1. ಅಗ್ರಿಪಿಡಿಯಾ

ಅವರೆ ಬೆಳೆಸಿ ಹೆಚ್ಚು ಲಾಭ ಪಡೆದುಕೊಳ್ಳಿ

 ಅವರೆ (Lablab purpureus sweet) (ಕುಟುಂಬ: ಪ್ಯಾಪಿಲಿಯೋನೇಸೀ) ಹೆಬ್ಬಾಳ ಅವರೆ ಜನಪ್ರೀಯ ಏಕವಾರ್ಷಿಕ ಬೆಳೆ. ಸಾಮಾನ್ಯವಾಗಿ ಇದನ್ನು ರಾಗಿ ಮತ್ತು ಜೋಳಗಳ ಜೊತೆಗೆ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಕರ್ನಾಟಕದ ದಕ್ಷಿಣದ ಭಾಗಗಳಲ್ಲಿ ಅವರೆಯನ್ನು ದ್ವಿದಳ ಧಾನ್ಯ ತರಕಾರಿ ಹಾಗೂ ಮೇವಿಗಾಗಿಯೂ ಬೆಳೆಯುತ್ತಾರೆ.

ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿಯೂ  ಈ ಬೆಳೆಯು ಜನಪ್ರಿಯವಾಗಿದೆ. ಅವರೆಯ ಉಪಯುಕ್ತತೆಯನ್ನು ಪರಿಗಣಿಸಿ ಹಲವಾರು ವರ್ಷಗಳ ಸಂಶೋಧನೆಯ ಫಲವಾಗಿ ಬೆಂಗಳೂರು ಕೃಷಿ  ವಿಶ್ವವಿದ್ಯಾನಿಲಯದವರು, ಹೆಬ್ಬಾಳ ಅವರೆ -3 ಎಂಬ ತಳಿಯನ್ನು ಅಭಿವೃದ್ಧಿಪಡಿಸಿ 1978 ರಲ್ಲಿ ಬಿಡುಗಡೆ ಮಾಡಿದರು. ನಂತರ 1997 ರಿಂದ ಈಚೆಗೆ ವಿಶ್ವವಿದ್ಯಾನಿಲಯದ ಬಿ.ಎಸ್.ಪಿ. ಘಟಕವು ಈ ತಳಿಯನ್ನು ಶುದ್ಧೀಕರಿಸಿ, ಪುನಶ್ಚೇತನಗೊಳಿಸಿ ಬೀಜೋತ್ಪಾದನೆಯ ಕಾರ್ಯದಲ್ಲಿ ನಿರತವಾಗಿದೆ. ಈ ಬೆಳೆಯನ್ನು ಉತ್ತರ ಕರ್ನಾಟಕದಲ್ಲಿಯು ಸಹ ಬೆಳೆದು ಹೆಚ್ಚಿನ ಲಾಭ ಪಡೆಯಬಹುದಾಗಿದೆ. 

ಇದು 85-90 ದಿವಸಗಳ ಅವಧಿಯಲ್ಲಿ ಕಟಾವಿಗೆ ಬರುವ ಅಲ್ಪಾವಧಿ ತಳಿ.  ಈ ತಳಿಗೆ ಬಳ್ಳಿಯಾಗಿ ಹಬ್ಬುವ ಗುಣವಿರುವುದಿಲ್ಲ.  ಸೂರ್ಯಪ್ರಕಾಶದ ಅವಧಿ (Photoperiod) ಈ ಬೆಳೆಯ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ.  ಆದ್ದರಿಂದ ವರ್ಷದ ಯಾವ ಕಾಲದಲ್ಲಾದರೂ ಬೆಳೆಯಬಹುದು.   

ಹೂಗಳ ಬಣ್ಣ ಬಿಳಿ: ಎಳೆಯ ಕಾಯಿಗಳ ಮತ್ತು ಬೀಜಗಳ ಬಣ್ಣ ಹಸಿರು; ಬಲಿತ ಕಾಯಿಗಳಲ್ಲಿ ತಿಳಿ ಕಂದು ಬಣ್ಣದ 3-4 ದುಂಡನೆಯ ಬೀಜಗಳಿರುತ್ತದೆ.

ಬಿತ್ತನೆ ಕಾಲ: ವರ್ಷದ ಯಾವ ಸಮಯದಲ್ಲೂ ಬಿತ್ತನೆ ಮಾಡಬಹುದು.

ಅಂತರ: ಸಾಲಿನಿಂದ ಸಾಲಿಗೆ 45 ಸೆ.ಮೀ. ಬೀಜದಿಂದ ಬೀಜಕ್ಕೆ 15 ಸೆ.ಮೀ.

ಸಾಮಗ್ರಿಗಳು

ಎಕರೆಗೆ

ಹೆಕ್ಟೇರಿಗೆ

ಕೊಟ್ಟಿಗೆ ಗೊಬ್ಬರ

2-3 ಟನ್

5-7.5 ಟನ್

ರಸಗೊಬ್ಬರಗಳು

ಸಾರಜನಕ

10 ಕಿಲೋಗ್ರಾಂ

25 ಕಿಲೋಗ್ರಾಂ

ರಂಜಕ

20 ಕಿಲೋಗ್ರಾಂ

50 ಕಿಲೋಗ್ರಾಂ

ಪೊಟ್ಯಾಷ್

10 ಕಿಲೋಗ್ರಾಂ

25 ಕಿಲೋಗ್ರಾಂ

ಬಿತ್ತನೆ ಬೀಜ

12 ಕಿಲೋಗ್ರಾಂ

30 ಕಿಲೋಗ್ರಾಂ

ರೈಬೋಬಿಯಂ ಜೀವಾಣು

100 ಗ್ರಾಂ

357 ಗ್ರಾಂ

ಸಸ್ಯ ಸಂರಕ್ಷಣೆ:

ಕೀಟಗಳು: ಏಫಿಡ್, ಎಲೆ ತಿನ್ನುವ ಹಾಗೂ ಕಾಯಿ ಕೊರೆಯುವ ಹುಳಗಳು.

ಸಂರಕ್ಷಣಾ ವಿಧಾನ: ಬಿತ್ತನೆಯ ನಂತರದ 35-40 ದಿನಗಳಲ್ಲಿ ಹೂ ಬಿಡುವ ಒಂದು ವಾರದ ಮುನ್ನ ಕೀಟನಾಶಕ ದ್ರಾವಣವನ್ನು (ಒಂದು ಲೀಟರ್ ನೀರಿಗೆ 2 ಮಿಲಿ ಲೀಟರ್ ಮೊನೊಕ್ರೊಟೊಫಾಸ್ ಅಥವಾ 4 ಗ್ರಾಂ ಕಾರ್ಬರಿಲ್ 50 w.p. ಬೆರೆಸಿದ ದ್ರಾವಣ) ಸಿಂಪಡಿಸಬೇಕು.  ಕೀಟಗಳ ಬಾಧೆಯು ಹೆಚ್ಚಾಗಿ ಕಂಡು ಬಂದಲ್ಲಿ ಪ್ರತಿ 15 ದಿವಸಗಳಿಗೊಮ್ಮೆ 3-4 ಸಿಂಪರಣೆಗಳನ್ನು ಮಾಡಿ ಹತೋಟಿಗೆ ತರಬಹುದು.  ಕೊಯ್ಲಿಗೆ ಮುಂಚೆ ಮೆಲಾಥಿಯಾನ್ ಪುಡಿಯ ಸಿಂಪರಣೆಯಿಂದ ಉಗ್ರಾಣದ (ಶೇಖರಣೆಯ) ಕೀಟಗಳ ನಿಯಂತ್ರಣವು ಸಾಧ್ಯವಾಗುತ್ತದೆ.

ರೋಗಗಳು: ಎಲೆ ಚುಕ್ಕೆ ರೋಗ ಮತ್ತು ಆಂಥ್ರಾಕ್ನೊಸ್ ರೋಗಗಳ ಸೂಚನೆ ಕಂಡ ಕೂಡಲೇ ಒಂದು ಲೀಟರ್ ನೀರಿಗೆ 2-3 ಗ್ರಾಂ ಮ್ಯಾಂಕೊಂಜೆಬ್ (Dithane-M-45) ಪುಡಿಯನ್ನು ಬೆರೆಸಿ ತಯಾರಿಸಿದ ದ್ರಾವಣವನ್ನು ಸಿಂಪರಣೆ ಮಾಡಿದರೆ ರೋಗದ ಹತೋಟಿಯಾಗುತ್ತದೆ.

ಹಸಿರು ತರಕಾರಿ ಕಾಳು/ಬೀಜ:

ಬೀಜೋತ್ಪಾದನೆ ಸಮಯದಲ್ಲಿ ಅನುಸರಿಸಬೇಕಾದ ಕ್ಷೇತ್ರ ಹಾಗೂ ಬೀಜ ಮಾನದಂಡಗಳು

ಕ್ಷೇತ್ರ ಮಾನದಂಡಗಳು

ಬೀಜ ಮಾನದಂಡಗಳು

ಪ್ರತ್ಯೇಕತೆ ಅಂತರ ದೂರ (ಮೀ.)

ಮೂಲ ಬೀಜ   - 10 ಮೀ.

ಪ್ರಮಾಣಿತ ಬೀಜ – 5 ಮೀ.

ಬೀಜ ಶುದ್ಧತೆ (ಶೇ)  : 98 %

ಜಡವಸ್ತು (ಶೇ)     : 2 %

ಇತರೆ ಬೆಳೆ ಬೀಜ   : 10/ ಕೆ.ಜಿ.

ಕಳೆ ಬೀಜ        : 5/ ಕೆ.ಜಿ.

ಮೊಳಕೆ (ಶೇ)      : 75 %

ತೇವಾಂಶ (ಶೇ)     : 7-8 %

 

 ಇಳುವರಿ:  4-5 ಕ್ವಿಂಟಾಲ್ ಪ್ರತಿ ಎಕರಿಗೆ (ಖುಷ್ಕಿ), 6-8 ಕ್ವಿಂಟಾಲ್ ಪ್ರತಿ ಎಕರಿಗೆ(ನೀರಾವರಿ)

 

ಎಕರೆಗೆ (ಕ್ಟಿಂಟಾಲ್)

ಹೆಕ್ಟೇರಿಗೆ (ಕ್ವಿಂಟಾಲ್)

ಕಾಳು/ಬೀಜ

 

 

ಖುಷ್ಕಿ

4-5

10-12.5

ನೀರಾವರಿ

6-8

15-20

ಹಸಿರು ತರಕಾರಿ

 

 

ಖುಷ್ಕಿ

8-10

20-25

ನೀರಾವರಿ

 

 

ಮೊದಲ ಕೊಯ್ಲು

12-15

30-37.5

ಎರಡನೇ ಕೊಯ್ಲು

6-8

15-20

ಲೇಖಕರು:

1. ಡಾ. ಲೋಕೇಶ್ ಕೆ., ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ.

2. ಶ್ರೀ ಸುಹಾಸ ಪಿ.ಡಿ., ಸಹಾಯಕರು, ಕೃಷಿ ಮಹಾವಿದ್ಯಾಲಯ, ಕಲಬುರಗಿ, ಕೃಷಿ ವಿಶ್ವವಿದ್ಯಾಲಯ, ರಾಯಚೂರು.

Published On: 06 October 2020, 06:46 PM English Summary: lablab cultivation and managment

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.