Success story of farmer: ಆಧುನಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೆಂಪು ಬಾಳೆಯನ್ನು (Red Banana) ಬೆಳೆಯುವ ಮೂಲಕ ಈ ಯುವರೈತ ಅಂದಾಜು ₹35 ಲಕ್ಷ ರೂಪಾಯಿವರೆಗೆ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಹೇಗೆ ಗೊತ್ತಾ? ಇದನ್ನು ಓದಿರಿ…
Red Banana farming: ವೃತ್ತಿಯಿಂದ ಸಿವಿಲ್ ಎಂಜಿನಿಯರ್ ಆಗಿದ್ದ ಅಭಿಜೀತ್ ಪಾಟೀಲ್ ಅವರು ಇದ್ದ ಕೆಲಸವನ್ನು ಬಿಟ್ಟು ಬಂದು ಸದ್ಯ ನಾಲ್ಕು ಎಕರೆ ಜಮೀನಿನಲ್ಲಿ 'ಕೆಂಪು ಬಾಳೆ' ಬೆಳೆಯುವ ಮೂಲಕ ತಮ್ಮ ಕೃಷಿಯನ್ನು ಆರಂಭಿಸಿದ್ದಾರೆ.
ಅಭಿಜೀತ್ ಪಾಟೀಲ್ ಅವರ ಕೃಷಿಯು ಎಲ್ಲರಂತೆ ಸಾಮಾನ್ಯ ಅಥವಾ ಸಾಂಪ್ರದಾಯಿಕ ಕೃಷಿ ಪದ್ದತಿ ಆಗಿರದೆ, ಅದು ಆಧುನಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರಂಭಿಸಲಾದ ಕೃಷಿಯಾಗಿದೆ.
ಮಹಾರಾಷ್ಟ್ರದ ಅಭಿಜೀತ್ ಪಾಟೀಲ್ ಅವರು ತಮ್ಮ ಎಂಜಿನಿಯರ್ ಉದ್ಯೋಗ ಬಿಟ್ಟು ಬಂದು ಅದರ ಬದಲು ಕೃಷಿಯನ್ನು ಮುಂದುವರಿಸಲು ನಿರ್ಧರಿಸಿದರು.
ಅದಾದ ನಂತರ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ 'ಕೆಂಪು ಬಾಳೆ' (Red Banana) ಬೆಳೆಯುವ ನಿರ್ಧಾರವನ್ನು ಕೈಗೊಂಡರು. ಇದೀಗ ಈ ಕೆಂಪು ಬಾಳೆ ತೋಟದಿಂದಲೇ ಅವರು ₹ 35 ಲಕ್ಷದವರೆಗೆ ಆದಾಯವನ್ನು ಗಳಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರದ ವಾಶಿಂಬೆ ಗ್ರಾಮದ ಯುವ ಸಿವಿಲ್ ಇಂಜಿನಿಯರ್ ಅಭಿಜೀತ್ ಪಾಟೀಲ್, ಆಧುನಿಕ ಕೃಷಿ ಪದ್ಧತಿಗಳು ಹೇಗೆ ಗಣನೀಯ ಆರ್ಥಿಕ ಲಾಭಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.
ಪಾಟೀಲ ಅವರು ಸಾಂಪ್ರದಾಯಿಕ ಉದ್ಯೋಗದ ಬದಲು ಕೃಷಿಯನ್ನು ಮುಂದುವರಿಸಲು ನಿರ್ಧರಿಸಿದ್ದು, ಅವರ ನಾಲ್ಕು ಎಕರೆಯಲ್ಲಿ ಮಾಡಿದ 'ಕೆಂಪು ಬಾಳೆ' ತೋಟದಿಂದ ಅವರು ₹ 35 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ.
youth farmer earning 35 lakh by red banana : ಡಿಸೆಂಬರ್ 2020 ರಲ್ಲಿ, ಪಾಟೀಲ್ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಕೆಂಪು ಬಾಳೆ ನೆಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟರು. ತಾಳ್ಮೆ ಮತ್ತು ಪರಿಶ್ರಮದ ಫಲವಾಗಿ ಅವರ ಬಾಳೆ ತೋಟ ಅವರ ಅವರ ಕೈ ಹಿಡಿಯಿತು.
ಪಾಟೀಲ್ ಅವರು ಮಾರ್ಕೆಟಿಂಗ್ಗಾಗಿ ಅವರ ತೋಟದ ಕೆಂಪು ಬಾಳೆಹಣ್ಣುಗಳನ್ನು ಪುಣೆ, ಮುಂಬೈ ಮತ್ತು ದೆಹಲಿಯಲ್ಲಿ ರಿಲಯನ್ಸ್ ಮತ್ತು ಟಾಟಾ ಮಾಲ್‌ಗಳು ಸೇರಿದಂತೆ ಪ್ರಮುಖ ಸಣ್ಣ ಪುಟ್ಟ ಅಂಗಡಿಗಳಲ್ಲಿ ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದಾರೆ.
ಪ್ರತಿ ಕಿಲೋಗ್ರಾಂಗೆ ₹ 55 ರಿಂದ ₹ 60 ರ ನಡುವೆ ಬೆಲೆ ಇದೆ. ಪಾಟೀಲ ಅವರ ನಾಲ್ಕು ಎಕರೆ ಜಮೀನಿನಲ್ಲಿ 60 ಟನ್‌ಗಳಷ್ಟು ಕೆಂಪು ಬಾಳೆಹಣ್ಣು ಬಂದಿದ್ದು, ವೆಚ್ಚದ ಲೆಕ್ಕದಲ್ಲಿ ₹35 ಲಕ್ಷ ನಿವ್ವಳ ಆದಾಯ ಬಂದಿದೆ ಎನ್ನುತ್ತಾರೆ ಅವರು.
ಔಷಧಿಯ ಗುಣಗಳ ಕಾರಣದಿಂದ ಹೆಚ್ಚು ಬೇಡಿಕೆ
ಔಷಧೀಯ ಗುಣಗಳು ಮತ್ತು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯಕ್ಕೆ ಹೆಸರುವಾಸಿಯಾದ ಕೆಂಪು ಬಾಳೆಹಣ್ಣುಗಳು ಮೆಟ್ರೋ ನಗರಗಳಲ್ಲಿ ಶ್ರೀಮಂತ ವರ್ಗಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ.
ಹೆಚ್ಚುವರಿಯಾಗಿ, ಐಷಾರಾಮಿ ಹೋಟೆಲ್‌ಗಳು ಈ ವಿಶಿಷ್ಟವಾದ ಹಣ್ಣನ್ನು ಸಂಗ್ರಹಿಸಲು ಹೆಚ್ಚಿನ ಆಸಕ್ತಿಯನ್ನು ತೋರಿಸಿವೆ.
ಕೆಂಪು ಬಾಳೆ ಕೃಷಿ ಕೈಹಿಡಿದ ನಂತರ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅಭಿಜೀತ್ ಅವರು ಸ್ವತಃ ಆ ಬಾಳೆ ತಳಿಯ ನಾಟಿ ಮತ್ತು ಮಾರಾಟವನ್ನು ಆರಂಭಿಸಿದ್ದಾರೆ.
Share your comments