1. ಪಶುಸಂಗೋಪನೆ

ಪಶುಸಂಗೋಪನೆಗಾಗಿ ಸರ್ಕಾರದಿಂದ 1 ಲಕ್ಷ ರೂ ಸಾಲ.̤ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ

Maltesh
Maltesh
1 lakh rupees loan from government for animal husbandry.̤Apply in this scheme

ನಮ್ಮ ದೇಶದ ಆರ್ಥಿಕತೆಯ ಹೆಚ್ಚಿನ ಭಾಗವು ಕೃಷಿ ಕ್ಷೇತ್ರವನ್ನು ಆಧರಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ದೇಶದ ಹೆಚ್ಚಿನ ಜನಸಂಖ್ಯೆಯು ಪಶುಸಂಗೋಪನೆ ಮತ್ತು ಕೃಷಿಯ ಮೂಲಕ ತನ್ನ ಜೀವನೋಪಾಯವನ್ನು ಗಳಿಸುತ್ತದೆ. ಹಸು, ಎಮ್ಮೆ, ಮೇಕೆ ಅಥವಾ ಇತರ ಪ್ರಾಣಿಗಳನ್ನು ಸಾಕುವ ಇಂತಹ ಜನರ ಸಂಖ್ಯೆ ದೇಶದಲ್ಲಿ ತುಂಬಾ ಹೆಚ್ಚಾಗಿದೆ. ಅನೇಕ ರೈತರು ಈ ಪ್ರಾಣಿಗಳ ಹಾಲನ್ನು ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಭಾರತ ಸರ್ಕಾರವು ದೇಶದಲ್ಲಿ ಪಶುಸಂಗೋಪನೆಯನ್ನು ಉತ್ತೇಜಿಸಲು ಅನೇಕ ಯೋಜನೆಗಳನ್ನು ನಡೆಸುತ್ತಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್‌: 7 ನೇ ವೇತನ ಆಯೋಗ ರಚಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ

ಸದ್ಯ ಸರ್ಕಾರವು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ನಡೆಸುತ್ತಿದೆ. ದೇಶದ ಅನೇಕ ಜನರಿಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಬಗ್ಗೆ ತಿಳಿದಿಲ್ಲ. ಈ ಲೇಖನದಲ್ಲಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ..

ಯಾವುದೇ ಖಾತರಿ ಇಲ್ಲದೆ 1.60 ಲಕ್ಷ ರೂ.ಗಳವರೆಗೆ ಸಬ್ಸಿಡಿ ಮತ್ತು ಸಾಲ ನೀಡಲಾಗುತ್ತಿದೆ. ಈ ಯೋಜನೆಯಡಿ ಪ್ರಾಣಿಗಳ ಸಂಖ್ಯೆಗೆ ಅನುಗುಣವಾಗಿ ರೈತರಿಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭವಾಗಿದೆ. ಈಗಾಗಲೇ ಹರಿಯಾಣ ರಾಜ್ಯದಲ್ಲಿ ಈ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುತ್ತದೆ.

ಮಹಿಳೆಯರಿಗೆ ಸಿಹಿ ಸುದ್ದಿ: ಸರ್ಕಾರದಿಂದ ಉಚಿತ ಬಟ್ಟೆ ಹೊಲಿಗೆ ಯಂತ್ರ..ಎಲ್ಲರಿಗೂ ಸಿಗುತ್ತಿದೆ

ಎಷ್ಟು ಸಾಲ:

ಹಸುಗಳಿಗೆ 40,783 ರೂ., ಎಮ್ಮೆಗೆ 60,249 ರೂ, ಕುರಿ ಮತ್ತು ಮೇಕೆಗೆ 4063 ರೂ, ಹಂದಿಗಳಿಗೆ 16,337 ರೂಪಾಯಿ, ಕೋಳಿಗೆ 720 ರುಪಾಯಿ ಪಡೆಯಬಹುದು. ಈ ಯೋಜನೆಯಲ್ಲಿ ಪಡೆಯಬಹುದು. ಹೀಗೆ ಈ ಯೋಜನೆಯಲ್ಲಿ ಎಮ್ಮೆ, ಹಸು, ಮೇಕೆ ಇತ್ಯಾದಿಗಳನ್ನು ಖರೀದಿಸಲು ಪ್ರತ್ಯೇಕ ಸಾಲ ನೀಡಲಾಗುತ್ತದೆ. ಈ ಎಲ್ಲಾ ರೈತರು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬಹುದು.

1.60 ಲಕ್ಷ ರೂಪಾಯಿವರೆಗೆ ಸಾಲ

ಎಲ್ಲಾ ಬ್ಯಾಂಕ್ ಗಳು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ದಾರರಿಗೆ ವಾರ್ಷಿಕ ಶೇ.7ರ ಸರಳ ಬಡ್ಡಿ ದರದಲ್ಲಿ ಸಾಲ ನೀಡಲಿದೆ. ಈ ಶೇ.7ರ ಬಡ್ಡಿ ದರವನ್ನು ಸಕಾಲಕ್ಕೆ ಪಾವತಿಸಿದರೆ, 3 ಲಕ್ಷ ರೂ.ವರೆಗಿನ ಸಾಲದ ಮೊತ್ತಕ್ಕೆ ಕೇಂದ್ರ ಸರ್ಕಾರ ಶೇ.3ರ ಬಡ್ಡಿ ದರದಲ್ಲಿ ಸಹಾಯಧನ ನೀಡುತ್ತದೆ.  1.60 ಲಕ್ಷ ರೂ.ವರೆಗೆ ಸಾಲ ತೆಗೆದುಕೊಳ್ಳಲು ಯಾವುದೇ ಗ್ಯಾರಂಟಿ ಇರುವುದಿಲ್ಲ.

ಕಡಿಮೆ ಖರ್ಚಿನನಲ್ಲಿ ಬಂಪರ್‌ ಇಳುವರಿ..ಈ ರೀತಿ ಮೆಣಸಿನಕಾಯಿ ಬೆಳೆದು ನೋಡಿ

 ಕಾರ್ಡ್‌ ಪಡೆಯುವುದು ಹೇಗೆ?

ಈ ಪಶು ಕಿಸಾನ್ ಕಾರ್ಡ್‌ನ ಲಾಭವನ್ನು ನೀವು ಪಡೆಯಲು ಬಯಸಿದರೆ ಹತ್ತಿದ ಬ್ಯಾಂಕ್‌ಗೆ ಹೋಗಬೇಕು.. ಇದರ ನಂತರ, ಕೆವೈಸಿ ಸಲ್ಲಿಸಿ. ಆನಂತರ, ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು. ಅರ್ಜಿ ನಮೂನೆಗಳ ಪರಿಶೀಲನೆಯ ನಂತರ, ನಿಮಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.

Published On: 12 September 2022, 02:29 PM English Summary: 1 lakh rupees loan from government for animal husbandry.̤Apply in this scheme

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.