1. ಅಗ್ರಿಪಿಡಿಯಾ

ತರಕಾರಿ ಮಾರಲು ಸ್ಥಳಾವಕಾಶ ಇರದೆ ತೊಂದರೆ ಅನುಭವಿಸಿದ್ದ ರೈತರಿಗೆ ಸಂತಸದ ಸುದ್ದಿ

ತಾವು ಬೆಳೆದ ಹಣ್ಣು ತರಕಾರಿಗಳನ್ನು ಮಾರಲು ಸ್ಥಳಾವಕಾಶ ಇರದೆ ತೊಂದರೆ ಅನುಭವಿಸಿದ್ದ ರೈತರಿಗೆ ಕೆಎಂಎಫ್ ಸಂತಸದ ಸುದ್ದಿ ನೀಡಿದೆ. ತನ್ನ ಮಳಿಗೆಗಳ ಬಳಿ ಹಣ್ಣು ಮತ್ತು ತರಕಾರಿ ಮಾರಲು ರೈತರಿಗೆ ಕೆಎಂಎಫ್ ಅವಕಾಶ ನೀಡಿದೆ.

ಕರ್ನಾಟಕದಲ್ಲಿರುವ ಎಲ್ಲಾ ನಂದಿನಿ ಮಳಿಗೆಗಳ ಬಳಿ ಹಣ್ಣು, ತರಕಾರಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಕೊರೋನಾ ತಡೆಯಲು ಸರ್ಕಾರ ವಿಧಿಸಿದ ಲಾಕ್‍ಡೌನ್‍ನಿಂದಾಗಿ ರೈತರು ಸಂಕಷ್ಟದಲ್ಲಿದ್ದರು. ಅವರು ಬೆಳೆದ ಬೆಳೆ ಮಾರಾಟ ಮಾಡದೆ ಸಮಸ್ಯೆಯಲ್ಲಿದ್ದರು. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಈು ಮಹತ್ವದ ಯೋಜನೆ ರೂಪಿಸಲಾಗಿದೆ. ಸಾಕಷ್ಟು ರೈತರು ಸ್ವತಃ ತಾವೇ ಹಣ್ಣು, ತರಕಾರಿ ಮಾರಾಟ ಮಾಡುತ್ತಾರೆ. ಆದರೆ ಸ್ಥಳಾವಕಾಶ ಇಲ್ಲ ಎಂದು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಂದಿನಿ ಮಳಿಗೆಗಳ ಪಕ್ಕದಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿತ್ತು. ಅದರಂತೆ ತೋಟಗಾರಿಕೆ ಇಲಾಖೆಯಿಂದ ಕೆಎಂಎಫ್‍ಗೆ ಮನವಿ ಮಾಡಲಾಗಿತ್ತು ಎಂದು ಅವರು ತಿಳಿಸಿದರು.

ಕೆಲವು ನಂದಿನಿ ಮಳಿಗೆ ಪಕ್ಕದಲ್ಲಿ ಹಾಫ್ ಕಾಮ್ಸ್ ಮಳಿಗೆ ಇದೆ. ಅಂತಹ ಸ್ಥಳಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ರಾಜ್ಯಾದ್ಯಂತ ಕೆಎಂಎಫ್ ಹಾಗೂ 14 ಜಿಲ್ಲಾ ಹಾಲು ಒಕ್ಕೂಟ ಸೇರಿ 1500 ಕ್ಕಿಂತ ಹೆಚ್ಚು ಮಳಿಗೆಗಳಿವೆ. ರೈತರು ಈ ಸ್ಥಳಗಳಲ್ಲಿ ಹಣ್ಣು, ತರಕಾರಿಗಳನ್ನು ನೇರವಾಗಿ ಮಾರಾಟ ಮಾಡಬಹುದು. ಹೀಗೆ ಮಾರಾಟಕ್ಕೆ ಬಂದ ರೈತರಿಗೆ ಕೆಎಂಎಫ್ ವತಿಯಿಂದ ಪ್ರತಿನಿತ್ಯ ಉಚಿತವಾಗಿ ನೀರು, ಮಜ್ಜಿಗೆ, ಸ್ಯಾನಿಟೈಸರ್, ಕೈಗವಚ(ಗ್ಲೌಸ್), ಮಾಸ್ಕ್ ಗಳನ್ನು ನೀಡಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಮಾರಾಟ ಮಾಡಬಹುದು. ತೂಕದ ಯಂತ್ರ ಸೇರಿದಂತೆ ಹಣ್ಣು, ತರಕಾರಿ ಮಾರಾಟಕ್ಕೆ ಬೇಕಾದ ಇತರೆ ಸಾಮಗ್ರಿಗಳನ್ನು ರೈತರೆ ತರಬೇಕು. ಮಾರಾಟಕ್ಕೆ ಬರುವ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪ್ರತಿ ಹತ್ತು ಮಳಿಗೆಗೆ ಒಬ್ಬರನ್ನು ಮೇಲ್ವಿಚಾರಕರನ್ನು ನೇಮಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

Published On: 26 April 2020, 08:19 PM English Summary: Good news for farmers who have had trouble selling vegetables

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.