1. ಅಗ್ರಿಪಿಡಿಯಾ

ಸಿಹಿ ಗೆಣಸು ಬೆಳೆಸಿ ಬಾಳು ಸಿಹಿ ಮಾಡಿಕೊಳ್ಳುವುದೇ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

sweet potato

ಸಿಹಿ ಗೆಣಸು ಒಂದು ಆರೋಗ್ಯಕರ ಆಹಾರ. ಗೆಡ್ಡಗಳ ಜಾತಿಗೆ ಸೇರಿರುವ ಇದು, ತನ್ನೊಳಗೆ ಹತ್ತು ಹಲವು ಆರೋಗ್ಯ ಪೂರಕ ಪ್ರಯೋಜನಗಳನ್ನು ಅಡಕವಾಗಿಸಿಕೊಂಡಿದೆ. ಆದರೆ ಕರ್ನಾಟಕದ ಕೆಲವೇ ಜಿಲ್ಲೆಗಳ ರೈತರು ಸಿಹಿ ಗೆಣಸು ಬೆಳೆಯುತ್ತಾರೆ. ಕರಾವಳಿ ಭಾಗ, ದಕ್ಷಿಣ ಕನ್ನಡ, ಕಾರವಾರ ಮತ್ತು ಬೆಳಗಾವಿ ಭಾಗಗಳಲ್ಲಿ ಬೆಳೆದಷ್ಟು ರಾಜ್ಯದ ಬೇರಾವ ಜಿಲ್ಲೆಯ ರೈತರೂ ಇದನ್ನು ಬೆಳೆಯುವುದಿಲ್ಲ.

ಹೆಚ್ಚಿನ ಭಾಗದ ರೈತರು ಇದನ್ನು ಬೆಳೆಯುವುದಿಲ್ಲ ಎನ್ನುವುದಕ್ಕಿಂತಲೂ ಮುಖ್ಯವಾಗಿ ಬಹಳಷ್ಟು ರೈತರಿಗೆ ಸಿಹಿ ಗೆಣಸು ಕೂಡ ಒಂದು ಲಾಭದಾಯಕ ಬೆಳೆ ಎಂಬ ವಿಷಯ ಗೊತ್ತಿಲ್ಲ. ಇನ್ನೊಂದೆಡೆ ಈ ಬೆಳೆಗೆ ಹೊಂದಿಕೆಯಾಗುವ ಮಣ್ಣು ಎಲ್ಲೆಡೆ ಇಲ್ಲದಿರುವುದು ಕೂಡ ಬೇರೆ ಭಾಗದ ರೈತರು ಸಿಹಿ ಗೆಣಸು ಬೆಳೆಯಲು ಆಸಕ್ತಿ ತೋರಿಸದೇ ಇರುವುದಕ್ಕೆ ಕಾರಣವಿರಬಹುದು. ಹಾಗಂತ ಬೇರೆ ಜಿಲ್ಲೆಗಳ ರೈತರು ಗೆಣಸು ಬೆಳೆಯಲು ಪ್ರಯತ್ನಿಸಿಲ್ಲ ಎಂದಲ್ಲ. ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣದಲ್ಲಿ ತುಮಕೂರು, ಕೋಲಾರ ಹಾಗೂ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳ ರೈತರು ಸಿಹಿ ಗೆಣಸು ಬೆಳೆದಿದ್ದಾರೆ. ಕೆಲವರು ಅಧಿಕ ಲಾಭವನ್ನೂ ಗಳಿಸಿದ್ದಾರೆ.

ಮಣ್ಣು, ಹವಾಗುಣ

ಹಗುರವಾದ ರಚನೆಯನ್ನು ಹೊಂದಿರುವ ಹಾಗೂ ಅತ್ಯಂತ ಫಲವತ್ತಾಗಿರುವ ಮರಳು ಮಿಶ್ರಿತ ಗೋಡು ಮಣ್ಣು ಸಿಹಿ ಗೆಣಸು ಬೆಳೆಯಲು ಸೂಕ್ತವಾಗಿದೆ. ಈ ವಿಧದ ಮಣ್ಣು ಸಡಿಲವಾಗಿರುವುದರಿಂದ ಗೆಣಸುಗಳು ನೆಲದಲ್ಲಿ ಸುಲಭವಾಗಿ ಇಳಿದು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ. ತೀರಾ ಒತ್ತು ಒತ್ತಾದ ರಚನೆಯನ್ನು ಹೊಂದಿರುವ ಕೆಂಪು ಮತ್ತು ಕಪ್ಪು ಮಣ್ಣಿನ ಜಮೀನುಗಳಲ್ಲಿ ಗೆಣಸಿನ ಬೆಳೆ ಉತ್ತಮವಾಗಿ ಬರುವುದಿಲ್ಲ. ಜೊತೆಗೆ ಒಣ ಹವೆಯು ಈ ಬೆಳೆಗೆ ಪೂರಕವಾಗಿದ್ದು, ನೀರಾವರಿ ಪ್ರದೇಶ ಹಾಗೂ ಮಳೆ ಆಶ್ರಿತ ಕೃಷಿ ಭೂಮಿ ಎರಡರಲ್ಲೂ ಬೆಳೆಯಬಹುದಾಗಿದೆ. ನೀರಾವರಿ ಸೌಲಭ್ಯವಿರುವ ಭೂಮಿ ಇದ್ದರೆ ವರ್ಷಕ್ಕೆ ಎರಡು ಬೆಳೆಗಳನ್ನು ತೆಗೆಯಯಬಹುದು.

ಬಿತ್ತನೆ ಸಮಯ

ಹವಾಗುಣಕ್ಕೆ ಅನುಗುಣವಾಗಿ ಒಂದೊAದು ಭಾಗದಲ್ಲಿ ಒಂದೊAದು ಅವಧಿಯಲ್ಲಿ ಸಿಹಿ ಗೆಣಸನ್ನು ಬಿತ್ತನೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಕರಾವಳಿ ಭಾಗದ ಬೆಳೆಗಾರರು ಮೊದಲ ಬೆಳೆಗೆ ಗೆಣಸು ಬಿತ್ತನೆಗೆ ಮೇ-ಜೂನ್ ತಿಂಗಳ ಅವಧಿಯನ್ನು, ಎರಡನೇ ಬೆಳೆಗೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ದಕ್ಷಿಣ ಒಳನಾಡಿನ ಪ್ರದೇಶಗಳ ರೈತರು ಜೂನ್-ಜುಲೈ ಮಾಹೆಯಲ್ಲಿ ಮೊದಲ ಬಿತ್ತನೆ ಮಾಡಿ, ನೀರಾವರಿ ಸೌಲಭ್ಯವಿದ್ದರೆ ಅಕ್ಟೋಬರ್-ಡಿಸೆಂಬರ್ ತಿಂಗಳುಗಳ ನಡುವಿನ ಅವಧಿಯಲ್ಲಿ ಬಿತ್ತನೆ ಮಾಡುತ್ತಾರೆ.

ಗೆಣಸಿನ ತಳಿಗಳು

ರಾಜ್ಯದಲ್ಲಿ ಬೆಳೆಯಲಾಗುವ ಸಿಹಿ ಗೆಳಸಿನ ಹೆಚ್ಚಿನ ತಳಿಗಳು, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಂದ ಬಂದಿವೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಹೊಸೂರು ರೆಡ್ ಮತ್ತು ಹೊಸೂರು ರೆಡ್ ತಳಿಗಳನ್ನು ದಕ್ಷಿಣ ಒಳನಾಡಿನ ಕೆಲ ರೈತರು ಬೆಳೆಯುತ್ತಿದ್ದು, ಉಳಿದಂತೆ ಪಂಜಾಬ್ ಮೂಲದ ವಿ-12 (ಕಂದು ಬಣ್ಣ), ವಿ-6 (ಕೆಂಪು ಬಣ್ಣ), ಎಚ್-41, ಎಚ್-42 ತಳಿಗಳ ಸಿಹಿ ಗೆಣಸನ್ನು ಹೆಚ್ಚು ಬೆಳೆಯುತ್ತಾರೆ. ಇವೆಲ್ಲವೂ 4ರಿಂದ 5 ತಿಂಗಳಲ್ಲಿ ಕೊಯ್ಲಿಗೆ ಬರುವ ತಳಿಗಳಾಗಿವೆ. ಇನ್ನು ಕರಾವಳಿ ಭಾಗದಲ್ಲಿ ವಿ-35, ಸಿ-43 (ಬಿಳಿ ಗೆಣಸು), ವಿ-30 (ಹಳದಿ ಗೆಣಸು) ತಳಿಗಳನ್ನು ಹೆಚ್ಚಾಗಿ ನಾಟಿ ಮಾಡುತ್ತಾರೆ. ಇವೆಲ್ಲವೂ 100ರಿಂದ 120 ದಿನಗಳ ಒಳಗಾಗಿ ಕೊಯ್ಲಿಗೆ ಬರುವ ತಳಿಗಳಾಗಿವೆ. ಇದರೊಂದಿಗೆ ಕರಾವಳಿಯ ಕೆಲ ರೈತರು ಹೊಸೂರು ರೆಡ್ ತಳಿ ಗೆಣಸು ಬೆಳೆಯುವುದುಂಟು. ಸಾಮಾನ್ಯವಾಗಿ 3ರಿಂದ 4 ಕಣ್ಣುಗಳಿರುವ ಗೆಣಸಿನ ಬಳ್ಳಿಯ ತುಂಡುಗಳನ್ನು ಎಕರೆಗೆ 50,000 ರಿಂದ 55,000 ತುಂಡುಗಳAತೆ ಬಿತ್ತನೆ ಮಾಡಲಾಗುತ್ತದೆ.

ಬಿತ್ತನೆ ವಿಧಾನ

ಬಿತ್ತನೆಗೆ ಭೂಮಿಯನ್ನು ಹದ ಮಾಡಿದ ತರುವಾಯ 60 ಸೆಂ.ಮೀ ಅಂತರದಲ್ಲಿ ಸಾಲುಗಳನ್ನು ಸಿದ್ಧಪಡಿಸಿ, ಕೊಟ್ಟಿಗೆ ಗೊಬ್ಬರ (10-15 ಟನ್), ಸಾರಜನಕ (75 ಕೆ.ಜಿ) ರಂಜಕ (50 ಕೆ.ಜಿ), ಪೊಟ್ಯಾಷ್ (75 ಕೆ.ಜಿ) ಅನ್ನು ಮಣ್ಣಿಗೆ ಸೇರಿಸಬೇಕು  ಬಳಿಕ 30 ಸೆಂ.ಮೀ ಅಂತರದಲ್ಲಿ ತುಂಡುಗಳನ್ನು ಊರಬೇಕು. ಬಳಿಕ ಆಯಾ ಪ್ರದೇಶದ ಹವಾಗುಣಕ್ಕೆ ಅನುಗುಣವಾಗಿ 7 ರಿಂದ 8 ದಿನಗಳಿಗೆ ಒಮ್ಮೆ ನೀರುಣಿಸಬೇಕು. (ಗೊಬ್ಬರ, ರಾಸಾಯನಿಕ ಪೋಷಕಾಂಶಗಳ ಪ್ರಮಾಣ ಪ್ರತಿ ಎಕರೆಗಾಗಿದ್ದು, ಬಿತ್ತನೆಗೆ ಮುನ್ನ ಅರ್ಧದಷ್ಟು ಹಾಗೂ ಬಿತ್ತನೆ ಬಳಿಕ ಉಳಿದ ಅರ್ಧದಷ್ಟು ಹಾಕುವುದು ಸೂಕ್ತ). ಬಿತ್ತನೆಗೆ ಮೊದಲು ಹಸಿರೆಲೆ ಗೊಬ್ಬರ ನೀಡಿದರೆ ಗುಣಮಟ್ಟದ ಬೆಳೆ ತೆಗೆಯಬಹುದು.

ಇಳುವರಿ ಹಾಗೂ ಬೆಲೆ

ಎಲ್ಲ ಬೆಳೆಗಳಂತೆಯೇ ಸಿಹಿ ಗೆಣಸಿನ ಇಳ್ರÄವರಿ ಕೂಡ ಒಂದೊAದು ಪ್ರದೇಶದಲ್ಲಿ ಒಂದೊAದು ಪ್ರಮಾಣದಲ್ಲಿ ಬರುತ್ತದೆ. ರಾಜ್ಯದಲ್ಲಿ ಗೆಣಸು ಬೆಳೆಯುತ್ತಿರುವ ಬಹುತೇಕ ಜಿಲ್ಲೆಗಳಲ್ಲಿ ಎಕರೆಗೆ ಸರಾಸರಿ 12ರಿಂದ 15 ಟನ್ ಇಳುವರಿ ಬರುತ್ತಿದೆ. ಕೆಲವರು 18 ಟನ್ ಕೂಡ ಬೆಳೆಯುತ್ತಾರೆ. ಮೆಕ್ಸಿಕೋ ಮತ್ತಿತರ ದೇಶಗಳಲ್ಲಿ ಎಕರೆಗೆ 25ರಿಂದ 30 ಟನ್  ಗೆಣಸು ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಸಿಹಿ ಗೆಣಸಿಗೆ ಹೆಚ್ಚು ಬೇಡಿಕೆ ಇಲ್ಲ. ಆದರೆ ಇಲ್ಲಿ ಬೆಳೆದ ಗೆಣಸುಗಳು ಮಹಾರಾಷ್ಟç, ಪಂಜಾಬ್, ಹರಿಯಾಣ ರಾಜ್ಯಗಳಿಗೆ ರಫ್ತಾಗುತ್ತವೆ. ಸಾಮಾನ್ಯವಾಗಿ ಕ್ವಿಂಟಾಲ್ ಗೆಣಸಿಗೆ 1500 ರೂ.ಗಳಿಂದ 1850 ರೂ. ಬೆಲೆ ಇರುತ್ತದೆ. ರಾಜ್ಯದಲ್ಲೇ ಹೆಚ್ಚು ಗೆಣಸು ಬರುವುದು ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಗೆ.

ಅಧಿಕ ಲಾಭ ನೀಡುವ ಬೆಳೆ

ಸಿಹಿ ಗೆಣಸು ಬೆಳೆಯ ನಿರ್ವಹಣೆಗೆ ಹೆಚ್ಚು ವೆಚ್ಚ ತಗುಲುವುದಿಲ್ಲ. ಬಿತ್ತನೆ, ಗೊಬ್ಬರ ನೀಡುವುದು ಪ್ರಮುಮು ಹೂಡಿಕೆಗಳಾದರೆ, ಇಳುವರಿ ಬಂದ ಬಳಿಕ ಗೆಣಸುಗಳನ್ನು ನೆಲದಿಂದ ತೆಗೆಯಯಲು ಕಾರ್ಮಿಕರು ಬೇಕಾಗುತ್ತಾರೆ. ಯುರೋಪ್ ರಾಷ್ಟçಗಳಲ್ಲಿ ಮತ್ತು ಇತ್ತೀಚೆಗೆ ಭಾರತದ ಕೆಲ ರಾಜ್ಯಗಳಲ್ಲೂ ಟ್ರಾಕ್ಟರ್‌ಗೆ ಫ್ಲೋ ರೀತಿಯ ದೊಡ್ಡ ಉಳಿಮೆ ಸಾಧನಗಳನ್ನು ಅಳವಡಿಸಿಕೊಂಡು ಸಾರಾಸಗಟಾಗಿ ಗೆಣಸನ್ನು ಬಗೆಯಯುವುದುಂಟು. ಜೊತೆಗೆ ರೋಗಗಳ ಹಾವಳಿಯೂ ಕಡಿಮೆ ಇರುವ ಕಾರಣ ರೈತರು ಅಧಿಕ ಲಾಭ ಗಳಿಸಬಹುದು.

Published On: 16 June 2021, 08:23 AM English Summary: Grow sweet potatoes and earn a lot of money

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.