ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ. ಮೇವು ಕತ್ತರಿಸುವ ಯಂತ್ರಕ್ಕೆ ಸರ್ಕಾರವು 70 ಪ್ರತಿಶತದವರೆಗೆ ಸಹಾಯಧನವನ್ನು ನೀಡುತ್ತಿದೆ. ಮಾಹಿತಿಗಾಗಿ ಮುಂದೆ ಓದಿರಿ
ಇದನ್ನೂ ಓದಿರಿ: 75 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆ..ಇವುಗಳ ವಿಶೇಷತೆಯೇನು..?
ರೈತರ ಆರ್ಥಿಕ ನೆರವಿಗಾಗಿ ಕೇಂದ್ರ ಸರ್ಕಾರದಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಅಂತಹ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಮೇವು ಕತ್ತರಿಸುವ ಯಂತ್ರಕ್ಕೆ ಸಹಾಯಧನ ನೀಡಲಾಗುತ್ತಿದೆ.
ನಮ್ಮ ದೇಶದ ಜನಸಂಖ್ಯೆಯ ಶೇ.60ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದು, ಈ ವರ್ಷದ ಆರ್ಥಿಕ ಸಮೀಕ್ಷೆ ವರದಿ ಪ್ರಕಾರ ದೇಶದ ಜಿಡಿಪಿಯಲ್ಲಿ ಕೃಷಿಯ ಪಾಲು ಶೇ .20 ರಷ್ಟಿತ್ತು. ರೈತರಿಗೆ ಸಹಾಯ ಮಾಡಲು ಸರ್ಕಾರವು ಕೆಲವು ಪ್ರಯೋಜನಕಾರಿ ಯೋಜನೆಗಳನ್ನು ನಡೆಸುತ್ತಿದೆ.
ರೈತರ ಮನೆ ಬಾಗಿಲಿಗೆ ಕೃಷಿ ಸಂಜೀವಿನಿ ಸಹಾಯವಾಣಿ! ಇದರ ಸದುಪಯೋಗ ನೀವು ಪಡೆದುಕೊಂಡಿದ್ದೀರಾ?
ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ
ಅಂತಹ ಒಂದು ಯೋಜನೆಯನ್ನು " ರಾಷ್ಟ್ರೀಯ ಲೈವ್ ಸ್ಟಾಕ್ ಮಿಷನ್ " ಎಂದು ಹೆಸರಿಸಲಾಗಿದೆ , ಈ ಸಬ್ಸಿಡಿ ಅಡಿಯಲ್ಲಿ ಕೃಷಿ ಯಂತ್ರೋಪಕರಣಗಳು, ಮೇವು ಕತ್ತರಿಸುವ ಯಂತ್ರಗಳನ್ನು ಕೊಳ್ಳಲು ಸಬ್ಸಿಡಿ ನೀಡಲಾಗುತ್ತಿದೆ.
ಎಷ್ಟು ಸಬ್ಸಿಡಿ ಲಭ್ಯವಿದೆ?
ಈ ಯೋಜನೆಯಡಿ, ಮೇವು ಕತ್ತರಿಸುವ ಯಂತ್ರಕ್ಕೆ ಸರ್ಕಾರವು 70 ಪ್ರತಿಶತದವರೆಗೆ ಸಹಾಯಧನವನ್ನು ನೀಡುತ್ತಿದೆ. ಇದರ ಅಡಿಯಲ್ಲಿ, ವಿದ್ಯುತ್ ಚಾಲಿತ ಯಂತ್ರಗಳಿಗೆ 50 ಪ್ರತಿಶತ ಮತ್ತು ಕೈಯಿಂದ ನಿರ್ವಹಿಸುವ ಯಂತ್ರಗಳಿಗೆ ಸುಮಾರು 70 ಪ್ರತಿಶತದಷ್ಟು ಸಹಾಯಧನವನ್ನು ನೀಡಲಾಗುತ್ತಿದೆ.
ಸಬ್ಸಿಡಿ ಪಡೆಯಲು ಇರಬೇಕಾದ ಅರ್ಹತೆಗಳು
ಈ ಮಿಷನ್ ಅಡಿಯಲ್ಲಿ, ಜಾನುವಾರು ಸಾಕಣೆ ಮಾಡುವ ರೈತರಿಗೆ ಮೇವು ಕತ್ತರಿಸುವ ಯಂತ್ರದ ಮೇಲೆ ಸಹಾಯಧನದ ಪ್ರಯೋಜನವನ್ನು ಪಡೆಯಲು ಕೆಲವು ಷರತ್ತುಗಳನ್ನು ಹಾಕಲಾಗಿದೆ.
ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ
POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?
- ವಿದ್ಯುತ್ ಚಾಲಿತ ಯಂತ್ರದ ಮೇಲೆ ಸಬ್ಸಿಡಿ ಪಡೆಯಲು , 8-9 ದನಗಳ ಮಾಲೀಕರ ಗುಂಪು ಐದು ಹಾಲುಕರೆಯುವ ಪ್ರಾಣಿಗಳನ್ನು ಹೊಂದಿರುವುದು ಅವಶ್ಯಕ.
- ಜಾನುವಾರು ಸಾಕಣೆ ಮಾಡುವ ರೈತರು 2 ಅಥವಾ 2 ಕ್ಕಿಂತ ಹೆಚ್ಚು ಹಾಲುಕರೆಯುವ ಪ್ರಾಣಿಗಳನ್ನು ಹೊಂದಿದ್ದರೆ ಮಾತ್ರ ಕೈ ಚಾಲಿತ ಯಂತ್ರದಲ್ಲಿ ಸಹಾಯಧನವನ್ನು ಕಾಣಬಹುದು.
ಪ್ರತಿ ಬ್ಲಾಕ್‌ನಿಂದ 7-7 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಹಾಯಧನವನ್ನು ಪಡೆಯಲು ಪಶುಸಂಗೋಪನಾ ರೈತರು ತಮ್ಮ ಅರ್ಜಿ ನಮೂನೆಯನ್ನು ಮುಖ್ಯ ಅಭಿವೃದ್ಧಿ ಅಧಿಕಾರಿಯ ಕಛೇರಿಯಲ್ಲಿ ಸಲ್ಲಿಸಬೇಕು.
ಅಥವಾ “ ರಾಷ್ಟ್ರೀಯ ಲೈವ್ ಸ್ಟಾಕ್ ಮಿಷನ್ ” ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಭರ್ತಿ ಮಾಡಬಹುದು.
“ಸಾವಯವ ಆಹಾರ ರಫ್ತು ಭಾರತದ ಆರ್ಥಿಕತೆ ಬದಲಾಯಿಸಬಹುದು”- ಅಮಿತ್ ಶಾ
ಗುಡ್‌ನ್ಯೂಸ್: ದೇಶಾದ್ಯಂತ ಬಲವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅಸ್ತು..!
Share your comments