ಪ್ರಸಕ್ತ 2020-21ನೇ ಸಾಲಿನಲ್ಲಿ ಹವಾಮಾನ ಆಧಾರಿತ ತೋಟಗಾರಿಕೆ ಬೆಳೆಗಳಾದ ಪಪ್ಪಾಯ ಮತ್ತು ಹಸಿ ಮೆಣಸಿನಕಾಯಿ ಬೆಳೆಗಳಿಗೆ ಬೆಳೆ ವಿಮಾ ಯೋಜನೆ ಜಾರಿಯಲ್ಲಿದ್ದು, ನಿಗದಿತ ಪ್ರೀಮಿಯಂ ಮೊತ್ತ ಪಾವತಿಸಿ ಬೆಳೆಗೆ ವಿಮೆ ಮಾಡಿಸಬೇಕು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ
ಬೆಳೆ ವಿಮಾ ಯೋಜನೆ (R-WCIS) ನಡಿ ಎಲ್ಲಾ ಜಿಲ್ಲೆಗಳಲ್ಲಿ ಪಪ್ಪಾಯ ಹಾಗೂ ಹಸಿ (ಹಸಿರು) ಮೆಣಸಿನಕಾಯಿ ಬೆಳೆಗಳಿಗೆ ವಿಮೆ ಅನುಷ್ಟಾನಗೊಳಿಸುತ್ತಿದೆ.ಪಪ್ಪಾಯ ಬೆಳೆಗೆ 6700 ರೂ. ಮತ್ತು ಹಸಿರು ಮೆಣಸಿನಕಾಯಿಗೆ 3550 ರೂ.ಗಳಂತೆ ಪ್ರತಿ ಹೆಕ್ಟೇರ್‍ಗೆ ಪ್ರೀಮಿಯಂ ಮೊತ್ತ ನಿಗದಿಪಡಿಸಲಾಗಿದೆ.
ಅರ್ಹ ರೈತರು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಸ್ವಯಂ ಘೋಷಿತ ಬೆಳೆ ಪ್ರಮಾಣ ಪತ್ರದೊಂದಿಗೆ ವಿಮೆಗೆ ಅರ್ಜಿಯನ್ನು ಹತ್ತಿರದ ಬ್ಯಾಂಕುಗಳಿಗೆ ಸಲ್ಲಿಸಲು ಜೂನ್ 30 ಕೊನೆ ದಿನವಾಗಿದ್ದು, ನಿಗಧಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿ ರೈತಾಪಿ ವರ್ಗ ಇದರ ಸದುಪಯೋಗ ಪಡೆದುಕೊಳ್ಳಬೇಕು ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಹತ್ತಿರದ ಬ್ಯಾಂಕುಗಳಿಗೆ ಅಥವಾ ತೋಟಗಾರಿಕೆ ಇಲಾಖೆಯ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದು.
Share your comments