1. ಪಶುಸಂಗೋಪನೆ

ಕೃಷಿ ಹೊಂಡಗಳಲ್ಲಿ ಮೀನು ಸಾಕಿದರೆ ವಾರ್ಷಿಕ ಸುಮಾರು 2 ಲಕ್ಷ ರೂಪಾಯಿ ಆದಾಯಗಳಿಸಬಹುದು- ಡಾ. ವಿಜಯಕುಮಾರ್ ಎಸ್

ಕೃಷಿ ಹೊಂಡಗಳೆAದರೆ ರೈತರ ಪಾಲಿಗೆ ಓಯಸಿಸ್‌ಗಳಿದ್ದಂತೆ. ಕಡಿಮೆ ಮಳೆ ಬೀಳುವ ಪ್ರದೇಶಗಳು, ಅಂತರ್ಜಲ ಪಾತಾಳಕ್ಕೆ ಸರಿದಿರುವ ಭೂಮಿ ಹಾಗೂ ಮಳೆಯಾಶ್ರಿತ ಕೃಷಿ ಪದ್ಧತಿಯನ್ನು ಅನುಸರಿಸುವ ಪ್ರದೇಶಗಳಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿರುವ ಲಕ್ಷಾಂತರ ರೈತರು ಇಂದು ತಮಗೆ ಲಭ್ಯವಿರುವ ಅತ್ಯಲ್ಪ ನೀರು ಬಳಸಿಕೊಂಡು ಬರದ ನಾಡಿನಲ್ಲೂ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ.

ಆದರೆ, ಕೃಷಿ ಹೊಂಡಗಳೆAದರೆ ನೀರು ಸಂಗ್ರಹಿಸಿ, ಆ ನೀರನ್ನು ವಿವಿಧ ಬೆಳೆಗಳಿಗೆ ಹರಿಸಿ ಬೆಳೆ ಬೆಳೆಯುವುದಕ್ಕೆ ಮಾತ್ರ ಸೀಮಿತ ಎಂಬುದು ಬಹುತೇಕ ರೈತರ ಅನಿಸಿಕೆ. ಅಲ್ಲದೆ ಬಯಲುಸೀಮೆಯ ಜಿಲ್ಲೆಗಳಲ್ಲಿ ಈಗಲೂ ಕೃಷಿ ಹೊಂಡಗಳು ಈ ಕೆಲಸಕ್ಕಷ್ಟೇ ಮೀಸಲಾಗಿವೆ. ಆದರೆ ಮಲೆನಾಡು, ಕರಾವಳಿ ಭಾಗದಲ್ಲಿ ಕೃಷಿ ಹೊಂಡಗಳನ್ನು ಮೀನು ಸಾಕುವ ಉದ್ದೇಶಕ್ಕೂ ಬಳಸಲಾಗುತ್ತಿದೆ. ಈ ಮಲಕ ಅಲ್ಲಿನ ಕೃಷಿಕರು ನೀರು ಸಂಗ್ರಹಿಸುವ ಮೂಲವಾಗಿರುವ ಕೃಷಿ ಹೊಂಡದಿAದ ಆದಾಯವನ್ನೂ ಪಡೆಯುತ್ತಿದ್ದಾರೆ.

ಹೀಗೆ ಕೃಷಿ ಹೊಂಡದಲ್ಲಿ ಮೀನು ಸಾಕಣೆ ಮಾಡುವುದು ಮತ್ತು ಅದರಿಂದ ಇರುವ ಲಾಭಗಳ ಕುರಿತು ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮತ್ತು ಸುಸ್ಥಿರ ಮೀನುಗಾರಿಕೆಗೆ ಪರಿಸರ ವ್ಯವಸ್ಥೆಯ ನಿರ್ವಹಣೆ’ ವಿಷಯವಾಗಿ ಜೂನ್ 30ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಭಾರತದ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ, ವಿಜಯಪುರದ ಭೂತನಾಳ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಈ ಕಾರ್ಯಾಗಾರದಲ್ಲಿ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಸಹ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಡಾ. ವಿಜಯಕುಮಾರ್ ಎಸ್. ಮತ್ತು ಡಾ. ವಿಜಯಕುಮಾರ್ ಅತ್ನೂರ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಡಾ. ರಕ್ಷಿತ್ ರಾಜ್ ಯು.ಎಂ. ಅವರು ತರಬೇತಿ ಸಂಯೋಜಕರಾಗಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಡಾ.ರಕ್ಷಿತ್ ರಾಜ್ ಅವರು, ಮೈಸೂರು ಜಿಲ್ಲೆಯಲ್ಲಿ ವಾರ್ಷಿಕ ಸುಮಾರು 700-800 ಮಿ.ಮೀ. ಮಳೆಯಾಗುತ್ತದೆ. ಈಲ್ಲೆಯಲ್ಲಿ ಕಾವೇರಿ ಹಾಗೂ ಕಬಿನಿಯಂತಹ ನದಿಗಳು ಸಮೃದ್ಧವಾಗಿ ಹರಿಯುವುದರಿಂದ ನೀರಾವರಿ ಸೌಲಭ್ಯ ಹಆಗೂ ಅಂತರ್ಜಲಕ್ಕೆ ಕೊರತೆಯಿಲ್ಲ. ಹೀಗಾಗಿ, ಪಂಪ್ ಸೆಟ್‌ಗನ್ನು ಹೊಂದಿರುವ ರೈತರು, ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡರೆ ಮಳೆಯ ಮೇಲಿನ ಅವಲಂಬನೆ ತಪ್ಪಿಸಬಹುದು. ಅಲ್ಲದೆ, ಇರುವ ಅಲ್ಪ ಪ್ರಮಾಣದ ನೀರಿನಲ್ಲೇ ಬೆಳೆಗಳಿಗೆ ನೀರು ಒದಗಿಸಿ ಉತ್ತಮ ಇಳುವರಿ ಪಡೆಯಬಹುದು. ಮಳೆ ನೀರು ಶೇಖರಣೆ ಮಾಡುವ ಜೊತೆ ಜೊತೆಗೆ, ಕೃಷಿ ಹೊಂಡಗಳಲ್ಲಿ ಮೀನು ಸಾಕಣೆ ಮಾಡುವುದರಿಂದ ಹೆಚ್ಚಿನ ಆದಾಯವನ್ನು ಸಹ ಗಳಿಸಬಹುದು ಎಂದು ತಿಳಿಸಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ವಿಜಯಕುಮಾರ್ ಎಸ್. ಅವರು, ಮೀನುಗಳ ಪ್ರಾಮುಖ್ಯತೆ, ಮೀನು ಕೃಷಿ ನಡೆದುಬಂದ ಹಾದಿ, ಮೀನುಗಳನ್ನು ಆಹಾರವಾಗಿ ಸೇವಿಸುವುದರಿಂದÀ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ತಿಳಿಸಿದರು. ಇದರೊಂದಿಗೆ, ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡುವುದು ಹೇಗೆ, ಯಾವ ಯಾವ ಮೀನು ತಳಿಗಳನ್ನು ಸಾಕಾಣಿಕೆ ಮಾಡಬೇಕು, ಅವುಗಳ ಆಹಾರ ಪದ್ಧತಿ ಮತ್ತು ಆರ್ಥಿಕ ಖರ್ಚು-ವೆಚ್ಚ ಎಷ್ಟಾಗುತ್ತದೆ ಎಂಬ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಒಂದು ಎಕರೆ ಜಮೀನಿನಲ್ಲಿ ಸುಮಾರು 4 ಸಾವಿರದಿಂದ 5 ಸಾವಿರ ಮೀನುಗಳನ್ನು ಸಾಕಬಹುದು. ಅವುಗಳು ಒಂದು ವರ್ಷಕ್ಕೆ ಸರಿ ಸುಮಾರು ಒಂದು ಕೆಜಿಯಷ್ಟು ತೂಕಕ್ಕೆ ಬರುತ್ತವೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಮೀನನ್ನು 100 ರೂ.ಗಳಂತೆ ಮಾರಿದರೆ ಒಂದು ಎಕರೆಗೆ ಖರ್ಚು ವೆಚ್ಚ ಕಳೆದು ಎರಡರಿಂದ ಎರಡೂವರೆ ಲಕ್ಷ ರೂಪಾಯಿ ಗಳಿಸಬಹುದು ಎಂದು ರೈತರಿಗೆ ಅರಿವು ಮೂಡಿಸಿದರು.

ರೈತರು ಇಲ್ಲಿ ಅರಿತುಕೊಳ್ಳಬೇಕಾಗಿರುವ ಅಂಶವೇನೆAದರೆ, ತರಕಾರಿ ಬೆಳೆಯುವ ರೈತರು ಬೆಲೆ ಸಿಗದಿದ್ದಾಗ ತತರಕಾರಿಗಳನ್ನು ರಸ್ತೆಗೆ ಸುರಿದ ಉದಾಹರಣೆಗಳಿವೆ. ಆದರೆ, ಯಾವ ಸಂದರ್ಭ ಅಥವಾ ಕಾಲದಲ್ಲೂ ಮೀನುಗಳನ್ನು ರಸ್ತೆಗೆ ಚೆಲ್ಲಿದ ನಿದರ್ಶನಗಳಿಲ್ಲ. ಅಲ್ಲದೆ ಮೀನುಗಾರರು ಪ್ರತಿಭಟನೆ ನಡೆಸಿಲ್ಲ. ಮೀನುಗಳಿಗೆ ಮಾರುಕಟ್ಟೆಯಲ್ಲಿ ಬಹಳಷ್ಟು  ಬೇಡಿಕೆಯಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಯಾವುದಕ್ಕೆ ಹೆಚ್ಚು ಬೇಡಿಕೆ ಮತ್ತು ಉತ್ತಮ ಬೆಲೆ ಇದೆ ಎಂಬುದನ್ನು ರೈತರು ಅರಿತು, ಅದನ್ನು ಬೆಳೆಸಿ, ಗ್ರಾಹಕರಿಗೆ ಪೂರೈಕೆ ಮಾಡುವ ಮೂಲಕ ಹೆಚ್ಚು ಲಾಭಗಳಿಸಬೇಕು. ಆ ಮೂಲಕ ಸುಸ್ಥಿರ ಕೃಷಿಗೆ ದಾರಿ ಮಾಡಿಕೊಡಬೇಕು ಎಂದು ಡಾ. ವಿಜಯಕುಮಾರ್ ಎಸ್. ಅವರು ರೈತರಲ್ಲಿ ಮನವಿ ಮಾಡಿದರು.

ಮೀನುಗಳಲ್ಲಿ ಬರುವಂತಹ ಬ್ಯಾಕ್ಟಿರೀಯ, ವೈರಸ್, ಫಂಗಸ್ ಮತ್ತು ಪ್ರೊಟೊಜೋಯ ಕಾಯಿಲೆಗಳು ಮತ್ತು ಅವುಗಳ ಹತೋಟಿ ಕ್ರಮಗಳ ಬಗ್ಗೆ ಡಾ.ವಿಜಯ್‌ಕುಮಾರ್ ಅತ್ನೂರ್ ಅವರು ವಿವರಿಸಿದರು.

ಗೂಗಲ್ ಮೀಟ್ ವೇದಿಕೆಯಲ್ಲಿ ನಡೆದ ವೆಬಿನಾರ್‌ನಲ್ಲಿ ಸುಮಾರು 25ಕ್ಕೂ ಅಧಿಕ ಆಸಕ್ತರು ಪಾಲ್ಗೊಂಡಿದ್ದರು. ಪ್ರಶ್ನೋತ್ತರ ಸಮಯದಲ್ಲಿ ರೈತರು ಕೇಳಿದ ಅನೇಕ ಪ್ರಶ್ನೆಗಳಿಗೆ ಸೂಕ್ತ ಸಮಾಧಾನ ಹಾಗೂ ಸಮಸ್ಯೆಗಳಿಗೆ ತಕ್ಕ ಪರಿಹಾರಗಳನ್ನು ತಜ್ಞರು  ನೀಡಿದರು. ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾಗಿರುವ ಎಚ್.ವಿ. ದಿವ್ಯಾ, ವಿಜ್ಞಾನಿಗಳಾದ ಶಾಮರಾಜ್, ನೇತ್ರಾವತಿ ಎತ್ತಿನಮನಿ, ಡಾ. ವಿನಯ್ ಜಿ.ಎಂ., ರಾಜಣ್ಣ, ಸುಂದರರಾಜು, ಗಂಗಪ್ಪ ಹಿಪ್ಪರಗಿ, ಕುಮಾರಸ್ವಾಮಿ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.

Published On: 30 June 2021, 10:57 PM English Summary: fishery in farm pond gives more income

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.