1. ಯಶೋಗಾಥೆ

ಸಮಗ್ರ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ ಜಗದೀಶ ರೈ

ಯುವಜನತೆ ಈಗಿನ ಕಾಲದಲ್ಲಿ ಕೃಷಿ ಕ್ಷೇತ್ರಕ್ಕೆ ಬರುವುದು ಹೊಸ ಪ್ರವೃತ್ತಿ ಆಗಿದೆ. ಕೃಷಿಯಲ್ಲಿ ಇರುವ ಅವಕಾಶಗಳು ಮತ್ತು ಭವಿಷ್ಯದ  ಯೋಚನೆ ಹೊಂದಿರುವವರಿಗೆ ಬದುಕಿನ ದಾರಿಯಾಗುತ್ತಿದೆ. ಕೃಷಿಯನ್ನೇ ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ಭಾವಿಸಿ ತನ್ನ ಯಶಸ್ಸಿನ ತಳಹದಿಯೇ " ಸಮಗ್ರ ಕೃಷಿ". ಇದೇ ಕೃಷಿಯಲ್ಲಿ ಸಾಧನೆಯ ಮಂತ್ರ ಮತ್ತು ಜೀವಾಳ ಎನ್ನುವ ಕೃಷಿಕರಾದ ಇವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಜಗದೀಶ್ ಆಗಿರುತ್ತಾರೆ.

ಜಗದೀಶ್ ಮೂಲತಃ ಪುತ್ತೂರಿನವರು . ಇವರು ಎಸೆಸೆಲ್ಸಿ ಯನ್ನು ಮುಗಿಸಿದ ನಂತರ ತಮ್ಮ ಭವಿಷ್ಯವನ್ನು ಕೃಷಿಯಲ್ಲಿ ರೂಪಿಸಬೇಕೆಂದು 16ನೇ ವಯಸ್ಸಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡರು. ಇದೇ ರೀತಿ ಕೃಷಿಯು ಅವರ ಕೈಬಿಡದೆ ಮುನ್ನಡೆಸುತ್ತಿದೆ.

ಇವರಿಗೆ ಬಳಂಜ ಗ್ರಾಮದಲ್ಲಿ ಒಟ್ಟಾಗಿ 12 ಎಕರೆ ಯಷ್ಟು ಜಮೀನಿದ್ದು . ಮಲೆನಾಡಿನ ಪ್ರಮುಖ ಬೆಳೆಗಳಾದ ಅಡಿಕೆ, ಕಾಳುಮೆಣಸು, ಬಾಳೆ ,ಕೋಕೋ, ತೆಂಗು, ಗೋಡಂಬಿ ,ಇಂತಹ ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಬೆಳೆದಿದ್ದಾರೆ.

ಸಮಗ್ರ ಕೃಷಿ  ಯಶಸ್ಸು .

ಬಳಂಜ ಗ್ರಾಮದಲ್ಲಿರುವ 12 ಎಕರೆ ಜಮೀನಿನಲ್ಲಿ ಮೊದಲು ಅಡಿಕೆ ಬೆಳೆಯನ್ನು ಬೆಳೆದಿದ್ದರೂ,  ಆ 12 ಎಕರೆ ಅಡಿಕೆಯಲ್ಲಿ ಸುಮಾರು 13 ರಿಂದ 15 ಲಕ್ಷ ಆದಾಯವನ್ನು ಪಡೆಯುತ್ತಿದ್ದರು . ಕಾಲಕ್ರಮೇಣ ಸಮಗ್ರ ಕೃಷಿಯ ಪ್ರಾಮುಖ್ಯತೆಯನ್ನು ಅರಿತು ತಮ್ಮ ಜಾಗದಲ್ಲಿ ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕೆಂದು ತೀರ್ಮಾನಿಸಿ ಅಡಿಕೆ ,ತೆಂಗು ,ಬಾಳೆ, ಕರಿಮೆಣಸು ,ಗೋಡಂಬಿ ಮತ್ತು ಬಾಳೆ ಬೆಳೆಗಳನ್ನು ಬೆಳೆಯಲು ಇಚ್ಚಿಸಿದರು , ಹಾಗೆಯೇ ಬೆಳೆದರು  . ಆದ್ದರಿಂದ ಇವರು ಸಮಗ್ರ ಕೃಷಿಯಿಂದ ತುಂಬಾ ಆದಾಯವನ್ನು ಪಡೆಯುವಲ್ಲಿ ಯಶಸ್ವಿಯಾದರು ಹಾಗೂ ತಮ್ಮ 13 ರಿಂದ 17 ಲಕ್ಷವಿದ್ದ ಆದಾಯವನ್ನು 21 ರಿಂದ 25 ಲಕ್ಷದವರೆಗೆ ಪಡೆಯುವಲ್ಲಿ ಯಶಸ್ವಿಯಾದರು .

ಅಡಿಕೆ:  ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಾತಾವರಣಕ್ಕೆ ಹೊಂದುವಂತಹ ತಳಿಗಳನ್ನು ಆಯ್ಕೆಮಾಡಿಕೊಂಡು ಅಂದರೆ ಸೈಗಾನ್ ಮೋಹಿತ್ನಗರ್ ಮಂಗಳ, ತಳಿಗಳನ್ನು ತಮ್ಮ ಜಾಗದಲ್ಲಿ ಬೆಳೆದಿದ್ದಾರೆ.

ಗೊಬ್ಬರ:  ಇವರು ಹೆಚ್ಚಾಗಿ ಕುರಿ ಗೊಬ್ಬರವನ್ನು ಬಳಸುತ್ತಾರೆ ಹಾಗೂ ಕಡಿಮೆ ಪ್ರಮಾಣದಲ್ಲಿ ಹಸಿರು ಮತ್ತು ಹಸುವಿನ ಗೊಬ್ಬರವನ್ನು ಸಹ ಬಳಸುತ್ತಾರೆ  ಎಂದರೆ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ .

ಅಡಿಕೆ ಸಸಿ ತಯಾರಿಕೆ

ಅಡಿಕೆ ಸಸಿಯನ್ನು  ಬೆಳೆಸಲು   ಆಯ್ದಾ  ಬೀಜಗಳನ್ನು ಬಿತ್ತನೆ ಮಾಡುವ ಮೊದಲು ಸಗಣಿಯಿಂದ ಲೇಪಿಸಿ 3-4 ದಿನದವರೆಗೆ ಬಿಸಿಲಿನಲ್ಲಿ ಒಣಗಿಸುತ್ತಾರೆ , ನಂತರ  ಬೀಜವನ್ನು ಮಣ್ಣು ಮರಳು  ಶೇಂಗಾ ಅಥವಾ ಕಡಲೆಕಾಯಿ ಇಂಡಿ ಹಾಗೂ ಒಣಗಿದ ಹಸುವಿನ ಸಗಣಿ ಮಿಶ್ರಣವಿರುವ ಪಾಲಿಥೀನ್‌ ಚೀಲಗಳಲ್ಲಿ ಬಿತ್ತನೆ ಮಾಡಿ ಸಸಿಗಳು 2 ಎಲೆಯ ಹಂತದಲ್ಲಿ ಸಗಣಿ ಹಾಗೂ ಗಂಜಲ ಮಿಶ್ರಣವನ್ನು ಸಿಂಪಡಿಸುತ್ತಾರೆ.  ಈ ಸಸಿಗಳನ್ನು ನಂತರ ತಮ್ಮ ಜಮೀನಿನಲ್ಲಿ ಹಾಳಾಗಿರುವ ಗಿಡಗಳನ್ನು ತೆಗೆದು  ಹೊಸ ಗಿಡವನ್ನು ನೆಡುತ್ತಾರೆ .

ಅಡಿಕೆ ಕೊಯ್ಲು ಹಾಗೂ ಮುಂದಿನ ಪ್ರಕ್ರಿಯೆಗಳು

 ಅಡಿಕೆ ಕೊಯ್ಲಿನಲ್ಲಿ ಅವರು ತಮ್ಮ ಪೂರ್ವಜರು ಬಳಸುತ್ತಿದ್ದ ಪದ್ಧತಿಯನ್ನು ಬಳಸುತ್ತಿದ್ದಾರೆ ಎಂದರೆ 45 ದಿನಗಳಿಗೊಮ್ಮೆ ಕೊಯ್ಲು  ತೆಗೆಯುವ ಪದ್ಧತಿ ಇದೆ. ಕೊಯ್ದ ಅಡಿಕೆಯನ್ನು ಅವರೇ ಅಥವಾ  ಕೂಲಿಗರ ಸಹಾಯದಿಂದ ಸುಲಿಸಿ ಬೇಯಿಸಿ ಒಣಗಿಸುತ್ತಾರೆ.  ಪ್ರಮುಖವಾಗಿ ವರ್ಷಕ್ಕೆ ಸುಮಾರು 40 ಕ್ವಿಂಟಲ್ ಅಡಿಕೆಯನ್ನು  ಬೆಳೆಯುತ್ತಿದ್ದಾರೆ . ಬೆಳೆದ ಅಡಿಕೆಯನ್ನು ಮಾರುಕಟ್ಟೆಯ ದರವನ್ನು ಗಮನಿಸಿ ಮಾರುಕಟ್ಟೆಯ ಬೆಲೆಗೆ ಮಾರುತ್ತಾರೆ .

ಕಸದಿಂದ ರಸ

 ಕಸದಿಂದ ರಸ ಎಂಬಂತೆ ತಮ್ಮ ತೋಟದಲ್ಲಿರುವ ಅಡಿಕೆ ಮರದಲ್ಲಿ ಬೀಳುವ ಅಡಿಕೆ ಪಟ್ಟಿಗಳನ್ನು ಅವರು ಮತ್ತು ಅವರ ಪತ್ನಿ ಆಯ್ದು.  ಅಡಿಕೆ ಫಲಕಗಳ ತಯಾರಿಕ ಘಟಕಕ್ಕೆ ತಲಾ ಒಂದಕ್ಕೆ ಒಂದು ರೂನಂತೆ ಕೊಡುತ್ತಾರೆ ಇದರಿಂದ ಲಾಭವನ್ನು ಪಡೆಯುತ್ತಾರೆ .

ಅಡಿಕೆ ಸಿಪ್ಪೆ ಯಲ್ಲಿ ಭತ್ತ ಬೆಳೆಯುವುದು

ಅಚ್ಚರಿ ಎನಿಸಬಹುದು ಅದು ಸತ್ಯ ಇವರು ಅಡಿಕೆಯನ್ನು ಸುಲಿದ ನಂತರ ಬರುವ ಸಿಪ್ಪೆಯ ಕಸದಿಂದ ಅವರು ಭತ್ತ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ .

 ಬರುವ ಸಿಪ್ಪೆಯನ್ನು ಮನೆ ಮುಂದೆ ಇರುವ ಜಾಗದಲ್ಲಿ ಸರಿಯಾಗಿ ಹರಡಿ ನಂತರ ಮಳೆಗಾಲದಲ್ಲಿ ಭತ್ತವನ್ನು ನಾಟಿ ಮಾಡುತ್ತಾರೆ ನಾಟಿ ಮಾಡಿದ ಭತ್ತವು ಯಾವುದೇ ಗೊಬ್ಬರದ ಸಹಾಯವಿಲ್ಲದೆ ತುಂಬಾ ಸೊಗಸಾಗಿ ಬೆಳೆಯನ್ನು ಪಡೆದು ತುಂಬಾ ಖುಷಿಯಲ್ಲಿ ಸಂತಸ ವ್ಯಕ್ತಪಡಿಸಿದರು .

 ಪ್ರಮುಖವಾಗಿ ತಿಳಿಯುವುದೇನೆಂದರೆ ಯಾವುದೇ ಗೊಬ್ಬರದ ಸಹಾಯವಿಲ್ಲದೆ ಉತ್ತಮ ಭತ್ತದ ಬೆಳೆಯನ್ನು ಪಡೆದುಕೊಂಡಿದ್ದಾರೆ.

ಅಡಿಕೆಯಿಂದ ಆದಾಯ: ಅಡಿಕೆಯಿಂದ ಸರಿಸುಮಾರು ವರ್ಷಕ್ಕೆ 40ಕ್ಕಿಂತ ನಷ್ಟು ಅಡಿಕೆ ಪಡೆದು 16ರಿಂದ 18 ಲಕ್ಷ ಆದಾಯವನ್ನು ಪಡೆಯುತ್ತಿದ್ದಾರೆ .

ಕಾಳುಮೆಣಸು

ಇವರು ತಮ್ಮ ಜಮೀನಿನಲ್ಲಿ ಹಿಪ್ಪಲಿ ತಳಿಯನ್ನು ಬೆಳೆದಿದ್ದಾರೆ .ಈ ತಳಿಯು ಪುತ್ತೂರಿನಿಂದ ತಂದು , ಬೆಳೆದು ವರ್ಷಕ್ಕೆ ಸರಿ ಸುಮಾರು 4ರಿಂದ 6 ಕ್ವಿಂಟಾಲ್  ಕಾಳುಮೆಣಸು ಮೂರರಿಂದ ನಾಲ್ಕು ಲಕ್ಷ ಲಾಭವನ್ನು ಪಡೆಯುತ್ತಿದ್ದಾರೆ ಹಾಗೂ ಬಳ್ಳಿಯಿಂದ ಬೀಳುವ ಎಲೆಗಳು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಹಾಯಮಾಡುತ್ತದೆ .

ಗೋಡಂಬಿ: ಬೆಳ್ತಂಗಡಿ ತಾಲೂಕಿನಲ್ಲಿ ಗೋಡಂಬಿ ಬೆಳೆಯನ್ನು ಬೆಳೆಯುವುದರಲ್ಲಿ ಇವರೇ ಮೊದಲಿಗರು ಎಂದು ತಿಳಿಸಿದ್ದಾರೆ .ಅವರ ಜಾಗದಲ್ಲಿ ಉಳ್ಳಾಲ 3 ಹಾಗೂ ಭಾಸ್ಕರ ತಳಿಯ ಗೋಡಂಬಿಯನ್ನು ಬೆಳೆದಿದ್ದಾರೆ . ಈ ಗೋಡಂಬಿಯ ಬೆಳೆಯುವ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದು ವರ್ಷಕ್ಕೆ ಸುಮಾರು ಮೂರರಿಂದ ನಾಲ್ಕು ಲಕ್ಷ ಆದಾಯವನ್ನು ಕೊಡುತ್ತಿದೆ.

ಕೋಕೋ: ಇವರ ತೋಟದಲ್ಲಿ ಕೋಕೋ ಬೆಳೆಯನ್ನು ಬೆಳೆದಿದ್ದಾರೆ ವರ್ಷಕ್ಕೆ 12ರಿಂದ 13ಕ್ವಿಂಟಾಲ್ ನಷ್ಟು ಕೋಕೋ ಬೆಳೆಯುತ್ತಾರೆ.  ಸರಿ ಸುಮಾರು 60ರಿಂದ 70 ಸಾವಿರ ಆದಾಯವನ್ನು ಪಡೆಯುತ್ತಿದ್ದಾರೆ.

ಇದಲ್ಲದೆ ತಮ್ಮ ಹೊಲದ ಬದಿಯ ಸುತ್ತಲೂ ಬಾಳೆ ಮತ್ತು ತೆಂಗನ್ನು ಬೆಳೆದಿದ್ದಾರೆ ವರ್ಷಕ್ಕೆ ಸರಿ ಸುಮಾರು 5000 ದಿಂದ 6000 ತೆಂಗಿನಕಾಯಿಯನ್ನು ಪಡೆಯುತ್ತಿದ್ದಾರೆ.‌

ಕೃಷಿಪ್ರಶಸ್ತಿ: 2016 ಮಂಜೂಶ್ರೀ ಲಯನ್ಸ್ ಕ್ಲಬ್ ಬೆಳ್ತಂಗಡಿ ಅವರ ವತಿಯಿಂದ ಜಗದೀಶ್ ರವರ ಸಮಗ್ರ ಕೃಷಿಯ ಮಾದರಿಯನ್ನು ನೋಡಿ ಪ್ರಸಂಶನಾರ್ಥಕವಾಗಿʼʼ ಕೃಷಿ ಪ್ರಶಸ್ತಿಯನ್ನು ನೀಡಿ ʼʼಗೌರವಿಸಿದ್ದಾರೆ . ಇವರ ಸಮಗ್ರ ಕೃಷಿಯ ಬಗ್ಗೆ ಹಲವು ಪತ್ರಿಕೆಗಳಲ್ಲಿ ಉಲ್ಲೇಖನಗೊಂಡಿದೆ.

ಈ ಮೇಲೆ ತಿಳಿದಿರುವಂತೆ ಸಮಗ್ರ ಕೃಷಿಯಿಂದ ಜಗದೀಶ್ ರವರು ಕೃಷಿಯಲ್ಲಿ ಯಶ್ಶಸ್ಸನೊಂದಿದ್ದಾರೆ , ಹಾಗೂ ಅವರ ಜೀವನಶೈಲಿಯೂ ಕೃಷಿಯಿಂದ ಬದಲಾಗಿದೆ . ಇದು ಎಲ್ಲಾ ರೈತರಿಗೂ ಮತ್ತು ಯುವ ಕೃಷಿಕರಿಗೆ ಮಾದರಿಯಾಗಿದ್ದು ಉತ್ತಮ ಲಾಭವನ್ನು ಪಡೆಯುವುದರಲ್ಲಿ ಸಮಗ್ರ ಕೃಷಿಯು ದಾರಿಯಾಗಿದೆ.

ಲೇಖನ: ಅನುಷ, ಎಸ್‌,ಆರ್.‌ ಬಿಎಸ್ಸಿ (ತೋ), ಅಂತಿಮ  ವರ್ಷದ ವಿದ್ಯಾರ್ಥಿನಿ ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ.

Published On: 26 July 2021, 11:22 PM English Summary: Success story of Jagadish Rai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.