ಇತ್ತೀಚೆಗೆ ಪ್ರಾಣಿಗಳಲ್ಲಿ ಚರ್ಮ ಗಂಟು ರೋಗ ದೊಡ್ಡ ಸಮಸ್ಯೆಯಾಗಿದೆ. ಬಹಳ ದಿನಗಳ ಕಾಲ ನೋವಿನಿಂದ ಬಳಲುತ್ತವೆ. ಇದರಿಂದಾಗಿ ಹಲವಾರು ಪ್ರಾಣಿಗಳು ಸಾವನ್ನಪ್ಪುತ್ತವೆ.
ಇದರಿಂದಾಗಿ ತಾವು ಪಶುವೈದ್ಯರಿಗೆ ಮೊರೆ ಹೋಗಬೇಕಾಗುತ್ತದೆ. ಈ ಚರ್ಮಗಂಟು ರೋಗವನ್ನು ಸಾವಯವ ರೀತಿಯಲ್ಲಿಯೂ ಗುಣಪಡಿಸಬಹುದು. ಹೌದು ಮನೆಯಲ್ಲಿಯೇ ಸಾವಯವ ಔಷಧ ತಯಾರಿಸಿ ಚರ್ಮ ಗಂಟು ರೋಗವನ್ನು ಹೋಗಲಾಡಿಸಬಹುದು.
ಇದು ಪ್ರಾಚೀನ ಕಾಲದಿಂದ ಬಂದ ವ್ಯವಸ್ಥೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಪಶುವೈದ್ಯರು ಬಂದಿರುವ ಕಾರಣ ಇವುಗಳನ್ನು ಜನರು ಮರೆಯುತ್ತಾ ಹೋಗುತ್ತಿದ್ದಾರೆ. ಹಾಗಿದ್ದರೆ ಬನ್ನಿ ನೋಡೋಣ ಏನು ಅಂತ??
ತಯಾರಿಕೆ ಮತ್ತು ಚಿಕಿತ್ಸೆ ವಿಧಾನ:
*ಮೆಣಸು 10 ಗ್ರಾಂ, ಬೆಲ್ಲ 50 ಗ್ರಾಂ, ವಿಳ್ಳೆದೆಲೆ 10 ಎಲ್ಲ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿ ದಿನಕ್ಕೆ ಎರಡು ಬಾರಿ ರಾಸುಗಳಿಗೆ ಅಥವಾ ಈ ಚರ್ಮ ರೋಗ ಬಂದಿರುವ ಪ್ರಾಣಿಗಳಿಗೆ ತಿನ್ನಿಸಬೇಕು.
* ನಂತರ 10 ಗ್ರಾಂ ಅರಶಿನ, ಬೆಳ್ಳುಳ್ಳಿ ಹತ್ತು ಎಸಳು( 10 ಪಳಕ ),ಬೇವಿನ ಸೊಪ್ಪು ಒಂದು ಹಿಡಿ, ಮೆಹಂದಿ ಸೊಪ್ಪು ಒಂದು ಹಿಡಿ,ತುಳಸಿ ಸೊಪ್ಪು ಒಂದು ಹಿಡಿ,ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿ 250ml ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯೊಂದಿಗೆ,ಬೆರೆಸಿ ಕುದಿಸಿ ನಂತರ ಅದನ್ನು ಆರಿಸಿ,ದಿನಕ್ಕೆ 3 ಬಾರಿ ಗಾಯವಾದ ಸ್ಥಳದಲ್ಲಿ ಹಚ್ಚಬೇಕು. ಇದನ್ನು ಗಾಯ ವಾಸಿ ಆಗುವರೆಗೂ ಹಚ್ಚಬೇಕು. ನಂತರ ಚರ್ಮಗಂಟು ರೋಗ ನಿಧಾನವಾಗಿ ಮಾಯವಾಗುತ್ತದೆ.
ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ
Share your comments