1. ಅಗ್ರಿಪಿಡಿಯಾ

ತೆಂಗು ಬೆಳೆಗಾರರಿಗೆ ಗುಡ್ ನ್ಯೂಸ್: ಕೊಬ್ಬರಿ ಬೆಂಬಲ ಬೆಲೆ ಶೇ.5.02 ರಷ್ಟು ಹೆಚ್ಚಳ

Coco-nut

ಕೊರೋನಾ ಸೋಂಕು ತಡೆಯುವುದಕ್ಕಾಗಿ ಸರ್ಕಾರ ವಿಧಿಸಿದ ಲಾಕ್ಡೌನದಿಂದಾಗಿ ಕೃಷಿಕರು ಹೆಚ್ಚು ಸಂಕಷ್ಟದಲ್ಲಿದ್ದರು. ಅದರಲ್ಲೂ ತೆಂಗಿನಕಾಯಿ ಬೆಳೆಗಾರರೂ ಸಹ ನಷ್ಟದಲ್ಲಿರುವುದನ್ನು ಗಮನಿಸಿ ಕೇಂದ್ರ ಸರ್ಕಾರವು ರೈತರ ನೆರವಿಗೆ ಧಾವಿಸಿದೆ.

ಈಗಾಗಲೇ ರಾಜ್ಯಾದ್ಯಂತ ತೆಂಗಿನಕಾಯಿ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ದೇಶಾದ್ಯಂತ ರೈತರ ಹಾಗೂ ಜನಪ್ರತಿನಿಧಿಗಳ ಒತ್ತಡ ಹೆಚ್ಚಾಗಿತ್ತು. ಕೊನೆಗೂ ತೆಂಗಿನಕಾಯಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೊಬ್ಬರಿಗೆ ಬೆಂಬಲ ಬೆಲೆಯನ್ನು ಶೇ. 5.02ರಷ್ಟು ಏರಿಕೆ ಮಾಡಿದೆ.

ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ 2020ರ ಋತುವಿನಲ್ಲಿ ತೆಂಗಿನಕಾಯಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಶೇ. 5.02 ರಷ್ಟು ಅಥವಾ 129 ರೂಪಾಯಿ ಹೆಚ್ಚಳ ಮಾಡಿ ಪ್ರತಿ ಕ್ವಿಂಟಾಲ್‌ಗೆ 2,700 ರೂ.ಗೆ ಹೆಚ್ಚಿಸಿದೆ. ಇದಕ್ಕೂ ಮೊದಲು ಪ್ರತಿ ಕ್ವಿಂಟಾಲ್‌ಗೆ ಎಂಎಸ್ಪಿ 2,571 ರೂ. ನಿಗದಿಪಡಿಸಲಾಗಿತ್ತು.

ತೆಂಗಿನಕಾಯಿಗಾಗಿ ಎಂಎಸ್ಪಿ ಹೆಚ್ಚಳವು ತಾಜಾ ಉತ್ಪನ್ನ ಸಂಗ್ರಹಣೆಗೆ ಅನುಕೂಲ ಮಾಡಿಕೊಡಲಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಬ್ಬರಿಯನ್ನು (ಮಿಲ್ಲಿಂಗ್ ಕೊಪ್ರಾ) ತೆಂಗಿನೆಣ್ಣೆ ಉತ್ಪಾದಿಸಲು ಬಳಸುತ್ತಾರೆ. ಗಿಟುಕ ಕೊಬ್ಬರಿ (ಬಾಲ್ ಕೊಪ್ರಾ) ಅತ್ಯುತ್ತಮ ದರ್ಜೆಯದ್ದಾಗಿದ್ದು ಡ್ರೈ ಫ್ರುಟ್ (ಒಣಗಿಸಿದ ಹಣ್ಣು) ಹಾಗೂ ಧಾರ್ಮಿಕ ಉದ್ದೇಶಗಳಿಗೆ ಇದು ಬಳಕೆಯಾಗುತ್ತದೆ. ದೇಶಾದ್ಯಂತ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯುವ ರೈತರ ಹಿತಾಸಕ್ತಿಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ಸಚಿವರು ಹೇಳಿದರು.

Published On: 25 June 2020, 10:01 AM English Summary: Government declares Minimum Support Price for mature dehusked coconut

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.