ಜೀವನದಲ್ಲಿ ಧನಾತ್ಮಕತೆಯು ಅತೀ ಮುಖ್ಯ. ಧನಾತ್ಮಕವಾಗಿರುವಂತಹ ವ್ಯಕ್ತಿಗಳು ಜೀವನದ ಪ್ರತಿಯೊಂದು ಹಂತದಲ್ಲೂ ಸುಧಾರಣೆಯಾಗಿ ಗುರಿ ಮುಟ್ಟುವರು. ಧನಾತ್ಮಕವಾಗಿರುವ ವಾತಾವರಣವಿದ್ದರೆ ಆಗ ವ್ಯಕ್ತಿಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಕೂಡ ಮಾಡಬಲ್ಲ. ಧನಾತ್ಮಕವಾಗಿರುವ ವಾತಾವರಣವು ಶಾಂತಿಯನ್ನು ಉಂಟು ಮಾಡಿ ಮನಸ್ಸಿಗೆ ಶಾಂತಿ ತರುವುದು. ಧನಾತ್ಮಕತೆಯು ಮನಸ್ಸಿನ ಪ್ರತಿಯೊಂದು ನೋವನ್ನು ದೂರ ಮಾಡುವುದು.
ನಿಮ್ಮ ಸುತ್ತಲಿನ ವಾತಾವರಣವು ಧನಾತ್ಮಕವಾಗಿದ್ದರೆ ಆಗ ನಿಮ್ಮಲ್ಲಿ ಉತ್ತಮ ಭಾವನೆ ಉಂಟಾಗಲಿದೆ. ಧನಾತ್ಮಕವಾಗಿರದೆ ಇರುವ ವ್ಯಕ್ತಿಗಳು ಪ್ರತಿಯೊಂದು ಪರಿಸ್ಥಿತಿಯಲ್ಲೂ ಶಾಂತವಾಗಿರಲು ಕಲಿಯಬೇಕು. ಮನೆಯಲ್ಲಿ ಧನಾತ್ಮಕತೆ ಉಂಟುಮಾಡಲು ಕೆಲವು ಸರಳ ವಾಸ್ತು ಸಲಹೆಗಳು ಈ ಲೇಖನದಲ್ಲಿ ನಿಮಗಾಗಿ
ಅನಗತ್ಯವಾಗಿರುವುದನ್ನು ತೆಗೆಯಿರಿ
ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಬೇಡದ ವಸ್ತುಗಳು ಇದ್ದರೆ ಅದನ್ನು ತೆಗೆಯಿರಿ. ಉದಾರಣೆಗೆ-ಪತ್ರಿಕೆಗಳು, ಮ್ಯಾಗಜಿನ್, ತುಂಡಾದ ವಾಚ್, ಅನಗತ್ಯ ದಾಖಲೆಗಳು, ಪೆನ್ ಗಳು ಇತ್ಯಾದಿ. ಅನಗತ್ಯವಾಗಿರುವ ವಸ್ತುಗಳು ಮನೆಗೆ ನಕಾರಾತ್ಮಕತೆ ಉಂಟು ಮಾಡುವುದು. ನೀವು ಬಳಸದೆ ಇರುವಂತಹ ವಸ್ತುಗಳನ್ನು ತೆಗೆದು ಆ ಜಾಗವನ್ನು ಖಾಲಿಯಾಗಿಡಿ. ಇದರಿಂದ ಕೋಣೆಯಲ್ಲಿ ಹೆಚ್ಚಿನ ಜಾಗ ಸಿಗುವುದು ಮತ್ತು ಮಕ್ಕಳು ಇದರಿಂದ ಖುಷಿ ಪಡುವರು.
ಮಲಗುವ ದಿಕ್ಕು
ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ನಿಮಗೆ ಆರಾಮವೆನಿಸುವಂತಹ ದಿಕ್ಕಿಗೆ ಮಲಗಿ. ಇದರಿಂದ ಧನಾತ್ಮಕತೆಯು ಬರುವುದು ಮತ್ತು ನಕಾರಾತ್ಮಕತೆಯು ದೂರವಾಗುವುದು. ನಿಮಗೆ ತುಂಬಾ ಒಳ್ಳೆಯ ಹಾಗೂ ಆರಾಮದ ನಿದ್ರೆ ಬರುವುದು. ನಮ್ಮ ವಾಸ್ತು ತಜ್ಞರು ನಿಮ್ಮ ಮಲಗುವ ದಿಕ್ಕು ಯಾವುದೆಂದು ಹೇಳುವರು.
ಸೂರ್ಯನ ಬೆಳಕು
ವಾಸ್ತುವಿನಲ್ಲಿ ಸೂರ್ಯನಿಗೆ ಪ್ರಮುಖ ಸ್ಥಾನವಿದೆ ಮತ್ತು ಮನೆ ನಿರ್ಮಾಣದ ವೇಳೆ ಕೂಡ ಇದನ್ನು ಗಮನಿಸಲಾಗುತ್ತದೆ. ವಾಸ್ತುಶಾಸ್ತ್ರದ ಅಧ್ಯಯನವು ಸ್ಥಳದಿಂದ ಸ್ಥಳಕ್ಕೆ, ಸೂರ್ಯನ ಉದಯ ಮತ್ತು ಅಸ್ತಮ, ಋತುಮಾನ, ಸೂರ್ಯನ ಬೆಳಕಿನ ತೀವ್ರತೆ ಬಗ್ಗೆ ಗಮನದಲ್ಲಿಟ್ಟುಕೊಂಡು ಮನೆ ನಿರ್ಮಾಣ ಮಾಡಲಾಗಿರುವುದು. ಧನಾತ್ಮಕ ಶಕ್ತಿ ಬರಲು ಸೂರ್ಯನ ಕಿರಣಗಳು ಅತೀ ಅಗತ್ಯ. ಮನೆಯಲ್ಲಿರುವ ನಕಾರಾತ್ಮಕತೆ ದೂರ ಮಾಡಲು ಸೂರ್ಯನ ಬೆಳಕು ಅತೀ ಮುಖ್ಯ.
ಮಲಗುವ ಕೋಣೆಯಲ್ಲಿ ದೊಡ್ಡದಾದ ಕನ್ನಡಿ
ಮಲಗುವ ಕೋಣೆಯು ನಮಗೆ ಆರಾಮ ಮತ್ತು ಒತ್ತಡದಿಂದ ಮುಕ್ತಿ ನೀಡುವುದು. ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ, ಅದರಲ್ಲೂ ಹಾಸಿಗೆ ಕಾಣುವಂತೆ ಕನ್ನಡಿ ಇರಲೇಬಾರದು. ಹಾಸಿಗೆಗೆ ಕನ್ನಡಿಯು ಸಮಾನಾಂತರವಾಗಿದ್ದರೆ ಆರೋಗ್ಯ ಸಮಸ್ಯೆಯು ಕಾಣಿಸಬಹುದು. ಇದು ಮನೆಯಲ್ಲಿ ಜಗಳ ಉಂಟು ಮಾಡಬಹುದು. ಇದರಿಂದ ನೀವು ವಾಸ್ತು ತಜ್ಞರನ್ನು ಭೇಟಿಯಾಗಿ.
ಧನಾತ್ಮಕವಾಗಿರುವುದು
ಧನಾತ್ಮಕತೆ ಎನ್ನುವುದು ಒಮ್ಮೆಲೆ ಬೆಂಕಿ ಹಚ್ಚಿಕೊಂಡಂತೆ ನಿಮಗೆ ಸಿಗುವುದಿಲ್ಲ. ಧನಾತ್ಮಕತೆಯು ಬರಲು ಸುತ್ತಲಿನ ವಾತಾವರಣವು ಶಾಂತಿಯುತವಾಗಿರಬೇಕು. ಧನಾತ್ಮಕ ಶಕ್ತಿ ಬರಲು ಮನಸ್ಸಿಗೆ ಹೆಚ್ಚು ತರಬೇತಿ ನೀಡಬೇಕು. ಸಮಸ್ಯೆಯು ಎಷ್ಟೇ ದೊಡ್ಡದಾಗಿದ್ದರೂ ಧನಾತ್ಮಕತೆಯಿದ್ದರೆ ಒಳ್ಳೆಯ ಪರಿಹಾರ ಸಿಗುವುದು.
ಮನೆಯ ಪ್ರಧಾನ ಬಾಗಿಲು
ನಿಮ್ಮ ಮನೆಯ ಪ್ರಧಾನ ಬಾಗಿಲು ನಿಮ್ಮ ಮನೆಯ ಎಲ್ಲಾ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ಬೇರೆಲ್ಲಾ ಬಾಗಿಲುಗಳು ಕೊಂಚವಾದರೂ ಇದಕ್ಕಿಂತ ಚಿಕ್ಕದಾಗಿರುವಂತೆ ನೋಡಿಕೊಳ್ಳಿ. ಪ್ರಧಾನ ಬಾಗಿಲು ಎರಡು ಹಲಗೆಗಳನ್ನು ಹೊಂದಿರಬೇಕು. ಇದು ಮನೆಯ ಒಳಭಾಗಕ್ಕೆ ತೆರೆಯುವಂತೆ, ಹಿಡಿಕೆ ಇರುವ ಭಾಗ ಮೇಲಿನಿಂದ ನೋಡಿದರೆ ಪ್ರದಕ್ಷಿಣವಾಗಿ ತೆರೆಯುವಂತಿರಬೇಕು. ಈ ಬಾಗಿಲು ಮನೆಗೆ ಶುಭ ತರುತ್ತದೆ.
Share your comments