1. ಪಶುಸಂಗೋಪನೆ

ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ಪಶು ಆಹಾರ ತಯಾರಿಕಾ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ

Animal Husbandry

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ಪಶು ಸಂಗೋಪನಾ ವಲಯದ ಪಶುಪಾಲನಾ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಪಶು ಸಂಗೋಪನಾ ಪೂರಕ ಚಟುವಟಿಕೆಗಳ ಉದ್ಯಮ ಆರಂಭಿಸಲು (animal feed plant loan) ಹಾಸನ ಜಿಲ್ಲೆಯ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಡೈರಿ ಉತ್ಪನ್ನಗಳ ಸಂಸ್ಕರಣೆ ಮತ್ತು ಉತ್ಕೃಷ್ಟ ಡೈರಿ ಪದಾರ್ಥಗಳ ಉತ್ಪಾದನೆ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆ, ಮಾಂಸದ ಉತ್ಪಾದನೆ, ಮಾಂಸದ ಸಂಸ್ಕರಣೆ ಮತ್ತು ಮಾಂಸ ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ಪಶು ಆಹಾರ ತಯಾರಿಕಾ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಸಾರ್ವಜನಿಕ ಸಹಭಾಗಿತ್ವದಲ್ಲಿ ಉದ್ಯಮಗಳು ಆರಂಭಿಸಲು ಅವಕಾಶವಿದ್ದು, ಜಿಲ್ಲೆಯಲ್ಲಿ 30 ಜನರಿಗೆ ಅವಕಾಶಗಳಿವೆ. ಈಗಾಗಲೇ ಘಟಕಗಳ ಸ್ಥಾಪಿಸಿದ್ದರೆ ವಿಸ್ತರಣೆಗೂ ಅವಕಾಶವಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ಒದಗಿಸಲಾಗುವುದು. ಬ್ಯಾಂಕ್‍ಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ಕುರಿತಂತೆ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು ಅಥವಾ ಆಯಾ ತಾಲೂಕಾ ಸಹಾಯಕ ನಿರ್ದೇಶಕರಿಗೆ ಸಂಪರ್ಕಿಸಲು ಉಪನಿರ್ದೇಶಕ ಡಾ.ರಾಜೀವ ಎನ್.ಕೂಲೇರ ಅವರು ಕೋರಿದ್ದಾರೆ.

ಉಪನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಹಾವೇರಿ ದೂ.ಸಂ.08375-249038/7760627272, ಸಹಾಯಕ ನಿರ್ದೇಶಕ ಕಚೇರಿ, ಪಶು ಆಸ್ಪತ್ರೆ ದೂ.08375-232033 ಮೊ.9480667062(ಹಾವೇರಿ), ದೂ.08379-262413/ಮೊ.9901118508(ಹಾನಗಲ್), 08376-282339/ಮೊ.7022075543 (ಹಿರೇಕೆರೂರು), 9141010778/7411450502 (ರಟ್ಟಿಹಳ್ಳಿ), -08375-267395/9480422963 (ರಾಣೇಬೆನ್ನೂರು), 08378-255251/ ಮೊ.9108579345(ಶಿಗ್ಗಾಂವ), 08375-228540/ 9901784498 (ಬ್ಯಾಡಗಿ), 08378-241563/9740821508(ಸವಣೂರು) ಸಂಪರ್ಕಿಸಲು ಕೋರಲಾಗಿದೆ.

ಹೈನುಗಾರಿಕೆ ಮಾಡಲು ಈ ಉಚಿತ ಸಹಾಯವಾಣಿಗೆ ಕರೆ ಮಾಡಿ

ಮನೆಯಲ್ಲಿಯೇ ಕುಳಿತು ಉಚಿತ ಸಹಾಯವಾಣಿಗೆ ಕರೆ ಮಾಡಿದರೆ ಸಾಕು ನಿಮ್ಮ ಜಿಲ್ಲೆಯ, ತಾಲೂಕಿನ ಪಶು ಇಲಾಖೆಯ ಸಿಬ್ಬಂದಿಯೊಂದಿಗೆ ಸಂಪರ್ಕ ನೀಡಲಾಗುವುದು. ನಿಮಗೆ ಬೇಕಾದ ಮಾಹಿತಿ ಕ್ಷಣಾರ್ಧರದಲ್ಲಿ ನೀವು ಮನೆಯಲ್ಲಿಯೇ ಕುಳಿತು ಪಡೆಯಬಹುದು... ಇಲ್ಲಿದೆ  ಸಂಪೂರ್ಣ ಮಾಹಿತಿ.

ರಾಜ್ಯದ ಪಶುಸಂಗೋಪನಾ ಚಟುವಟಿಕೆಗಳಲ್ಲಿ ನಿರತರಾಗಿರುವ ರೈತರು ದೂರವಾಣಿ ಸಂಖ್ಯೆ 1800 425 0012 (ಉಚಿತ) ಅಥವಾ 080-23417100 ಕ್ಕೆ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಕರೆ ಮಾಡಿ, ಪಶುವೈದ್ಯರು ಮತ್ತು ಇತರೆ ವಿಷಯ ತಜ್ಞರಿಂದ ಅಗತ್ಯ ಮಾಹಿತಿ ಪಡೆಯಬಹುದು. ವಾಟ್ಸ್ ಅ್ಯಪ್ ನಂಬರ್ ದಿಂದಲೂ ಮಾಹಿತಿ ಪಡಯಲಿಚ್ಚಿಸುವವರು ಮೊ.948 391 4000 ಗೆ ಕೋರಿಕೆ ನೀಡಬೇಕು.

Published On: 01 April 2021, 09:28 PM English Summary: Application for establishment of animal feed plant

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.