1. ಅಗ್ರಿಪಿಡಿಯಾ

ದಿಢೀರ ಕುಸಿತ ಕಂಡ ಒಣ ದ್ರಾಕ್ಷಿ! ಕಂಗಾಲಾದ ರೈತರು

Kalmesh T
Kalmesh T
Price Drop: Dry grapes that have seen a rapid decline Farmers of Kangala

ವರ್ಷಗಟ್ಟಲೇ ಕಷ್ಟಪಟ್ಟು ಬೆಳೆ ಬೆಳೆದು ಇನ್ನೇನು ಅಂತಿಮ ಫಲದ ನಿರೀಕ್ಷೆಯಲ್ಲಿರುವ ರೈತರಿಗೆ Shock ನೀಡಿದೆ ಒಣ ದ್ರಾಕ್ಷಿಯ ಬೆಲೆ.  ಇದರಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ.

ಒಣದ್ರಾಕ್ಷಿಗೆ Price Drop  ಸಂಕಟ

ಒಣದ್ರಾಕ್ಷಿಯ ಬೆಲೆ ಏಕಾಏಕಿ ಕುಸಿತ ಕಂಡು ಕೆಜಿಗೆ .50 ರಿಂದ .60 ಗಳವರೆಗೆ ಕಡಿಮೆಯಾಗಿದೆ.  ಈ Price Drop  ನಿಂದ ರೈತರು ಕಂಗಾಲಾಗಿದ್ದಾರೆ. ದ್ರಾಕ್ಷಿ ಬೆಳೆದ ಬೆಳೆಗಾರರ ಮೊಗದಲ್ಲಿ ಆತಂಕ ಮೂಡುವಂತೆ ಮಾಡಿದೆ.

march ಮೊದಲ ವಾರದವರೆಗೂ ಪ್ರತಿ ಕೆಜಿಗೆ .200 ಇದ್ದ Dry Grapes ದಿಢೀರನೆ .130 ರಿಂದ .150 ಗಳವರೆಗೆ ಇಳಿಕೆ ಕಂಡಿದೆ. ಈ ಹಿಂದಿನ ಕಹಿ ಅನುಭವದಿಂದಾಗಿ ತಾಲೂಕಿನ ಜಗದಾಳ ಗ್ರಾಮವೊಂದರಲ್ಲಿಯೇ ಸುಮಾರು 300 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದು, 500 ಟನ್‌ಗಳಷ್ಟುಉತ್ಪಾದನೆ ಮಾಡುತ್ತಿದ್ದರು farmers. ಆದರೀಗ 75 ಟನ್‌ಗೆ ಇಳಿಕೆ ಕಂಡಿದೆ.

ಇದನ್ನು ಓದಿ:

Post Office Savings Schemes! Huge Update! ದೊಡ್ಡ ಬದಲಾವಣೆಗಳು ಕಂಡು ಬರುತ್ತಿವೆ!

ಈಗಾಗಲೇ ದ್ರಾಕ್ಷಿಗೆ ರೋಗದಿಂದ ತೀವ್ರ ಸಮಸ್ಯೆ ಎದುರಿಸಿದ್ದು, ಎಕರೆಗೆ 4 ಟನ್‌ವರೆಗೆ ಬರಬೇಕಾದ ಒಣದ್ರಾಕ್ಷಿ ಕೇವಲ 7.5 ಕ್ವಿಂಟಲ್‌ನಷ್ಟುಮಾತ್ರ ಬಂದಿರುವುದು ರೈತರನ್ನು ಚಿಂತೆಗೆ ದೂಡುವಂತೆ ಮಾಡಿದೆ. ಉತ್ತಮ ದ್ರಾಕ್ಷಿ ಫಸಲು ತೆಗೆಯುವಲ್ಲಿ ವಿಫಲರಾಗಿದ್ದು, ಕೊನೆಗೆ Dry Grapes ದರ ಚೆನ್ನಾಗಿ ಸಿಕ್ಕು ಆರ್ಥಿಕ ಚೈತನ್ಯ ನೀಡಬಹುದು ಎಂಬ ಮಹಾದಾಸೆಗೆ ದರ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರತಿ ಎಕರೆ ದ್ರಾಕ್ಷಿ ಬೆಳೆಗೆ ಕನಿಷ್ಠ .2 ಲಕ್ಷಗಳವರೆಗೂ ಖರ್ಚಾಗುವುದು. ಆದರೆ, ಮಾರುಕಟ್ಟೆಯಲ್ಲಿ ಇದಕ್ಕೆ ಪೂರಕವಾಗಿ ಮಾರಾಟ ಮಾಡಿದ ದ್ರಾಕ್ಷಿಯಿಂದ .1.5 ಲಕ್ಷಗಳಷ್ಟುಮಾತ್ರ ಹಣ ಕೈಸೇರಲಿದೆ. ಹೀಗಿರುವಾಗ ಬೆಳೆಯನ್ನೇ ನಂಬಿ ಹೇಗೆ ಇರುವುದು ಎನ್ನುವುದು ಸದ್ಯ ರೈತರ ಪ್ರಶ್ನ

ಎರಡು ಮೊಟ್ಟೆಯ ಕಥೆ: ಬಿಳಿ ಹಾಗೂ ಕಂದು ಮೊಟ್ಟೆಗಳಲ್ಲಿ ಯಾವುದು ಬೆಸ್ಟ್‌.. ಇಲ್ಲಿದೆ ನಿಮಗೆ ಗೊತ್ತಿರದ ಸಂಗತಿ

ಹೆಕ್ಟೇರ್‌ಗಟ್ಟಲೆ ಒಣದ್ರಾಕ್ಷಿಯ Agriculture

ನೂರಾರು ಹೆಕ್ಟೇರ್‌ ಪ್ರದೇಶಗಳಲ್ಲಿ Dry Grapes ಬೆಳೆ ಬೆಳೆದಿದ್ದು, ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡಿದ್ದಾರೆ. ರೋಗ ಬಾಧೆ ಸೇರಿದಂತೆ ವಾತಾವರಣದ ವ್ಯತ್ಯಾಸದಿಂದ ಇಳುವರಿಯೂ ಕೂಡ ಇಳಿಕೆ ಕಂಡಿದೆ. ಇದರ ಮಧ್ಯ ದರ ಕುಸಿತವು ಇನ್ನಷ್ಟುಸಂಕಷ್ಟಕ್ಕೆ ದೂಡುವಂತೆ ಮಾಡಿದೆ.

ಹಾನಿಯಾದ ರೈತರಿಗೆ ಸರ್ಕಾರದಿಂದ ಸಿಗುವ ಪರಿಹಾರಗಳು ವೇಳೆಗೆ ಸರಿಯಾಗಿ ಸಿಗದೇ ಸಾಲಗಾರರನ್ನಾಗಿಸುವಂತೆ ಮಾಡಿದೆ. ಈಗಲಾದರೂ ಸರ್ಕಾರದ ಪರಿಹಾರಗಳನ್ನು ಶೀಘ್ರ ಬಿಡುಗಡೆ ಮಾಡುವ ಮೂಲಕ ರೈತನ ಬಾಳಿಗೆ ಬೆಳಕಾಗಬೇಕು ಎನ್ನುವುದು ರೈತರ ಕಳಕಳಿಯ ಮನವಿ.

ದಾಖಲೆ ಸಲ್ಲಿಸಿ 80,000 ಗಳಿಸಿ! SBI ನಲ್ಲಿದೆ ಇಂಥ Golden ಅವಕಾಶ

Dry Grapes ಬೆಳೆದ ರೈತ ಹಾನಿಗೊಳಗಾಗಿದ್ದಾನೆ. ಸರ್ಕಾರದ ಮಹತ್ತರ ಯೋಜನೆಯಾಗಿರುವ ಫಸಲ್‌ ಬೀಮಾ ಯೋಜನೆಯಡಿ ಪ್ರತಿ ಹೆಕ್ಟೇರ್‌ ಪ್ರದೇಶದ ಹಾನಿಗೆ .2.8 ಲಕ್ಷಗಳವರೆಗೆ ಪರಿಹಾರ ಒದಗಿಸುತ್ತದೆ. ಹಾನಿಯಾದ ಸಂದರ್ಭದಲ್ಲಿ ಪರಿಹಾರ ಒದಗಿಸದೇ ವಿಳಂಬನೀತಿಯಿಂದ ರೈತರು ಮತ್ತಷ್ಟುಆರ್ಥಿಕ ಸಂಕಷ್ಟಎದುರಿಸುವಲ್ಲಿ ಕಾರಣವಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಧ್‌ ಪ್ರವೇಶಿಸಿ Dry Grapes ಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ವಾಣಿಜ್ಯ ಬೆಳೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ದ್ರಾಕ್ಷಿ ಬೆಳೆಗಾರರಿಗೆ ಪೂರಕವಾದ ಸಹಕಾರ ದೊರೆತಲ್ಲಿ ಬೆಳೆ ಮುನ್ನಡೆಸಲು ಸಾಧ್ಯ.

LIC BIG OFFER: ಮಾರ್ಚ 31ರ ಒಳಗೆ ಇದನ್ನು ಪಡೆದರೆ 10 ವರ್ಷದ ವರೆಗೆ 9,250 ರೂ ಪೆನ್ಷನ್‌ ಪಕ್ಕಾ..!

Published On: 28 March 2022, 12:41 PM English Summary: Price Drop: Dry grapes that have seen a rapid decline Farmers of Kangala

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.