1. ಅಗ್ರಿಪಿಡಿಯಾ

ಡ್ರಮ್ ರೋಲರ್ ಬಳಸಿ ಶೇಂಗಾ ಇಳುವರಿ ಹೆಚ್ಚಿಸಿ

Drum roller

ಶೇಂಗಾ ಒಂದು ಪ್ರಮುಖ ದ್ವಿದಳ ಎಣ್ಣೆಕಾಳು ಬೆಳೆಯಾಗಿದ್ದು, ಎಲ್ಲಾ ರೀತಿಯ ಹವಾಗುಣಕ್ಕೂ ಹೊಂದಿಕೊಳ್ಳುವ ಗುಣ ಹೊಂದಿದ್ದು, ಎಲ್ಲಾ ರೀತಿಯ ಮಣ್ಣಿನಲ್ಲೂ ಬೆಳೆಯಬಹುದಾಗಿದೆ. ಶೇಂಗಾ ಹೆಚ್ಚಿನ ಇಳುವರಿಗೆ ರೈತರು ವಿವಿಧ ಬಗೆಯ ತಳಿಗಳನ್ನು ಆಯ್ಕೆ ಮಾಡುತ್ತಾರೆ. ಇನ್ನೂ ಕೆಲವು ರೈತರು ತಮ್ಮಲ್ಲಿರುವ ಬೀಜಗಳಿಂದಲೇ ಬೆಳೆಯುತ್ತಾರೆ. ಆದರೆ ಇಳುವರಿ ಹೆಚ್ಚಿಸಿಕೊಳ್ಳಲು ಅತ್ಯಂತ ಸುಲಭ ಮಾರ್ಗ ಗೊತ್ತಿರಲಿಕ್ಕಿಲ್ಲ.. ಅದೇ ಡ್ರಮ್ ರೋಲರ್. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಮಾಹಿತಿ.

ಶೇಂಗಾ ಒಂದು ಪ್ರಮುಖ ಎಣ್ಣೆ ಬೆಳೆಯಾಗಿದೆ. ಇದನ್ನು ಬೆಳೆಯುವುದರಿಂದ ಮಣ್ಣನ್ನು ಸವಕಳಿಯಿಂದ ರಕ್ಷಿಸುವುದಲ್ಲದೆ, ಮಣ್ಣಿನ ಸಾರಜನಕದ (nitrogen) ಪ್ರಮಾಣವನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಶೇಂಗಾ ಎಣ್ಣೆಯ ಬಳಕೆ ಹೆಚ್ಚಾಗುತ್ತಿದೆ. ಇದಲ್ಲದೆ ಪಶುಗಳಿಗೆ ಶೇಂಗಾ ಹಿಂಡಿಯನ್ನು ಆಹಾರವಾಗಿ ಬಳಸುತ್ತಾರೆ. ಆದರೆ ಹಲವಾರು ರೋಗ, ಕೀಟ ಮತ್ತು ನೈಸರ್ಗಿಕ ವಿಕೋಪಗಳ ಪರಿಣಾಮ ಬೆಳೆಯ ಇಳುವರಿ ನಿರ್ದಿಷ್ಟ ಪ್ರಮಾಣದಲ್ಲಿಲ್ಲ. ಇದಕ್ಕಾಗಿಯೇ ಶೇಂಗಾ ಬೆಳೆಯುವ ರೈತರು ಬೆಳೆಯ ಇಳುವರಿ ಹೆಚ್ಚಿಸಲು ಅನೇಕ ಉಪಾಯಗಳನ್ನು ಕಂಡುಕೊಂಡಿದ್ದಾರೆ ಅದರಲ್ಲಿ ಡ್ರಮ್ ರೋಲರ್ಕೂಡಒಂದು.

ಸ್ನೇಹಿತರೇ, ಶೇಂಗಾಬೆಳೆಯಲ್ಲಿ ಏರಡು ವಿಧವಿದ್ದು, ಒಂದು ಹಬ್ಬುವ ಶೇಂಗಾ (spreading type) ಇನ್ನೊಂದು ಕೀಳುವ ಶೇಂಗಾ ( erect type) . ಈ ಒಂದು ಬೆಳೆಯಲ್ಲಿ ಬಿತ್ತಿದ 20-30 ದಿನಗಳ ನಂತರ ಹೂ ಬಿಡಲು ಪ್ರಾರಂಭಿಸುತ್ತದೆ, ಹಾಗು ಅದು ಮೂರರಿಂದ ಹತ್ತು ವಾರಗಳವರೆಗೆ ಸಾಗುತ್ತದೆ. ಹೂಗಳು ನೆಲದ ಮೇಲೆ ಇರುತ್ತವೆ ಹಾಗೂ ಪರಾಗಸ್ಪರ್ಶದ ನಂತರ ಇವುಗಳು ಭೂಮಿಯ ಕಡೆಗೆ ಬಾಗಿ ನೆಲದಲ್ಲಿ ಕಾಯಿಯಾಗಿ ಮಾರ್ಪಡುತ್ತವೆ. ಆದರೆ ಸಾಮಾನ್ಯವಾಗಿ ಗಿಡದಲ್ಲಿನ ಎಲ್ಲಾಹೂವುಗಳು ನೆಲದೆಡೆಗೆ ಬಾಗುವಲ್ಲಿ ವಿಫಲವಾಗುತ್ತವೆ. ಇದರಿಂದ ಗಿಡಗಳಲ್ಲಿ ಕಾಯಿ( pod) ಸಹ ಇರುತ್ತವೆ.

ಬಿತ್ತಿದ 50 ಅಥವಾ 50-70 ದಿನಗಳನಂತರ ಖಾಲಿ ಕಬ್ಬಿಣ ದ ಡ್ರಮ್ ಅನ್ನು ಬೆಳೆಯ ಮೇಲೆ ಉರುಳಿಸುವುದರಿಂದ ಪರಾಗ ಸ್ಪರ್ಶ (pollinated)  ಹೊಂದಿದ ಎಲ್ಲಾ ಹೂಗಳು ನೆಲದೆಡೆಗೆ ಬಾಗುವಂತಾಗಿ ಗಿಡಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯಿಗಳನ್ನು ಕಾಣಬಹುದು. ಇದರಿಂದಬೆಳೆಯ ಇಳುವರಿಯಲ್ಲಿ 10-22% ನಷ್ಟು ಏರಿಕೆಯನ್ನು ಕಾಣಬಹುದು.

ಸೂಚನೆ: ರೈತರು ಇದನ್ನು ತಮ್ಮಬೆಳೆಗಳಲ್ಲಿ ಉಪಯೋಗಿಸುವ ಮುನ್ನ ಹತ್ತಿರದ ಕೃಷಿವಿಜ್ಞಾನ ಕೇಂದ್ರ ಅಥವಾ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸುವುದು ಸೂಕ್ತ.

ಲೇಖನ:ಆತ್ಮಾನಂದ ಹೈಗರ್

Published On: 13 January 2021, 04:24 PM English Summary: Rolling of drum in groundnut

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.