Krishi Jagran Kannada
Menu Close Menu

ಸ್ವಾದಿಷ್ಠ ಟೊಮ್ಯಾಟೋ ರೈಸ್ ಸಿಂಪಲ್ಲಾಗಿ ಮಾಡಿ

Saturday, 21 November 2020 06:40 AM

ಬಾಯಿಯಲ್ಲಿ ನೀರೂರಿಸುವ ಟೊಮೆಟೊ ರೈಸ್ ನ್ನು ರುಚಿಕರವಾಗಿ ಬೆಳಗಿನ ಜಾವದ ಉಪಹಾರಕ್ಕೆ ಸುಲಭವಾಗಿ ತಯಾರಿಸಬಹುದು. ನಾವು ವಿವಿಧ ರೀತಿಯ ತರಕಾರಿಗಳನ್ನು ಬಳಸಿಕೊಂಡು ಅನ್ನದಿಂದ ಹಲವು ಬಗೆಯ ತಿನಿಸನ್ನು ಬೆಳಗಿನ ಜಾವದ ಉಪಹಾರಕ್ಕೆ ಮಾಡಿಕೊಳ್ಳಬಹುದು. ಅದರಲ್ಲಿ ಟೊಮೆಟೊ ರೈಸ್ ಕೂಡ ಒಂದು! ಅಲ್ಲದೆ ನೀವು ಇದನ್ನು ಬೆಳಗಿನ ಉಪಹಾರಕ್ಕೆ ಮತ್ತು ಮಧ್ಯಾಹ್ನ ಊಟದ ಡಬ್ಬಿಗೆ ಕೂಡ ಹಾಕಿಕೊಳ್ಳಬಹುದು. ಕೇಳಕ್ಕೆ ತುಂಬಾ ಚೆನ್ನಾಗಿದೆ. ಅಡುಗೆ ಮಾಡುವುದು ಹೇಗೆ ಅಂದುಕೊಂಡಿದ್ದೀರಾ.  ನಿಮಗೆ ಅಡುಗೆ ಮಾಡಕ್ ಬರಲ್ವಾ ಹಾಗಾದ್ರೆ ಚಿಂತೆ ಮಾಡಬೇಡಿ.  ಅತ್ಯಂತ ಸರಳವಾಗಿ ಮಾಡೋಕ್ ಬರುವಂತಹ ಟೊಮ್ಯಾಟೊ ರೈಸ್ ಮಾಡೋಣವೇ. ಹಾಗಾದರೆ ಇನ್ನೇಕೆ ತಡ? ಬನ್ನಿ ಟೊಮೆಟೊ ರೈಸ್ ಮಾಡುವ ವಿಧಾನವನ್ನು ಪ್ರಯತ್ನಿಸಿ.

ಟೊಮ್ಯಾಟೊ ರೈಸ್ ಗೆ ಬೇಕಾಗುವ ಪದಾರ್ಥಗಳು:

ಈರುಳ್ಳಿ, ಟೊಮ್ಯಾಟೊ, ಅಲ್ಲಾ, ಬೆಳ್ಳುಳ್ಳಿ, ಜೀರಿಗೆ, ಸಾಸಿವೆ ಉದ್ದಿನಬೇಳೆ, ಕಡಲೆಬೇಳೆ, , ಕೆಂಪು ಕಾರ ಹಾಗೂ ಒಂದೆರಡಿ ಗ್ರೀನ್ ಚಿಲ್ಲಿ.

ತಯಾರಿಸುವ ವಿಧಾನ:

ಮೊದಲಿಗೆ ಕುಕ್ಕರ್ ನಲ್ಲಿ ಅನ್ನ ಮಾಡಿ ಒಂದು ದೊಡ್ಡ ಪರಾತಕ್ಕೆ ಹಾಕಿ ಅನ್ನವನ್ನು ಆರಿಸಿ. ಎರಡು ಟೊಮ್ಯಾಟೊಗಳನ್ನು ಮಿಕ್ಸರ್ ಗೆ ಹಾಕಿ ಟೊಮೆಟೊ ಸಾಸ್ ಅನ್ನು ರೆಡಿ ಮಾಡಿ ಇಟ್ಟುಕೊಳ್ಳಿ.

ಇದಾದ ನಂತರ  ಒಲೆಯ ಮೇಲೆ ಒಂದು ಡಬರಿಯನ್ನು ಇಟ್ಟು ಮೊದಲಿಗೆ ಎಣ್ಣೆಯನ್ನು ಹಾಕಿ, ಎಣ್ಣೆ ಚೆನ್ನಾಗಿ ಬಿಸಿಯಾದ ನಂತರ ಮೊದಲಿಗೆ ಕಡಲೆಬೇಳೆಯನ್ನು ಹಾಕಿ ಅದು ಅರ್ಧ ಬೆಂದ ನಂತರ ಇದಕ್ಕೆ ಉದ್ದಿನ ಬೇಳೆಯನ್ನು ಹಾಕಿ ಚೆನ್ನಾಗಿ ಕೆಂಪಾಗುವ ಹಾಗೆ ಫ್ರೈ  ಮಾಡಬೇಕು, ಮುಂದೆ  ಜೀರಿಗೆಯನ್ನು ಹಾಕಿ , ನಂತರ ಸಾಸಿವೆಯನ್ನು ಹಾಕಿ, ಇವು ಚೆನ್ನಾಗಿ ಕರಿದು  ಕೆಂಪಗಾದ ಮೇಲೆ ಅದಕ್ಕೆ ಅಲ್ಲಾ ಬಳ್ಳೊಳ್ಳಿ ಜಜ್ಜಿ ಮಾಡಿದಂತಹ ಪೇಸ್ಟನ್ನು ಹಾಕಿ, ಇದು ಹಾಕಿದ ತಕ್ಷಣ ಒಂದು ಒಳ್ಳೆಯ ಸುವಾಸನೆ ಬರುತ್ತದೆ, ಅವು ಸ್ವಲ್ಪ ಚೆನ್ನಾಗಿ ಕರೆದು ಕೆಂಪಗಾದ ನಂತರ ಇದಕ್ಕೆ ಹಸಿಮೆಣಸಿನಕಾಯಿಯನ್ನು ಹಾಕಿ, ನಂತರ ಅದನ್ನು ಚೆನ್ನಾಗಿ ಫ್ರೈ ಮಾಡಿಕೊಂಡು ಮುಂದೆ ಉಳ್ಳಾಗಡ್ಡಿ ಹಾಗೂ ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಇದಾದ ನಂತರ ಅದಕ್ಕೆ ಬೇಕಾದಷ್ಟು ಖಾರದ ಪುಡಿಯನ್ನು ಹಾಕಿಕೊಳ್ಳಬೇಕು ಇವೆಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದು ಚೆನ್ನಾಗಿ ಫ್ರೈ ಆದ ನಂತರ ನಾವು ಮೊದಲೇ ರೆಡಿ ಮಾಡಿಟ್ಟುಕೊಂಡು ಅಂತಹ ಟೊಮ್ಯಾಟೊ ಸಾಸ್ ಅನ್ನು ಹಾಕಿ ಅದನ್ನು ಎರಡು ನಿಮಿಷಗಳ ಕಾಲ ಬೇಯಿಸಬೇಕು.

ಈಗ ನಮ್ಮ ಟೊಮೆಟೊ ರೈಸ್ ಗೆ ಬೇಕಾದಂತಹ ಗೊಜ್ಜು ತಯಾರಾಗಿದೆ, ಆರಿದಂತ ಅನ್ನಕ್ಕೆ ಟೊಮ್ಯಾಟೊ ಗೊಜ್ಜನ್ನು ಹಾಕಿ ಕಲಿಸಿ ಮೇಲೆ ಸ್ವಲ್ಪ ಕೊತ್ತಂಬರಿಯನ್ನು  ಹಾಕಿದರೆ ರುಚಿಕರವಾದ ಟೊಮ್ಯಾಟೊ ರೈಸ್ ಸೇವಿಸಲು ರೆಡಿಯಾಗುತ್ತದೆ.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ

Tomato Rice Tasty tomato rice recipe Rice Tomato tasty tasty mouth watering tomato rice dish

Share your comments

Krishi Jagran Kannada Magazine Subscription Online SubscriptionKrishi Jagran Kannada Subscription

CopyRight - 2020 Krishi Jagran Media Group. All Rights Reserved.