1. ಪಶುಸಂಗೋಪನೆ

ಹೈನುಗಾರಿಕೆ ಮಾಡಿ ಕೈತುಂಬ ಹಣ ಪಡೆಯಿರಿ! ಹಾಲಿನ ಉತ್ಪನ್ನಗಳಿಂದ ಲಾಭದಾಯಕ ಹೈನುಗಾರಿಕೆ ಮಾಡಲು ಇಲ್ಲಿದೆ ಟಿಪ್ಸ್…

Kalmesh T
Kalmesh T
Make a small farm and get some money!

ಕೃಷಿಯಲ್ಲಿ ಹೈನುಗಾರಿಕೆಯ ಪಾತ್ರ ದೊಡ್ಡದು. ಇದು ರೈತರಿಗೆ ನಿತ್ಯದ ಖರ್ಚು ವೆಚ್ಚ ಸರಿದೂಗಿಸಲು ಅನುಕೂಲವಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಮಾಡಿದರೆ ಕೈತುಂಬ ಹಣ ಕೂಡ ಗಳಿಸಬಹುದು.

ಇದನ್ನೂ ಓದಿರಿ:

ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!

ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ

ಕೃಷಿ ಕ್ಷೇತ್ರದಲ್ಲಿ ರೈತರು ಸದಾ ದೀರ್ಘ ಆದಾಯದ ಮೇಲೆ ಅವಲಂಬಿಸಿರುತ್ತಾರೆ. ಇದರಲ್ಲಿ ಆಗಾಗ ಒಂದಷ್ಟು ಕೈಯಲ್ಲಿ ದುಡ್ಡು ಓಡಾಡಬೇಕು ಎನ್ನುವ ಜಾಣ ರೈತ ಮಾತ್ರ ಕೃಷಿಯೊಟ್ಟಿಗೆ ಹೈನುಗಾರಿಕೆಯನ್ನು ತಪ್ಪದೇ ಮಾಡುತ್ತಾನೆ. ಅಂತಹ ಹೈನುಗಾರಿಕೆಯನ್ನು ಸರಿಯಾದ ಉಪಾಯದ ಮೂಲಕ ಕೈಗೊಂಡರೆ ಪೂರ್ಣ ಪ್ರಮಾಣದ ಉದ್ಯೋಗವಾಗಿಸಿಕೊಂಡು ಸಾಕಷ್ಟು ಆದಾಯ ಕೂಡ ಪಡೆಯಬಹುದು.

ಲಾಭದಾಯಕ ಹೈನುಗಾರಿಕೆ

ಹೌದು ಹೈನುಗಾರಿಕೆಯನ್ನು ಸರಿಯಾದ ಮಾಹಿತಿ ಮತ್ತು ಯೋಜನೆಯೊಂದಿಗೆ ಆರಂಭಿಸಿದರೆ ಇದರಷ್ಟು ಆದಾಯಕರ ಉದ್ಯೋಗ ಮತ್ತೊಂದಿಲ್ಲ. ಪ್ರತಿಯೊಬ್ಬರು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವುದರಿಂದ ಇದು ನಿತ್ಯದ ಸರಕು ಆಮದು ಮತ್ತು ಪೂರೈಕೆಯಲ್ಲಿ ಬೇಡಿಕೆಯನ್ನು ಕಾಯ್ದುಕೊಂಡಿದೆ.

ಉತ್ತಮ ರಾಸುಗಳು ಆಯ್ಕೆ

ಹೈನುಗಾರಿಕೆ ಮಾಡುವಾಗ ಮೊದಲು ತಲೆಯಲ್ಲಿ ಇರಬೇಕಾದ ಅಂಶವೆಂದರೆ ಸರಿಯಾದ ಉತ್ತಮ ತಖಳಿಯ ರಾಸುವಿನ ಆಯ್ಕೆ. ಉತ್ತಮ ತಳಿಯ ಆರೋಗ್ಯಕರ ಹಸುವನ್ನು ಕೊಳ್ಳುವುದು ಬಹಳ ಮುಖ್ಯ. ರೆತರು ಇದರ ಮೇಲೆ ಹೆಚ್ಚು ಗಮನ ಹರಿಸಬೇಕು. ಆಗ ಮಾತ್ರ ಹೆನುಗಾರಿಕೆ ಲಾಭ ತರುತ್ತದೆ. ರೆತರು ತಮ್ಮ ಆರ್ಥಿಕ ಸ್ವಾವಲಂಬನೆಗಾಗಿ ಹೈನುಗಾರಿಕೆಯನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಇದರಲ್ಲಿ ಹೆಚ್ಚಿನ ಲಾಭಗಳಿಸಲು ರಾಸುಗಳ ಆಯ್ಕೆ ಬಹಳ ಮುಖ್ಯವಾದುದ್ದು.ಗಿರ್‌, ಜೆರ್ಸಿ, ಎಚ್‌ಎಫ್ ಮುಂತಾದ ಉತ್ತಮ ತಳಿಗಳ ರೋಗಹರಿತ ಹಸುಗಳನ್ನು ಆಯ್ಕೆ ಮಾಡಿಕೊಂಡು ಹೈನುಗಾರಿಕೆ ಮುಂದಾಗಬೇಕು.

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

Central Government Scheme! Pashu kisan credit card scheme! ನಿಂದ ನಿಮಗೆ ಪಶುಸಂಗೋಪನೆಗಾಗಿ 60,000 ರೂಪಾಯಿ ನೀಡಲಾಗುತ್ತೆ!

ಮೇವು ಉತ್ಪಾದನೆ

ಸದಾ ಹೊರಗಿನ ಮೇವು ಕೊಂಡು ಅದರಿಂದ ಹೆಚ್ಚು ಖರ್ಚನ್ನು ಮೇ ಮೇಲೆ ಎಲೆದುಕೊಳ್ಳುವ ಬದಲು ರೈತರು ಸ್ವಯಂ ಮೇವಿನ ತಯಾರಿಕೆಯನ್ನು ರೂಢಿಸಿಕೊಳ್ಳಬೇಕು. ಈಗ ಬಹಳಷ್ಟು ಮೇವು ತಯಾರಿಕೆ ಸಂಶೋಧನೆಯಿಂದ ಹಲವಾರು ರೀತಿಯಲ್ಲಿ ಮೇವಿನ ಉತ್ಪಾದನೆಯನ್ನು ಮಾಡಬಹುದು.

ಶುಚಿತ್ವ ಮತ್ತು ಆರೋಗ್ಯದ ಕಾಳಜಿ

ಹೌದು, ಹೈನುಗಾರಿಕೆಯಲ್ಲಿ ಶುಚಿತ್ವ ಮತ್ತು ರಾಸಸುಗಳ ಕಾಳಜಿ ಬಹಳ ಮುಖ್ಯವಾಗುತ್ತದೆ. ಜೊತೆಗೆ ಹೈನುಗಾರಿಕೆಯಲ್ಲಿ ವೆಜ್ಞಾನಿಕ ನಿರ್ವಹಣೆ ಅತಿಮುಖ್ಯ. ರಾಸುಗಳ ಪಾಲನೆಯಲ್ಲಿ ವೆಜ್ಞಾನಿಕತೆಯನ್ನು ಅಳಡಿಸಿಕೊಳ್ಳಬೇಕು. ಆಧುನಿಕತೆಯನ್ನು ಹೆನುಗಾರಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಮೇವು ಕಟಾವು ಯಂತ್ರಬಳಕೆ, ಕೊಟ್ಟಿಗೆಯನ್ನು ಶುಚಿಯಾಗಿಟ್ಟಿಕೊಳ್ಳ ಬೇಕು.

ಕಾಲುಬಾಯಿ ಮತ್ತು ಕೆಚ್ಚಲು ಬಾವು ಮುಂತಾದ ಸಾಂಕ್ರಾಮಿಕ ರೋಗಗಳಿಗೆ ಮುಂಜಾಗ್ರತಾ ಚುಚ್ಚುಮದ್ದುಗಳನ್ನು ಕೊಡಿಸುವುದು ಇತ್ಯಾದಿ ನಿಯಮಗಳನ್ನು ಪಾಲಿಸುವುದರ ಮೂಲಕ ಹೈನುಗಾರಿಕೆಯಲ್ಲಿ ನಷ್ಟ ಉಂಟಾಗದಂತೆ ರೈತರು ತಡೆಯಬಹುದು ಅಲ್ಲದೆ ಉತ್ತಮ ಲಾಭಗಳಿಸಲು ಸಾಧ್ಯವಾಗುತ್ತದೆ.

ಹರಧೇನು ತಳಿಯ ಹಸು 50 ರಿಂದ 55 ಲೀಟರ್ ಹಾಲು ನೀಡುತ್ತದೆ!

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

ಮಾರುಕಟ್ಟೆಯ ಕುರಿತು ಸಾಕಷ್ಟು ಮಾಹಿತಿ

ಹೌದು  ರೈತರು ಸ್ವಯಂ ಮಾರುಕಟ್ಟೆಯ ಕುರಿತು ತಿಳಿದುಕೊಂಡು ತಮ್ಮ ಉತ್ಪನ್ನಗಳು ಯಾವ ಭಾಗದಲ್ಲಿ ಹೆಚ್ಚು ಬೆಲೆಯನ್ನು ಹೊಂದಿವೆ ಎಂಬುದನ್ನು ತಿಳಿದುಕೊಳ್ಳಬೇಕು.

ಸ್ವಂತ ಉತ್ಪನ್ನಗಳ ತಯಾರಿಕೆ

ರೈತರು ಕೇವಲ ಹಾಲು ಉತ್ಪಾದನೆ ಮಾಡಿ ಡೈರಿಗೆ ಹಾಕುವ ಬದಲು ಡೈರಿ ಉತ್ಪನ್ನಗಳನ್ನು ಮಾಡುವ ಮೂಲಕವೂ ಹೆಚ್ಚಿನ ಆದಾಯವನ್ನು ಪಡೆಯಬಹುದು. ಈಗ ಸಾಕಷ್ಟು ಅವಕಾಶಗಳಿವೆ. ಆನ್‌ಲೈನ್‌ ಮಾರುಕಟ್ಟೆಗಳ ಮೂಲಕ ತಾವು ಉತ್ಪಾದಿಸುವ ಹಾಲಿನ ಉತ್ಪನ್ನಗಳನ್ನ ಸರಿಯಾದ ಬೆಲೆಗೆ ನೇರವಾಗಿ ಗ್ರಾಹಕರಿಗೆ ಕೂಡ ತಲುಪಿಸಬಹುದು.

ಹೀಗೆ ಹಲವಾರು ರೀತಿಯಲ್ಲಿ ಸ್ವಂತ ಯೋಚನೆ ಮತ್ತು ಗಟ್ಟಿ ನಿರ್ಧಾರದ ಮೂಲಕ ರೈತ ಮನಸ್ಸು ಮಾಡಿದರೆ ಅವರಿಂದ ಆಗದ ಕೆಲಸ ಯಾವುದು ಇಲ್ಲ.

ಕುರಿ, ಮೇಕೆ ಸಾಕಾಣಿಕೆದಾರರಿಗೆ ಭೀತಿ ಹುಟ್ಟಿಸಿದ ಹಿರೇಬೇನೆ..ಈ ರೋಗದ ತಡೆಗಟ್ಟುವಿಕೆ ಹೇಗೆ..?

ಹೈನುಗಾರಿಕೆಯಲ್ಲಿ ಹೆಚ್ಚಿನ ಹಾಲು ಉತ್ಪಾದನೆಗೆ ಹೀಗೆ ಮಾಡಿ…

Published On: 09 May 2022, 10:20 AM English Summary: Make a small farm and get some money!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.