫ್ತು ಭಾರತದ ಆರ್ಥಿಕತೆ ಬದಲಾಯಿಸಬಹುದು”- ಅಮಿತ್ ಶಾ

ಗುಡ್‌ನ್ಯೂಸ್‌: ದೇಶಾದ್ಯಂತ ಬಲವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅಸ್ತು..!

ನರೇಗಾ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕದ ಸಾಧನೆ ಗಮನಾರ್ಹವಾದದ್ದು. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಶುದ್ಧ ಕುಡಿಯುವ (Pure Drinking Water) ನೀರಿನ ಸೌಲಭ್ಯ ಕಲ್ಪಿಸಿದ್ದು, ಮನೆ-ಮನೆಗೆ ನಲ್ಲಿಗಳ ಮೂಲಕ ನೀರನ್ನು ಪೂರೈಸಲು ಕ್ರಮ ವಹಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ (Central Government) ಜಲಜೀವನ್‌ ಮಿಷನ್‌ ಉತ್ತೇಜನ ನೀಡಿದೆ. ರಾಜ್ಯವು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತವಾಗಿದ್ದು, ಘನ ಮತ್ತು ದ್ರವತ್ಯಾಜ್ಯ ಘಟಕಗಳನ್ನು ಪಂಚಾಯಿತಿಗಳ ಹಂತದಲ್ಲಿ ಸ್ಥಾಪಿಸಲು ಹೆಚ್ಚಿನ ಕ್ರಮವಹಿಸಿರುವುದಾಗಿ ತಿಳಿಸಿದರು.

6% ಬಡ್ಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವುದು ಹೇಗೆ..? ಯಾರು ಅರ್ಹರು..?

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

ಸಂವಿಧಾನದ 73ನೇ ತಿದ್ದುಪಡಿ ಮುಖಾಂತರ 29 ವಲಯಗಳನ್ನು ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದು, ಇವುಗಳಲ್ಲಿ ಅನೇಕ ಚಟುವಟಿಕೆಗಳು ನೇರವಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿದೆ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕವು ಆರೋಗ್ಯ ಗ್ರಾಮ, ಮಕ್ಕಳ ಸ್ನೇಹಿ ಪಂಚಾಯಿತಿಗಳಿಗೆ ಒತ್ತು ನೀಡಿದ್ದು, ಇದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

ಇನ್ನು ನೈಸರ್ಗಿಕ ಸಂಪನ್ಮೂಲಗಳಿಗೆ ಪೂರಕವಾಗಿ ರಾಜ್ಯದ 48 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ 608 ಕಲ್ಯಾಣಿ ಮತ್ತು ಪುಷ್ಕರಣಿಗಳಿಗೆ ಪುನರ್ಜೀವ ನೀಡಲಾಗಿದೆ. ಸುಮಾರು 300 ಹೊಸ ಕೆರೆಗಳ ನಿರ್ಮಾಣಕ್ಕೆ ಕ್ರಮ ವಹಿಸಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ಮಟ್ಟಹೆಚ್ಚಳವಾಗುವುದಾಗಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ ಸಿಂಗ್‌ ಮತ್ತಿತರರು ಉಪಸ್ಥಿತರಿದ್ದರು.

ಮೀನುಗಾರರು ಹಾಗೂ ನೇಕಾರರ ಸಮುದಾಯಕ್ಕೆ ಬಂಪರ್‌ ಗಿಫ್ಟ್‌ ನೀಡಿದ ಸಿಎಂ ಬೊಮ್ಮಾಯಿ..!

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

ಮಾ.9 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ(International Women's Day) ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯ(Karnataka) ಮಟ್ಟದಲ್ಲಿ ನವಭಾರತದ ನಾರಿ ಯೋಜನೆಯಡಿ ಅತ್ಯುತ್ತಮ ಕೆಲಸ ನಿರ್ವಹಿಸಿದ ಮಹಿಳಾ ಕಾಯಕ ಬಂಧುಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

EPFO ಹೊಸ ಮಾರ್ಗಸೂಚಿ ರಿಲೀಸ್.. ಇಲ್ಲಿದೆ ಟ್ಯಾಕ್ಸ್ ಲೆಕ್ಕಾಚಾರ

ATM Card ಇಲ್ಲದೆ ಹಣ ಪಡೆಯಿರಿ: RBI ತರುತ್ತಿದೆ ಹೊಸ ಸೌಲಭ್ಯ !

Published On: 12 April 2022, 02:27 PM English Summary: Karnataka achievement in MNREGA job creation - Minister KS Eshwarappa

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.