News

ಬಳ್ಳಾರಿ | ಯುವ ಸಂವಾದ ಕಾರ್ಯಕ್ರಮ: ಅರ್ಜಿ ಆಹ್ವಾನ

31 March, 2023 2:17 PM IST By: Maltesh
Youth Dialogue Program: Call for Applications

ಬಳ್ಳಾರಿ: ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಸ್ವಾಯತ್ತ ಸಂಸ್ಥೆ ನೆಹರು ಯುವ ಕೇಂದ್ರದಿಂದ ಏಪ್ರೀಲ್ 1 ರಿಂದ ಮೇ 31 ರವರೆಗೆ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳ ಮೂಲಕ ಯುವ ಸಂವಾದ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಜಿಲ್ಲಾ ನೆಹರು ಯುವ ಕೇಂದ್ರದಿಂದ ಜಿಲ್ಲೆಯ ವಿವಿಧ ಎಲ್ಲಾ ಸಮುದಾಯ ಆಧಾರಿತ ಸಂಸ್ಥೆಗಳ ಸಹಕಾರ ಮತ್ತು ಬೆಂಬಲದೊಂದಿಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಅರ್ಹ ಸಮುದಾಯ ಆಧಾರಿತ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಬಯಸುವ ಸಂಸ್ಥೆಗಳು ರಾಜಕೀಯೇತರ, ಪಕ್ಷಾತೀತವಾಗಿ ಹಿನ್ನಲೆ ಹೊಂದಿರುವ ಮತ್ತು ಯುವ ಸಂವಾದ್ ಕಾರ್ಯಕ್ರಮವನ್ನು ನಡೆಸಲು ಸಾಕಷ್ಟು ಸಾಂಸ್ಥಿಕ ಶಕ್ತಿಯನ್ನು ಹೊಂದಿರಬೇಕು. ಸಂಸ್ಥೆಗಳ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಇರಬಾರದು. ಕಾರ್ಯಕ್ರಮಗಳ ಸಂಘಟನೆಗಾಗಿ ಪ್ರತಿ ಜಿಲ್ಲೆಗೆ 3 ಸಮುದಾಯ ಆಧಾರಿತ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಸಂಸ್ಥೆಗಳು ಅರ್ಜಿಗಳನ್ನು ಜಿಲ್ಲಾ ನೆಹರು ಯುವ ಕೇಂದ್ರದಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ನೆಹರು ಯುವ ಕೇಂದ್ರ ಕಚೇರಿ ಅಥವಾ ದೂ.08392-276839 ಗೆ ಸಂಪಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್ ಅವರು ತಿಳಿಸಿದ್ದಾರೆ.

ಬಂಗಾರ ಪ್ರಿಯರೇ ಇಲ್ನೋಡಿ.. ನಾಳೆಯಿಂದ ಈ ರೀತಿಯ ಚಿನ್ನಾಭರಣ ಖರೀದಿಗೆ ಅವಕಾಶವಿಲ್ಲ!

ಬೇಸಿಗೆ ತರಬೇತಿ ಶಿಬಿರ ಏ.1ರಿಂದ ಪ್ರಾರಂಭ; ನೊಂದಣಿಗೆ ಆಹ್ವಾನ

ಬಳ್ಳಾರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ನಲ್ಲಚೇರುವು ಪ್ರದೇಶದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಈಜುಕೊಳದಲ್ಲಿ ಬೇಸಿಗೆ ತರಬೇತಿ ಶಿಬಿರಗಳನ್ನು ಏಪ್ರೀಲ್ 1 ರಿಂದ ಆರಂಭವಾಗಲಿದ್ದು, ಆಸಕ್ತರು ನೊಂದಾಯಿಸಿಕೊಳ್ಳಬಹುದು.

ಈಜುಕೊಳ ಶಿಬಿರ: ಈಜುಕೊಳ ಶಿಬಿರಕ್ಕೆ 21 ದಿನಗಳಂತೆ ಮೂರು ಶಿಬಿರಗಳು ನಡೆಯುತ್ತಿದ್ದು, ಒಬ್ಬರಿಗೆ ಶುಲ್ಕ ರೂ.1300 (ಪ್ರತಿ ಶಿಬಿರಕ್ಕೆ) ನಿಗದಿಪಡಿಸಲಾಗಿದೆ. ಒಂದನೇ ಶಿಬಿರವು ಏ.1 ರಿಂದ 21 ರವರೆಗೆ, ಎರಡನೇ ಶಿಬಿರವು ಏ.23 ರಿಂದ ಮೇ 14 ರವರೆಗೆ, ಮೂರನೇ ಶಿಬಿರವು ಮೇ 16 ರಿಂದ ಜೂನ್ 4 ರವರೆಗೆ ನಡೆಯಲಿವೆ. ಸಮಯವು ಸೋಮವಾರ ರಜೆಯನ್ನು ಹೊರತುಪಡಿಸಿ ಮಂಗಳವಾರದಿಂದ ಭಾನುವಾರದವರೆಗೆ ಬ್ಯಾಚ್ ವಾರು ಬೆಳಗ್ಗೆ 9ರಿಂದ 10, 10ರಿಂದ 11, 11ರಿಂದ 12 ರವರಿಗೆ ನಡೆಯಲಿವೆ ಹಾಗೂ ಮಹಿಳಾ ಬ್ಯಾಚ್ ಬೆಳಗ್ಗೆ 8 ರಿಂದ 9 ಮತ್ತು ಸಂಜೆ 5 ರಿಂದ 6 ರವರೆಗೆ ನಡೆಯಲಿವೆ.

ಸರ್ಕಾರದಿಂದ ಬಹುದೊಡ್ಡ ಘೋಷಣೆ: Ration Card ಇದ್ದವರಿಗೆ ಇನ್ಮುಂದೆ 150 kg ಅಕ್ಕಿ ಫ್ರೀ!

ಬ್ಯಾಡ್ಮಿಂಟನ್: ಬ್ಯಾಡ್ಮಿಂಟನ್ ಶಿಬಿರವು 21 ದಿನಗಳಂತೆ ಎರಡು ಶಿಬಿರಗಳಲ್ಲಿ ಏ.1 ರಿಂದ 21 ರವರೆಗೆ ಮತ್ತು ಮೇ 1 ರಿಂದ 21 ರವರೆಗೆ ನಡೆಯಲಿವೆ. ಒಬ್ಬರಿಗೆ ಶುಲ್ಕ ರೂ.1850 (ಪ್ರತಿ ಶಿಬಿರಕ್ಕೆ) ನಿಗದಿಪಡಿಸಲಾಗಿದೆ. ಸಮಯ ಮಂಗಳವಾರದಿಂದ ಭಾನುವಾರದವರೆಗೆ (ಸೋಮವಾರ ರಜೆ) ನಡೆಯಲಿದ್ದು, ಬ್ಯಾಚ್ ವಾರು ಆಯಾ ಸಮಯದಲ್ಲಿ ಪ್ರಾರಂಭವಾಗಲಿವೆ.

ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಮೊ.7899935141, 8880999815, 9739852460 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಹರಿಸಿಂಗ್ ರಾಥೋಡ್ ಅವರು ತಿಳಿಸಿದ್ದಾರೆ.