1. ಇತರೆ

ಡೋರ್‍ ಡೆಲಿವರಿ ಆಗುತ್ತೆ ಸೀರೆ ಕುಚ್ಚು ..!

ಸದಾ ಮನೆಯಲ್ಲೇ ಇದ್ದು ಬೇಜಾರಾಗಿ ಏನಾದ್ರು ಕೆಲಸವನ್ನ ಜೀವನಕ್ಕಾಗಿ ಮಾಡಿಕೊಳ್ಳಬೇಕು ಅಂತ ನಿರ್ಧಾರ ಮಾಡಿ ಸಿಂಪಲ್ ಕೆಲಸವನ್ನೇ ವೃತ್ತಿಯಾಗಿಸಿಕೊಂಡ ಸತ್ಯವತಿ, ಇಂದು ಕೈತುಂಬಾ ಕೆಲಸ ಹೊಂದಿರೋ ಮಹಿಳೆ. ಸಾಮಾನ್ಯವಾಗಿ ಇಂದಿನ ಹುಡುಗಿಯರು ಹಾಗೂ ಹೆಂಗಸರು ಸೀರೆ ಕೊಂಡುಕೊಂಡ ಮೇಲೆ ಅದಕ್ಕೆ ಕುಚ್ಚು ಕಟ್ಟಿಸಿಕೊಳ್ಳೊದು ಕಾಮನ್‍ ಆಗಿರುತ್ತೆ. ಸ್ಯಾರಿ ಕುಚ್ಚು ಅನ್ನೋದು ಆವತ್ತಿನಿಂದ ಇಂದಿನವರೆಗೂ ಯಾವುದೇ ಬದಲಾವಣೆ ಇಲ್ಲದೆ ಮುಂದುವರೆದುಕೊಂಡಿರುವ, ಮುಂದುವರೆಯುವ ಫ್ಯಾಷನ್. ಈ ಫ್ಯಾಷನ್‍ ಅನ್ನೇ ಬಂಡವಾಳವನ್ನಾಗಿಸಿಕೊಂಡ ಸತ್ಯವತಿ ಕುಚ್ಚು ಕಟ್ಟೋದನ್ನೇ ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ.

ಆರಂಭವಾಗಿದ್ದು ಹೀಗೆ..!

ಮೊದಲಿಗೆ ಅಕ್ಕ ಪಕ್ಕದ ಮನೆಯವರ ಸೀರೆಗಳನ್ನ ಪಡೆದು ಸೀರೆಗಳಿಗೆ ಕುಚ್ಚು ಕಟ್ಟುತ್ತಿದ್ದ ಸತ್ಯವತಿ, ವರ್ಷಗಳು ಕಳೆದಂತೆ ಇದನ್ನ ದೊಡ್ಡ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಕುಚ್ಚಿನ ಡಿಸೈನ್ ನಲ್ಲಿ 30ಕ್ಕೂ ಹೆಚ್ಚು ವೆರೈಟಿ ಡಿಸೈನ್‍ ಕಟ್ಟಿಕೊಡೋ ಸತ್ಯವತಿ ಸುಮಾರು 6 ವರ್ಷದಿಂದ ಇದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಇನ್ನೂ ಮೂರಕ್ಕಿಂತಲೂ ಹೆಚ್ಚು ಸೀರೆಗಳಿಗೆ ಕುಚ್ಚನ್ನ ಕಟ್ಟಬೇಕು ಅಂತಾದ್ರೆ ಡೋರ್‍ ಡೆಲಿವರಿ ಕೂಡ ಕೊಡ್ತಾರೆ. ಡಿಸೈನ್ ಗೆ ತಕ್ಕಂತೆ ಸಮಯ ತೆಗೆದುಕೊಳ್ತಾರೆ. ಹೆಚ್ಚು ಡಿಸೈನ್‍ ಇರೋದು ಬೇಕು ಅಂದ್ರೂ ಕೂಡ ಸೀರೆ ಪಡೆದು ಆರು ದಿನಗಳಲ್ಲಿ ಡೋರ್‍ ಡೆಲಿವರಿಕೊಡ್ತಾರೆ.

300 ರೂಪಾಯಿಯಿಂದ ಪ್ರಾರಂಭವಾಗೋ ಡಿಸೈನ್ಸ್ 1800ರ ವರೆಗೂ ಇದೆ. ನಿಮಗೆ ಬೇಕಾದ ಡಿಸೈನ್ಸ್​ನ್ನ ಆಯ್ಕೆ ಮಾಡಿಕೊಳ್ಳಬಹುದು. ಬೆಂಗಳೂರಿನ ಜಾಲಹಳ್ಳಿಯಲ್ಲಿ ಕುಚ್ಚುಕಟ್ಟೋ ಸತ್ಯವತಿ ಬೇರೆ ರಾಜ್ಯದಲ್ಲಿ ಫೇಮಸ್ ಆಗಿದ್ದು ಹೇಗೆ ಅನ್ನೋ ಕುತೂಹಲ ಎಲ್ಲರಲ್ಲೂ ಇರತ್ತೆ. ಇದಕ್ಕೆ ಕಾರಣ ಸತ್ಯವತಿ ನಡೆಸೋ ಕ್ಲಾಸ್ ಗಳು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಇವರು ಮಾಡಿದ ಕೆಲಸಗಳನ್ನಅಪ್​ಲೋಡ್ ಮಾಡಿದ್ದು, ಹೌದು ಪೇಸ್‍ಬುಕ್​ನಲ್ಲಿ ತನ್ನದೇ ಪೇಜ್ ಹೊಂದಿರೋ ಸತ್ಯವತಿ ತಾವು ಮಾಡಿದ ಡಿಸೈನ್ಸ್ ಗಳನ್ನ ಅಪ್​ಲೋಡ್ ಮಾಡಲು ಸ್ಟಾರ್ಟ್ ,ಮಾಡಿದ್ರು ಆ ನಂತ್ರ ಇವ್ರಿಗೆ ಫಾಲೋವರ್ಸ್ ಹೆಚ್ಚಾದ್ರು. ಅದೇ ರೀತಿ ಕುಚ್ಚು ಕಟ್ಟುವುದರ ಬಗ್ಗೆ ತರಗತಿಗಳನ್ನ ತೆಗೆದುಕೊಳ್ಳುವಂತೆ ಒತ್ತಾಯ ಮಾಡಲು ಶುರು ಮಾಡಿದ್ರು. ಆ ನಂತ್ರ ಸತ್ಯವತಿ ಕುಚ್ಚು ಕಟ್ಟೋದ್ರ ಬಗ್ಗೆ ಕ್ಲಾಸ್ ನಡೆಸೋದಕ್ಕೆ ಪ್ರಾರಂಭಿಸಿದ್ರು.

ಸತ್ಯವತಿ ನಡೆಸೋಕುಚ್ಚುಕಟ್ಟೋಕ್ಲಾಸ್ ಗೆ ಡಿಮ್ಯಾಂಡ್

ಸತ್ಯವತಿ ಕಳೆದ ಎರಡು ವರ್ಷಗಳಿಂದ ಕುಚ್ಚು ಕಟ್ಟೋ ಕ್ಲಾಸ್ ನಡೆಸುತ್ತಿದ್ದು 200 ಕ್ಕೂ ಹೆಚ್ಚು ಜನರಿಗೆ ಇದ್ರ ಬಗ್ಗೆ ತರಬೇತಿ ನೀಡಿದ್ದಾರೆ. ವಾರಾಂತ್ಯ ತರಗತಿ ಹಾಗೂ ಎರಡು ದಿನಗಳ ಕ್ಲಾಸ್ ನಡೆಸೋ ಸತ್ಯವತಿ ಕುಚ್ಚು ಕಟ್ಟೋ ತರಗತಿಯಲ್ಲಿ 30 ಕ್ಕೂ ಹೆಚ್ಚು ಡಿಸೈನ್ಸ್​ಗಳನ್ನ ಕಲಿಸಿಕೊಡುತ್ತಾರೆ. ವಾರಂತ್ಯದಲ್ಲಿ ದಿನಪೂರ್ತಿ ತರಗತಿಗಳನ್ನ ಮಾಡುತ್ತಾರೆ. ಇನ್ನೂ ವಿಶೇಷ ಅಂದ್ರೆ ಐದು ಜನ ಗುಂಪು ಮಾಡಿಕೊಂಡ್ರೆ ಸತ್ಯವತಿ ನೀವಿದ್ದ ಜಾಗಕ್ಕೆ ಬಂದು ಕುಚ್ಚು ಕಟ್ಟೋ ಟ್ರೈನಿಂಗ್ ನೀಡುತ್ತಾರೆ. 2500 ರೂಪಾಯಿ ಶುಲ್ಕವನ್ನ ಪಡೆಯೋ ಸತ್ಯವತಿ ನಿಧಾನವಾಗಿ ಕಲಿಯೋ ವಿದ್ಯಾರ್ಥಿಗಳಿದ್ದರೆ ಅವರಿಗಾಗಿ ಒಂದು ದಿನ ಹೆಚ್ಚುವರಿ ಕ್ಲಾಸ್‍ ಅನ್ನೂ ಕೂಡ ತೆಗೆದುಕೊಳ್ಳುತ್ತಾರೆ.

ಇನ್ನು ರಾಜ್ಯದ ಮೂಲೆ ಮೂಲೆಗೂ ಹೋಗಿ ಕುಚ್ಚು ಕಟ್ಟೋ ಟ್ರೈನಿಂಗ್ ನೀಡೋ ಸತ್ಯವತಿ ಹೊರ ರಾಜ್ಯದ ಜನರಿಗಾಗಿ ವೀಡಿಯೋ ಕ್ಲಾಸ್ ಗಳನ್ನ ಮಾಡುತ್ತಾರೆ. ಕೇರಳ ,ಆಂಧ್ರ, ತಮಿಳುನಾಡಿನಿಂದ ಸಾಕಷ್ಟು ಮಂದಿ ಸತ್ಯವತಿ ಅವ್ರ ವೀಡಿಯೋ ಕ್ಲಾಸ್​ನಿಂದಾಗಿ ಕುಚ್ಚು ಕಟ್ಟೋದನ್ನಕಲಿತಿದ್ದಾರೆ. ಅಷ್ಟೇ ಅಲ್ಲದೆ ತಾವು ಕಲಿತ ನಂತ್ರ ಅದನ್ನ ವೀಡಿಯೋ ಮಾಡಿ ಸತ್ಯವತಿ ಅವ್ರಿಗೆ ಕಳೆಸುತ್ತಾರಂತೆ. ಸದ್ಯ ಕುಚ್ಚು ಕಟ್ಟೋ ಉದ್ಯಮಕ್ಕೆ ಸಾಕಷ್ಟು ಡಿಮ್ಯಾಂಡ್‍ ಇರೋದ್ರಿಂದ ಸತ್ಯವತಿ ಈಗ ಫುಲ್ ಬ್ಯೂಸಿ ಆಗಿದ್ದಾರೆ. ತಾವು ಆಸಕ್ತಿಯಿಂದ ಕಲಿತ ವಿಧ್ಯೆಯನ್ನೇ ಬಂಡವಾಳವನ್ನಾಗಿಸಿಕೊಂಡು ಕೆಲಸ ಯಾವುದೂ ಅನ್ನೋದು ಮುಖ್ಯ ಅಲ್ಲ ಅದನ್ನ ಹೇಗೆ ಬಳಸಿಕೊಳ್ಳುತ್ತೇವೆ ಅನ್ನೋದು ಮುಖ್ಯಅನ್ನೋದನ್ನ ಸಾಭೀತು ಮಾಡಿದ್ದಾರೆ.

Published On: 30 September 2018, 05:35 PM English Summary: Saree Kuchchu

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.