MGNREGA :ಸಾಧಿಸುವ ಛಲವೊಂದಿದ್ದರೆ ಬದುಕಿನಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಈ ರೈತರು ಉದಾಹರಣೆ. ಅಂಗವೈಕಲ್ಯವನ್ನ ದೂಷಿಸುತ್ತ ಕಾಲಹರಣ ಮಾಡದೆ ಪೇರಲ ಬೆಳೆದು ಲಕ್ಷಗಟ್ಟಲೆ ಗಳಿಸುತ್ತಿದ್ದಾರೆ ಕೂಡ. ಇಲ್ಲಿದೆ ಈ ಕುರಿತಾದ ಲೇಖನ…
Successful Farmer : ಆಗದು ಎಂದು ಕೈಕಟ್ಟಿ ಕೂತರೇ ಏನನ್ನು ಸಾಧಿಸಿಲು ಆಗದು. ಆದರೆ, ಅದೆ ಜಾಗದಲ್ಲಿ ಒಂದಿಷ್ಟು ಧೈರ್ಯ ಮಾಡಿ ನುಗ್ಗಿದರೆ, ಏನನ್ನು ಬೇಕಾದರೂ ಸಾಧಿಸಬಹುದು. ಇಂತಹ ಮಾತಿಗೆ ಉದಾಹರಣೆಯಾಗಿ ನಿಂತವರು ಈ ರೈತರು.
ಹಾವೇರಿ ಜಿಲ್ಲೆ ಕೋಳೂರು ಗ್ರಾಮದ ವಿಕಲಚೇತನ ರೈತ ಪುಟ್ಟಪ್ಪ ಕಿತ್ತೂರ ಅವರು ತಮ್ಮ ಜಮೀನಿನಲ್ಲಿ ಪೇರಲ (guava) ಬೆಳೆದು ಆರ್ಥಿಕವಾಗಿ ಲಾಭ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿರುವ ರೈತ.
ದೈಹಿಕವಾಗಿ ಇರುವ ನ್ಯೂನತೆಗಳು ಕೆಲವೊಮ್ಮೆ ಒಂದಿಷ್ಟು ಜನರನ್ನು ಕುಗ್ಗಿಸಿಬಿಡುತ್ತವೆ. ಆದರೆ, ಪುಟ್ಟಪ್ಪನವರ ವಿಚಾರದಲ್ಲಿ ಆಗಿದ್ದೆ ಬೇರೆ.
ಇವರು ದೈಹಿಕವಾಗಿರುವ ನ್ಯೂನತೆಗಳನ್ನು ಮೆಟ್ಟಿ ನಿಂತರು. ಅಷ್ಟೇ ಅಲ್ಲದೇ ಸವಾಲು ಸ್ವೀಕರಿಸಿ ಕೃಷಿ ಮಾಡಿ ಗೆದ್ದು ನಿಂತಿದ್ದಾರೆ.
ಪುಟ್ಟಪ್ಪನವರ ಕೈ ಹಿಡಿದ ನರೇಗಾ ಯೋಜನೆ!
ಪುಟ್ಟಪ್ಪನವರು ಕೃಷಿ ಮಾಡಲು ಮುಂದಾದಾಗ ಪೇರಲ ತೋಟ ಮಾಡುವ ಅವರ ಯೋಚನೆಗೆ ಸಾಥ್ ನೀಡಿದ್ದು, ಮಹಾತ್ಮ ಗಾಂಧಿ ನರೇಗಾ ಯೋಜನೆ (MGNREGA) .
ಹೌದು, ತೋಟಗಾರಿಕೆ ಇಲಾಖೆ ಮತ್ತು ನರೇಗಾ ಯೋಜನೆ ಈ ನಿಟ್ಟಿನಲ್ಲಿ ನೆರವಾಗಿದೆ ಎನ್ನುತ್ತಾರೆ ರೈತ ಪುಟ್ಟಪ್ಪ.
ಅವರು ತಮ್ಮ 3.24 ಎಕರೆ ಜಮೀನಿನಲ್ಲಿ 450 ಪೇರಲ ಸಸಿಗಳನ್ನು ನೆಟ್ಟು ಪೇರಲ ತೋಟ ಮಾಡಿದ್ದಾರೆ. ಅವರು ಮಾಡಿದ ತೋಟದಲ್ಲಿ ಇದೀಗ ದಿನಕ್ಕೆ ಅಂದಾಜು ₹1000 ಆದಾಯ ಪಡೆಯುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ವಾರ್ಷಿಕ ರೂ 3.5 ರಿಂದ ರೂ 4 ಲಕ್ಷ ಆದಾಯ ಗಳಿಸುವ ನಿರೀಕ್ಷೆಯನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.
Source : Karnataka State Horticulture Department
Red Banana: ಆಧುನಿಕ ಕೃಷಿ ಪದ್ದತಿಯಿಂದ ́ಕೆಂಪು ಬಾಳೆʼ ಬೆಳೆದು ₹35 ಲಕ್ಷ ಗಳಿಸುತ್ತಿರುವ ಯುವ ರೈತ!
Share your comments