1. ಪಶುಸಂಗೋಪನೆ

ಕಲ್ಬುರ್ಗಿ: ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ

Maltesh
Maltesh
goat and sheep farming training at kalaburagi

ಕಲ್ಬುರ್ಗಿ: ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ ಕಲಬುರಗಿ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿ, ಇದೇ ಏಪ್ರಿಲ್ 10 ರಿಂದ ಏಪ್ರಿಲ್ 19 ರವರೆಗೆ ಹತ್ತು ದಿನಗಳ ಕಾಲ ಉಚಿತವಾಗಿ  ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಎಸ್.ಬಿ.ಐ. ಆರ್‍ಸೆಟ್ ನಿರ್ದೇಶಕರು ತಿಳಿಸಿದ್ದಾರೆ.

ಈ ತರಬೇತಿ ಸಂದರ್ಭದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ಕನಿಷ್ಠ ವಯೋಮಿತಿ 18 ರಿಂದ 45 ವರ್ಷದೊಳಗಿನ ಬಿ.ಪಿ.ಎಲ್., ಅಂತ್ಯೋದಯ ರೇಷನ್, ಎಮ್‍ಜಿಎನ್‍ಆರ್‍ಇಜಿಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ 2023ರ ಏಪ್ರಿಲ್ 8 ರೊಳಗಾಗಿ  ಅರ್ಜಿ ಸಲ್ಲಿಸಬೇಕು.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂ ನಗದು ಸೀಜ್!

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತರಬೇತಿ ಸಂಸ್ಥೆಯಲ್ಲಿ  ಇದೇ ಏಪ್ರಿಲ್ 8ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.30 ಗಂಟೆಯವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9448994585, 9886781239 ಹಾಗೂ 9900135705ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಅಕ್ರಮ ನಳದ ಸಂಪರ್ಕವನ್ನು ಸಕ್ರಮಗೊಳಿಸಲು ಮೇ 31 ರವರೆಗೆ ಕಾಲಾವಧಿ
ಕಲಬುರಗಿ ನಗರಕ್ಕೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರಿನ ನಳ ಸಂಪರ್ಕಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಇರುವ ನಳ ಸಂಪರ್ಕವನ್ನು ಉಚಿತವಾಗಿ ಸಕ್ರಮಗೊಳಿಸಲು ನಗರದ ಸಾರ್ವಜನಿಕರಿಗೆ 2023ರ ಮೇ 31 ರವರೆಗೆ ಅವಧಿ ನೀಡಲಾಗಿದ್ದು,  ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ಕುಸ್ಸೆಂಪ್-ಕೆಯುಐಡಿಎಫ್‍ಸಿ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

ಸರ್ಕಾರಿ ನೌಕರರಿಂದ ಬೈಕ್ Rally : ಬುಲೆಟ್  ಓಡಿಸಿ ಮತದಾರರಲ್ಲಿ ಜಾಗೃತಿ ಮೂಡಿಸಿದ ಡಿ.ಸಿ.

ಸಾರ್ವಜನಿಕರು 2023ರ ಮೇ 31 ರೊಳಗಾಗಿ ನಳಗಳ ಸಂಪರ್ಕವನ್ನು ಸಕ್ರಮಗೊಳಿಸದೇ ಇದ್ದಲ್ಲಿ ಅಂತಹ ನಳಗಳಿಗೆ ಆರು ತಿಂಗಳ  ಅವಧಿಯವರೆಗೆ 5,000 ರೂ. ಗಳ ದಂಡವನ್ನು ತದನಂತರ 10,000 ರೂ.ಗಳ ದಂಡವನ್ನು ನಿಗದಿತ ನಳ ಸಂಪರ್ಕದ ಶುಲ್ಕದೊಂದಿಗೆ ವಿಧಿಸಲಾಗುತ್ತದೆ. ಈ ಅವಧಿ ಮೀರಿದ ನಂತರ ದಂಡವನ್ನು ವಿಧಿಸುವ ಜೊತೆಗೆ ನಳದ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Published On: 06 April 2023, 03:51 PM English Summary: goat and sheep farming training at kalaburagi

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.