1. ಅಗ್ರಿಪಿಡಿಯಾ

ಚೆಂಡು ಹೂವಿನ ಔಷದೀಯ ಗುಣಗಳು

Marigold

ಆತ್ಮೀಯ ಸ್ನೇಹಿತರೆ, ಹೂವುಗಳು ಭಾರತೀಯ ಸಂಸ್ಕೃತಿಯಲ್ಲಿ ಅಗ್ರಸ್ಥಾನ ಹೊಂದಿವೆ.ಇವುಗಳಿಲ್ಲದೆ ಯಾವುದೇ ಸಭೆ ಸಮಾರಂಭಗಳು ಪೂರ್ಣವಾಗುವುದಿಲ್ಲ. ಈ ಹೂವುಗಳಲ್ಲಿ ಪ್ರಮುಖವಾದದ್ದು ಎಂದರೆ ಚೆಂಡು ಹೂ. ಭಾರತದಲ್ಲಿ ಈ ಹೂವನ್ನು ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಮುಂತಾದ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ . ಇದು ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ ಹಲವಾರು ಉಪಯೋಗಗಳನ್ನು ಹೊಂದಿದೆ.

ಚೆಂಡುಹೂ (marigold)

*ಟಗಾಟಸ್ ಏರೆಕ್ಟಾ/ಪೇಟುಲ ಎಂಬುದು ಇದರ ವೈಜ್ಞಾನಿಕ ಹೆಸರು. ಇದು ಅಸ್ಟರೇಸಿಯೆಎಂಬ ಕುಟುಂಬಕ್ಕೆಸೇರಿದೆ.

ಉಪಯೋಗಗಳು: ಇದನ್ನು ವ್ಯವಸಾಯದಲ್ಲಿ ಅಂತರ ಬೆಳೆಯಾಗಿ ಬೆಳಯಲಾಗುತ್ತದೆ, ಕಾರಣ ಇದು ಪ್ರಮುಖ ಬೆಳೆಗಿಂತ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಹೂವುಗಳಿಂದ ಹೆಚ್ಚಿಗೆ ಆದಾಯವನ್ನು ಗಳಿಸಬಹುದುಟೊಮೆಟೊ ಹಾಗೂ ಬಾಳೆ ಬೆಳೆಗಳನ್ನು ಬಾಧಿಸುವ ಅನೇಕ ಕೀಟ ಹಾಗೂ ರೋಗಗಳನ್ನು ಈ ಒಂದು ಚೆಂಡು ಹೂ ಬೆಳೆಯು ತಡೆಗಟ್ಟುತ್ತದೆ.

ಹೊಲದ ಬದುಗಳಲ್ಲಿ ಇವನ್ನು ಬೆಳೆಸುವುದರಿಂದ ಇದು ಹಲವಾರು ಪ್ರಯೋಜನಕಾರಿ ಕೀಟಗಳನ್ನು ( beneficial insects) ಆಕರ್ಷಿಸಿ ಬೆಳೆಗಳ ಇಳುವರಿ ಹೆಚ್ಚಿಸುತ್ತದೆಬೆಳೆಗಳ ಮಧ್ಯೆ 10-15 ಅಡಿಗೊಂದು ಚೆಂಡು ಹೂಸಸಿ ನೆಡುವುದರ ಮೂಲಕ ಬೆಳೆಗಳನ್ನು ಕಾಡುವ ಬೇರು ಹುಳು (nematodes) ಗಳನ್ನು ತನ್ನಬೇರುಗಳಿಂದ ಸ್ರವಿಸಲ್ಪಡುವ ಪದಾರ್ಥಗಳಿಂದ ಅವುಗಳನ್ನು ಕೊಲ್ಲುತ್ತದೆ.

ಇದೊಂದು ಅತ್ಯುತ್ತಮ ಕೀಟನಾಶಕವಾಗಿಯು ಕೆಲಸಮಾಡುತ್ತದೆ. (250 ಲೀಟರ್ನೀರಿನಲ್ಲಿ 2 ಕೆಜಿ ಹೂವನ್ನುಹಿಂಡಿಬಟ್ಟೆಯಲ್ಲಿ ಸೋಸಿದದ್ರಾವಣವನ್ನು ಕೀಟನಾಶಕವನ್ನಾಗಿ ಬಳಸಬಹುದು.) ಈ ದ್ರಾವಣವನ್ನು ಬಿಸಿಲಿನ ವಾತಾವರಣದಲ್ಲಿ ಮಾತ್ರ ಸಿಂಪಡಿಸಬೇಕು, ಇಲ್ಲದಿದ್ದರೆಇದು ಕೀಟಗಳಿಗೆ ಆಹಾರವಾಗಿ ಕೆಲಸ ಮಾಡುತ್ತದೆ.

ಈ ಹೂವಿನಲ್ಲಿ ಲ್ಯುಟಿನ್ ಎಂಬ ವರ್ಣದ್ರವ್ಯವಿದ್ದು,ಇದನ್ನು ಕೋಳಿಗಳಿಗೆ ನೀಡುವುದರಿಂದ ಮೊಟ್ಟೆಯ ಹಳದಿಲೋಳೆಯ (yolk) ನ ಬಣ್ಣ ಹೆಚ್ಚುವುದಲ್ಲದೆ, ಕೋಳಿಗಳನ್ನುಹಲವು ವಯೋ ಸಹಜಕಾಯಿಲೆಗಳಿಂದಕಾಪಾಡುತ್ತದೆ.

ಹೂವುಗಳನ್ನು, ಹಲವಾರು ಚರ್ಮರೋಗಗಳಿಗೆ, ಹಾಗೂ ಅಲ್ಸರ್ರೋಗದ ಚಿಕಿತ್ಸೆಗೆ ಬಳಸುತ್ತಾರೆಗ್ರಾಮೀಣ ಭಾಗದಲ್ಲಿ ಸಾಕು ಪ್ರಾಣಿಗಳಾದ ( ನಾಯಿ, ಬೆಕ್ಕು) ಗಳಲ್ಲಿಕಾಣ ಸಿಗುವಕಿವಿ/ ಕಾಲಿನವ್ಯಾಧಿಗಳಲ್ಲಿ ಗಿಡದ ಎಲೆಗಳನ್ನು ಔಷಧವಾಗಿ ಬಳಕೆಮಾಡುತ್ತಾರೆಇವುಗಳನ್ನ ಅಲಂಕಾರಕ್ಕೆ ಅಲ್ಲದೇ,ಇವುಗಳಿಂದ ಪಡೆದ ಬಣ್ಣ (dye) ವನ್ನು ಆಹಾರ ಪದಾರ್ಥಗಳ ಮೌಲ್ಯವನ್ನು ಹೆಚ್ಚಿಸಲು ಸಹ ಬಳಸುತ್ತಾರೆ.

ಇತ್ತೀಚೆಗೆ ಚೆಂಡು ಹೂನಿಂದ ಎಣ್ಣೆಯನ್ನು ಸಂಸ್ಕರಿಸಿ, ಅದನ್ನುಗಂಧದ ಎಣ್ಣೆ ಜೊತೆಗೆ ಸೇರಿಸಿಸು ಗಂಧ ದ್ರವ್ಯವನ್ನು ಸಹ ತಯಾರಿಸಲಾಗುತ್ತಿದೆ. ಇನ್ನು ಹಲವಾರು ಕಡೆಗಳಲ್ಲಿ ಇದರ ಎಲೆಗಳನ್ನು ಹಾಗೂ ದಳಗಳನ್ನು ಅನೇಕ ತರಹದ ಪೇಯಗಳನ್ನುತಯಾರಿಸಲು ಸಹ ಬಳಸುತ್ತಾರೆ.

ಲೇಖನ:ಆತ್ಮಾನಂದ ಹೈಗರ್

Published On: 06 January 2021, 12:58 PM English Summary: benefits of marigold

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.