ರೈತರಿಗೆ ಗುಡ್ನ್ಯೂಸ್: PM Kisan ಯೋಜನೆಯಡಿ ಟ್ರ್ಯಾಕ್ಟರ್ ಕೊಳ್ಳಲು ರೈತರಿಗೆ ಕೇಂದ್ರ ಸರ್ಕಾರ ನೀಡಲಿದೆ ಶೇ.50ರಷ್ಟು ಸಬ್ಸಿಡಿ!

Kalmesh T
Kalmesh T
50% subsidy for tractor procurement from central govt

ಕೇಂದ್ರ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ನ್ಯೂಸ್. ಈಗ ಟ್ರ್ಯಾಕ್ಟರ್ ಕೊಳ್ಳ ಬಯಸುವ ರೈತರಿಗೆ ದೊರೆಯಲಿದೆ ಶೇ.50ರಷ್ಟು ಸಬ್ಸಿಡಿ. ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿರಿ: ಮುಂದಿನ 5 ದಿನಗಳಲ್ಲಿ ಕರ್ನಾಟಕದಾದ್ಯಂತ ಗುಡುಗು- ಮಿಂಚು ಸಮೇತ ಮಳೆ!

PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ

ಟ್ರಾಕ್ಟರ್ ಖರೀದಿಸುವ ರೈತರಿಗೆ ಶೇಕಡಾ 50 ರಷ್ಟು ಸಬ್ಸಡಿ ಸಿಗಲಿದೆ. “ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ”ಯಡಿ (PM Kisan Tractor Scheme)  ರೈತರಿಗೆ ಈ ಸೌಲಭ್ಯ ದೊರಯಲಿದೆ. ಈ ಸೌಲಭ್ಯ ದೇಶದ ಎಲ್ಲಾ ರೈತರಿಗೂ ದೊರೆಯಲಿದ್ದು, ಹೊಸ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ  ಚಾಲನೆ ನೀಡಿದ್ದಾರೆ.

ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯಡಿ (PM Kisan Tractor Scheme) ಟ್ರಾಕ್ಟರ್ ಖರೀದಿಸಲು ಇಚ್ಚಿಸುವ ರೈತರು ಆನ್‌ಲೈನ್ ಅಥವಾ ಸಂಬಂಧ ಪಟ್ಟ ಸ್ಛಳೀಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಅರ್ಹ ರೈತರು ಟ್ರಾಕ್ಟರ್ ಬೆಲೆಯ ಅರ್ಧದಷ್ಟು ಮಾತ್ರ ಪಾವತಿ ಮಾಡಿದರೆ ಸಾಕು. ಇನ್ನುಳಿದ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರವೆ ಪಾವತಿಸಲಿದೆ.

ಶೇಕಡಾ 50 ರಷ್ಟು ಸಬ್ಸಡಿ ಇರುವುದರಿಂದ ರೈತರು ಅರ್ಧದಷ್ಟು ಹಣ ಪಾವತಿಸಿದರೆ ಟ್ರಾಕ್ಟರ್ ನಿಮ್ಮದಾಗಲಿದೆ. ಈ ಅರ್ಧ ಹಣಪಾವತಿಗೂ ಸಾಲ ಸೌಲಭ್ಯವಿದೆ.

ಗುಡ್‌ನ್ಯೂಸ್‌; ಡ್ರೋನ್ ಖರೀದಿಸುವ ರೈತರಿಗೆ ಸರ್ಕಾರ ನೀಡುತ್ತಿದೆ ₹5 ಲಕ್ಷ ಸಹಾಯಧನ!

EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!

ಕೆಲ ರಾಜ್ಯಗಳು ಕೇಂದ್ರ ಸರ್ಕಾರದ ಸಬ್ಸಿಡಿ ಜೊತೆಗೆ ರಾಜ್ಯ ಸರ್ಕಾರಗಳು ಸಬ್ಸಿಡಿ ಘೋಷಿಸಿವೆ. ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯಡಿ ಟ್ರಾಕ್ಟರ್ ಪಡೆಯಲು ಅರ್ಜಿ ಭರ್ತಿ ಮಾಡಬೇಕು. ಅರ್ಹರನ್ನು ಪರಿಶೀಲಿಸಿ ಸರ್ಕಾರ ಸಬ್ಸಡಿ ನೀಡಲಿದೆ.

ಸಬ್ಸಿಡಿ ಪಡೆಯಲು ಇರಬೇಕಾದ ಅರ್ಹತೆ

 • ಅರ್ಜಿದಾರನ್ನು ಭಾರತೀಯ ನಾಗರೀಕರನಾಗಿರಬೇಕು
 • ಅರ್ಜಿದಾರನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 60 ವರ್ಷದೊಳಗಿರಬೇಕು
 • ಅರ್ಜಿದಾರನ ಕುಟುಂಬದ ಆದಾಯ ವಾರ್ಷಿಕ 1.5 ಲಕ್ಷಕ್ಕಿಂತ ಮೀರಬಾರದು
 • ಅರ್ಜಿದಾರ ಸಣ್ಣ ರೈತರ ಮಾನದಂಡ ಅನ್ವಯವಾಗಬೇಕು
 • ಟ್ರಾಕ್ಟರ್ ಖರೀದಿಸುವ ರೈತ ತನ್ನ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರಬೇಕು
 • ಅರ್ಜಿದಾರ ಇತರ ಯಾವುದೇ ಸಬ್ಸಿಡಿ ಆಧಾರಿತ ಯೋಜನೆಯ ಫಲಾನುಭವಿಯಾಗಿರಬಾರದು
 • ಟ್ರಾಕ್ಟರ್‌ಗೆ ಅರ್ಜಿ ಹಾಕುವ ರೈತ ಕಳೆದ 7 ವರ್ಷದಲ್ಲಿ ಯಾವುದೇ ಟ್ರಾಕ್ಟರ್ ಖರೀದಿಸಿರಬಾರದು

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ! ಯಾವ ಪ್ರಾಣಿ ಸಾಕಾಣಿಕೆಗೆ ಎಷ್ಟು ಹಣ ಗೊತ್ತೆ?

ಸಾವಯವ ಗೊಬ್ಬರ ಖರೀದಿಸುವ ರೈತರಿಗೆ ಭರ್ಜರಿ ರಿಯಾಯಿತಿ: ಈ ಯೋಜನೆಯಡಿ ₹227.40 ಲಕ್ಷ ಅನುದಾನ ಮೀಸಲು!

ಸಬ್ಸಿಡಿ ಟ್ರಾಕ್ಟರ್ ಪಡೆಯಲು ಬೇಕಾದ ದಾಖಲೆಗಳು

 • ಆಧಾರ್ ಕಾರ್ಡ್
 • ಬ್ಯಾಂಕ್ ಖಾತೆ ವಿವರ
 • ಗುರುತಿನ ಚೀಟಿ ದಾಖಲೆ (ಪ್ಯಾನ್ ಕಾರ್ಡ್, ಮತದಾರನ ಚೀಟಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೆಸೆನ್ಸ್, ಇತ್ಯಾದಿ ಸೇರಿದಂತೆ)
 • ಭಾವಚಿತ್ರ (ಪಾಸ್‌ಪೋರ್ಟ್ ಸೈಜ್ ಫೋಟೋ)
 • ಭೂಮಿಯ ವಿವರ, ದಾಖಲೆ ಪತ್ರ

₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?

ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಮಹತ್ವ..! ನೀವು ಇದರ ಬಗ್ಗೆ ತಿಳಿದಿರಲೇಬೇಕು..

ಅರ್ಜಿಯಲ್ಲಿ ರೈತ ತುಂಬಬೇಕಾದ ಮಾಹಿತಿ

 • ಅರ್ಜಿದಾರನ ಹೆಸರು(ಆಧಾರ್ ಕಾರ್ಡ್‌ನಲ್ಲಿರುವ ಹೆಸರು)
 • ಅರ್ಜಿದಾರನ ಹುಟ್ಟಿದ ದಿನಾಂಕ
 • ಲಿಂಗ
 • ತಂದೆ ಅಥವಾ ಪತಿಯ ಹೆಸರು
 • ಅರ್ಜಿದಾರನ ವಿಳಾಸ, ಜಿಲ್ಲೆ, ತಾಲೂಕು, ಹೊಬಳಿ
 • ಜಾತಿ ವಿವರ
 • ಅರ್ಜಿದಾರನ ಮೊಬೈಲ್ ಸಂಖ್ಯೆ
Published On: 13 June 2022, 11:17 AM English Summary: 50% subsidy for tractor procurement from central govt

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.