ದಿನದಲ್ಲಿ ಯಾವುದೇ ಸಮಯಕ್ಕೂ ಒಗ್ಗುವ, ಖಾರವಾದರೂ ಇನ್ನು ತಿನ್ನಬೇಕೆನಿಸುವ ಮಟನ್ ಪೆಪ್ಪರ್ ಫ್ರೈ ಸವಿಯಬೇಕೆಂದುಕೊಂಡಿದ್ದೀರಾ... ಆದರೆ ಮಾಡುವುದು ಹೇಗೆ ಎಂಬ ಚಿಂತೆ ಕಾಡುತ್ತಿದ್ದೆಯೇ ? ಈಗ ಚಿಂತೆಬಿಟ್ಟುಬಿಡಿ. ಮಟನ್ ಪೆಪ್ಪರ್ ಫ್ರೈ ಸ್ಪೆಷಲ್ ಈ ಲೇಖನ ಓದಿ ಮನೆಯಲ್ಲಿ ಟ್ರೈ ಮಾಡಿ ನೀವು ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
ಮಟನ್-1ಕೆಜಿ, ಚಕ್ಕೆ-3, ಚೂರು ಲವಂಗ-3, ಕೊತ್ತಂಬರಿ-2ಚಮಚ, ಕಾಳುಮೆಣಸು-4ಚಮಚ, ಗೋಡಂಬಿ-1 ಚಮಚ, ತುಪ್ಪ-1 ಚಮಚ,ಈರುಳ್ಳಿ-4 ಮಧ್ಯಮ ಗಾತ್ರದ್ದು, ಕರಿಬೇವು 6 ಎಸಳು, ಹಸಿಮೆಣಸು-8, ಟೊಮೆಟೊ-2, ಶುಂಠಿ-ಬೆಳ್ಳುಳ್ಳಿ ಪೇಸ್ಟ-2ಚಮಚ, ಖಾರದಪುಡಿ-2 ಚಮಚ, ಕಾಳುಮೆಣಸಿನ ಪುಡಿ-1 ಚಮಚ, ಉಪ್ಪು-ರುಚಹಿಗೆ ತಕ್ಕಷ್ಟು, ಸೋಯಾ ಸಾಸ್-2 ಚಮಚ, ಕೊತ್ತಂಬರಿ ಸೊಪ್ಪು-ಸ್ವಲ್ಪ
ತಯಾರಿಸುವ ವಿಧಾನ:
ಮಟನ್ ಅನ್ನು ಅರಿಸಿನ ಹಾಕಿ ಚೆನ್ನಾಗಿ ತೊಳೆದು ಕುಕ್ಕರೆ ಗೆ ಹಾಕಿ.ಉಪ್ಪು ಸೇರಿಸಿ ಕೈಯಾಡಿಸಿ.ಮಟನ್ ಮುಳುಗುಷ್ಟು ನೀರು ಸೇರಿಸಿ ಕಲಕಿ ಕುಕ್ಕರ ಮುಚ್ಚಿ 4 ವಿಷಲ್ ಕೂಗಿಸಿ.
ಪ್ಯಾನ್ ವೊಂದರಲ್ಲಿ 2 ಚಮಚ ಎಣ್ನೆ ಹಾಕಿ ಬಿಸಿಯಾದ ಮೇಲೆ ಅದಕ್ಕೆ ಚಕ್ಕೆ,ಲವಂಗ, ಕೊತ್ತಂಬರಿ 3ಚಮಚ, ಕಾಳುಮೆಣಸು 4ಚಮಚ, 1ಚಮಚ ಜೀರಿಗೆ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಅದಕ್ಕೆ 10 ಗೋಡಂಬಿ ಸೇರಿಸಿ ಹುರಿದುಕೊಳ್ಳಿ. ಅವುಗಳನ್ನು ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ದಪ್ಪ ತಳದ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ 2 ಚಮಚ ತುಪ್ಪ ಹಾಕಿ ಈರುಳ್ಳಿ ಹಾಕಿ ಹುರಿದುಕೊಂಡು ಕರಿಬೇವು, ಉದ್ದಕ್ಕೆ ಕತ್ತರಿಸಿದ ಹಸಿಮೆಣಸು ಸೇರಿಸಿ ಹುರಿದುಕೊಳ್ಳಿ.ಅದಕ್ಕೆ ಟೊಮೆಟೊ ಹಾಕಿ ಚನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಖಾರದ ಪುಡಿ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಮಿಕ್ಸಿಯಲ್ಲಿ ರುಬ್ಬಿಕೊಂಡ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದಕ್ಕೆ ಬೇಯಿಸಿಕೊಂಡ ಮಟನ್ ತುಂಡುಗಳನ್ನು ಸೇರಿಸಿ. ಮಟನ್ ತುಂಡಿನಲ್ಲಿ ನೀರು ಬಿಡುವವರೆಗೂ ಮಿಶ್ರಣ ಮಾಡಿ, ನಂತರ ಪಾತ್ರೆಯನ್ನು ಮುಚ್ಚಿ ಅದಕ್ಕೆ ಸೋಯಾ ಸಾಸ್ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ 2 ಚಮಚ ತುಪ್ಪ ಹಾಗೂ ಕರಿಬೇವು ಸೇರಿಸಿ ಮಿಶ್ರಣ ಮಾಡಿದರೆ ಮಟನ್ ಪೆಪ್ಪರ್ ಫ್ರೈ ರೆಡಿ ಆಗುತ್ತದೆ.
ಲೇಖಕರು: ಶಗುಪ್ತಾ ಅ ಶೇಖ
Share your comments