1. ಅಗ್ರಿಪಿಡಿಯಾ

ಸಾಂಬಾರ ಪದಾರ್ಥಗಳ ರಾಣಿ ಎಂದೇ ಹೆಸರಾದ ಏಲಕ್ಕಿ ಬೆಳೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಸಾಂಬಾರ ಪದಾರ್ಥಗಳ ರಾಣಿ ಎಂದೇ ಕರೆಯಲ್ಪಡುವ ಏಲಕ್ಕಿ ಅಂತರರಾಷ್ಟ್ರೀಯ ಮಾರುಕಟೈಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಅಡಕೆ, ತೆಂಗು ತೋಟದಲ್ಲಿ ಏಲಕ್ಕಿ ನೆಟ್ಟು ಕೈತುಂಬಾ ಆದಾಯ ಗಳಿಸುತ್ತಿರುವ ರೈತರ ಸಾಕಷ್ಟು ಉದಾಹರಣೆಗಳಿವೆ. ನೀವು ಏಲಕ್ಕಿ ಬೇಸಾಯ ಮಾಡಬೇಕೆಂದುಕೊಂಡಿದ್ದೀರಾ... ? ಏಲಕ್ಕಿ ಬೆಳೆಯ ಮಹತ್ವ, ತಳಿಗಳು, ಏಲಕ್ಕಿಯ ವೈವಿದ್ಯತೆ, ಮಾರುಕಟ್ಟೆ, ರಪ್ತು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

 ಏಲಕ್ಕಿ ಸುವಾಸನೆಯಿಂದ ಕೂಡಿದ ಸಾಂಬಾರ ಪದಾರ್ಥ. ಆಹಾರ ಪದಾರ್ಥಗಳು, ಬೇಕರಿ ವಸ್ತುಗಳು, ಔಷಧಿಗಳು, ಮಧ್ಯ ಪಾನೀಯಗಳು, ಚಹಾ ಮುಂತಾದವುಗಳಲ್ಲಿ ಏಲಕ್ಕಿಯನ್ನು ಬಳಸುತ್ತಾರೆ. ಬೀಜಗಳಲ್ಲಿ ಶೇ.6-10ರಷ್ಟು ಮತ್ತು ಸಿಪ್ಪೆಯಲ್ಲಿ ಶೇ.0.2ರಷ್ಟು ತೈಲಾಂಶವಿರುತ್ತದೆ. ಈ ಸುಗಂಧ ತೈಲವನ್ನು ಔಷಧಿಗಳು, ಪರಿಮಳ ವಸ್ತುಗಳು, ಸ್ನಾನದ ಸಾಬೂನು ಮುಂತಾದವುಗಳಲ್ಲಿ ಬಳಸುತ್ತಾರೆ.

ಉತ್ಪಾದನೆ:

ಏಲಕ್ಕಿಯಲ್ಲಿ ಎರಡು ವಿಧ, ಸಣ್ಣ ಮತ್ತು ದಪ್ಪ. 2000 ಇಸವಿಯ ತನಕ ಭಾರತ ಏಲಕ್ಕಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿತ್ತು. ಆದರೆ ಗ್ವಾಟೆ ಮಾಲಾ ದೇಶ ಈಗ ಮೊದಲ ಸ್ಥಾನದಲ್ಲಿದೆ. ಏಲಕ್ಕಿ ಉತ್ಪಾದನೆಯಲ್ಲಿ ಕೇರಳ ರಾಜ್ಯವು(ಶೇ.76%), ಕರ್ನಾಟಕ(ಶೇ.16%) ಮತ್ತು ತಮಿಳುನಾಡು(ಶೇ.8)ಗಳನ್ನು ಹೊಂದಿದೆ.

ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಮುಖವಾಗಿ ಏಲಕ್ಕಿಯನ್ನು ಬೆಳೆಯುತ್ತಾರೆ. ಕೊಪ್ಪ, ಶೃಂಗೇರಿ, ಸಿದ್ದಾಪುರ, ಯಲ್ಲಾಪುರ, ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರಗಳಲ್ಲಿ ಮುಖ್ಯವಾಗಿ ಬೆಳೆಯನ್ನು ಕಾಣಬಹುದು. ಈ ಜಿಲ್ಲೆಯಲ್ಲಿ ಬೆಳೆಯು 5850ಹೇಕ್ಟೇರು ಪ್ರದೇಶದಲ್ಲಿ ಆವರಿಸಿದ್ದು 4310 ಹೇಕ್ಟೇರು ಜಾಗೆಯಿಂದ ಇಳುವರಿಯನ್ನು ಪಡೆಯಬಹುದು.

ತಳಿಗಳು

ಮುಖ್ಯ ತಳಿಗಳೆಂದರೆ ಮಲಬಾರ್, ಮೈಸೂರು, ವಳುಕ್ಕ, ಮೂಡಿಗೆರೆ-1, ಮೂಡಿಗೆರೆ-2, ಮೂಡಿಗೆರೆ-3, ಅವಿನಾಶ, ಸಿಸಿಎಸ್-1, ನೆಲ್ಲಿಯಾಣಿ ಇತ್ಯಾದಿ.

ಸಂಸ್ಕರಣೆ:

ಬಿಡಿಸಿದ ಕಾಯಿಗಳನ್ನು ಶೇ.2 ಸೋಡಾ ದ್ರಾವಣದಲ್ಲಿ 10ನಿಮಿಷಗಳ ಕಾಲ ಅದ್ದಿ ತೆಗೆದು ಒಣಗಿಸಿದರೆ ಅವುಗಳಲ್ಲಿ ಹಸಿರು ಬಣ್ಣ ಹಾಗೆಯೇ ಉಳಿಯುತ್ತವೆ. ಕೆಲವರು ಬಿಸಿಲಿನಲ್ಲಿ ಅಥವಾ ಒಣಗು ಯಂತ್ರಗಳಲ್ಲಿ ಒಣಗಿಸುವದು. ಒಣಗು ಯಂತ್ರಗಳನ್ನು ಬಳಸಿದಾಗ ಮೊದಲು ಶೇ.55ಉಷ್ಣತೆಯಲ್ಲಿ 2-3ಗಂಟೆಗಳ ಕಾಲ ಒಣಗಿಸಬೇಕು. ಅನಂತರ 45•ಸೆ ಉಷ್ಣತೆಯಲ್ಲಿ 18-20ಗಂಟೆಗಳ ಕಾಲ ಒಣಗಿಸಬೇಕು. ಇದರಿಂದ ಕಾಯಿಗಳ ಗುಣಮಟ್ಟ ಮತ್ತು ಆಕರ್ಷಣೆ ಸುಧಾರಿಸುತ್ತವೆ. ಕಾಯಿಗಳನ್ನು ಗಂಧಕದ ಧೂಪಕ್ಕೆ ಗುರಿಪಡಿಸಿದರೆ ಅವುಗಳಲ್ಲಿನ ಹಸಿರು ಬಣ್ಣ ಹೋಗಿ ಅವು ಬೆಳ್ಳಗಾಗುತ್ತವೆ. ಒಣಗಿz ಏಲಕ್ಕಿ ಕಾಯಿಗಳನ್ನು ನಾರಿನ ಚಾಪೆಯಿಂದ ಉಜ್ಜಿ ಗಾಳಿಯಲ್ಲಿ ತೂರಬೇಕು. ಹೀಗೆ ಮಾಡುವದರಿಂದ ಕಸಕಡ್ಡಿ ಮತ್ತು ಅನಗತ್ಯ ಸಸ್ಯ ಭಾಗಗಳು ಬೇರ್ಪಡುತ್ತವೆ. ಹೀಗೆ ದೊರೆತ ಏಲಕ್ಕಿಯನ್ನು ಗಾತ್ರ ಮತ್ತು ಬಣ್ಣಗಳಿಗೆ ಅನುಸಾರವಾಗಿ ವರ್ಗೀಕರಿಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ಅಥವಾ ಗಾಳಿಯಾಡದ ಡಬ್ಬಿಗಳಲ್ಲಿ ತುಂಬಿ ಮೊಹರು ಮಾಡಿ ಇಡಬೇಕು.

ಏಲಕ್ಕಿಯ ಮಾರುಕಟ್ಟೆ:

ಕೋಚಿನ್, ಥೋಡುಪುಝಾ(ಕೇರಳ), ಸಕಲೇಶಪುರ, ಮಡಿಕೇರಿ, ಮಂಗಳೂರು, ಬಾಂಬೆ, ವಿರುಧನಗರ, ಕುಂಬುಂ, ಬೋದಿನಾಯಾಕನ್ನುರ, ಥೇವರಂ, ಪಟ್ಟಿವೀರಪಟ್ಟಂ(ತಮಿಳನಾಡು) ಏಲಕ್ಕಿಯ ಪ್ರಮುಖ ಮಾರಾಟ ಕೇಂದ್ರಗಳಾಗಿವೆ. ಪ್ರಾಚೀನ ಕಾಲದಿಂದ ಏಲಕ್ಕಿಯು ಆಕ್ಷನ್ ಪದ್ಧತಿಯಿಂದ ಮಾರಾಟವಾಗಿದೆ. ಒಟ್ಟು ಏಲಕ್ಕಿಯ 6 ಆಕ್ಷನ್ ಕೇಂದ್ರಗಳಿವೆ. ಅವುಗಳೆಂದರೆ:

ಸೋಮವಾರ-ಬೋದಿನೈಕನ್ನುರು (ತಮಿಳುನಾಡು)

ಮಂಗಳೂರು- ಕುಮಲಿ (ಕೇರಳ)

ಬುಧವಾರ- ಕುಮಲಿ (ಕೇರಳ)

ಗುರುವಾರ-ಬೋದಿನೈಕನ್ನುರು (ತಮಿಳುನಾಡು)

ಶುಕ್ರವಾರ-ವಂದನಮೇಡು (ಕೇರಳ)

ಶನಿವಾರ-ವಂದನಮೇಡು (ಕೇರಳ)

ಅಲ್ಲದೇ ಕರ್ನಾಟಕದಲ್ಲಿ ಸಕಲೇಶಪುg ಹಾಗೂ ಶಿರಸಿಯಿಂದ ಏಲಕ್ಕಿಯು ಹರಾಜು ಘಮಘಮಿಸುತ್ತದೆ. ಏಲಕ್ಕಿಯ ಪ್ರಮುಖ ಮಾರುಕಟ್ಟೆಗಳೆಂದರೆ ಕೇರಳದಲ್ಲಿ ಕುಮಲಿ, ವಂದನಮೇಡು, ಥೆಕ್ಕಡಿ, ಪುಲಿಯರಮಾಲಾ ಕಾಣಬಹುದು. ತಮಿಳುನಾಡಿನಲ್ಲಿ ಬೋದಿನೈಕನ್ನುರು ಕರ್ನಾಟಕದಲ್ಲಿ ಸಕಲೇಶಪುg ಹಾಗೂ ಶಿರಸಿಯಲ್ಲಿ ಕಾಣಬಹುದು.

ಭಾರತದಲ್ಲಿ ಏಲಕ್ಕಿಯ ಪ್ರಮುಖ ವ್ಯಾಪಾರ ಕೇಂದ್ರಗಳು:

ವಂದನಮೇಡು (ಕೇರಳ),  ಬೋದಿನಾಯಕನೂರು (ತಮಿಳುನಾಡು), ಕುಮಲಿ (ಕೇರಳ), ಥೆಕ್ಕಡಿ  (ಕೇರಳ),  ಕುಂಬುಂ (ಆಂಧ್ರಪ್ರದೇಶ), ಪಟ್ಟಿವೀರನಪಟ್ಟಿ (ತಮಿಳುನಾಡು), ಕೋಚಿನ (ಕೇರಳ), ಥೋಡುಪುಝಾ (ಕೇರಳ), ಸಕಲೇಶಪುರ (ಕರ್ನಾಟಕ), ಮೆರಕಾರಾ (ಕರ್ನಾಟಕ), ಮಡಿಕೇರಿ (ಕರ್ನಾಟಕ), ಮಂಗಳೂರು (ಕರ್ನಾಟಕ), ಮುಂಬೈ (ಮಹಾರಾಷ್ಟ್ರ), ವಿರುಧುನಗರ (ತಮಿಳುನಾಡು),  ಥೇವರಂ (ತಮಿಳುನಾಡು).

ಸಂಬಾರ ಮಂಡಳಿ ವತಿಯಿಂದ ಈವರೆಗೆ ಏಲಕ್ಕಿ ಬೆಳೆಗಾರರಿಗೆ ನೀಡುತ್ತಿದ್ದ ಏಲಕ್ಕಿ ಮರುನಾಟಿ ಸಹಾಯಧನವನ್ನು ಸಂಬಾರ ಮಂಡಳಿ 2014-15 ನೇ ಸಾಲಿನಿಂದ ಜಾರಿಗೆ ಬರುವಂತೆ ಪ್ರತಿ ಹೇ.ಗೆ.ರೂ 50000/_ (25000 ರಷ್ಟು 2 ಕಂತುಗಳಲ್ಲಿ) ಏರಿಸಲಾಗಿದೆ. ಈ ಸೌಲಭ್ಯವನ್ನು 8 ಹೆ.ಗೆ. ಏಲಕ್ಕಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರೂ ಪಡೆಯಬಹುದಾಗಿದೆ. ಏಲಕ್ಕಿಯನ್ನು ಮರುನಾಟಿ ಮಾಡಬಯಸುವ ನೊಂದಾಯಿತ ಬೆಳೆಗಾರರಿಗೆ (8ಹೆ.ಗೆ) ಮೊದಲಿಗೆ ಏಲಕ್ಕಿ ಗಿಡಗಳನ್ನು ಮಂಡಳಿ ಶೇ.50% ರ ದರದಲ್ಲಿ ಪೂರೈಸಿ ಉಳಿದ ಶೇ.50ರ ಹಣವನ್ನು ಮರುನಾಟಿ ಯೋಜನೆಯಡಿ ಕೊಡುವ ಸಹಾಯ ಧನದಲ್ಲಿ ಕಡಿತಗೊಳಿಸಿ ಬಾಕಿ ಸಹಾಯ ಧನ ಕೊಡಲಾಗುವದು.

ಏಲಕ್ಕಿಯ ವಿವಿಧ ವರ್ಗಗಳು:

ಭಾರತದ ಏಲಕ್ಕಿಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ವಿವಿಧ ವರ್ಗಗಳಿಗನುಸಾರವಾಗಿ ರಫ್ತು ಮಾಡಲಾಗುತ್ತಿದೆ. ಅವುಗಳೆಂದರೆ ಅಲ್ಲೆಪ್ಪೆ ಹಸಿರು ದೊಡ್ಡ ಏಲಕ್ಕಿ, ಅಲ್ಲೆಪ್ಪೆ ಹಸಿರು ಸೂಪಿರಿಯರ್ ಏಲಕ್ಕಿ ಮತ್ತು ಅಲ್ಲೆಪ್ಪೆ ಹಸಿರು ಅಧಿಕ ದೊಡ್ಡ ಏಲಕ್ಕಿ. ಇದಲ್ಲದೇ ಇತರ ವರ್ಗಗಳೆಂದರೆ

  1. ದೊಡ್ಡ ಏಲಕ್ಕಿ (ಬೋಲ್ಡ್): ಇದು ಹಸಿರು ಬಣ್ಣದಾಗಿದ್ದು ಬೀಜ ಕೋಶಗಳ ತೂಕವು 415 ಗ್ರಾಂ. ವ್ಯಾಸವು 6.5 ಮೀ.ಮೀ.ಗಿಂತ ಜಾಸ್ತಿಯಾಗಿದ್ದು ರಫ್ತು ದರ್ಜೆಯದಾಗಿದೆ.
  2. ಶ್ರೇಷ್ಠ ದೊಡ್ಡ ಏಲಕ್ಕಿ (ಸೂಪರ್ ಬೋಲ್ಡ್): ಇದು ವಿಶೇಷ ತಳಿಯಾಗಿದೆ. ಬೀಜಕೋಶಗಳು ಪರಿಪಕ್ವವಾಗಿದ್ದು ಹಸಿರು ಬಣ್ಣದಾಗಿರುತ್ತವೆ. ಅಲ್ಲದೇ ಇವುಗಳ ವ್ಯಾಸವು 8ಮಿ.ಮೀ. ಜಾಸ್ತಿಯಿದ್ದು ತೂಕವು 450 ಗ್ರಾಂ.ಗಿಂತ ಹಗುರವಾಗಿರುತ್ತವೆ.
  3. ಅಧಿಕ ದೊಡ್ಡ ಏಲಕ್ಕಿ (ಎಕ್ಸ್ಟ್ರಾಬೋಲ್ಡ್): ರಫ್ತು ಮಾರುಕಟ್ಟೆಯಲ್ಲಿ ಜನಪ್ರೀಯವಾಗಿದೆ. ಬೀಜಕೋಶಗಳು ಹಸಿರು ವರ್ಣದಲ್ಲಿ ವ್ಯಾಸವು 7 ಮಿ.ಮಿ. ಗಿಂತ ಹೆಚ್ಚಾಗಿದ್ದು 435 ಗ್ರಾಂ.ದಷ್ಟು ಹಗುರವಾಗಿರುತ್ತವೆ.
  4. ರಾಶಿ (ಬಲ್ಕ್) ಏಲಕ್ಕಿ: ಈ ವರ್ಗದಲ್ಲಿ ಎಲ್ಲಾ ಅಳತೆಯ ಪರಿಪಕ್ವತೆಯಲ್ಲದ ಹಾಗೂ ಪರಿಪಕ್ವಗೊಂಡ ಬೀಜಕೋಶಗಳು ಕಪ್ಪು, ಹಳದಿ ಬಣ್ಣದಾಗಿರುತ್ತವೆ.
  5. ಸಣ್ಣ ಏಲಕ್ಕಿ (ಸ್ಮಾಲ್): ಸಣ್ಣ ಏಲಕ್ಕಿಯ ವ್ಯಾಸವು 5.5 ಮಿ.ಮಿ. ಆಗಿರುತ್ತದೆ. ಬೀಜಕೋಶಗಳು ಕಪ್ಪಾಗಿದ್ದು ಸ್ವಚ್ಛವಾಗಿರುತ್ತವೆ.
  6. ಸೀಳಿದ ಏಲಕ್ಕಿ: ಪ್ರತಿಶತ 60 ಕ್ಕಿಂತ ಹೆಚ್ಚು ಬೀಜಕೋಶಗಳು ಮುಕ್ತ ಸ್ಥಿತಿಯಲ್ಲಿ ಇರುತ್ತದೆ ಮತ್ತು ಬಣ್ಣ ಭಾಗಶ: ಹಸಿರು/ ಮಸುಕಾದ ಹಳದಿ ಇರಬಹುದು.
  7. ಬೀಜ(ಸೀಡ್ಸ್): ಕಪ್ಪು/ ಕಂದು ಬಣ್ಣದ ಬೀಜಗಳು 550-600ಗ್ರಾಂ. ಹಗುರವಾಗಿರುತ್ತವೆ.
  8. ಹಣ್ಣು(ಫ್ರುಟ್):ಹಣ್ಣುಗಳು ಪರಿಪಕ್ವವಾಗಿದ್ದು ಹಳದಿ ಬಣ್ಣದಲ್ಲಿ 425 ಗ್ರಾಂ ಹಗುರವಾಗಿರುತ್ತವೆ.

ರಫ್ತು: ಏಲಕ್ಕಿ ರಫ್ತಿನಲ್ಲಿ ಭಾರತವು ದ್ವಿತಿಯ ಸ್ಥಾನದಲ್ಲಿದ್ದು ಸಣ್ಣ ಏಲಕ್ಕಿಯು ಸುಗಂಧ ಹಾಗೂ ಉತ್ತಮ ಗುಣಧರ್ಮದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೊಂದಿದೆ. ಭಾರತವು ಅಂದಾಜು 15-20% ರಷ್ಟು ಏಲಕ್ಕಿಯನ್ನು ಉತ್ಪಾದಿಸುತ್ತದೆ. ಸೌದಿ ಅರೇಬಿಯಾ ದೇಶವು ಏಲಕ್ಕಿಯನ್ನು ಅತಿಯಾಗಿ ಭಾರತದಿಂದ ಆಮದು ಮಾಡಿಸಿಕೊಂಡರೆ ಕುವೈತ್ ದ್ವೀತಿಯ ಸ್ಥಾನದಲ್ಲಿದೆ. 2004-05 ರಿಂದ 2008-09 ನೇ ವರ್ಷದಲ್ಲಿ ಏಲಕ್ಕಿಯು ಸ್ವದೇಶದಲ್ಲಿ ಹೆಚ್ಚಾಗಿ ಬಳಕೆಯಾಗಿರುವದರಿಂದ ರಫ್ತು ಕಡಿಮೆಗೊಂಡಿದೆ. 2009-10ನೇ ವರ್ಷದಲ್ಲಿ ರಫ್ತಿನಲ್ಲಿ ಏರಿಕೆಯನ್ನು(1975ಮೆ.ಟ.) ಕಾಣಬಹುದು. ಆದರೆ 2011-12 ರಲ್ಲಿ ಭಾರತದಿಂದ 4650ಮೆ.ಟ. ಸಣ್ಣ  ಏಲಕ್ಕಿಯನ್ನು ರಫ್ತು ಮಾಡಲಾಗಿದ್ದು ಹಿಂದಿನ ವರ್ಷಗಳಲ್ಲಿ ಇದು ಅತ್ಯಧಿಕವಾಗಿದೆ. 2012-13ನೇ ವರ್ಷದಲ್ಲಿ 2372ಮೆ.ಟ. ಏಲಕ್ಕಿಯನ್ನು ರಫ್ತಿಸಲಾಗಿತ್ತು. ಆದರೆ 2013-14ನೇ ಇಸವಿಯಲ್ಲಿ 2080ಮೆ.ಟ. ಏಲಕ್ಕಿಯನ್ನು ರೂ. 16429ಲಕ್ಷ ರೂಗಳಿಗೆ ರಫ್ತು ಮಾಡಲಾಗಿದೆ.

ಏಲಕ್ಕಿ ಬೆಳೆಗಾರರ ತೊಂದರೆಗಳೆಂದರೆ ಸಾಲದ (ಹಣಕಾಸಿನ) ತೊಂದರೆ, ಕಾರ್ಮಿಕರ ಕೊರತೆ, ಹವಾಮಾನದಲ್ಲಿ ಏರುಪೇರು, ರೋಗ ಕೀಟಗಳ ಬಾಧೆ ಹಾಗೂ ಕಾಡು ಪ್ರಾಣಿಗಳ ಕಾಟವನ್ನು ಕಾಣಬಹುದು. ಏಲಕ್ಕಿ ಮಾರುಕಟ್ಟೆಯ ತೊಂದರೆಗಳೆಂದರೆ ಬೆಲೆಯಲ್ಲಿ ಏರುಪೇರು, ತೆರಿಗೆ,  ಏಲಕ್ಕಿ ವ್ಯಾಪಾರಿಗಳಿಂದ ಮೋಸ, ಸಾರಿಗೆಯ ತೊಂದರೆ, ದೂರದಲ್ಲಿ ಕೇಂದ್ರೀಕೃತಗೊಂಡ ಹರಾಜು ಕೇಂದ್ರಗಳು ಹಾಗೂ ಮಾರಾಟದ ಹಣ ಸರಿಯಾದ ಸಮಯಕ್ಕೆ ಮುಟ್ಟದಿರುವದು.

ಭಾರತದ ರಫ್ತನ್ನು ಅವಲೋಕಿಸಿದಾಗ ಕಳೆದ 02 ವರ್ಷಗಳಲ್ಲಿ ರಫ್ತು ಕಡಿಮೆಯಾಗಿದೆ. ಏರುತ್ತಿರುವ ಬೆಲೆ ಹಾಗೂ ಬೇಡಿಕೆಗಳನ್ನು ಗಮನಿಸಿದಾಗ ಏಲಕ್ಕಿ ಬೆಳೆಯಲು ವಿಫುಲವಾದ ಅವಕಾಶಗಳಿದ್ದು, ಕೇವಲ ಅಧಿಕ ಇಳುವರಿ ನೀಡಬಲ್ಲ ತಳಿಗಳನ್ನು ಬಳಸಿದಲ್ಲಿ ಉತ್ಪಾದನೆಯಲ್ಲಿ ಹೆಚ್ಚಳ ಮಡಬಹುದಾಗಿದೆ. ಈ ನಿಟ್ಟಿನಲ್ಲಿ ರೈತರು ಚಿಂತಿಸಿ, ಗುಣಮಟ್ಟದ ಏಲಕ್ಕಿ ಬೆಳೆದು, ಉತ್ತಮ ಮಾರಾಟ ಪದ್ಧತಿಗಳ ಮೂಲಕ ಮಾರಾಟ ಮಾಡಿ, ಅಧಿಕ ಲಾಭ ಗಳಿಸುವಂತಾಗಲಿ ಎಂಬುದು ನಮ್ಮ ಆಶಯ.

ಲೇಖಕರು:
ಶಗುಪ್ತಾ ಅ. ಶೇಖ ಎಂ.ಬಿ.ಎ(ಕೃಷಿ ವ್ಯವಹಾರ)
ಪ್ಲಾಟ ನಂ. 588 ಜೆ.ಡಿ.ಎ ಲೇಔಟ್,
ಪೆಟ್ರೋಲ್ ಪಂಪ್ ಎದುರಿಗೆ, ಹೀರಾಪುರ ಕ್ರಾಸ್ ಗುಲಬರ್ಗಾ
 585103

Published On: 24 September 2020, 10:08 PM English Summary: cardamom crop cultivation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.