1. ಅಗ್ರಿಪಿಡಿಯಾ

ಬೆಂಕಿ ಅವಘಡ: ಅರಣ್ಯ ಭೂಮಿ, ಕೃಷಿ ಜಮೀನಿಗೆ ಹಾನಿ

ತಾಲೂಕಿನ ಮೇಲಿನ ಬೆಸಿಗೆ ಹಾಗೂ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಗ್ರಾಮಸ್ಥರ ಕೃಷಿ ಜಮೀನಿಗೆ ಹಾನಿಯಾಗಿದೆ.

ಹೊಸನಗರ: ತಾಲೂಕಿನ ಮೇಲಿನ ಬೆಸಿಗೆ ಹಾಗೂ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಗ್ರಾಮಸ್ಥರ ಕೃಷಿ ಜಮೀನಿಗೆ ಹಾನಿಯಾಗಿದೆ.


ವಸವೆ ಗ್ರಾಮದ ರಾಜು ಕುಂಬಾರ ಎಂಬುವವರ ಮನೆಯ ಚಾವಣಿಗೆ ಹಾನಿ ಉಂಟಾಗಿದೆ. ಇದೇ ಗ್ರಾಮದ ಬಿಂದು ಎಂಬುವವರ ಕೃಷಿ ಜಮೀನಿಗೆ ಬೆಂಕಿ ತಗುಲಿದ್ದು, ತೆಂಗಿನ ಮರಗಳು ಸುಟ್ಟುಹೋಗಿವೆ. ಬೆಂಕಿಯ ತೀವ್ರತೆಗೆ ಸಮೀಪದ ಮಲ್ಲಿಕಾರ್ಜುನ ಗೌಡ ಎಂಬುವವರ ಅಡಕೆ ತೋಟಕ್ಕೂ ಸ್ವಲ್ಪ ಪ್ರಮಾಣದ ಹಾನಿ ಸಂಭವಿಸಿದೆ.

ಒಟ್ಟಾರೆ ಅರಣ್ಯ ಹಾಗು ಕೃಷಿ ಜಮೀನು ಸೇರಿದಂತೆ ಸುಮಾರು 50 ಎಕರೆ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದರು. ತಹಸೀಲ್ದಾರ್‌ ಚಂದ್ರಶೇಖರ ನಾಯ್ಕ್‌, ತಾ.ಪಂ. ಇಒ ಡಾ.ಎಂ.ಎಸ್‌.ರಾಮಚಂದ್ರಭಟ್‌, ಪ್ರಮುಖರಾದ ಹಾಲಗದ್ದೆ ಚಂದ್ರು, ಮೋಹನ ಮಂಡಾನಿ ಮತ್ತಿತರರು ಭೇಟಿ ನೀಡಿದ್ದರು.
Published On: 22 February 2019, 10:28 PM English Summary: ಬೆಂಕಿ ಅವಘಡ: ಅರಣ್ಯ ಭೂಮಿ, ಕೃಷಿ ಜಮೀನಿಗೆ ಹಾನಿ

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.