ಆಟೋ ಹೆಸರು ಕೇಳಿದ್ರೆ ಸಾಕು ದುಬಾರಿ ಬೆಲೆ ಎಂದು ಮೂಗು ಮುರಿಯುವ ವಾತಾವರಣ ಇದೆ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಇಲ್ಲೊಬ್ಬ ಆಟೋ ರಿಕ್ಷಾ ಡ್ರೈವರ್ ತಮ್ಮ ಆಟೋದಲ್ಲಿ ಬುಕ್ಸ್, ಬಿಸ್ಕೆಟ್, ಸ್ಯಾನಿಟರಿ ಪ್ಯಾಡ್, ನೀರು ಉಚಿತವಾಗಿ ಇಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿರಿ: ತಿಂಗಳಲ್ಲಿ 36 ಲಕ್ಷ ಆದಾಯ ಗಳಿಸಿದ ಎಂಬಿಎ ಪದವೀಧರ; ಈ ಯಶೋಗಾಥೆ ನಿಮಗೂ ಪ್ರೇರಣೆ!
ನಾವೆಲ್ಲ ಪ್ರಯಾಣದ ವೇಳೆ ದಿನನಿತ್ಯ ಆಟೋ ರಿಕ್ಷಾಗಳನ್ನು ಬಳಸುತ್ತಲೆ ಇರುತ್ತೇವೆ. ನಮ್ಮ ನೆನೆಪಿನಲ್ಲಿರುವ ಆಟೋ ರಿಕ್ಷಾದ ಉದಾಹರಣೆಗಳು ಬೇರೆಯವೆ ಆಗಿವೆ.
ಆದರೆ, ಇಲೊಂದು ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ ವ್ಯಕ್ತಿ ಟ್ವೀಟ್ ಮಾಡುವ ಮೂಲಕ ಒಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಹೌದು, ಇವರು ಹತ್ತಿದ ಆಟೋದಲ್ಲಿ ಆಟೋ ರಿಕ್ಷಾ ಡ್ರೈವರ್ ರಾಜೇಶ್ ಎಂಬುವವರು ತಮ್ಮ ಆಟೋದಲ್ಲಿ ಬುಕ್ಸ್, ಬಿಸ್ಕೆಟ್, ಸ್ಯಾನಿಟರಿ ಪ್ಯಾಡ್, ನೀರು ಉಚಿತವಾಗಿ ಇಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕುಲಾಂತರಿ ಸಾಸಿವೆಗೆ ಅನುಮತಿ; ರೈತರಿಗೆ ಆಗುವ ಲಾಭಗಳೇನು?
"ಗ್ರಾಹಕರೇ ನನಗೆ ಎಲ್ಲಾ" ಎನ್ನುವ ರಾಜೇಶ್ ಅವರು ಗ್ರಾಹಕರಿಗೆ ಸಹಾಯವಾಗಲೆಂದು ತಮ್ಮ ಆಟೋದಲ್ಲಿ ಸಾಧನಗಳನ್ನು ಇಟ್ಟಿದ್ದಾರೆ.
ಇದನ್ನು ಗಮನಿಸಿದ ಪ್ರಯಾಣಿಗ ಉತ್ತಮ್ ಕಶ್ಯಪ್ ಅವರು ತಮ್ಮ ಟ್ವಿಟರ್ ಮೂಲಕ ಟ್ವೀಟ್ ಮಾಡಿ ಈ ಆಟೋ ಡ್ರೈವರ್ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಏನೇನಿದೆ ಈ ಆಟೋ ರಿಕ್ಷಾದಲ್ಲಿ?
ರಾಜೇಶ್ ಅವರು ತಮ್ಮ ಆಟೋದಲ್ಲಿ ಪುಸ್ತಕ, ಸ್ಯಾನಿಟೈಸರ್, ಬ್ಯಾಂಡ್‌ಎಡ್, ಬಿಸ್ಕೆಟ್, ಚಾಕಲೇಟ್ ಮತ್ತು ನೀರಿನ ಬಾಟಲಿಗಳನ್ನು ಇಟ್ಟುಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಜೊತೆಗೆ ತಮ್ಮ ಗ್ರಾಹಕರಿಗೆ ಸರ್ವೀಸ್ ಮಾಡುತ್ತಾರೆ. ಇದಲ್ಲದೇ ಇಲ್ಲಿ ಇಟ್ಟಿರುವಂತಹ ಈ ಎಲ್ಲವೂ ಉಚಿತವಾಗಿಯೇ ಇರುತ್ತವೆ.
ಬೆಂಗಳೂರು ಕೃಷಿ ವಿವಿಯಿಂದ 9 ಹೊಸ ತಳಿಗಳ ಶೋಧ ರೈತರಿಗೆ ಅಧಿಕ ಇಳುವರಿ, ತಳಿಗಳಿಗೆ ರೋಗ ನಿರೋಧಕ ಶಕ್ತಿ
ಟ್ವೀಟ್ ಮೂಲಕ ಬೆಳಕಿಗೆ ಬಂದ ವಿಷಯ
ಈ ಆಟೋ ಡ್ರೈವರ್‌ನ ಕಾರ್ಯವನ್ನು ಟ್ವೀಟ್ ಮಾಡಿದ್ದ ಉತ್ತಮ್ ಎನ್ನುವವರ ಪೋಸ್ಟ್‌ಗೆ ಜನರಿಂದ ತುಂಬಾ ಆಶ್ಚರ್ಯಕರವಾದ ಪ್ರತಿಕ್ರಿಯೆ ಬಂದಿದೆ.
ಇದು ಬೆಂಗಳೂರಿನಲ್ಲಿ ವೈರಲ್ ಆಗುತ್ತಿರುವ ಒಬ್ಬ ಸಮಾಜ ಸೇವಕನ ಕಥೆ. ಇಂತಹವ ಜನರು ಈಗಿನ ಸಮಾಜದಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ರಾಜೇಶ್ ಅವರ ಈ ಕಾರ್ಯ ಪ್ರಶಂಸನೀಯವಾದದ್ದು.
Share your comments