1. ಸುದ್ದಿಗಳು

ಆಧುನಿಕ ಕೃಷಿಯಲ್ಲಿ ಕ್ರಮಬದ್ದ ಬೇಸಾಯ ತಾಂತ್ರಿಕತೆಗಳ ಬಳಕೆ

ಆಧುನಿಕ ಕೃಷಿಯಲ್ಲಿ ಕ್ರಮಬದ್ದ ಬೇಸಾಯ ತಾಂತ್ರಿಕತೆಗಳ ಬಳಕೆ

ಆಧುನಿಕ ಕೃಷಿಯಲ್ಲಿ ಕ್ರಮಬದ್ದ ಬೇಸಾಯ ತಾಂತ್ರಿಕತೆಗಳ ಬಳಕೆ

ಪ್ರಭು ಇಳಿಗೇರ, ಮಂಜುನಾಥ ಎಸ್.ಬಿ. ಹಾಗೂ ಬಿ. ಆರ್. ಜಗದೀಶ,
ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿ-581 115

ಭಾರತವು ಮೂಲತ ಹಳ್ಳಿಗಳ ದೇಶಹಳ್ಳಿಗಳಲ್ಲಿನ ಜನರು ತಮ್ಮ ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿರುತ್ತಾರೆ. ರೈತರು ಕೃಷಿಯಲ್ಲಿ ನೀರಿಕ್ಷಿತ ಲಾಭಗಳಿಸಬೇಕಾದರೆ ವೈಜ್ಞಾನಿಕ ಕೃಷಿ ಪಧ್ಧತಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಭಾರತವು ಇಲ್ಲಿಯವರೆಗೆ ಆಹಾರ ಉತ್ಪಾದನೆಯಲ್ಲಿ ಸಾಕಷ್ಟು ಸ್ವಾವಲಂಬನೆ ಸಾಧಿಸಿದೆ ಆದರೆ ದಿನ ದಿನ ಜನಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು ಅವರಿಗೆ ಬೇಕಾಗುವಷ್ಟು ಆಹಾರ ಉತ್ಪಾದನೆ ಮಾಡಬೇಕಾಗಿದೆ, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಜನರು ಆಹಾರದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಆಹಾರ ಉತ್ಪಾದನೆಗೆ ವೈಜ್ಞಾನಿಕ ಕೃಷಿ ಪಧ್ಧತಿಗಳನ್ನು ಕ್ರಮಬದ್ದವಾಗಿ ಅನುಸರಿಸುವುದು ಅತ್ಯಗತ್ಯ ಹಾಗೂ ಅನಿವಾರ್ಯವಾಗಿದೆ.
ಮಣ್ಣು ಃ ಮಣ್ಣು ಪ್ರಕೃತಿಯ ಒಂದು ಅಮೂಲ್ಯ ಕೊಡುಗೆ, ಇದು ಸಸ್ಯಕ್ಕೆ ಬೇಕಾದ ಪೋಷಕಾಂಶಗಳನ್ನಲ್ಲದೆ, ನೀರು, ಗಾಳಿ, ಉಷ್ಣತೆ ಒದಗಿಸಿ ಬೆಳೆ ಬೆಳೆಯಲು ಆಧಾರವಾಗಿದೆ ಮಣ್ಣಿನಲ್ಲಿ ಸಾವಯವ ಅಂಶ ಬಹಳ ಮುಖ್ಯ, ಇದು ಮಣ್ಣಿನ ಫಲವತ್ತತೆ ಹಾಗೂ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ, ಮಣ್ಣಿಗೆ ಸೇರುವ ಸಸ್ಯ ಹಾಗೂ ಪ್ರಾಣಿಗಳ ವಿವಿಧ ಭಾಗಗಳ ಮೇಲೆ ಸೂಕ್ಷ್ಮ ಜೀವಿಗಳು ಜೈವಿಕ ಕ್ರಿಯೆನಡೆಸಿ ಬೆಳೆಗೆ ಬೇಕಾದ ಸಾವಯವ ಪದಾರ್ಥವನ್ನು ಉತ್ಪನ್ನ ಮಾಡುತ್ತವೆ
ಮಣ್ಣಿನಲ್ಲಿರುವ ನೀರು ಸಸ್ಯಗಳ ಬೆಳವಣಿಗೆಗೆ ಮೂಲಾಧಾರ ಬೆಳೆಗೆ ಬೇಕಾದ ಹೆಚ್ಚಿನ ಪೋಷಕಾಂಶಗಳು ನೀರಿನ ಮುಖಾಂತರವೇ ಸರಬರಾಜು ಆಗುತ್ತವೆ.
ವಾತಾವರಣದಲ್ಲಿ ಗಾಳಿ ಇರುವಂತೆ ಮಣ್ಣಿನಲ್ಲಿ ಸಹ ಗಾಳಿ ಇರುತ್ತದೆ ವಾತಾವರಣದಲ್ಲಿರುವಂತಹ ಗಾಳಿ ಜೀವಿಗೆ ಎಷ್ಟು ಮುಖ್ಯವೋ ಮಣ್ಣಿನಲ್ಲಿರುವ ಗಾಳಿ ಸಂಚಾರವೂ ಕೂಡ ಬೆಳೆಗೆ ಅಷ್ಟೆ ಮುಖ್ಯ
ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ, ಸಂರಕ್ಷಣೆ ಹಾಗೂ ಮಣ್ಣು ಪರೀಕ್ಷೆ ಃ
ಸಸ್ಯಗಳ ಬೆಳವಣಿಗೆಗೆ ಮುಖ್ಯವಾಗಿ 17 ಪೋಷಕಾಂಶಗಳು ಬೇಕು ಸಸ್ಯಗಳ ಬೆಳವಣಿಗೆಗೆ ಆಮ್ಲಜನಕ, ಜಲಜನಕ ಹಾಗೂ ಇಂಗಾಲ ವಾತಾವರಣದಿಂದ ದೊರೆಯುವದು. ಇನ್ನುಳಿದ ಪೋಷಕಾಂಶಗಳು ಮಣ್ಣಿನಿಂದಲೇ ದೊರೆಯಬೇಕು ಹೆಚ್ಚಿನ ಪ್ರಮಾಣÀದಲ್ಲಿ ಬೇಕಾಗುವ ಪೋಷಕಾಂಶಗಳೆಂದರೆ, ಸಾರಜನಕ, ರಂಜಕ ಹಾಗೂ ಪೋಟ್ಯಾಷ್, ಮಧ್ಯಮ ಪ್ರಮಾಣದಲ್ಲಿ ಬೇಕಾಗುವ ಪೋಷಕಾಂಶಗಳೆಂದರೆ ಗಂಧಕ, ಸುಣ್ಣ ಮತ್ತು ಮೆಗ್ನೀಷಿಯಂ, ಅಲ್ಪ ಪ್ರಮಾಣÀದಲ್ಲಿ ಬೇಕಾಗುವ ಪೋಷಕಾಂಶಗಳೆಂದರೆ ssಸತು, ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಬೋರಾನ್, ಮತ್ತು ಕ್ಲೋರಿನ್, ಇವುಗಳೆಲ್ಲವೂ ಸಮರ್ಪಕವಾಗಿ ದೊರಕಿಸಿಕೊಡುವ ಮಣ್ಣಿಗೆ ಫಲವತ್ತಾದ ಮಣ್ಣು ಎನ್ನುವರು.
ಉತ್ತಮ ರೀತಿಯ ಸಾಗುವಳಿ ಕ್ರಮದಿಂದ ಮಣ್ಣಿನ ಉತ್ಪಾದಕತೆ ಹೆಚ್ಚಿಸಬಹುದು ಹಿಂಗಾರು ಬೆಳೆ ಕಟಾವಾದ ಕೂಡಲೇ ಒಂದು ಸಾರಿ ಮಾಗಿ ಉಳುಮೆ ಮಾಡಿದರೆ ಮಣ್ಣಿನಲ್ಲಿರುವ ಕೀಟಗಳು ನಾಶವಾಗುತ್ತವೆ. ಅಲ್ಲದೆ ಮಳೆ ನೀರಿನ ಶೇಖರಣೆ ಪ್ರಮಾಣ ಹೆಚ್ಚಿಸಿದಂತಾಗುತ್ತದೆ.
ಹೊಲದಲ್ಲಿ ಸಾಕಷ್ಟು ಬಸಿಕಾಲುವೆಗಳನ್ನು ನಿರ್ಮಿಸಬೇಕು ಇದರಿಂದ ಮಳೆಗಾಲದಲ್ಲಿ ಹೆಚ್ಚಾದ ನೀರು ಬಸಿಕಾಲುವೆ ಮುಖಾಂತರ ಹೊರಹೊಗುತ್ತದೆ. ಇದರಿಂದ ಹೊಲದಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುವದಿಲ್ಲ ಮತ್ತು ಜಮೀನು ಇಳಿಜಾರಾಗಿದ್ದರೆ ಅಧಿಕ ಮಳೆ ಬಿದ್ದ ಸಮಯದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗುತ್ತದೆ. ಆದ್ದರಿಂದ ಕೊರಕಲಿಗೆ ಜಮೀನಿನ ಅಂಚಿನಲ್ಲಿ ಸಣ್ಣ ಸಣ್ಣ ಕಲ್ಲಿನ ಕೋಡಿಗಳನ್ನು ಕಟ್ಟಬೇಕು ಹೆಚ್ಚಾದ ನೀರು ಕೋಡಿಯಿಂದ ಹೊರಹೋಗಿ ಮಣ್ಣು ಜಮೀನಿನಲ್ಲಿ ಉಳಿಯುವುದು ಅದೇ ರೀತಿ ಗಾಳಿಯಿಂದಾಗುವ ಸವಕಳಿಯನ್ನು ತಡೆಗಟ್ಟಲು ಜಮೀನಿನ ಸುತ್ತಲೂ ಗಾಳಿ ತಡೆಯುವ ಮರಗಳನ್ನು ಬೆಳೆಸುವುದು ಉಪಯುಕ್ತವಾಗಿದೆ. ಕರ್ನಾಟಕದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಮಣ್ಣು ಪರೀಕ್ಷೆ ಕೇಂದ್ರಗಳು ಮತ್ತು ಕೃಷಿ ವಿಜ್ಞಾಣ ಕೇಂದ್ರಗಳಲ್ಲಿ ಮಣ್ಣು ಪರೀಕ್ಷೆಯ ಪ್ರಯೋಗಾಲಯಗಳಿವೆ. ಇದರ ಉಪಯೋಗವನ್ನು ರೈತರು ಪಡೆದುಕೊಂಡು 3 ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುವುದು ಸೂಕ್ತವಾಗಿರುತ್ತದೆ.
ಸಮತೋಲನ ಪೋಷಕಾಂಶಗಳ ಪೂರೈಕೆ ಃ
ಸಾವಯವ ಗೊಬ್ಬರಗಳು ಃ ಕೃಷಿ ಆರಂಭವಾದಾಗಿನಿಂದಲೂ ರೈತರು ಸಾವಯವ ಗೊಬ್ಬರಗಳನ್ನು ಬೆಳೆಗಳಿಗೆ ಬಳಸುತ್ತಾ ಬಂದಿದ್ದಾರೆ. ಜಮೀನಿನ ಮಣ್ಣಿನ ಫಲವತ್ತತೆ ಹಾಗೂ ಉತ್ಪಾದನಾ ಶಕ್ತಿ ಕಾಪಾಡಿಕೊಂಡು ಬರಲು ಸಾವಯವ ಗೊಬ್ಬರಗಳು ಬಹು ಮುಖ್ಯ ಪಾತ್ರ ಹೊಂದಿವೆ ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರ, ಹಿಂಡಿ ಗೊಬ್ಬರಗಳನ್ನು ಮಣ್ಣಿಗೆ ಸೇರಿಸಿದಾಗ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.
ಕೊಟ್ಟಿಗೆ ಗೊಬ್ಬರ ಃ ಕೊಟ್ಟಿಗೆ ಗೊಬ್ಬರವನ್ನು ರೈತರು ಬಳಸುತ್ತಿಲ್ಲವಂತಲ್ಲ, ಆದರೆ ಅದನ್ನು ಅವರು ವೈಜ್ಞಾನಿಕ ರೀತಿಯಲ್ಲಿ ತಯಾರಿಸಿ ಬಳಸುವುದು ಕಡಿಮೆ, ಪ್ರತಿದಿನ ದನದ ಕೊಟ್ಟಿಗೆಯಲ್ಲಿ ಸಿಗುವ ಕಸ, ಸಗಣಿ ಹಾಗೂ ಗಂಜಲನ್ನು ಒಂದು ಗೊಬ್ಬರದ ಗುಂಡಿಯನ್ನು ತಯಾರಿಸಿ ಹಂತ ಹಂತವಾಗಿ ತುಂಬಬೇಕು ಗೊಬ್ಬರ ಗುಂಡಿಗಳು 10 ಅಡಿ ಉದ್ದ 3 ಅಡಿ ಆಳ ಮತ್ತು 3 ಅಡಿ ಅಗಲ ಇರಬೇಕಾಗುತ್ತದೆ. ಈ ಗುಂಡಿಗಳನ್ನು ಪೂರ್ತಿ ತುಂಬಿಸಿ ಭೂಮಿಯ ಮೇಲೆ ಅರ್ಧ ಮೀಟರ್ ಎತ್ತರಕ್ಕೆ ಬಂದಾಗ ಸಗಣಿ ರಾಡಿಯಿಂದ ಸಾರಿ ಮುಚ್ಚಬೇಕು. ಇದನ್ನು ಸುಮಾರು 3-4 ತಿಂಗಳು ಹಾಗೆ ಬಿಟ್ಟರೆ ಜೈವಿಕ ಗೊಬ್ಬರ ತಯಾರಾಗುತ್ತದೆ.
ಕಾಂಪೋಸ್ಟ್ ಃ ಕೊಟ್ಟಿಗೆ ಗೊಬ್ಬರ ತಯಾರಿಸುವ ರೀತಿಯಲ್ಲಿಯೇ ಕಾಂಪೋಸ್ಟ್‍ನ್ನು ತಯಾರಿಸಬೇಕು, ಕೊಟ್ಟಿಗೆಯಿಂದ ದೊರಕುವ ಕಚ್ಚಾ ವಸ್ತುಗಳನ್ನಲ್ಲದೆ ಗಾಳಿಗಳಿಂದ ಉದರುವ ಎಲೆ, ಕಡ್ಡಿ ವiತ್ತು ಹೊಲದಲ್ಲಿರುವ ಕಳೆಗಳು ಹೀಗೆ ಅನೇಕ ತರಹದ ಸಾವಯವ ವಸ್ತುಗಳನ್ನು ಗುಂಡಿಯಲ್ಲಿ ಒಂದರ ಮೇಲೊಂದರಂತೆ ಹಂತ ಹಂತವಾಗಿ ತುಂಬಬೇಕು. ಪ್ರತಿ ಹಂತದಲ್ಲಿ ತಿಳುವಾದ ಮಣ್ಣಿನ ಪದರವನ್ನು ಹಾಕಬೇಕು ಗುಂಡಿಯಲ್ಲಿ ಯಾವಾಗಲು ತೆವಾಂಶವಿರಬೇಕು ಗುಂಡಿಯೂ ನೆಲದಿಂದ ಸುಮಾರು ಒಂದು ಅಡಿ ಮೇಲಕ್ಕೆ ಬಂದಾಗ ಸಗಣಿ ರಾಡಿಯಿಂದ ಮುಚ್ಚಬೇಕು, ನಾಲ್ಕು ತಿಂಗಳ ನಂತರ ಗೊಬ್ಬರ ತಯಾರಾಗುವುದು
ಹಸಿರೆಲೆ ಗೊಬ್ಬರ ಃ ವೈಜ್ಞಾನಿಕ ಕೃಷಿಯಲ್ಲಿ ಹಸಿರೆಲೆ ಗೊಬ್ಬರಕ್ಕೆ ಮಹತ್ವವಿದೆ ಗ್ಲಿರಿಸೀಡಿಯಾ, ಹೊಂಗೆ ಮತ್ತು ಉಗಣಿ ಮರಗಳ ಹಸಿರೆಲೆ ಗೊಬ್ಬರಕ್ಕಾಗಿ ಬಳಸುತ್ತಾರೆ, ಕೆಲವು ಹಸಿರೆಲೆ ಬೆಳೆಗಳನ್ನು ಗದ್ದೆಯಲ್ಲಿ ಬೆಳೆದು ಅವು ಹೂ ಬಿಡುವ ಮುಂಚೆ ಮಣ್ಣಿನಲ್ಲಿ ಸೇರಿಸಬೇಕು ಸಸ್ಬೆನಿಯಾ, ಡಯಂಚ, ಸೆಣಬು ಹಾಗೂ ತೊಗಚೆ ಮುಂತಾದ ಹಸಿರೆಲೆ ಬೆಳೆಗಳನ್ನು ಹಸಿರು ಗೊಬ್ಬರವಾಗಿ ಬಳಸಲಾಗುತ್ತದೆ.
ರೈತರು ಅಧಿಕ ಇಳುವರಿ ಪಡೆಯಲು ಸಾವಯವ ಗೊಬ್ಬರಗಳ ಜೊತೆಗೆ ರಸಗೊಬ್ಬರಗಳನ್ನು ಬಳಕೆ ಮಾಡುವುದು ಅವಶ್ಯಕ ಹಾಗೂ ಈಗಿರುವ ಸಂಕಿರಣ ತಳಿಗಳು ಮತ್ತು ಅಧಿಕ ಇಳುವರಿ ಕೊಡುವ ತಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಷಗಳ ಅವಶ್ಯಕತೆ ಇರುವುದರಿಂದ ರಸಗೊಬ್ಬರಗಳ ಬಳಕೆಯೂ ಅನಿವಾರ್ಯವಾಗಿದೆ.
ಜೈವಿಕ ಗೊಬ್ಬರ ಃ ಸೂಕ್ಷ್ಮಾಣು ಜೀವಿಗಳನ್ನೋಳಗೊಂಡ ಗೊಬ್ಬರವನ್ನು ಜೈವಿಕ ಗೊಬ್ಬರವೆನ್ನುವರು. ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ರೈಜೋಬಿಯಂ, ಅಜೋಟೋ ಬ್ಯಾಕ್ಟರ್, ಅಜೋಸ್ಪೆರಿಲಂ ಇವುಗಳು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿ ಬೆಳೆಗೆ ಒದಗಿಸಬಲ್ಲವು. ಇವುಗಳಿಲ್ಲದೆ ಅಜೋಲ (ಂzoಟಟಚಿ), ನೀಲಿ ಹಸಿರು ಪಾಚಿ (ಃಉಂ) ಇವು ಸಹ ವಾತಾವರಣದಲ್ಲಿರುವ ಸಾರಜನಕವನ್ನು ಹೀರಿ ಬೆಳೆಗೆ ಪೂರೈಕೆ ಮಾಡುತ್ತವೆ.
ಕಳೆಗಳ ಹತೋಟಿಃ ಕಳೆಗಳನ್ನು ವಿವಿಧ ರೀತಿಯಲ್ಲಿ ಹತೋಟಿಯಲ್ಲಿಡಬಹುದು.
ಅ) ಬೇಸಾಯ ಕ್ರಮಗಳು
ಆ) ಕಳೆನಾಶಕಗಳು
ಇ) ಜೈವಿಕ ನಿಯಂತ್ರಣ
ಬೇಸಾಯ ಕ್ರಮಗಳು ಃ
 ಹಿಂಗಾರು ಬೆಳೆ ಕಟಾವಿನ ನಂತರ ಕಬ್ಬಿಣದ ನೇಗಿಲಿನಿಂದ ಹೊಲವನ್ನು ಮಾಗಿ ಉಳುಮೆ ಮಾಡಬೇಕು.
 ಬೆಳೆಗಳಸಾಲಿನಲ್ಲಿ ಕುಡಗೋಲಿನಿಂದ 2-3 ಸಲ ಕಳೆಯನ್ನು ತೆಗೆಯಬೇಕು.
 ಬೆಳೆಯಲ್ಲಿ ಎಡೆ ಹೊಡೆಯುವುದರಿಂದ ಸಾಲಿನ ಮಧ್ಯದಲ್ಲಿ ಬೆಳೆದಿರುವ ಕಳೆಗಳನ್ನು ನಾಶಪಡಿಸಬಹುದು.
 ಕೆಲವು ಪರವಾಲಂಬಿ ಕಸಗಳಿವೆ ಉದಾ: ಬಿಳಿಕಸವು ಜೋಳದಲ್ಲಿ ಕಂಡುಬಂದಾಗ ಅಂತಹ ಸಂಧರ್ಭದಲ್ಲಿ ಪರ್ಯಾಯ ಬೆಳೆಯಾಗಿ ಹತ್ತಿ ಅಥವಾ ದ್ವಿದಳ ಧಾನ್ಯವನ್ನು ಬೆಳೆಯಬೇಕು.
ಕಳೆನಾಶಕಗಳು ಃ
 ಭತ್ತ ಮತ್ತು ಕಬ್ಬಿನಲ್ಲಿ ಕಳೆ ಹತೋಟಿ ಮಾಡಲು 2-4, ಡಿ ಕಳೆನಾಶಕ ಉಪಯೋಗಿಸಬೇಕು
 ದ್ವಿದಳ ಧಾನ್ಯದ ಬೆಳೆಗಳಲ್ಲಿ ಅಲಾಕ್ಲೋರ್ ಬಳಸಲಾಗುವುದು
 ಜೋಳ ಮತ್ತು ಮೆಕ್ಕೆಜೋಳಲ್ಲಿ ಅಟ್ರಾಜೇನ್ ಮತ್ತು ಸಿಮೆಜಾನ್ ಉಪಯೋಗಿಸಬೇಕು
 ಹತ್ತಿ ಬೆಳೆಗೆ ಡೈಯುರಾನ್ ಸೂಕ್ತವಾಗಿದೆ.
ಸಮಗ್ರ ಕೀಟ ನಿರ್ವಹಣೆ ಃ
ಕೀಟಗಳನ್ನು ಎರಡು ಪಂಗಡಗಳಾಗಿ ವಿಂಗಡಿಸಬಹುದು.
ಅ) ಹಾನಿಕಾರಕ ಕೀಟಗಳು ಆ) ಉಪಕಾರಿ ಕೀಟಗಳು
ಉಪಕಾರಿಕೀಟಗಳಲ್ಲಿ ಮುಖ್ಯವಾಗಿ ಜೇನುನೊಣ, ರೇಷ್ಮೆಹುಳುಗಳಿವೆ, ಇದಲ್ಲದೆ ಕೆಲವು ಪರತಂತ್ರ ಜೀವಿಗಳೂ ಸಹ ಇವೆ. ಹಾನಿಕಾರಕ ಕೀಟಗಳಲ್ಲಿ ಮುಖ್ಯವಾಗಿ ರಸಹೀರುವ ಕೀಟಗಳು, ಕಾಂಡಕೊರಕ/ಕಾಯಿಕೊರಕ ಹುಳುಗಳು. ರಸಹೀರುವ ಕೀಟಗಳು ಬೆಳೆಗಳಲ್ಲಿನ ರಸಹೀರುವುದರಿಂದ ಎಲೆಗಳು ಮುದುಡಿ ಹೋಗುತ್ತವೆ. ಉದಾ: ಮೆಣಸಿನ ಗಿಡದ ಮುಟುರು ರೋಗ.
ಕಾಂಡ/ಕಾಯಿಕೊರಕ ಹುಳುಗಳು ಮುಖ್ಯವಾಗಿ ಹತ್ತಿ, ಬದನೆ, ಬೆಂಡೆ ಹಾಗೂ ಟೊಮೆಟೊಗಳಲ್ಲಿ ಕಂಡುವರುವುವು. ರೈತ ಬೆಳೆಯುವ ಯಾವುದೇ ಬೆಳೆಯಾಗಿರಲಿ ಅದು ಕೀಟ ಭಾದೆಯಿಂದ ಹೊರತಾಗಿಲ್ಲ. ಇನ್ನೂ ಕೆಲವು ಕೀಟಗಳು ಸಸ್ಯಗಳಲ್ಲಿ ರೋಗಾಣುಗಳನ್ನು ಹರಡುವ ಮುಖಾಂತರ ಬೆಳೆಗೆ ಹೆಚ್ಚಿನ ಹಾನಿ ಉಂಟುಮಾಡುತ್ತವೆ ಇವುಗಳಲ್ಲಿ ಮುಖ್ಯವಾದವು ರಸಹೀರುವ ಕೀಟಗಳಾದ ಚಾಸಿಡ್ಸಸ್ ಹೇನು ಹಾಗೂ ಬಿಳಿನೊಣಗಳು.
ನೈಸರ್ಗಿಕ ಕೀಟ ನಿರ್ವಹಣೆ ಃ ಪ್ರಕೃತಿಯು ಅನೇಕ ರೀತಿಯಲ್ಲಿ ಕೀಟಗಳ ನಿಯಂತ್ರಣ ಮಾಡುತ್ತದೆ. ಅವುಗಳಲ್ಲಿ ಹೆಚ್ಚಾಗಿ ಕೀಟಗಳೇ ವೈರಿಗಳಾಗಿ ಇನ್ನಿತರ ಕೀಟಗಳನ್ನು ಕೊಲ್ಲುತ್ತವೆ. ಮುಖ್ಯವಾಗಿ ತಮ್ಮ ಆಹಾರ ಮತ್ತು ವಂಶಾಭಿವೃದ್ಧಿಗಾಗಿ ಪಕ್ಷಿಗಳು ಸಹ ಕೀಟಗಳನ್ನು ಆಹಾರವಾಗಿ ತಿನ್ನುತ್ತವೆ.
ಮುಂಜಾಗ್ರಕ ಕ್ರಮಗಳು ಃ - ಹೊಲದಲ್ಲಿನ ಕಳೆಯ ನಿಯಂತ್ರಣ ಮಾಡಬೇಕು.
- ಮಾಗಿ ಉಳುಮೆ ಮಾಡುವುದು
- ಬೆಳೆ ಪರಿವರ್ತನೆ ಮಾಡುವುದರಿಂದ ಕೀಟಗಳು ಹತೋಟಿಯಲ್ಲಿರುತ್ತವೆ
- ಕೀಟ ನಿರೋಧಕ ತಳಿಗಳ ಬಳಕೆ ಮಾಡುವುದು
- ಜೋಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೀಜ ಬಿತ್ತಿ ಸುಳಿನೊಣಕ್ಕೆ ತುತ್ತಾದ ಸಸಿಗಳನ್ನು ಕಿತ್ತು ಹಾಕುವುದು
- ಹತ್ತಿಯ ಸುತ್ತಲೂ 3-4 ಸಾಲೂ ಬೆಂಡೆ/ಚಂಡಿಹೂ ಬಿತ್ತನೆ ಮಾಡುವುದು
- ಎಲೆಕೋಸಿನ ಸುತ್ತಲೂ ಸಾಸಿವೆಯ 3-4 ಸಾಲೂ ಬಿತ್ತನೆ ಮಾಡುವುದು
- ತೊಗರಿ ಬೆಳೆಯಲ್ಲಿ ಅಲ್ಲಲ್ಲಿ ಪಕ್ಷಿಗಳು ಕುಳಿತುಕೊಳ್ಳಲು ಆಸರೆಯಾಗುವಂತೆ ಕಟ್ಟಿಗೆ ನೆಡುವುದು.
ಯಾಂತ್ರಿಕ ವಿಧಾನ ಃ - ಕಾಯಿಕೊರಕ ಹುಳುಗಳನ್ನು ಕೈಯಿಂದ ಆರಿಸಿ ತೆಗೆಯುವುದು.
- ತೆಂಗಿನ ಮರದ ಸುಳಿಗೆ ಕೊಂಡಿಯನ್ನು ಹಾಕಿ ಕೀಟವನ್ನು ಹೊರತೆಗೆಯುವುದು.
- ಭತ್ತದ ಗದ್ದೆಯಲ್ಲಿ ಹಗ್ಗವನ್ನು ಎಳೆಯುವುದು
- ದಾಳಿಂಬೆ ಹಣ್ಣನ್ನು ಪ್ಲಾಸ್ಟಿಕ್/ಪಾಲಿಥಿನ್ ಚೀಲದಿಂದ ಮುಚ್ಚುವುದು.
- ಲಿಂಗಾಕರ್ಷಕ ಬಲೆಯನ್ನು ಉಪಯೋಗಿಸುವುದು.
ಜೈವಿಕ ವಿಧಾನ ಃ
 ಪರವಾಲಂಬಿ / ಪರತಂತ್ರ ಜೀವಿಗಳನ್ನು ಉಪಯೋಗಿಸುವುದು.
ಉದಾಹರಣೆಗೆ:- ಕಬ್ಬಿನಲ್ಲಿ ಕಾಂಡಕೊರೆಯುವ ಕೀಟನ ಭಾದೆಗೆ ಟ್ರೈಕೋಗ್ರಾಮ ಪರತಂತ್ರ ಜೀವಿಯನ್ನು 5 ಸಾರಿ ಬಿಡಬೇಕು (ಪ್ರತಿಸಾರಿಯು 50,000).
 ತೆಂಗಿನಮರ ಹಾಳುಮಾಡುವ ಕಪ್ಪುತಲೆ ಹುಳವನ್ಮ್ನ ತಿನ್ನಲು ಗೋನಿಯೋಸಿಸ್ ನೆಫಾಂಟಡಿಸ್ ಮತ್ತು ಬ್ರೆಕಾನ್ ಟ್ರೈವಿಕಾರ್ನಿಸ್ ಪರತಂತ್ರ ಜೀವಿಗಳ ಬಿಡುಗಡೆ.
ರಾಸಾಯನಿಕ ಬಳಕೆ ಃ ಕೀಟನಾಶಕಗಳು ಕೀಟಗಳಗಷ್ಟೇ ವಿಷಕಾರಿಯಾಗದೆ, ಮನುಷ್ಯ ಮತ್ತು ಪ್ರಾಣಿವರ್ಗಕ್ಕೂ ವಿಷಕಾರಿಯಾಗಿದೆ. ಕೀಟನಾಶಕಗಳ ಬಳಕೆಯಲ್ಲಿ ರೈತರು ಸಾಕಷ್ಟು ಎಚ್ಚರ ವಹಿಸಬೇಕು ಇಲ್ಲದಿದ್ದರೆ ಮನುಷ್ಯನಿಗೆ ಅಪಾಯ ತಪ್ಪಿದ್ದಲ್ಲ. ಆದಷ್ಟು ಸಸ್ಯಮೂಲದಿಂದ ತಯಾರಾದ ಕೀಟನಾಶಕಗಳನ್ನು ಉಪಯೋಗಿಸುವುದು ಉತ್ತಮ. ಶಿಫಾರಸ್ಸು ಮಾಡಿದ ಕೀಟನಾಶಕಗಳನ್ನು ಮಿತವಾಗಿ ಬಳಸಬೇಕು.
******************
Published On: 19 February 2019, 11:08 AM English Summary: ಆಧುನಿಕ ಕೃಷಿಯಲ್ಲಿ ಕ್ರಮಬದ್ದ ಬೇಸಾಯ ತಾಂತ್ರಿಕತೆಗಳ ಬಳಕೆ

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.