ಪರಿಸರದಲ್ಲಿ ಬದಲಾವಣೆಗಳು ಸಾಮಾನ್ಯವಾಗಿದೆ. ಆದರೆ ಪರಿಸರದಲ್ಲಿನ ಈ ಬದಲಾವಣೆಗಳ ಪರಿಣಾಮವಾಗಿ, ಅನೇಕ ರೋಗಗಳು ನಮ್ಮನ್ನು ಸುತ್ತುವರೆದಿವೆ. ಅದರಲ್ಲೂ ಮಳೆಗಾಲ ಬಂತೆಂದರೆ ಹಲವಾರು ರೀತಿಯ ಸೋಂಕುಗಳು ಬರುತ್ತವೆ.ಆದರೆ, ಮಳೆಗಾಲದಲ್ಲಿ ಬರುವ ಸೀಸನ್ ಕಾಯಿಲೆಗಳಲ್ಲಿ ಕೆಮ್ಮು, ನೆಗಡಿಯೇ ಹೆಚ್ಚು. ಮಳೆಗಾಲದಲ್ಲಿ ಬರುವ ನಾನಾ ರೋಗಗಳನ್ನು ತಡೆಯುವಲ್ಲಿ ಶುಂಠಿ ಔಷಧಿ ಪವಾಡ ಎಂದೇ ಹೇಳಬಹುದು.
ಶೀತ ಮತ್ತು ಕೆಮ್ಮು ಮಳೆಗಾಲದಲ್ಲಿ ಸಾಮಾನ್ಯ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ. ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಆ ನೀರನ್ನು ಕುಡಿಯುವುದರಿಂದ ನೆಗಡಿ ಮತ್ತು ಕೆಮ್ಮಿನಿಂದ ಪರಿಹಾರ ಪಡೆಯಬಹುದು. ಅಂತೆಯೇ, ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಶುಂಠಿ ಪುಡಿಯಲ್ಲಿ ಹಲವು ಔಷಧೀಯ ಗುಣಗಳು ಅಡಗಿವೆ. ಔಷಧೀಯ ಗುಣಗಳು ನಮ್ಮಲ್ಲಿನ ವಿವಿಧ ರೀತಿಯ ಸೋಂಕುಗಳನ್ನು ತಡೆಗಟ್ಟುವಲ್ಲಿ ಮತ್ತು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಶುಂಠಿಯನ್ನು ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳೋಣ.
ವಿಷಕಾರಿ ಜ್ವರಗಳು ಬಂದಾಗ ಶುಂಠಿಯ ಪುಡಿಯನ್ನು ಆಡಿನ ಹಾಲಿಗೆ ಬೆರೆಸಿ ಸೇವಿಸಿದರೆ ಈ ವಿಷಕಾರಿ ಜ್ವರಗಳಿಂದ ಪರಿಹಾರ ದೊರೆಯುತ್ತದೆ. ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವವರು ಕಾಲು ಚಮಚ ದಾಲ್ಚಿನ್ನಿ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಸೇವಿಸಿದರೆ ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ತೀವ್ರ ತಲೆನೋವಿನಿಂದ ಬಳಲುತ್ತಿರುವವರು ಶುಂಠಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಹಚ್ಚಿದರೆ ತಲೆನೋವು ಕಡಿಮೆಯಾಗುತ್ತದೆ. ಶುಂಠಿ ಪುಡಿಯಿಂದ ರಕ್ತಹೀನತೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.
Share your comments