News

ಇಲ್ಲಿ ನೀವು ಮೆಣಸಿನಕಾಯಿ ಕೊಳ್ಳಬೇಕಾದ್ರೆ ಅದರ ಜೊತೆ 40KG ಟೊಮೆಟೋ ಖರೀದಿಸಲೇಬೇಕು..! ಕಾರಣವೇನು..?

18 April, 2022 5:15 PM IST By: KJ Staff
ಸಾಂದರ್ಭಿಕ ಚಿತ್ರ

ಸದ್ಯ ಕೆಲವು ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದ್ದು, ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಇದರಿಂದ ಅನೇಕ ರೈತರು ಆತಂಕಗೊಂಡಿದ್ದಾರೆ. ಹಾಗಾಗಿ ಕಡಿಮೆ ಪೂರೈಕೆಯ ತರಕಾರಿಗಳಿಗೆ ಬೇಡಿಕೆ ಹೆಚ್ಚಿದ್ದು,  ಬೆಲೆಯೂ ಹೆಚ್ಚಿರುವುದು ನಮಗೆ ತಿಳಿದಿದೆ. ಆದರೆ ಪೂರೈಕೆ ಹೆಚ್ಚಾಗಿರುವ ತರಕಾರಿಗಳ ಬೆಲೆ ತುಲನಾತ್ಮಕವಾಗಿ ಕಡಿಮೆಯಾಗಿದ್ದು ಅದರ ಜೊತೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಹೆಚ್ಚು ಪೂರೈಕೆಯಾಗುವ ತರಕಾರಿಗಳಿಗೆ ಗ್ರಾಹಕರು ಸಿಗದೆ ರೈತರು ಪೊರದಾಡುಸವ ಸ್ಥಿತಿ ಉಂಟಾಗಿದೆ.  ಇದೀಗ ಟೊಮೆಟೋ ಬೆಳೆದವರು ಪಾಡು ಹೀಗೆ ಆಗಿದೆ.

6% ಬಡ್ಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವುದು ಹೇಗೆ..? ಯಾರು ಅರ್ಹರು..?

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

ಹೌದು ಈ ಬಾರಿ ಟೊಮೆಟೋ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಟೊಮೆಟೋ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದೆ. ಇದರಿಂದ ಸಾಕಷ್ಟು ಹಣ, ಸಮಯ ಖರ್ಚು ಮಾಡಿ  ಟೊಮೆಟೋ ಬೆಳೆದ ಅನ್ನದಾತರ ಮೊಗದಲ್ಲೀಗ ಬೆಲೆ ಬೇಸರ ತರಿಸಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಂಡಿಗ್ಲಜ್‌ ಕೃಷಿ ವ್ಯಾಪಾರ ಮಾರುಕಟ್ಟೆಯಲ್ಲಿ ಕೂಡ ಟೊಮೆಟೋ ಪೂರೈಸುವವರು ದಂಡು ಹೆಚ್ಚಾಗಿದೆ.  ಆದರೆ ಈ ಬೃಹತ್‌ ಪೂರೈಕೆಯ ಟೊಮೆಟೋ ಮಾತ್ರ ಯಾವುದೆ ಕಾರಣಕ್ಕು ಉತ್ತಮ ಬೆಲೆಗೆ ಬಿಕರಿಯಾಗುತ್ತಿಲ್ಲ. ಇದರಿಂದ ರೈತರನ್ನು ಪಾರು ಮಾಡಲು ಹೊಸ ಐಡಿಯಾ ಮಾಡಿದ ಮಾರುಕಟ್ಟೆಯ ವ್ಯಾಪಾರಿಗಳು 40 ಕೆಜಿ ಟೊಮೆಟೋ ಖರೀದಿಸಿದರೆ ಮಾತ್ರ ಮೆಣಸಿಣಕಾಯಿ  ನೀಡುವುದಾಗಿ ಹೇಳುತ್ತಿದ್ದಾರೆ.

ಸುಸ್ಥಿರ ಕೃಷಿಯಲ್ಲಿ ಸಲ್ಫರ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಏಕೆ ಬೇಕು?

PM ಕಿಸಾನ್‌  ರೈತರಿಗೆ  ಬಿಗ್‌ ನ್ಯೂಸ್‌: OTP ಮೂಲಕ ಆಧಾರ್‌ ಕಾರ್ಡ್‌ e-KYC ರದ್ದು..

ಇದನ್ನು ಲಿಂಕಿಂಗ್ ಎಂದೂ ಕರೆಯಬಹುದು. 10 ಕೆಜಿ ಮೆಣಸಿನಕಾಯಿ ಖರೀದಿಸಬೇಕಾದರೆ 40 ಕೆಜಿ ಟೊಮೆಟೊ ಖರೀದಿಸಬೇಕು. ಈ ಹೊಸ ಐಡಿಯಾದಿಂದ ಟೊಮೆಟೊ ಬೆಳೆಗಾರರು ಇದರ ಲಾಭ ಪಡೆದಿದ್ದಾರೆ.  ಕಳೆದ ಕೆಲವು ತಿಂಗಳಿಂದ ಹಿಂತಿರುಗಿ ನೋಡಿದರೆ ತರಕಾರಿಗಳ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಕೆಲವು ತರಕಾರಿಗಳು ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದ್ದು, ಇನ್ನು ಕೆಲವು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಬಹುತೇಕ ಮಾರುಕಟ್ಟೆಗಳಲ್ಲಿ ಇದೇ ಪರಿಸ್ಥಿತಿ.ಕಡಿಮೆ ಬೆಲೆಗೆ ತರಕಾರಿ ಮಾರುವುದೇ ಕೆಲಸವಾಗಿದ್ದು, ಅಂತಹ ತರಕಾರಿ ಮಾರಾಟ ಮಾಡಿದರೂ ನಷ್ಟವಾಗುತ್ತಿದೆ. 

 

ಇದರಲ್ಲಿ ಹಸಿರು ಮೆಣಸಿನಕಾಯಿ ಬೆಲೆ ಹೆಚ್ಚುತ್ತಿದ್ದು, ಟೊಮೇಟೊ ಬೆಲೆ ತೀರಾ ಕಡಿಮೆಯಾಗಿದೆ. ಹೀಗಾಗಿ, ಚಿಲ್ಲರೆ ವ್ಯಾಪಾರಿಗಳು ಹಸಿರು ಮೆಣಸಿನಕಾಯಿಗೆ ಆದ್ಯತೆ ನೀಡುತ್ತಿದ್ದು, ಅಂತವರಿಗೆ ಈ ಷರತ್ತನ್ನು ವಿಧಿಸಲಾಗುತ್ತಿದೆ ಎನ್ನಲಾಗಿದೆ.ಈ ವಿಷಯ ತಿಳಿದ ಸಂಘದ ಪದಾಧಿಕಾರಿಗಳು 10 ಕೆಜಿ ಮೆಣಸಿನಕಾಯಿ ಖರೀದಿಸಬೇಕಾದರೆ ಅದರೊಂದಿಗೆ 40 ಕೆಜಿ ಟೊಮೇಟೊ ನೀಡಬೇಕು ಎಂದು ನಿರ್ಧರಿಸಿದರು. ಹೀಗಾಗಿ ಮೆಣಸಿನಕಾಯಿ ಜತೆಗೆ ಟೊಮೇಟೊ ಕೂಡ ಮಾರಾಟವಾಗುತ್ತಿರುವುದರಿಂದ ಟೊಮೆಟೊ ಬೆಳೆಗಾರರಿಗೆ ಲಾಭವಾಗುತ್ತಿದೆ.

TOMATO FARMING AT HOME! ಮನೆಯಲ್ಲಿ ಟೊಮೇಟೊ ಬೆಳೆಯುವುದು?

Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ