1. ಅಗ್ರಿಪಿಡಿಯಾ

ರೈತರಿಗೆ ಪ್ರೋತ್ಸಾಹಧನದಲ್ಲಿ ಸಿಗುವ ಕೃಷಿ ಯಂತ್ರೋಪಕರಣ ಮಾಹಿತಿ ಇಲ್ಲಿದೆ.

ಕೃಷಿ ಇಲಾಖೆಯಿಂದ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣೆ ಯೋಜನೆ ಅಡಿ ಉಳುಮೆಯಿಂದ ಕೊಯ್ಲುವರೆಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳನ್ನು ರಿಯಾಯ್ತಿ ದರದಲ್ಲಿ ನೀಡಲಾಗುವುದು.

ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಲೆಂದು ಕೃಷಿ ಯಂತ್ರೋಪಕರಣಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಕೃಷಿ ಯಂತ್ರೋಪಕರಣಗಳಿಗೆ  ಆಯಾ ಯಂತ್ರೋಪಕರಣಗಳಿಗನುಗುಣವಾಗಿ ಶೇ. 60, ಶೇ.50  ಮತ್ತು ಶೇ. 40 ರಷ್ಟು ಸಹಾಯಧನ ನೀಡಲಾಗುವುದು. ಇದಕ್ಕಾಗಿ ರೈತಬಾಂಧವರು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳನ್ನು ಪಡೆಯಬಹುದು.

ರೈತರು ಕೃಷಿ ಯಂತ್ರೋಪಕರಣಗಳನ್ನು ಪಡೆಯಲು  ಈ ಕೆಳಗಿನ ದಾಖಲಾತಿಗಳನ್ನು ಬಿಲ್ಲಿನೊಂದಿಗೆ ಸಲ್ಲಿಸಬೇಕಾಗುತ್ತದೆ.

1.ರೈತರ ಅರ್ಜಿ (ಪೂರ್ಣ ಪ್ರಮಾಣದಲ್ಲಿ ತಿದ್ದುಪಡಿಗಳಿಲ್ಲದೆ ಭರ್ತಿ ಮಾಡಬೇಕು) 2. ರೈತರಿಂದ ಸ್ವಯಂ ದೃಢೀಕೃತ ಸರಬರಾಜು ಕಂಪನಿಯ ಡೆಲವರಿ ಚಾಲನ್ (ಮೂಲಪ್ರತಿ). 3. ಕೆ-ಕಿಸಾನ್ ನಲ್ಲಿ ಆನ್ ಲೈನ್ ನೋಂದಣಿ ಪ್ರತಿ (ಎಫ್.ಐ.ಡಿ ಸಂಖ್ಯೆಯೊಂದಿಗೆ) 4. ಪಹಣ ಮೂಲ ಪ್ರತಿ ( ರೈತರಿಂದ ಸ್ವಯಂ ದೃಢೀಕೃತ). 5. ಆಧಾರ್ ಕಾರ್ಡ್ ಝಿರಾಕ್ಸ್ ಪ್ರತಿ (ರೈತರಿಂದ ಸ್ವಯಂ ದೃಢೀಕೃತ). 6. ಬ್ಯಾಂಕ್ ಪಾಸ್ ಬುಕ್ ಝಿರಾಕ್ಸ್ ಪ್ರತಿ (ರೈತರಿಂದ ಸ್ವಯಂ ದೃಢೀಕೃತ) 7. ಇಪ್ಪತ್ತು ರೂಪಾಯಿ ಕಾಗದದ ಮೇಲೆ ರೈತರ ಪ್ರಮಾಣ ಪತ್ರ. 8. ರೈತರ ಬ್ಯಾಂಕ್ ಪುಸ್ತಕದಲ್ಲಿ ರೈತರ ವಂತಿಕೆ ಸರಬರಾಜು ಸಂಸ್ಥೆಗೆ ಆರ್.ಟಿ.ಜಿ.ಎಸ್ ಜಮಾವಣೆಯಾದ ಬಗ್ಗೆ ರೈತರಿಂದ ಸ್ವಯಂ ದೃಢೀಕೃತ ದಾಖಲಾತಿ, 9. ರೈತರ ವಂತಿಗೆ ಹಣ ಪಾವತಿಗೆ ರಶೀದಿ (ಜೆ.ಆರ್), ಆನ್ ಲೈನ್ ಕಾರ್ಯ ಆದೇಶ ಪ್ರತಿ( ಸಹಾಯಕ ಕೃಷಿ ನಿರ್ದೇಶಕ ಸಹಿಯೊಂದಿಗೆ), 10. ರೈತರಿಂದ ತೃಪ್ತಿಕರ ಪ್ರಮಾಣಪತ್ರ/ಕೃಷಿ ಅಧಿಕಾರಿಗಳಿಂದ ಕ್ಷೇತ್ರ ಪರಿಶೀಲನೆ ದೃಢೀಕರಣ, 11, ಜಾತಿ ಪ್ರಮಾಣ ಪತ್ರ (ಎಸ್.ಸಿ/ಎಸ್.ಟಿ ರೈತರಿಗೆ) ರೈತರಿಂದ ಸ್ವಯಂ ದೃಢೀಕೃತ,  12. ಟ್ರ್ಯಾಕ್ಟರ್ ಚಾಲಿತ ಉಪಕರಣಗಳಿಗೆ ಆರ್.ಸಿ ಸೂಕ್ಷ್ಮ ನೀರಾವರಿ ಘಟಕಗಳಿಗೆ ನೀರು ಬಳಕೆ ಪ್ರಮಾಣ ಪತ್ರ ಹಾಗೂ ಸಂಸ್ಕರಣೆ ಘಟಕಗಳಿಗೆ 15 ಹೆಚ್.ಪಿ ವಿದ್ಯುತ್ ಸಂಪರ್ಕ ಪಡೆದ ದಾಖಲಾತಿಗಳೊಂದಿಗೆ ಲಗತ್ತಿಸಬೇಕು.13 ಘಟಕದ ಜೊತ ಅರ್ಜಿ ಸಲ್ಲಿಸಲಾದ ರೈತನೇ ಖುದ್ದಾಗಿ ರೈತ ಸಂರ್ಪಕ ಕೇಂದ್ರದ ಮುಖ್ಯಸ್ಥರೊಂದಿಗೆ ರೈತ ಸಂಪರ್ಕ ಕೇಂದ್ರದಲ್ಲಿ, ಸಹಾಯಕ ಕೃಷಿ ನಿರ್ದೇಶಕ, ಕಚೇರಿಯಲ್ಲಿ ತೆಗೆಯಲಾದ ಫೋಟೋ ಪ್ರತಿDate, Name of Farmer in GPS photo must be visible. ಮೇಲಿನ ಎಲ್ಲಾ ದಾಖಲಾತಿಗಳೊಂದಿಗೆ ರೈತರ ಹಾಗೂ ಕೃಷಿ ಅಧಿಕಾರಿಗಳ ದೃಢೀಕರಣ ಕಡ್ಡಾಯವಾಗಿ ಮಾಡಬೇಕು.

ನಿಮ್ಮ ತಾಲೂಕಿನ ವ್ಯಾಪ್ತಿಯಲ್ಲಿರುವ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಯಾವ ಯಂತ್ರೋಪಕರಗಳು ಲಭ್ಯವಿದೆ ಎಂಬುದನ್ನು ವಿಚಾರಿಸಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ನಿಮ್ಮ ಜೇಷ್ಠತಾ ಆಧಾರ ಮತ್ತು ಅನುದಾನದ ಲಭ್ಯತೆ ಮೇರೆಗೆ ಅರ್ಜಿಗಳನ್ನು ಪುರಸ್ಕರಿಸಿ ಯಂತ್ರೋಪಕರಗಳನ್ನು ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಅಥವಾ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು.

ಕೃಷಿ ಇಲಾಖೆಯಿಂದ ಸಿಗುವ ಕೃಷಿ ಯಂತ್ರೋಪಕರಣಗಳ ಪಟ್ಟಿ ಇಲ್ಲಿದೆ.

                                                               ಎಸ್.ಸಿ, ಎಸ್.ಟಿಯವರಿಗೆ                                 ಇತರೆ ವರ್ಗಕ್ಕೆ

     ಕೃಷಿ ಯಂತ್ರೋಪಕರಣ                            ಗರಿಷ್ಟ ಪ್ರೋತ್ಸಾಹಧನ             ಸಬ್ಸಿಡಿ         ಗರಿಷ್ಟ ಪ್ರೋತ್ಸಾಹಧನ       ಸಬ್ಸಿಡಿ

 

Published On: 13 September 2020, 08:42 AM English Summary: Subsidy for Machinery to farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.