ಯೋಗ ದಿನವು ಏಕತೆಯನ್ನು ಆಚರಿಸುವ ದಿನವಾಗಿದೆ.ಇಡೀ ವಿಶ್ವ ಇಂದು ಯೋಗವನ್ನು ಅಪ್ಪಿಕೊಂಡಿದ್ದು, ದೈಹಿಕ ಹಾಗೂ ಮಾನಸಿಕ ಸದೃಢತೆಯ ಸಮಾಜ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು 6ನೇ ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ, ಯೋಗವು ಆರೋಗ್ಯಕರ ವಾತಾರವಣ ಸೃಷ್ಟಿಸುತ್ತದೆ. ಆತ್ಮಬಲದ ದೇಶ ನಿರ್ಮಾಣಕ್ಕೆ ಯೋಗ ಅತ್ಯಂತ ಪರಿಣಾಮಕಾರಿಯಾಗಿದೆ. ಯೋಗದಿಂದ ದೇಹ ಹಾಗೂ ಮಾನಸಿಕ ಶಕ್ತಿ ಹೆಚ್ಚುತ್ತದೆ. ಕೊರೋನಾ ವೈರಸ್ ಶ್ವಾಸಕೋಸದ ಮೇಲೆ ದಾಳಿ ಮಾಡುತ್ತದೆ. ಹೀಗಾಗಿ ಪ್ರತಿನಿತ್ಯ ಪ್ರಾಣಾಯಾಮ ಮಾಡಿ. ಪ್ರಾಣಾಯಾಮದಿಂದ ಉಸಿರಾಟದ ತೊಂದರೆ ನಿವಾರಿಸಬಹುದು ಎಂದು ಕರೆ ನೀಡಿದರು.
ಕೊರೋನಾ ವಿರುದ್ಧ ಹೋರಾಡಲು ಯೋಗ ಒಂದು ಪ್ರಮುಖ ಅಸ್ತ್ರವಾಗಿದೆ. ಸಾಮೂಹಿಕ ಕಾರ್ಯಕ್ರಮದಿಂದ ದೂರವಿದ್ದು ಮನೆಯಲ್ಲೇ ಯೋಗ ಮಾಡಿ. ಮನೆಯಲ್ಲೇ ಉಳಿದುಕೊಂಡು ಕುಟುಂಬದೊಂದಿಗೆ ಯೋಗ ಮಾಡಿ. ಆದರೆ, ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ ಎಂದು ತಿಳಿಸಿದರು.
ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗವೇ ಮದ್ದಾಗಿದೆ ಇದರೊಂದಿಗೆ ಚಯಾಪಚಯವನ್ನು ಸುಧಾರಿಸುವ ಯೋಗಾಭ್ಯಾಸಗಳಿವೆ ಅದನ್ನು ಅಭ್ಯಾಸ ಮಾಡಬೇಕು. ಇಂದು ಗುಂಪುಗೂಡುವಿಕೆಯಿಂದ ದೂರ ಉಳಿದಿದ್ದೇವೆ. ಮನೆಯ ಸದಸ್ಯರು ಒಂದಾಗಿ ಯೋಗಾಭ್ಯಾಸ ಮಾಡುವುದರಿಂದ ಸಂಪೂರ್ಣ ಮನೆಯಲ್ಲಿ ಶಕ್ತಿ ವೃದ್ಧಿಸುತ್ತದೆ ಎಂದರು.
ಪ್ರಮುಖ ಅಂಶಗಳು:
ದೈಹಿಕ ಹಾಗೂ ಮಾನಸಿಕ ಸದೃಢತೆಯ ಸಮಾಜ ನಿರ್ಮಾಣಕ್ಕೆ ಯೋಗ ಅವಶ್ಯ.
ಯೋಗ ಎಲ್ಲರಿಗಾಗಿ ಇದ್ದು ಇದಕ್ಕೆ ಜನಾಂಗ, ವರ್ಣ, ಧರ್ಮದ ತಾರತಮ್ಯ ಇಲ್ಲ.
ನಿರಂತರ ಯೋಗಾಸನ ಮಾಡುವುದರಿಂದ ಸಂಕಷ್ಟವನ್ನು ಎದುರಿಸಿ ಗೆಲ್ಲುವ ಛಲ ಬರುತ್ತದೆ.
ಯೋಗ ಕೇವಲ ದೈಹಿಕ ಶಕ್ತಿಗಾಗಿ ಮಾತ್ರವಲ್ಲದೇ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು.
ಯೋಗದಲ್ಲಿ ಬರುವ ಪ್ರಾಣಾಯಾಮದಿಂದ ಉಸಿರಾಟದ ತೊಂದರೆ ನಿವಾರಿಸಬಹುದು
Share your comments