1. ಯಶೋಗಾಥೆ

ಹೊಲಿಗೆ ವೃತ್ತಿಯೊಂದಿಗೆ ಕೃಷಿಯಲ್ಲಿ ಯಶಸ್ಸು ಕಂಡ ರೈತ ಮಲ್ಲೇಶಪ್ಪ !

Hitesh
Hitesh
Malleshappa M., a farmer engaged in farming with sewing profession. Kalyanshetty

ರೈತ ಮಲ್ಲೇಶಪ್ಪ ಎಂ. ಕಲ್ಯಾಣಶೆಟ್ಟಿ ಅವರು ಹೊಲಿಗೆ ವೃತಿಯೊಂದಿಗೆ ಕೃಷಿಯನ್ನು ಪ್ರವೃತ್ತಿಯಾಗಿಸಿಕೊಂಡು ಸಿರಿಧಾನ್ಯದಲ್ಲಿ ಐಸಿರಿ ಕಂಡಿದ್ದಾರೆ.

ರೈತ ಮಲ್ಲೇಶಪ್ಪ ಎಂ. ಕಲ್ಯಾಣಶೆಟ್ಟಿ ಅವರ ಯಶೋಗಾಥೆಯನ್ನು ಸವಿತಾ ಬಿ. ಶಿವಶಂಕರಮೂರ್ತಿ ಎಂ ಮತ್ತು ಮಜೀದ ಜಿ.,

ಐ.ಸಿ.ಎ.ಆರ್.- ಕೃಷಿ ವಿಜ್ಞಾನ ಕೇಂದ್ರ, ಇಂಡಿ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಅವರು ಬರೆದಿದ್ದಾರೆ. ರೈತ ಮಲ್ಲೇಶಪ್ಪ ಎಂ.  ಕಲ್ಯಾಣಶೆಟ್ಟಿ  ಯಶೋಗಾಥೆ ಇಲ್ಲಿದೆ..

ಮಲ್ಲೇಶಪ್ಪ ಎಂ. ಕಲ್ಯಾಣಶೆಟ್ಟಿ ಅವರು ಹೊಲಿಗೆ ವೃತಿಯೊಂದಿಗೆ ಕೃಷಿಯನ್ನು ಪ್ರವೃತ್ತಿಯಾಗಿಸಿಕೊಂಡು ಸಿರಿಧಾನ್ಯದಲ್ಲಿ ಐಸಿರಿ ಕಂಡಿದ್ದಾರೆ.   

ವೃತ್ತಿಯಲ್ಲಿ ಟೇಲರ್ ಆದರೂ ಮೆಕ್ಸಿಕೋ ಬೆಳೆಯಾದ ಚಿಯಾ ಬೆಳೆಯೊಂದನ್ನು ನಮ್ಮೂರಲ್ಲಿ ಬೆಳೆಯಬಹುದೆಂಬುದನ್ನು

ಅನ್ನದಾತರಿಗೆ ತೋರಿಸಿಕೊಟ್ಟವರಿವರು, 4 ಎಕರೆ ಜಮೀನು, ಎರಡೇ ಇಂಚಿನ ಬೋರು, ಸಾಕು ಅಷ್ಟೆ

ನೀರು, ಎನ್ನುತ್ತ ಸಾವಯವದಲ್ಲಿ ಸಿರಿಧಾನ್ಯ ಬೆಳೆದು ಹೃದಯ ಸಿರಿವಂತಿಕೆ ತೋರಿದ್ದಾರೆ.

ಕಸದಲ್ಲೇ ರಸ ಇವರ ಮೂಲ ಮಂತ್ರ, ಹೊಲಿಗೆ ವೃತಿ ಜೊತೆ ಕೃಷಿಯನ್ನು ಪ್ರವೃತ್ತಿಯಾಗಿಸಿಕೊಂಡು ಸಿರಿಧಾನ್ಯದಲ್ಲಿ

ಐಸಿರಿ ಕಂಡ  ಮಲ್ಲೇಶಪ್ಪ ಎಂ  ಕಲ್ಯಾಣಶೆಟ್ಟಿ ಲೋಣಿ ಬಿ.ಕೆ, ಚಡಚಣ ತಾ. ವಿಜಯಪುರ ಜಿಲ್ಲೆಯವರು ಇವರು ಎಲ್ಲಾ ರೈತರಿಗೆ ಮಾದರಿಯಾಗಿದ್ದಾರೆ. 

ಜಪಾನ್‌ ರೈತರಾದ ಮುಸುನೋಬಾ ಫುಕೊವೊಕಾರವರ ನೈಸರ್ಗಿಕ/ಸಹಜ ಇವರ ಬರೆದ ಪುಸ್ತಕ  ‘ಒಂದು ಹುಲ್ಲಿನ ಕ್ರಾಂತಿ’ಯ ವಿವರದ ವರದಿಯನ್ನು

ಪತ್ರಿಕೆಯೊಂದರಲ್ಲಿ ಓದಿ ಪ್ರೇರಣೆಯಾಗಿ ನಾನು ನೈಸರ್ಗಿಕ/ಸಹಜ ಕೃಷಿಯನ್ನು ಅಳವಡಿಸಿಕೊಂಡು ಅಂದಿನಿಂದ ಕೃಷಿಯನ್ನು ಹೊಲಿಗೆ

ವೃತ್ತಿಗೆಯೊಂದಿಗೆ ಹವ್ಯಾಸವಾಗಿ ಮಾಡಿಕೊಂಡಿದ್ದೇನೆ ಎನ್ನುತ್ತಾರೆ ಅವರು.   

ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಆಯೋಜಿಸಲಾದ ಕೃಷಿಮೇಳ 2018ರ ಘೋಷವಾಕ್ಯ “ಅಕ್ಕಿಂ ತಿಂದಂ ಕೆಟ್ಟಂ, ನವಣೆ ಉಂಡಂ ಗಟ್ಟಂ” 

ಅನ್ವರ್ಥಕವಾಗಿ ನವಣೆ ಆಹಾರ ಸೇವೆನೆಯಿಂದ ಆರೋಗ್ಯ ವೃದ್ಧಿಗೆ ಸಹಕಾರಿ ಎಂಬ ಮಾಹಿತಿಯನ್ನು ಹಾಗೂ ದಿನನಿತ್ಯ ಸೇವಿಸುತ್ತಿರುವ

ಬಿಳಿ ಅಕ್ಕಿಯಲ್ಲಿ ಕೆಟ್ಟ ಅಂಶಗಳನ್ನು ಕುರಿತು ಮಾಹಿತಿಯನ್ನು ರೈತರಿಗೆ ನೀಡಿದ್ದಾರೆ. 

ಅಲ್ಲದೇ 12 ತಳಿ ಸಿರಿಧಾನ್ಯ, 15 ಪ್ರಕಾರದ ದೇಶಿ ತರಕಾರಿ ಬೀಜ ರಕ್ಷಣೆ ಮಾಡಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಮಲ್ಲೇಶಪ್ಪ ಅವರು ಇಪ್ಪತ್ತು ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಬಾರಿ ಹಣ್ಣನ್ನು ಬೆಳೆಯುತ್ತಿದ್ದರು. ಇದರಿಂದ ಇವರಿಗೆ ಒಳ್ಳೆಯ ಆದಾಯವೂ ಬರುತ್ತಿತ್ತು.

ಈ ಬೆಳೆಗೆ ಉಪಯೋಗಿಸುವ ವಿಷಯುಕ್ತ ರಾಸಾಯನಿಕಗಳಿಂದ ಸಾಕಷ್ಟು ತೊಂದರೆಯಾಯಿತು. ಅಲ್ಲದೇ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಇವರಗೆ ವೈದ್ಯರು ಶಸ್ತ್ರಚಿಕಿತ್ಸೆ

ಸಲಹೆ ನೀಡಿದ್ದರು. ಇವರು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ಸಿರಿಧಾನ್ಯ ನವಣೆ ಕುರಿತು ಲೇಖನಗಳನ್ನು ಓದಿ ಸಿರಿ ಧಾನ್ಯಗಳ ಬಗ್ಗೆ ಆಸಕ್ತಿ ಮೂಡಿಸಿಕೊಂಡರು.

ಇದರಿಂದ, ಅವರು ತಮ್ಮ ಹೊಲದಲ್ಲಿ ಬೆಳೆದ ಬಾರಿ ಗಿಡಗಳನ್ನು ಕಿತ್ತು ನವಣೆ ಬೇಸಾಯಕ್ಕೆ ಮುಂದಾದರು.

ಅದನ್ನು ಬೆಳೆದು ಹಾಗೂ ಅದನ್ನು ಸೇವಿಸಿ ತಮ್ಮ ಆರೋಗ್ಯದಲ್ಲಿ ಬಹಳಷ್ಟು ಉತ್ತಮ ಬದಲಾವಣೆಗಳನ್ನು ಕಂಡರು.

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರದ ಕೃಷಿ ಮೇಳದಲ್ಲಿ ಪ್ರಥಮವಾಗಿ ನವಣೆ ಮಾರಾಟ ಮಾಡಿದ ಹೆಗ್ಗಳಿಕೆ ಇವರದು.

ಗೊಬ್ಬರದ ಅಬ್ಬರವಿಲ್ಲ  

ಎಲ್ಲೆಡೆ ಗೊಬ್ಬರದ ಅಬ್ಬರ ಹೆಚ್ಚಾಗಿ ಬೆಳೆಯನ್ನೂ ಹೆಚ್ಚು ಪಡೆಯಬಹುದೆನ್ನುವ ಆಸೆಗೆ ಈ ರೈತ ಬೀಳಲಿಲ್ಲ.

ಸುಮಾರು 20 ವರ್ಷಗಳಿಂದ ಇವರು ತಮ್ಮ ಜಮೀನಿನಲ್ಲಿ ಒಮ್ಮೆಯೂ ರಾಸಾಯನಿಕ ಉಪಯೋಗಿಸಿಲ್ಲ ಎನ್ನುವುದು ಹೆಮ್ಮೆಯ ವಿಚಾರ ಅಷ್ಟೇ ಅಲ್ಲ

ಇವರು ತಮ್ಮ ಒಟ್ಟು 10 ಎಕರೆ ಹೊಲದಲ್ಲಿ ಸಿರಿಧಾನ್ಯಗಳನ್ನು ಬೆಳೆಯುವುರದ ಜೊತೆಗೆಯೇ ಬೇರೆ ಬೇರೆ ರೀತಿಯ ವಿಶೇಷ ಬೆಳೆಗಳಗನ್ನು ಬೆಳೆದಿದ್ದಾರೆ.

ಹಕ್ಕಿಗಳನ್ನು ಓಡಿಸುವುದಿಲ್ಲ

ಮಲ್ಲೇಶಪ್ಪ ಅವರು ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಯವರ ಅಪ್ಪಟ ಶಿಷ್ಯ. ತಮ್ಮ ಹೊಲದಲ್ಲಿ ಇವರು ಎಂದಿಗೂ ಹಕ್ಕಿಗಳನ್ನು ಕಾಯುವುದಿಲ್ಲ.

ಪಕ್ಷಿಗಳು ತಿಂದು ಉಳಿದದ್ದು ತನಗೆ ಎನ್ನುವ ಭಾವನೆ ಹೊಂದಿರುವ ಹೃದಯವಂತ ಈ ರೈತ. 

ನೀರು ಎರಡೇ ಇಂಚು ಕೃಷಿಯಲ್ಲಿ ಕಲ್ಯಾಣಶೆಟ್ಟಿ ಮಿಂಚು  

ಜಮೀನಿನಲ್ಲಿರುವ 2 ಇಂಚು ನೀರು ಹೊಂದಿರುವ ಬೋರ್‌ವಲ್‌ನಿಂದಲೇ  ಇಷ್ಟು ವಿಶೇಷ ಬೆಳೆ ಬೆಳೆಯುತ್ತಿದ್ದಾರೆನ್ನವುದು ಇನ್ನೂ ವಿಶೇಷ.

ಇವರು ತಮ್ಮ ಜಮೀನಿನಲ್ಲಿ ಸಿರಿಧಾನ್ಯಗಳೊಂದಿಗೆ ಕರಿ ಕಡಲೆ, ಬನ್ಸಿಗೋದಿ, ಉಳ್ಳಾಗಡ್ಡಿ, ಅವರೆ, ತೊಗರಿ ಶೇಂಗಾ, ಸಾಗವಾನಿ, ಹಣ್ಣಿನ ಗಿಡಗಳು

ಮೆಂತೆಪಲ್ಲೆ, ಕೋತಂಬರಿ, ಪಾಲಕ, ಹತ್ತರಕಿ ಪಲ್ಲೆ, ಕಾಯಿಪಲ್ಲೆಗಳನ್ನು ಬೆಳೆದಿದ್ದಾರೆ.

ಇವರ ಜಮೀನಿನಲ್ಲಿ ಬೋದುಗಳ ಮುಖಾಂತರ ನೀರು ಉಣಿಸುವ ಪದ್ಧತಿ ಇಲ್ಲ. ತಮ್ಮ ಹೊಲದಲ್ಲಿ ಬೆಳೆಗಳಿಗೆ ಸ್ಪ್ರ್ಪಿಂಕಲರ್ ಮುಖಾಂತರ ನೀರನ್ನು ನೀಡುತ್ತಾರೆ.

ತಮ್ಮ ಹೊಲದಲ್ಲಿ ಬೆಳೆಯುವ ಯಾವುದೇ ಕಸವನ್ನು ಇವರು ಜಮೀನಿನಿಂದ ಹೊರ ಎಸೆಯುದಿಲ್ಲ ಅಥವಾ ಸುಡುವುದಿಲ್ಲ

ಅದನ್ನೇ ಮಣ್ಣಿನೊಂದಿಗೆ ಬೆರೆಯುವಂತೆ ಮಾಡಿ ಗೊಬ್ಬರ ಆಗುವಂತೆ ನೋಡಿಕೊಳ್ಳುತ್ತಾರೆ. ಆದ್ದರಿಂದಲೇ ಇವರು ಜಮೀನು ಅತ್ಯಂತ ಫಲವಾತ್ತಾಗಿದೆ.

ಏಳ ಬೆಳೆ ಪದ್ಧತಿ 

ಹೆಸರು ಮತ್ತು ಸಿರಿಧಾನ್ಯಗಳಾದ ನವಣೆ, ಬರಗು, ಹಾರ್ಕ, ರಾಗಿ, ಕೋರಲೆ ಸಾಮೆ ಮತ್ತು ಊದಲು ಮತ್ತು ಮೆಕ್ಸಿಕನ್ ದೇಶದ ಬೆಳೆಗಳಾದ

ಚಿಯಾ ಮುಂತಾದ ಬೆಳೆಗಳನ್ನು ಏಕ ಬೆಳೆಗಳಾಗಿ ಬೆಳೆಯುತ್ತಾರೆ.

ಅಂತರ ಬೆಳೆ  

ಶೇಂಗಾದಲ್ಲಿ ಅವರೆಯನ್ನು ಬೆಳೆಯಲಾಗುತ್ತದೆ.

ಮಿಶ್ರ ಬೆಳೆ

ಶೇಂಗಾದಲ್ಲಿ ಮಿಶ್ರ ಬೆಳೆಯಾಗಿ ನವಣೆ ಮತ್ತು ದೇಶೀಯ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ.

ಗಿಡಮರಗಳು

ನೈಸರ್ಗಿಕವಾಗಿ ಬೆಳೆಸಲಾದ ಕೃಷಿ ಅರಣ್ಯ ಸಂಪತ್ತು ಇರುವುದರಿಂದ ಎಲ್ಲಾ ರೀತಿಯ ಪಕ್ಷಿ ಸಂಕುಲಕ್ಕೆ ವಾಸಸ್ಥಾನವಾಗಿದೆ.

ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆಗೆ ಮಲ್ಲೇಶಪ್ಪ ಇವರು ಅಳವಡಿಕೊಂಡ ತಾಂತ್ರಿಕತೆಗಳು 

  • ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಕಳೆ ತ್ಯಾಜ್ಯ ವಸ್ತುಗಳು, ಬೆಳೆಗಳ ಉಳಿಕೆ ವಸ್ತುಗಳ ಬಳಕೆ ಮಾಡಿ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತವೆ ಇದರಿಂದ ಮಣ್ಣಿನಲ್ಲಿ

      ನೈಸರ್ಗಿಕವಾಗಿ ಎರೆಹುಳುಗಳ ಸಂತತಿ ಹಾಗೂ ಸೂಕ್ಷ್ಮಾಣುಜೀವಿಗಳ ಸಂತತಿ ಹೆಚ್ಚುಸುವುದರಿಂದ ಮಣ್ಣಿನ ಗುಣಮಟ್ಟ ಹೆಚ್ಚಿಸುತ್ತದೆ.

  • ರೈಜೋಬಿಯಂ ಜೀವಿಗಳಿಂದ ಬೀಜೋಪಚಾರ ಮಾಡುವುದರಿಂದ ನೈಸರ್ಗಿಕವಾಗಿ ಸಾರಜನಕ ಮಣ್ಣಿನಲ್ಲಿ ಸಂಗ್ರಹವಾಗುತ್ತದೆ.
  • ಅಜಿಟೊಬ್ಯಾಕ್ಟರನ್ನು ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಮಣ್ಣಿಗೆ ಸೇರಿಸುವುದರೀಂದ ಮಣ್ಣಿನಲ್ಲಿರುವ ರಂಜಕ ಕರಗಿ ಬೆಳೆಗಳ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಪರತಂತ್ರ ಜೀವಿಗಳು ಬೆಳೆಗಳಲ್ಲಿ ಯಾವುದೇ ತರಹದ ರಸಾಯನಿಕ ಗೊಬ್ಬರಗಳು, ರಸಾಯನಿಕ ಕೀಟನಾಶಕಗಳನ್ನು ಕಳೆದ 20 ವರ್ಷಗಳಿಂದ ಬಳಕೆ ಮಾಡದೇ

ಇರುವುದರಿಂದ ಪರತಂತ್ರ ಜೀವಿಗಳಾದ ಜೇನುನೊಣಗಳು. ಇರುವೆಗಳು ಮತ್ತು ಹಕ್ಕಿಗಳು ಸಮೃದ್ಧವಾಗಿ ಹೊಲದಲ್ಲಿ ಇರುವುದರಿಂದ ನಮ್ಮ ಯಾವುದೇ ಬೆಳೆಗಳಲ್ಲಿ

ಪೀಡನಾಶಕಗಳಾಗಿ ಕಾರ್ಯಮಾಡುತ್ತವೆ. ದುಂಡಾಣುಗಳ ರೋಗಕ್ಕೆ ತುಂತುರ ನೀರಾವರಿ ಸಹಾಯದಿಂದ ಬೆಳೆಗಳನ್ನು ರಕ್ಷಿಸಲಾಗಿದೆ.

ಕೃಷಿಯಲ್ಲಿ ಪೀಡನಾಶಕಗಳ ಬಳಕೆಯಾಗಿ ಜೀವಾಮೃತವನ್ನು ಬೆಳೆಗಳಗೆ ಸಿಂಪರಣೆ ಮಾಡುತ್ತಾರೆ.

Malleshappa M., a farmer engaged in farming with sewing profession. Kalyanshetty

 ಸ್ವಂತವಾಗಿ ಸಿರಿಧಾನ್ಯಗಳು ಮತ್ತು ದ್ವಿದಳಗಳಿಂದ ತಯಾರಿಸಿದ- ‘ಸಂಜೀ0ವಿನಿ’ ಉತ್ಪನ್ನ, ಕರಿಬೇವಿನ ಪೌಡರ್, ಬೀಟರೂಟ್‍ನಿಂದ ಹಪ್ಪಳ

ಅವರೆ ಬೇಳೆ  ಮತ್ತು  ಇನ್ನಿತರ ಆಹಾರ ಸಂಸ್ಕರಿಸಿ ಮತ್ತು ಉಪಚರಿಸಿ ಪೊಟ್ಟಣಗಳಲ್ಲಿ ತುಂಬಿ ನೇರವಾಗಿ ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತಾರೆ.

ನೈಸರ್ಗಿಕ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಂತಹ ಸಿರಿಧಾನ್ಯಗಳು ಮತ್ತು ಆಹಾರಧಾನ್ಯಗಳ ಮಹತ್ವ ಸಾರುವ ಕರ ಪತ್ರಗಳನ್ನು ಮುದ್ರಿಸಿ

(ಪ್ರತಿ ವರ್ಷ 10,000 ಮುದ್ರಣ) ಕರ್ನಾಟಕ ರಾಜ್ಯದ ವಿಶ್ವ ವಿದ್ಯಾಲಯಗಳ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಕೃಷಿ ಮೇಳಗಳಲ್ಲಿ ಹಂಚಿ

ಗ್ರಾಹಕರಿಗೆ ತಲುಪಿಸಿ ಅವರ ಜೊತೆ ಸಂಪರ್ಕದಲ್ಲಿದ್ದಾರೆ.

ಅಲ್ಲದೇ ಮಲ್ಲೇಶಪ್ಪ ಅವರು ನೈಸರ್ಗಿಕ ಸಾವಯವ ಕೃಷಿ ಮಾಡುವುದರಿಂದ ರಾಸಾಯನಿಕ ಗೊಬ್ಬರಗಳು ಮತ್ತು ರಸಾಯನಿಕ ಕೀಟನಾಶಕಗಳನ್ನು

ಕಳೆದ 20 ವರ್ಷಗಳಿಂದ ಬಳಕೆ ನಿಷೇಧಿಸಿದ್ದರಿಂದ ಖರ್ಚು ವೆಚ್ಚಗಳಲ್ಲಿ ಉಳಿತಾಯವಾಗಿದೆ. 

2022-23ನೇ ಸಾಲಿನಲ್ಲಿ ಬೆಳೆದ ಬೆಳೆಗಳ ವಿವರ  

ಕ್ರ.ಸಂ.

ಬೆಳೆ

ವಿಸ್ತಿರ್ಣ (ಎಕರೆ)

ಉತ್ಪಾದನೆ (ಕ್ವ್ವಿಂಟಲ್)

ದರ

(ರೂ.ಪ್ರತಿ ಕ್ವ್ವಿಂಟಲ್)

ಒಟ್ಟು ಆದಾಯ (ರೂ.)

ಖರ್ಚು (ರೂ.)

ನಿವ್ವಳ ಲಾಭ (ರೂ.)

1.

ಸಿರಿಧಾನ್ಯಗಳು

1.5

20

6,000

1,20,000

20,000

1,00,000

2.

ಬೇಳೆಕಾಳುಗಳು

0.5

06

8,000

42,000

5,000

37,000

3.

ಆಹಾರಧಾನ್ಯಗಳು

1

10

5,000

50,000

5,000

45,000

4.

ಕೃಷಿ ಅರಣ್ಯ

0.5

-

-

-

-

-

ಒಟ್ಟು

2,12,000

30,000

1,82,000

ಬಹುತೇಕ ಕೃಷಿ ಮೇಳಗಳಿಗೆ ಭೇಟಿ

ಮಲ್ಲೇಶಪ್ಪನವರಿಗೆ 65 ವರ್ಷ ವಯಸ್ಸು ಆಗಿದ್ದರೂ ಅವರಲ್ಲಿರುವ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಉತ್ಸಾಹ ಮಾತ್ರ ಕುಗ್ಗಿಲ್ಲ.

ಈ ಇಳಿ ವಯಸ್ಸಿನಲ್ಲಿಯೂ ರಾಜ್ಯದಲ್ಲಿ ನಡೆಯುವ ಬಹುತೇಕ ಕೃಷಿ ಮೇಳೆಗಳಿಗೆ ಭೇಟಿ ನೀಡುತ್ತಾರೆ.

ಅಲ್ಲಿ ತಮ್ಮ ಸಾವಯವ ಪದಾರ್ಥಗಳನ್ನು ಮಾರಾಟ ಮಾಡುತ್ತಾರೆ. ಇದಲ್ಲದೆ ಕೃಷಿ ವಿಜ್ಞಾನಿಗಳೊಂದಿಗೆ ಇವರು ನಿಕಟ ಒಡನಾಟ ಇಟ್ಟುಕೊಂಡಿದ್ದು

ಅವರಿಂದ ಮಾಹಿತಿ ಪಡೆದು ತಮ್ಮ ಜಮೀನಿನಲ್ಲಿ ಹೊಸ ಬೆಳೆಗಳನ್ನು ಸಾವಯವ ಪದ್ಧತಿ ಮುಖಾಂತರ ಬೆಳೆಯುತ್ತಾರೆನ್ನುವುದೆ ಅವರಿಗೂ ಹೆಮ್ಮೆ.

ಇವರು ಹಲವಾರು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಅದರಲ್ಲಿ ವಿಕೆ ಸೂಪರ್ ಸ್ಟಾರ್‌ 2020ರಲ್ಲಿ ಪುರಸ್ಕಾರ

ಕೃಷಿ ವಸ್ತು ಪದ್ರದರ್ಶನದಲ್ಲಿ ಸಕ್ರೀಯವಾಗಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ್ದಿದ್ದಾರೆ.

ರೈತ ಬಾಂಧವರೇ ಗೋಮಾತೆಯನ್ನು ರಕ್ಷಿಸಿ ಸಾವಯವ ಕೃಷಿಯನ್ನು ಮಾಡಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ

ಎಂಬುವುದು ಇವರ ಘೋಷ ವಾಕ್ಯವಾಗಿದೆ. ಮಲ್ಲೇಶಪ್ಪ ಅವರ ದೂರವಾಣಿ ಸಂಖ್ಯೆ: 9900552223.  

Published On: 03 November 2023, 04:18 PM English Summary: Malleshappa M., a farmer engaged in farming with sewing profession. Kalyanshetty

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.