1. ಇತರೆ

ಕೊತ್ತಂಬರಿ ಬೀಜದ ಪ್ರಯೋಜನಗಳ ಬಗ್ಗೆ ನಿಮಗೆ ಗೊತಿದೆಯೇ? ಇಲ್ಲಿವೆ ಇಂಟರೆಸ್ಟಿಂಗ್ ಸಂಗತಿಗಳು

Kalmesh T
Kalmesh T
Advantage of multi-purpose coriander seed

ಆರೋಗ್ಯದ ದೃಷ್ಟಿಯಲ್ಲಿ ಈಗಾಗಲೇ ಹೆಸರು ಮಾಡಿದ ಕೊತ್ತಂಬರಿ ಸೊಪ್ಪಿನಂತೆ ಅದರ ಬೀಜಗಳು ಕೂಡ ಬಹುಪಯೋಗಿ ಇವೆ ಗೊತ್ತಾ…

ಕೊತ್ತಂಬರಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕೊತ್ತಂಬರಿ ಸೊಪ್ಪು ರುಚಿಕರ ಪರಿಮಳ ಯುಕ್ತವಾಗಿದ್ದು ನಿತ್ಯದ ಅಡುಗೆಗಳಲ್ಲಿ ಸಾರು, ಚಟ್ನಿ ಮುಂತಾದವುಗಳಲ್ಲಿ ಬಳಸಲಾಗುತ್ತದೆ.

ಇದನ್ನೂ ಓದಿರಿ: ಹಿರೇಕಾಯಿ ಈ ರೋಗಗಳಿಗೆ ರಾಮಬಾಣವಿದ್ದಂತೆ..ಸಖತ್ತಾಗಿದೆ ಇದರ ಪ್ರಯೋಜನಗಳು

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?PM

ಕೊತ್ತಂಬರಿ ಬೀಜವನ್ನು ಭಾರತೀಯ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಸಾಂಬಾರು ಪದಾರ್ಥಗಳಲ್ಲಿ ಕೊತ್ತಂಬರಿ ಬೀಜ ಅಥವಾ ಕೊತ್ತಂಬರಿ ಪುಡಿಯನ್ನು ಬಳಸಲಾಗುತ್ತದೆ. ಅಲ್ಲದೆ, ಆಹಾರ (Food) ವನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಲಾಗುತ್ತದೆ.

ಕೊತ್ತಂಬರಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕೊತ್ತಂಬರಿ ಸೊಪ್ಪು (Coriander Leaves) ರುಚಿಕರ ಪರಿಮಳ (Smell) ಯುಕ್ತವಾಗಿದ್ದು ಸಾರು, ಚಟ್ನಿ ಮುಂತಾದ ಅಡುಗೆಗಳಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಬೀಜ ಕೂಡ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಉಪಯುಕ್ತ. ಪ್ರತಿದಿನ ಕೊತ್ತಂಬರಿ ನೀರನ್ನು ಕುಡಿಯುವುದು ಆರೋಗ್ಯ (Health) ಕ್ಕೆ ಸಹಕಾರಿಯಾಗಿದೆ.

ಸ್ವಲ್ಪ ಕೊತ್ತಂಬರಿ ಬೀಜ, ಜೀರಿಗೆ, ಶುಂಠಿಯನ್ನು ಪುಡಿ ಮಾಡಿ ಹಾಲಿನಲ್ಲಿ ಬೆರೆಸಿ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಸೇವಿಸಿದರೆ ಉತ್ತಮ ಆರೋಗ್ಯಕರ ಪಾನೀಯ ವಾಗುತ್ತದೆ.

Hair Care: ಕೂದಲು ದಟ್ವವಾಗಿ ಬೆಳೆಯಲು ಈ ಟಿಪ್ಸ್‌ ಫಾಲೋ ಮಾಡಿ

ಕೂದಲು ಉದುರುತ್ತಿದೆಯೇ..? ಹಾಗಾದ್ರೆ ಈ ಪದಾರ್ಥಗಳ ಜೊತೆ ಇಂದೇ ಟೂ ಬಿಟ್ಟು ಬಿಡಿ

ಕೊತ್ತಂಬರಿ ನೀರನ್ನು ಹೇಗೆ ತಯಾರಿಸುವುದು

ರಾತ್ರಿ 1 ಕಪ್ ಕುಡಿಯುವ ನೀರಿನಲ್ಲಿ 1 ಟೀಸ್ಪೂನ್ ಕೊತ್ತಂಬರಿ ಬೀಜಗಳನ್ನು ನೆನೆಸಿ. ಬೆಳಿಗ್ಗೆ ಈ ನೀರನ್ನು ಸೋಸಿಕೊಳ್ಳಿ. ಹೀಗೆ ಸೋಸಿಕೊಂಡ ನಂತರ ಆ ನೀರನ್ನು ಕುಡಿಯಬಹುದು. ನೆನೆಸಿದ ಬೀಜಗಳನ್ನು ಮತ್ತೆ ಒಣಗಿಸುವ ಮೂಲಕ ಅದನ್ನು ಮತ್ತೆ ಬಳಸಬಹುದು.

ಕೊತ್ತಂಬರಿ ಬೀಜವನ್ನು ನೀರಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಅದನ್ನು ಚೆನ್ನಾಗಿ ರುಬ್ಬಿ, ಸೋಸಿ, ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.

ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಆಗುವ ಲಾಭಗಳು

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ದೇಹದ ಫ್ರೀ ರಾಡಿಕಲ್ಸ್ ಗಳನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೆಳಿಗ್ಗೆ ಇದನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ.

ಕೊತ್ತಂಬರಿ ವಿಟಮಿನ್ ಕೆ, ಸಿ ಮತ್ತು ಎ ಯಿಂದ ಸಮೃದ್ಧವಾಗಿದೆ. ಇದು ಕೂದಲನ್ನು ಬಲಪಡಿಸಲು ಮತ್ತು ಬೆಳೆಯಲು ಸಹಾಯ ಮಾಡುತ್ತದೆ. ಕೊತ್ತಂಬರಿ ನೀರನ್ನು ಪ್ರತಿದಿನ ಸೇವಿಸಿದರೆ, ಅದು ಕೀಲು ನೋವನ್ನು ಕಡಿಮೆ ಮಾಡಬಹುದು.

ಒಂದು ಲೋಟ ಎಳನೀರಿಗೆ ಅರ್ಧ ಚಮಚ ಕೊತ್ತಂಬರಿ ಬೀಜದ ಪುಡಿ, ಸ್ವಲ್ಪ ಬೆಲ್ಲ ಸೇರಿಸಿ ಪ್ರತಿದಿನ ಸೇವಿಸಿದರೆ ಉರಿಮೂತ್ರ ರೋಗ ನಿವಾರಣೆಯಾಗುತ್ತದೆ. ಕೊತ್ತಂಬರಿ ಬೀಜ ಹಾಗೂ ಒಣ ಶುಂಠಿಯನ್ನು ಜಜ್ಜಿ ತಯಾರಿಸಿದ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

ಕೊತ್ತಂಬರಿ ಬೀಜದ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ಬಾಯಲ್ಲಿಟ್ಟುಕೊಂಡು ಚಪ್ಪರಿಸುತ್ತಿದ್ದರೆ, ಬಾಯಿ ಹುಣ್ಣು ನಿವಾರಣೆಯಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ ಧನಿಯ ಕಾಳು

ತೂಕ ಇಳಿಸಲು ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುವ ಹಾಗೂ ಕೊಬ್ಬನ್ನು ಬಳಸಿಕೊಳ್ಳುವ ಆಹಾರಗಳ ಅಗತ್ಯವಿದೆ. ಒಂದು ವೇಳೆ ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ಧನಿಯ ಕಾಳುಗಳು ನಿಮಗೆ ಸೂಕ್ತವಾದ ಆಹಾರವಾಗಲಿವೆ.

Plane crash : 133 ಜನರಿದ್ದ ವಿಮಾನ ಪತನ..ಹಲವರು ಮೃತಪಟ್ಟಿರುವ ಶಂಕೆ

ಲಾಭದಾಯಕ ವ್ಯಾಪಾರ ಆರಂಭಿಸಲು ಸರ್ಕಾರವೇ ಕೊಡ್ತಿದೆ ಸಾಲ.. ಮಿಸ್‌ ಮಾಡ್ದೆ ನೋಡಿ ಈ ನ್ಯೂಸ್‌

ಇದಕ್ಕಾಗಿ ಮೂರು ದೊಡ್ಡ ಚಮಚ ಧನಿಯ ಕಾಳುಗಳನ್ನು ಕನಿಷ್ಟ ಮೂರು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಬಳಿಕ ಒಂದು ದೊಡ್ಡ ಲೋಟ ನೀರಿನಲ್ಲಿ ಕುದಿಸಿ ನೀರು ಅರ್ಧದಷ್ಟಾದ ಬಳಿಕ ಉರಿ ಆರಿಸಿ ಈ ನೀರನ್ನು ಸೋಸಬೇಕು.

ಈ ನೀರಿನ ಪ್ರತಿ ಅರ್ಧಭಾಗವನ್ನು ಬೆಳಿಗ್ಗೆ ಪ್ರಥಮ ಆಹಾರ ಹಾಗೂ ರಾತ್ರಿಯ ಅಂತಿಮ ಆಹಾರವಾಗಿ ಸೇವಿಸಬೇಕು. ಈ ಮೂಲಕ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವುದು ಮಾತ್ರವಲ್ಲದೇ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಹಾಗೂ ತೂಕವಿಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಫಲ ಸಿಗುತ್ತದೆ.

Published On: 23 May 2022, 10:27 AM English Summary: Advantage of multi-purpose coriander seed

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.