1. ಅಗ್ರಿಪಿಡಿಯಾ

ಕೃಷಿ ಯಂತ್ರೋಪಕರಣ ಸಾಲಕ್ಕೆ CIBIL SCORE ಎಷ್ಟು ಮುಖ್ಯ?

Maltesh
Maltesh
what is CIBIL SCORE

CIBIL ಸ್ಕೋರ್ ಎಂಬುದು ಒಬ್ಬ ಸಾಲಗಾರ ವ್ಯಕ್ತಿಯ ಸಾಲದ ಪೂರ್ಣ ಇತಿಹಾಸವನ್ನು ತಿಳಿಸುವ ಒಂದು ಮಾನದಂಡವಾಗಿದೆ. ಇದನ್ನು 300 ರಿಂದ 900 ಅಂಕಿಯ ನಡುವೆ ಬಳಸಲಾಗುತ್ತದೆ.

ಇದು ಒಬ್ಬ ವ್ಯಕ್ತಿಯು ಸಾಲ ಪಡೆಯಲು ಅರ್ಹತೆಯನ್ನು ಹೊಂದಿದ್ದಾನೆ ಇಲ್ಲವೋ ಎಂಬುದನ್ನು ಸಾಂಖ್ಯಿಕ ರೂಪದಲ್ಲಿ ವರದಿ ನೀಡುವ ಒಂದು ಪ್ರಕ್ರಿಯೆಯಾಗಿದೆ.

ಸಾಮಾನ್ಯವಾಗು ನಾವು ಬ್ಯಾಂಕುಗಳಿಂದ ಸಾಲವನ್ನು ಪಡೆಯಬೇಕಾದರೆ ನಮ್ಮಲ್ಲಿ ಶ್ಯೂರಿಟಿಯ ಪವರ್‌ ಇದ್ದ ಮಾತ್ರಕ್ಕೆ ಸಾಲ ಸುಲಭವಾಗಿ ಸಿಗುವದಿಲ್ಲ. ಸಾಲದ ಅನುಮೋದನೆಯನ್ನು ಈ ಸಿಬಿಲ್‌ ಸ್ಕೋರ್‌ ಶೇ 50ರಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸಿಬಿಲ್‌ ಸ್ಕೋರ್‌ ಮಲಕ ಸಾಲಕ್ಕೆ ಅರ್ಜಿ ಸಲ್ಲಿಸಿದವರು ಈ ಮೊದಲು ಯಾವ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡಿದ್ದಾರೆ, ಜೊತೆಗೆ ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಿನಿಲ್‌ ಸ್ಕೋರ್‌ ನೋಡುತ್ತಾರೆ. ಪ್ರಸ್ತುತ ಆ ವ್ಯಕ್ತಿಯ ಹಣಕಾಸಿನ ಸ್ಥಿತಿ, ಮತ್ತು ಸಾಲ ಪಡೆಯಲು ಹಾಗೂ ಮರುಪಾವತಿ ಮಾಡಲು ಅವನ ಪೂರ್ವ ಇತಿಹಾಸ ಹೇಗಿದೆ ಎಂಬಿತ್ಯಾದಿ ಮಾಹಿಯನ್ನು ಒಳಗೊಂಡ ಒಂದು ಪ್ರಕ್ರಿಯೆ CIBIL ಸ್ಕೋರ್.

ಕ್ರೆಡಿಟ್ ಮಾಹಿತಿ ಬ್ಯೂರೋ ಲಿಮಿಟೆಡ್‌ ಇದರ ವಿಸ್ತೃತ ರೂಪವಾಗಿದೆ. CIBIL ಸ್ಕೋರ್. ಹೆಚ್ಚಿನ ಸ್ಕೋರ್ ಉತ್ತಮ ಕ್ರೆಡಿಟ್ ಅರ್ಹತೆಯನ್ನು ಸೂಚಿಸುತ್ತದೆ. ಸ್ಕೋರ್ ಅನ್ನು ವಿವಿಧ ಅಂಶಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

ಮಷೀನರಿ Loan ಪಡೆಯುವಲ್ಲಿ CIBIL Score
ಸಿಬಿಲ್‌ ಸ್ಕೋರ್‌ ವಿಶೇಷವಾಗಿ ಕೃಷಿ ಯಂತ್ರೋಪಕರಣಗಳ ಸಾಲವನ್ನು ಪಡೆಯುವಲ್ಲಿ ಪ್ರಮುಖ ಪಾತ್ರವನು ವಹಿಸುತ್ತದೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ವಿವರಿಸಲಾಗಿದೆ.

ಸಾಲದ ಸಂಭವನೀಯತೆ ಹೆಚ್ಚಳ : ಸಾಲದಾತರು ನಿಮ್ಮ ಆರ್ಥಿಕ ಶಿಸ್ತನ್ನು ಪರಿಶೀಲನೆ ಮಾಡಲು ಕ್ರೆಡಿಟ್‌ ಸ್ಕೋರ್‌ ಅನ್ನು ಚೆಕ್‌ ಮಾಡುತ್ತಾರೆ. ಸಾಲದಾತರಿಗೆ ನೀವು ಒಳ್ಳೆಯ ಸಿಬಿಲ್‌ ಸ್ಕೋರ್‌ ಒಳಗೊಂಡಿರುವುದು ನಿಮ್ಮ ಸಾಲವನ್ನು ಮಂಜೂರು ಮಾಡಲು ಅನುಕೂಲವಾಗುತ್ತದೆ. ಆರ್ಥಿಕ ಶಿಸ್ತಿನ ಭಾಗವಾಗಿ ಇದನ್ನು ಪರಿಗಣಿಸುವದರಿಂದ ನಿಮ್ಮ ಸಾಲದ ಸಂಭವನೀಯತೆ ಹೆಚ್ಚುತ್ತದೆ.

ಸಾಲದ ಮೊತ್ತದಲ್ಲಿ ಹೆಚ್ಚಳ : ಉತ್ತಮವಾದ ಸಿಬಿಲ್‌ ಸ್ಕೋರ್‌ ಅನ್ನು ಹೊಂದಿರುವುದು ನಿಮ್ಮ ಸಾಲದ ಮೊತ್ತವನ್ನು ಹೆಚ್ಚಿಸಲುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೌದು ಸಾಮಾನ್ಯವಾಗಿ ಅಧಿಕ ವೆಚ್ಚದ ಕೃಷಿ ಯಂತ್ರವನ್ನು ನೀವು ಖರೀದಿ ಮಾಡಲು ಯೋಚಿಸಿದಾಗ ಹೆಚ್ಚಿನ ಹಣದ ಸಾಲದ ಅವಶ್ಯಕತೆ ಇರುತ್ತದೆ. ಆಗ ಉತ್ತಮ ಸ್ಕೋರ್‌ ಹೊಂದಿರುವುದು ಸಾಲದ ಮೊತ್ತವನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ.

ದೀರ್ಘಾವದಿಯ ಸಾಲಗಳು : ಸಾಲವನ್ನು ಕಟ್ಟುವ ಅವಧಿಯನ್ನು ದೀರ್ಘಾವಧಿಯವರೆಗೆ ವಿಸ್ತರಿಸಲು ಇದರಿಂದ ಸಾಧ್ಯವಾಗುತ್ತದೆ. ಈ ಮೊದಲಿನ ಸಾಲದ ಇತಿಹಾಸಗಳಲ್ಲಿ ಮರುಪಾವತಿಯನ್ನು ಸಕಾಲಕ್ಕೆ ಮಾಡಿರುವ ಇತಿಹಾಸವಿದ್ದರೆ ಸಾಲದ ಅವಧಿ ಕೂಡ ವಿಸ್ತರಣೆಯಾಗುವ ಸಂಭವವಗಳಿರುತ್ತವೆ.

ಬಡ್ಡಿ ದರ: ಉತ್ತಮ ಆರ್ಥಿಕ ಶಿಸ್ತಿನ ಇತಿಹಾಸ ಹೊಂದಿ ಅತ್ಯುತ್ತಮ ಸಿಬಿಲ್‌ ಸ್ಕೋರ್‌ ನಿಮ್ಮದಾಗಿದ್ದರೆ ಬಡ್ಡಿದರದಲ್ಲಿ ಕೂಡ ವಿನಾಯಿತಿ ಪಡೆಯಬಹುದು. ನಿಮ್ಮ ಸಾಲದಾತರು ನೀವು ಹೋಮದಿರುವ ಸ್ಕೋರ್‌ ಆಧಾರದ ಮೇಲೆ ಬಡ್ಡಯ ದರದಲ್ಲಿ ಕಡಿಮೆ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.

ಹೀಗೆ ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲಿ ಸಿಬಿಲ್‌ ಸ್ಕೋರ್‌ ತನ್ನದೆಯಾದ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಅನ್ನದಾತರು ಯಂತ್ರೋಪಕರಣ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಈ ಅಂಶಗಳನ್ನು ನೆನಪಿನಲ್ಲಿಡುವುದು ಅವಶ್ಯವಾಗಿದೆ.

Published On: 25 December 2023, 02:15 PM English Summary: How Important is CIBIL SCORE for Farm Machinery Loan?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.