1. ಅಗ್ರಿಪಿಡಿಯಾ

ತೋಟಗಾರಿಕೆ ಬೆಳೆಗಳಲ್ಲಿ ಮಣ್ಣು ಪರೀಕ್ಷೆಯ ಮಹತ್ವ

ಮಣ್ಣು ಭೂಮಿಯ ಮೇಲ್ಗಡೆ ಇರುವ ಒಂದು ನೈಸರ್ಗಿಕ ವಸ್ತು. ಇದು ಸಣ್ಣ ಪದರ-ಪದರವಾಗಿ ಜೋಡಿಸಲ್ಪಟ್ಟಿರುವ ಪುಡಿ ರೂಪದಲ್ಲಿರುವ ವಸ್ತು. ಇದನ್ನು ಖನಿಜ ವಸ್ತುಗಳು, ಸಾವಯವ ವಸ್ತುಗಳು, ಗಾಳಿ ಮತ್ತು ನೀರನ್ನು ಹೊಂದಿರುವ ಒಂದು ನೈಸರ್ಗಿಕ ವಸ್ತು ಎನ್ನಬಹುದು. ಮೂಲತಃ, ಭೂಮಿಯಲ್ಲಿ ಬೆಳೆಯುವ ಸಸ್ಯಗಳು ನೀರು ಮತ್ತು ಪೋಷಕಾಂಶಗಳಿಗಾಗಿ ಮಣ್ಣನ್ನು ಅವಲಂಬಿಸಿರುತ್ತದೆ. ಇದನ್ನು ಮೀರಿ, ಮಣ್ಣು ಬೇರುಗಳು ಬೆಳೆಯಲು ಮತ್ತು ಕಾರ್ಯನಿರ್ವಹಿಸಲು ವಾತಾವರಣವನ್ನು ಒದಗಿಸುತ್ತದೆ.

ಮಣ್ಣು ಬೆಳೆಗಳಿಗೆ ಮುಖ್ಯ ಆಧಾರವೆಂದ ಮೇಲೆ ಅದರ ಪ್ರತಿಯೊಂದು ಲಕ್ಷಣವನ್ನು ತಿಳಿಯಬೇಕಾದದ್ದು ಅತಿ ಅವಶ್ಯ. ಯಾವುದೇ ಬೆಳೆಯ ಬೀಜ ಬಿತ್ತುವ ಮುನ್ನ ಮಣ್ಣಿನಲ್ಲಿ ಪೋಷಕಾಂಶಗಳ ಲಭ್ಯತೆಯ ಪ್ರಮಾಣವನ್ನು ಅಳೆಯುವುದು ಬಹುಮುಖ್ಯ. ಪೋಷಕಾಂಶಗಳ ಸಮತೋಲನ ಪೂರೈಕೆಗೆ ಮಣ್ಣು ಪರೀಕ್ಷೆ ತುಂಬಾ ಅವಶ್ಯ. ಹಣ್ಣಿನ ತೋಟದ ಯಶಸ್ಸು ಮಣ್ಣಿನ ಭೌತ-ರಾಸಾಯನಿಕ ಗುಣಲಕ್ಷಣಗಳು ಮತ್ತು ಫಲವತ್ತತೆಯನ್ನು ಅವಲಂಬಿಸಿರುತ್ತದೆ. ಆಧುನಿಕ ಕೃಷಿಯಲ್ಲಿ ಮಣ್ಣಿನ ಪರೀಕ್ಷೆಯ ಅವಶ್ಯಕತೆ ಮತ್ತು ಮಹತ್ವವನ್ನು ರೈತರು ತಿಳಿದುಕೊಳ್ಳುವುದು ಅಗತ್ಯ.

ಮಣ್ಣು ಪರೀಕ್ಷೆ ಎಂದರೇನು ?

ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳನ್ನು ಮತ್ತು ಮಣ್ಣಿನಲ್ಲಿರತಕ್ಕ ಬೆಳೆಗಳಿಗೆ ಲಭ್ಯವಿರುವ ಪೋಷಕಾಂಶಗಳ ಸಂಗ್ರಹವನ್ನುಕಂಡು ಹಿಡಿಯುವುದಕ್ಕೆ ಮಣ್ಣು ಪರೀಕ್ಷೆಎನ್ನುತ್ತಾರೆ.

ಮಣ್ಣಿನ ಪರೀಕ್ಷೆಯ ಮುಖ್ಯ ಉದ್ದೇಶಗಳು ಹೀಗಿವೆ: 

  • ರಸಗೊಬ್ಬರ ಶಿಫಾರಸ್ಸುಗಳಿಗೆ ಆಧಾರವನ್ನು ಒದಗಿಸಲು.
  • ವಿವಿಧ ಹಣ್ಣಿನ ತೋಟಗಳಿಗೆ ಮಣ್ಣಿನ ಸೂಕ್ತತೆಯನ್ನುಅಧ್ಯಯನ ಮಾಡಲು.
  • ಸಮಸ್ಯಾತ್ಮಕ ಮಣ್ಣನ್ನು ಅಧ್ಯಯನ ಮಾಡಲು ಮತ್ತು ಅವುಗಳ ಪರಿಹಾರ ಕ್ರಮಗಳನ್ನು ಶಿಫಾರಸ್ಸು ಮಾಡಲು.

ಮಣ್ಣು ಪರೀಕ್ಷೆಯ ಪ್ರಯೋಜನಗಳು

1.       ರೈತರು ರಾಸಾಯನಿಕ ಗೊಬ್ಬರಗಳನ್ನು ಸೂಕ್ತ ಪ್ರಮಾಣದಲ್ಲಿ ಮತ್ತು ಯೋಗ್ಯ ರೀತಿಯಲ್ಲಿ ಲಾಭದಾಯಕವಾಗುವಂತೆ ಉಪಯೋಗಿಸಿ ಒಳ್ಳೆಯ ಹಾಗೂ ಗುಣಮಟ್ಟದ ಇಳುವರಿ ಪಡೆಯಬಹುದು.

2.       ಗೊಬ್ಬರದ ವೆಚ್ಚದ ಭಾರವನ್ನು ತಗ್ಗಿಸಲು ಸಹಾಯವಾಗುತ್ತದೆ, ಅಲ್ಲದೇ ಉತ್ಪಾದನೆಗೆ ಯಾವತೊಂದರೆಯೂ ಆಗದಂತೆ ನೋಡಿಕೊಂಡು ನಿವ್ವಳ ಲಾಭವನ್ನು ಹೆಚ್ಚಿಸುತ್ತದೆ.

3.       ಮಣ್ಣಿನಲ್ಲಿ ಕೊರತೆಯಿರುವ ಪೋಷಕಾಂಶವನ್ನು ಬೆಳೆಗಳ ಪುಸ್ತಕದಲ್ಲಿ (ಸಂಶೋಧನೆ ಆಧಾರದ ಮೇಲೆ) ನೀಡಿರುವ ಶಿಫಾರಸ್ಸಿಗಿಂತ ಹೆಚ್ಚು ನೀಡಬೇಕಾಗುವುದು.

4.       ಮಣ್ಣು ಪರೀಕ್ಷೆಯಿಂದ ಮಣ್ಣಿನಕ್ಷಾರ, ಆಮ್ಲೀಯ ಮತ್ತು ಸವಳು ಪ್ರಮಾಣವನ್ನುಕಂಡು ಹಿಡಿದು ಬೆಳೆಗಳ ಮೇಲೆ ಇದರ ಪರಿಣಾಮ ಏನಾಗುವುದು ಎಂಬುದನ್ನು ತಿಳಿಯಬಹುದು.

5.       ಮಣ್ಣಿನಲ್ಲಿರುವ ಲವಣಾಂಶಗಳ ಪ್ರಮಾಣ ಸಸ್ಯಗಳಿಗೆ ಹಾನಿಕಾರಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿಖರವಾಗಿ ತಿಳಿಯಬಹುದು. 

6.       ಸಮಸ್ಯಾತ್ಮಕ ಮಣ್ಣುಗಳಿಗೆ ಸುಣ್ಣ ಹಾಕುವಿಕೆ, ಜಿಪ್ಸಂ ಹಾಕುವಿಕೆಯ ಪ್ರಮಾಣವನ್ನುಕಂಡು ಹಿಡಿಯಬಹುದು.

ಮಣ್ಣಿನ ಮಾದರಿಗಳನ್ನು ತೆಗೆಯುವಾಗ ಅನುಸರಿಸಬೇಕಾದ ಕ್ರಮಗಳು:

ಯಾವುದೇ ಸಮಯದಲ್ಲಿ ಯಾವುದೇ ಸ್ಥಿತಿಯಲ್ಲಿ ಮಣ್ಣಿನ ಮಾದರಿ ತೆಗೆದು ಆ ಸಮಯದಲ್ಲಿ ಲಭ್ಯವಿರಬಹುದಾದ ಪೋಷಕಾಂಶಗಳ ಪ್ರಮಾಣವನ್ನು ಅಳೆಯಬೇಕಾಗುವುದು.ಆದರೆ ಮಣ್ಣಿನ ಮೂಲ ಸಾಮರ್ಥ್ಯ ಅಳೆಯಬೇಕಾದರೆ, ಭೂಮಿಯ ಒಣಗಿದ ಸ್ಥಿತಿಯಲ್ಲಿದ್ದಾಗ (ಬಿತ್ತನೆಗೆ ಮುನ್ನ) ಮಣ್ಣಿನ ಮಾದರಿ ಸಂಗ್ರಹಿಸಬೇಕಾಗುವುದು.

  • ಅಲ್ಪ ಪ್ರಮಾಣದ ಹಸಿಯಿದ್ದಲ್ಲಿ ಮಣ್ಣಿನ ಮಾದರಿಗಳನ್ನು ತೆಗೆದು ನೆರಳಿನಲ್ಲಿ ಪೇಪರ್/ಪ್ಲಾಸ್ಟಿಕ್ ಮೇಲೆ ಹಾಕಿ ಒಣಗಿಸಿ ಮಿಶ್ರಮಾಡಿ ನಂತ ರಒಂದು ಮಾದರಿಯನ್ನು ಪಡೆಯಬೇಕು.
  • ಒಣ ಪ್ರದೇಶದಲ್ಲಿ ಮಣ್ಣಿನ ಮಾದರಿಗಳನ್ನು ಬೇಸಿಗೆ ಸಮಯದಲ್ಲಿ (ಏಪ್ರಿಲ್/ಮೇ) ತೆಗೆಯುವುದು ಸೂಕ್ತ.
  • ಜಮೀನುಗಳಿಗೆ ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಹಾಕುವ ಪೂರ್ವದಲ್ಲಿ ಮಣ್ಣಿನ ಮಾದರಿಗಳನ್ನು ತೆಗೆಯಬೇಕು. ಏಕೆಂದರೆ ಆಗ ಮಣ್ಣಿನ ನೈಜವಾದ ಪರಿಸ್ಥಿತಿಯನ್ನು ತಿಳಿಯಲು ಸಾಧ್ಯವಾಗುತ್ತದೆ.
  • ಗೊಬ್ಬರವನ್ನು ಜಮೀನುಗಳಿಗೆ ಹಾಕಿದ್ದಲ್ಲಿ, ಮೂರು ತಿಂಗಳ ನಂತರ ಮಾದರಿಗಳನ್ನು ತೆಗೆಯಬಹುದು.
  • ತರಕಾರಿ ಬೆಳೆಗಳಿಗೆ ಮಣ್ಣು ಮಾದರಿಯನ್ನು ನಾಟಿ ಮಾಡುವ 1 ತಿಂಗಳು ಮುಂಚಿತವಾಗಿ ಮೇಲ್ಮಣ್ಣು ಮಾದರಿಯನ್ನು ಸಂಗ್ರಹಿಸಬೇಕು. ಇದರಿಂದ ತಳ ಗೊಬ್ಬರದ ಪ್ರಮಾಣವನ್ನು ತಿಳಿಯಲು ಸುಲಭವಾಗುತ್ತದೆ.
  • ಸಮಸ್ಯಾತ್ಮಕ (ಆಮ್ಲೀಯತೆ, ಲವಣಾಂಶ,ಕ್ಷಾರೀಯತೆ,ಇತ್ಯಾದಿ) ಮಣ್ಣಿನಲ್ಲಿ ತರಕಾರಿ ಬೆಳೆಗಳನ್ನು ಬೆಳೆಯಬೇಕಾದಲ್ಲಿ, ಕನಿಷ್ಟ 2 ರಿಂದ 3 ತಿಂಗಳು ಮುಂಚಿತವಾಗಿ ಮಣ್ಣು ಮಾದರಿಯನ್ನು ಸಂಗ್ರಹಿಸಿ ಮಣ್ಣು ಪರೀಕ್ಷೆಯನ್ನು ಮಾಡಿಸಬೇಕು. ಇದರಿಂದ ನಾಟಿಗೆ ಮುಂಚಿತವಾಗಿ ಸಮಸ್ಯಾತ್ಮಕ ಮಣ್ಣನ್ನು ಸುಣ್ಣಅಥವಾಜಿಪ್ಸಂ ಒದಗಿಸಿ ಸರಿದೂಗಿಸಬಹುದು.
  • ಹೊಸದಾಗಿ ಹಣ್ಣಿನ ಬೆಳೆಗಳ ತೋಟವನ್ನು ನಿರ್ಮಿಸುವಾಗ, ಸ್ಥಳದ ಆಯ್ಕೆಆದ ನಂತರ ಗಿಡಗಳನ್ನು ನಾಟಿ ಮಡುವ ಮುಂಚಿತವಾಗಿಮೇಲ್ಮಣ್ಣುಹಾಗು ತಳ ಮಣ್ಣುಎರಡು ಮಿಶ್ರ ಮಾದರಿಗಳನ್ನು ಬೇರೆ ಬೇರೆಯಾಗಿ ಪಡೆದುಕೊಂಡು ಪರೀಕ್ಷಿಸಬೇಕು. ಇದರಿಂದ ಮಣ್ಣಿನ ಫಲವತ್ತೆ ಹಾಗೂ ಮಣ್ಣಿನ ಗುಣಲಕ್ಷಣಗಳನ್ನು ಅರಿತುಕೊಂಡು ಮಣ್ಣಿನಲ್ಲಿರುವ ಸಮಸೆÀ್ಯಯನ್ನು ಬಗೆಹರಿಸಿಕೊಳ್ಳಬಹುದು ಮತ್ತು ಉತ್ತಮ ಫಸಲನ್ನು ಪಡೆಯಬಹುದು.
  • ಹೊಸದಾಗಿ ನಿರ್ಮಿಸಿದ ತೋಟಗಳಲ್ಲಿ ಫಸಲು ಬಿಡುವ ಮುಂಚಿತವಾಗಿ ಮಣ್ಣು ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಬೇಕು.
  • ಈಗಾಗಲೇ ಫಸಲು ನೀಡುತ್ತಿರುವ ತೋಟಗಳಲ್ಲಿ ಮಣ್ಣು ಮಾದರಿಯನ್ನು ಚಳಿಗಾಲದ ಕೊನೆಯಲ್ಲಿ ಅಥವಾ ವಸಂತ ಮಾಸದಲ್ಲಿ ಮೇಲ್ಮಣ್ಣು ಹಾಗು ತಳ ಮಣ್ಣು ಮಾದರಿಯನ್ನು ಸಂಗ್ರಹಿಸಬೇಕು ಹಾಗೂ ಎಲೆ ಮಾದರಿಯನ್ನು ಸಹ ಸಂಗ್ರಹಿಸಿ ಪರೀಕ್ಷಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಪ್ರಧಾನ ಪೋಷಕಾಂಶಗಳ ಜೊತೆಗೆ ಲಘು ಪೋಷಕಾಂಶಗಳ ಲಭ್ಯತೆಯನ್ನು ತಿಳಿದುಕೊಳ್ಳಬಹುದು.
  • ನರ್ಸರಿ ಉದ್ದೇಶಕ್ಕಾಗಿ ಮಣ್ಣಿನ ಮಾದರಿಗಳನ್ನು 9 ಇಂಚು ಆಳದಿಂದ ತೆಗೆಯಬೇಕು.
  • ಹಣ್ಣಿನ ಬೆಳೆಗಳಲ್ಲಿ ಅವುಗಳ ಸಾಲುಗಳ ಅಂತರಕಡಿಮೆಇದ್ದಲ್ಲಿ ಬೆಳೆಗಳ ಸಾಲುಗಳ ನಡುವೆ ಮಾದರಿಯನ್ನು ಸಂಗ್ರಹಿಸಬೇಕು ಅಥವಾ ಸಾಲುಗಳ ಅಂತರ ಜಾಸ್ತಿ ಇದ್ದಲ್ಲಿ, ಗಿಡಗಳ ಕಾಂಡದಿಂದ ೩ ಅಡಿ ಅಂತರದಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಬೇಕು. ಆದಷ್ಟು ಬೇರುಗಳಿಂದ ದೂgದಲ್ಲಿ ಮಣ್ಣಿನ ಮಾದರಿ ತೆಗೆಯಬೇಕು. ಬಹುವಾರ್ಷೀಕ ಬೆಳೆಗಳಿರುವ ಜಮೀನಿನಲ್ಲಿ ಮೇ ತಿಂಗಳಿನಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಬೇಕು.
  • ಬಹುವಾರ್ಷಿಕ ಬೆಳೆಗಳಾದಲ್ಲಿ (ಹಣ್ಣಿನ ಬೆಳೆಗಳು) ಹಾಗೂ ಯಾವುದೇ ಬೆಳೆಯ ಬೇರುಗಳು ಆಳಕ್ಕೆ ಇಳಿಯುವುದಾದರೆ ಮೇಲ್ಮಣ್ಣು (0-3೦ ಸೆಂ. ಮೀ) ಹಾಗು ತಳ ಮಣ್ಣು (30-60 ಸೆಂ. ಮೀ) ಎಂದುಎರಡು ಮಿಶ್ರ ಮಾದರಿಗಳನ್ನು ಬೇರೆ ಬೇರೆಯಾಗಿ ಪಡೆದುಕೊಳ್ಳಬೇಕು.
  • ಕೊಟ್ಟಿಗೆಗೊಬ್ಬರ ಸಂಗ್ರಹಿಸಿದ ಸ್ಥಳದ ಹತ್ತಿರ, ಬದುಗಳ ಹತ್ತಿರ, ರಸ್ತೆಗಳ ಸಮೀಪ, ವಿದ್ಯುತ್‌ಕಂಬದ ಹತ್ತಿರ, ದೊಡ್ಡ ಗಿಡಗಳ ಕೆಳಗೆ, ರಾಸಾಯನಿಕಗೊಬ್ಬರ ಬಿದ್ದ ಸ್ಥ¼ಗಳಲ್ಲಿ ಮಣ್ಣಿನ ಮಾದರಿಗಳನ್ನು ತೆಗೆಯಬಾರದು. ಗೊಬ್ಬರದಚೀಲದಲ್ಲಿ ಮಣ್ಣಿನ ಮಾದರಿಗಳನ್ನು ತುಂಬಬಾರದು.

ಮಣ್ಣಿನ ಮಾದರಿತೆಗೆಯುವ ವಿಧಾನ

  • ಮಣ್ಣಿನ ಪರೀಕ್ಷೆ ಮತ್ತು ವಿಶ್ಲೇಷಣೆಯು ಮಣ್ಣಿನ ಮಾದರಿಯನ್ನೇ ಅವಲಂಬಿಸಿರಿವುದರಿAದ ಜಮೀನಿನ ಸುತ್ತ ಓಡಾಡಿ, ಭೂಮಿಯ ಇಳಿಜಾರು, ಮಣ್ಣಿನಬಣ್ಣ, ಕಣ ವಿನ್ಯಾಸ, ಬೆಳೆ ಪದ್ಧತಿ ಮುಂತಾದವುಗಳನ್ನು ಗಮನಿಸಿ ಜಮೀನನ್ನು ಏಕ ರೀತಿಯ ತಾಕುಗಳಾಗಿ ವಿಂಗಡಿಸಬೇಕು. ಪ್ರತಿ ಏಕ ರೀತಿಯ ತಾಕುಗಳಲ್ಲಿ 8-10 ಜಾಗಗಳಲ್ಲಿ ಉಪಮಾದರಿ ಮಣ್ಣನ್ನುತೆಗೆಯುವ ಸ್ಥಳಗಳನ್ನು ಗುರುತಿಸಬೇಕು. ‘Z’ಆಕಾರದಲ್ಲಿತಿರುಗಾಡಿ ಮಣ್ಣಿನಉಪ ಮಾದರಿಯನ್ನುತೆಗೆಯಬೇಕು.
  • ಮಣ್ಣಿನ ಮಾದರಿಯನ್ನುವಿ (ಗಿ) ಆಕಾರದ ಮಾದರಿಯಲ್ಲಿತರಕಾರಿ ಬೆಳೆಗಳು, ಹೂವಿನ ಬೆಳೆಗಳು ಮತ್ತುಔಷಧಿ ಬೆಳೆಗಳು ಬೆಳೆಯಬೇಕಾದ ಪ್ರದೇಶದಲ್ಲಿ, ಮೇಲ್ಮೆಯಿಂದ 0-15 ಸೆಂ.ಮೀ. (6 ಇಂಚು) ಆಳದವರೆಗೆ ತೆಗೆಯಬೇಕು. ಹೆಚ್ಚು ಆಳಕ್ಕೆ ಇಳಿಯುವ ಬೇರುಗಳನ್ನು ಹೊಂದಿರುವ ಬೆ¼ಗಳಲ್ಲಿ 30 ಸೆ.ಮೀ. ವರೆಗೆಅಥವಾ 30-60 ಸೆ. ಮಿ. ವರೆಗೆಮಾದರಿಯನ್ನು ಸಂಗ್ರಹಿಸಬಹುದು.
  • ಆದರೆ ವಿ (ಗಿ) ಆಕಾರದತಗ್ಗನ್ನುತೆಗೆದುಒಂದುಕಡೆಯ ಪಕ್ಕದಿಂದಒAದು ಅಂಗುಲ ದಪ್ಪ ಮಣ್ಣನ್ನು 6 ಇಂಚು ಆಳದವರೆಗೆ ಮೇಲ್ಮಣ್ಣು ಸಹಿತ ಬರುವಂತೆತೆಗೆಯಬೇಕು.
  • ಉಪಮಾದರಿಗಳನ್ನು ತೆಗೆದುಚೆನ್ನಾಗಿ ಮಿಶ್ರ ಮಾಡುವುದು ಮತ್ತು ಕಸ, ಕಡ್ಡಿತೆಗೆಯುವುದು.
  • ಮಣ್ಣಿನ ಸಂಗ್ರಹಣೆ ನಂತರ ಸಮನವಾಗಿ ನಾಲ್ಕು ಭಾಗ ಮಾಡಬೇಕು. ನಂತರಎದುರು-ಬದಿರು ಇರುವಎರಡು ಭಾಗವನ್ನು ಹೊರಹಾಕಬೇಕು ಉಳಿದ ಎರಡು ಭಾಗವನ್ನು ಮತ್ತೆ ಮಿಶ್ರ ಮಾಡಿ ಮತ್ತೆ ಮೇಲೆ ಹೇಳಿದ ವಿಧಾನವನ್ನುಅನುಸರಿಸಬೇಕು.
  • ಮಣ್ಣು ಅರ್ಧ ಕಿ.ಗ್ರಾಂ.ಉಳಿಯುವವರೆಗೆ ಮೇಲೆ ತಿಳಿಸಿದ ವಿಧಾನವನ್ನು ಮುಂದುವರೆಸಬೇಕು.
  • ಕೊನೆಗೆ ಸಂಗ್ರಹಿಸಿದ ಮಣ್ಣನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಬೇಕು.
  • ರೈತನ ಹೆಸರು, ಹಳ್ಳಿಯ ಹೆಸರು, ತಾಲುಕು, ಸರ್ವೇ ನಂ. ಮಣ್ಣಿನ ಮಾದರಿಯನ್ನು ಸಂಗ್ರಹಿಸಿದ ಆಳ, ದಿನಾಂಕ, ಹಿಂದಿನ ಬೆಳೆ, ಬೆಳೆಯಬೇಕಾಗಿರುವ ಬೆಳೆ ಮುಂತಾದವಿವರಗಳನ್ನು ಚೀಟಿಯಲ್ಲಿ ನಮೂದಿಸಬೇಕು.

ಮಣ್ಣು ಪರೀಕ್ಷೆಯನ್ನು ಎಷ್ಟು ಬಾರಿ ಮಾಡಿಸಬೇಕು

  • ಸಾಮಾನ್ಯವಾಗಿಒಣಬೇಸಾಯ ಪ್ರದೇಶಗಳಲ್ಲಿ ೩ ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು.
  • ನೀರಾವರಿ ಪ್ರದೇಶಗಳಲ್ಲಿ ಬಹುಬೆಳೆ ಪದ್ಧತಿ ಅನುಸರಿಸುವುದರಿಂದ ಹಾಗೂ ತಳಿ ವರ್ಧಕ ಬೆಳೆಗಳನ್ನು ಬೆಳೆಯುವುದರಿಂದ, ಪ್ರತಿ ವರ್ಷವು ಅಥವಾ ಪ್ರತಿ ಮೂರನೇ ಬೆಳೆ ಕಟಾವು ಮಾಡಿದ ಮೇಲೆ ಮಣ್ಣು ಪರೀಕ್ಷೆ ಮಾಡಿಸುವುದುಅವಶ್ಯ

ಮಣ್ಣಿನ ಮಾದರಿ ಸಂಗ್ರಹಣೆಗೆ ಬಳಸಬೇಕಾದ ಸಲಕಣೆಗಳು: ಮಣ್ಣುಕೊರೆಯುವ ಕೊಳವೆ, ಗುದ್ದಲಿ/ಸಲಿಕೆ, ಕುರ್ಪಿ (ಕುರ್ಚಿಗಿ), ಮಣ್ಣಿನ ಮಾದರಿಯ ಸಂಗ್ರಹಕ್ಕೆ ಪ್ಲಾಸ್ಟಿಕ್ ಬುಟ್ಟಿ, ಮಣ್ಣಿನ ಸಂಗ್ರಹಕ್ಕೆಒಂದು ಪ್ಲಾಸ್ಟಿಕ್ ಚೀಲ ಇತ್ಯಾದಿ

ದಾಳಿಂಬೆ ಮತ್ತು ದಾಕ್ಷಿಯಲ್ಲಿ ಮಣ್ಣಿನ ಮಾದರಿ ಸಂಗ್ರಹಣೆ

ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳ ಬಳಕೆ :

ವಿವಿಧ ಬೆಳೆಗಳಿಗೆ ಕೊಡಬೇಕಾದರಾಸಾಯನಿಕ ಗೊಬ್ಬರಗಳ ಪ್ರಮಾಣ ಕೆಳಗಿನ ಎರಡು ಅಂಶಗಳನ್ನು ಅವಲಂಬಿಸಿರುತ್ತದೆ.

  1. ಬೆಳೆ ಉಪಯೋಗಿಸಿಕೊಳ್ಳುವ ಸಸ್ಯ ಪೋಷಕಾಂಶಗಳ ಪ್ರಮಾಣ.
  2. ಮಣ್ಣಿನಲ್ಲಿರುವ ಸಸ್ಯ ಪೋಷಕಾಂಶಗಳ ಮಟ್ಟಅಥವಾ ಮಣ್ಣಿನ ಫಲವತ್ತತೆ.

ಹೈಬ್ರಿಡ್ ಮತ್ತುಅಧಿಕ ಇಳುವರಿ ಕೊಡುವ ಸುಧಾರಿತ ತಳಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಸ್ಯ ಪೋಷಕಾಂಶಗಳನ್ನು ಬಳಸಿಕೊಳ್ಳುವ ಸಾಮರ್ಥ್ಯವಿದೆ. ಸಂಶೋಧನೆಯಆಧಾರದ ಮೇಲೆ ವಿವಿಧ ಬೆಳೆಗಳಿಗೆ ಸಾಧಾರಣ ಫಲವತ್ತತೆಯ ಸನ್ನಿವೇಶದಲ್ಲಿಕೊಡಬೇಕಾದರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಿ, ಶಿಫಾರಸು ಮಾಡಲಾಗಿದೆ.ಆದರೆ ಈ ಶಿಫಾರಸುಗಳನ್ನು ಮಣ್ಣಿನ ಪರೀಕ್ಷೆಯಆಧಾರದ ಮೇಲೆ ಬದಲಾವಣೆ ಮಾಡಿಕೊಳ್ಳುವುದು ಅವಶ್ಯಕ.

ಮಣ್ಣಿನ ಪರೀಕ್ಷೆ ಮಾಡಿಸದೆ, ರಾಸಾಯನಿಕ ಗೊಬ್ಬರಗಳನ್ನು  ಹಾಕುವುದರಿಂದಅವಶ್ಯಕತೆಗಿAತ ಹೆಚ್ಚಿಗೆಖರ್ಚು ಮಾಡುವುದರೊಂದಿಗೆ ಭೂಮಿಯಗುಣಮಟ್ಟವನ್ನು ಹಾಳು ಮಾಡಲಾಗುತ್ತ್ತಿದೆ. ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಾಗಿರುವ ಈ ದಿನಗಳಲ್ಲಿ ಮಣ್ಣಿನ ಪರೀಕ್ಷೆಯಆಧಾರದ ಮೇಲೆ ಅವಶ್ಯವಿದ್ದಷ್ಟು ಗೊಬ್ಬರಗಳನ್ನು ಕೊಡುವುದು, ಇಳುವರಿ ಹಾಗೂ ಆರ್ಥಿಕದೃಷ್ಟಿಯಿಂದ ಸೂಕ್ತ ಪದ್ಧತಿ. ಮಣ್ಣು ಪರೀಕ್ಷೆಯಿಂದ ಮಣ್ಣಿನಲ್ಲಿ ಲಘುಪೋಷಕಾಂಶಗಳ (ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಸತುವು, ಮಾಲಿಬ್ಡಿನಂ ಮತ್ತು ಬೋರಾನ್) ಕೊರತೆಇದ್ದರೆ ಅವುಗಳನ್ನು ನೀಗಿಸುವ ಕ್ರಮ ತೆಗೆದುಕೊಳ್ಳಬಹುದು.

ಮಣ್ಣು ಪರೀಕ್ಷಾ ಕೇಂದ್ರಗಳಲ್ಲಿ  ಮೂರು ಪ್ರಧಾನ  ಸಸ್ಯ  ಪೋಷಕಾಂಶಗಳಾದ   ಸಾರಜನಕ (ಸಾವಯವ  ಇಂಗಾಲ),  ರಂಜಕ ಮತ್ತು  ಪೊಟ್ಯಾಷ್‌ಗಳು  ದೊರೆಯುವ   ಪ್ರಮಾಣವನ್ನು ನಿರ್ಧರಿಸಲಾಗುವುದು. ಈ ಆಧಾರದ ಮೇಲೆ ಮಣ್ಣನ್ನುಕಡಿಮೆ, ಮಧ್ಯಮಅಥವಾಅಧಿಕ ಫಲವತ್ತತೆ ವರ್ಗಗಳಾಗಿ ಈ ಕೆಳಗಿನಂತೆ ವಿಂಗಡಿಸಲಾಗುವುದು.ತಜ್ಞರು ಮಣ್ಣಿನ ಪರೀಕ್ಷೆ ಫಲಿತಾಂಶ ಮತ್ತು ಬೆಳೆಯ ಆಧಾರದ ಮೇಲೆ ಸೂಕ್ತ ರಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಶಿಫಾರಸ್ಸು ಮಾಡುತ್ತಾರೆ.

ಕ್ರ.ಸಂ.

ಪೋಷಕಾAಶಗಳು

ಕಡಿಮೆ ಫಲವತ್ತತೆ

ಮಧ್ಯಮ ಫಲವತ್ತತೆ

ಅಧಿಕ ಫಲವತ್ತತೆ

1

ಸಾವಯವ ಇಂಗಾಲ (ಶೇ.)

0.5 ಕ್ಕಿಂತ ಕಡಿಮೆ

0.5 ರಿಂದ ೦.75

೦.75 ಕ್ಕಿಂತ ಹೆಚ್ಚು

2

ದೊರೆಯುವಸಾರಜನಕ (ಎಕರೆಗೆ ಕಿ.ಗ್ರಾಂ.ಗಳಲ್ಲಿ)

110 ಕ್ಕಿಂತಕಡಿಮೆ

110 ರಿಂದ 220

220 ಕ್ಕಿಂತ ಹೆಚ್ಚು

3

ದೊರೆಯುವರಂಜಕ (ಎಕರೆಗೆ ಕಿ.ಗ್ರಾಂ.ಗಳಲ್ಲಿ)

9.೦ ಕ್ಕಿಂತ ಕಡಿಮೆ

9.0 ರಿಂದ 22.0

22.0 ಕ್ಕಿಂತ ಹೆಚ್ಚು

4

ದೊರೆÀಯುವ ಪೊಟ್ಯಾಶ್ (ಎಕರೆಗೆ ಕಿ.ಗ್ರಾಂ.ಗಳಲ್ಲಿ)

50.೦ಕ್ಕಿಂತ ಕಡಿಮೆ

50 ರಿಂದ 120

120ಕ್ಕಿಂತ ಹೆಚ್ಚು

ಎಲೆ ಮಾದರಿ ವಿಶ್ಲೇಷಣೆ

1  ಎಲೆ ಮಾದರಿ ವಿಶ್ಲೇಷಣೆ ಮಾಡುವುದುಒಂದು ಮುಖ್ಯವಾಗಿ ಬೆಳೆಗಳಲ್ಲಿ ಪೋಷಕಾಂ±ಗ¼ ಉಸ್ತುವಾರಿ ಮಾಡಲು ಸಹಮಾಡುತ್ತದೆ  ಮತ್ತು

2  ಬೆಳೆಗಳಲ್ಲಿ ಪೋಷಕಾಂಶ ಕೊರತೆಕಂಡು ಹಿಡಿಯಲು ಸಹಮಾಡುತ್ತದೆ.

3  ಉತ್ತಮ ಬೆಳವಣಿಗೆಗೆ ಅವಶ್ಯವಿರುವ ಪೋಷಕಾಂಶ ಪೂರೈಕೆ ಸಾಮರ್ಥ್ಯವನ್ನು ಅಳೆಯಬಹುದಾಗಿದೆ

ಲಿಂಬೆಯಲ್ಲಿ ಎಲೆ ಮಾದರಿ ಸಂಗ್ರಹಣೆ: ಲಿಂಬೆಯಲ್ಲಿ 1 ನೇ ಜೊತೆಯ ಎಲೆಗಳು, ಜೂನ್ ತಿಂಗಳಿನಲ್ಲಿ ಹೊಸ ಚಿಗುರು ಬಂದಮೇಲೆ ಎಲೆ ಮಾದರಿ ಸಂಗ್ರಹಣೆ ಮಾಡಬೇಕು. ಒಂದುತೋಟದಿAದ 50 ಎಲೆಗಳನ್ನು ತೆಗೆಯಬೇಕು (ಒಂದು ಎಕರೆ).

ದಾಳಿಂಬೆಯಲ್ಲಿ ಎಲೆ ಮಾದರಿ ಸಂಗ್ರಹಣೆ: ದಾಳಿಂಬೆಯಲ್ಲಿ 8ನೇ ಜೊತೆಯ ಎಲೆಗಳು, ಅಗಸ್ಟ್ ತಿಂಗಳಿನಲ್ಲಿ ಹೊಸ ಚಿಗುರು ಬಂದಮೇಲೆ ಎಲೆ ಮಾದರಿ ಸಂಗ್ರಹಣೆ ಮಾಡಬೇಕು. ಒಂದುತೋಟದಿಂದ 50 ಎಲೆಗಳನ್ನು ತೆಗೆಯಬೇಕು (ಒಂದುಎಕರೆ).

ದಾಕ್ಷಿಯಲ್ಲಿ ಎಲೆ ಮಾದರಿ ಸಂಗ್ರಹಣೆ:ದಾಕ್ಷಿಯಲ್ಲಿ ೫ನೇ ಕಡ್ಡಿಯನ್ನು, ಮೇ ತಿಂಗಳಿನಲ್ಲಿ ಹೊಸ ಚಿಗುರು ಬಂದಮೇಲೆ ಎಲೆ ಮಾದರಿ ಸಂಗ್ರಹಣೆ ಮಾಡಬೇಕು. ಒಂದು ತೋಟದಿಂದ 200 ಕಡ್ಡಿಯನ್ನುತೆಗೆಯಬೇಕು (ಒಂದುಎಕರೆ).

ಲೇಖನ:  ಹೀನಾ. ಎಮ್.ಎಸ್.,ಸವಿತಾ, ಬಿ., ಸೈಯದ್ ಸಮೀನ್ ಅಂಜುಮ್‌ ಮತ್ತು ಆರ್. ಬಿ. ನೆಗಳೂರ, ಐ.ಸಿ.ಎ.ಆರ್.-ಕೃಷಿ ವಿಜ್ಞಾನಕೇಂದ್ರ, ಇಂಡಿ

Published On: 01 May 2021, 09:43 PM English Summary: importance of Soil sampling

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.